For Quick Alerts
  ALLOW NOTIFICATIONS  
  For Daily Alerts

  Kantara OTT : ನವೆಂಬರ್ 4ಕ್ಕೆ ಓಟಿಟಿಯಲ್ಲಿ 'ಕಾಂತಾರ'? ನಿರ್ಮಾಪಕರಿಂದ ಸಿಕ್ತು ಕ್ಲಾರಿಟಿ!

  |

  ಡಿವೈನ್ ಬ್ಲಾಕ್‌ಬಸ್ಟರ್ 'ಕಾಂತಾರ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಆರ್ಭಟ ಮುಂದುವರೆಸಿದೆ. ಯಾವುದೇ ಸಿನಿಮಾಗಳು ಬಂದರೂ ರಿಷಬ್ ಶೆಟ್ಟಿ ಸಿನಿಮಾ ದರ್ಬಾರ್ ತಡೆಯೋಕೆ ಆಗುತ್ತಿಲ್ಲ. ಪರಭಾಷೆಗಳಲ್ಲೂ ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ. ಇದೆಲ್ಲದರ ನಡುವೆ ಮುಂದಿನ ವಾರವೇ ಸಿನಿಮಾ ಓಟಿಟಿಗೆ ಬರುತ್ತದೆ ಎನ್ನುವ ಚರ್ಚೆ ಶುರುವಾಗಿದೆ.

  ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ' ಚಿತ್ರದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಕಿಶೋರ್, ಅಚ್ಯುತ್ ಕುಮಾರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಕರಾವಳಿಯ ಸಂಸ್ಕೃತಿ ಆಚಾರ ವಿಚಾರ ಆಚರಣೆಗಳನ್ನು ಚಿತ್ರದಲ್ಲಿ ಸೊಗಸಾಗಿ ಕಟ್ಟಿಕೊಡಲಾಗಿದೆ. ಸಾಮಾನ್ಯವಾಗಿ ಯಾವುದೇ ಸಿನಿಮಾ ಆದರೂ ಥಿಯೇಟರ್‌ನಲ್ಲಿ ಬಿಡುಗಡೆಯಾದ 7 ವಾರಗಳ ನಂತರ ಓಟಿಟಿ ರಿಲೀಸ್‌ಗೆ ಒಪ್ಪಂದ ನಡೆಯುತ್ತದೆ. ಈಗಾಗಲೇ 'ಕಾಂತಾರ' ಡಿಜಿಟಲ್ ರೈಟ್ಸ್ ಅಮೇಜಾನ್ ಪ್ರೈಂಗೆ ಮಾರಾಟವಾಗಿದೆ ಎನ್ನಲಾಗ್ತಿದೆ. ಆದರೆ ಯಾವಾಗ ಸಿನಿಮಾ ಸ್ಮಾಲ್‌ ಸ್ಕ್ರೀನ್‌ಗೆ ಎಂಟ್ರಿ ಕೊಡುತ್ತದೆ ಎನ್ನುವ ಅಧಿಕೃತ ಮಾಹಿತಿ ಸಿಕ್ಕಿಲ್ಲ.

  ಅಪ್ಪು 'ಗಂಧದ ಗುಡಿ' ಅಬ್ಬರಕ್ಕೆ ಶೋ ಕಳೆದುಕೊಂಡು ಮಂಕಾದ ಚಿತ್ರಗಳ ಪಟ್ಟಿಅಪ್ಪು 'ಗಂಧದ ಗುಡಿ' ಅಬ್ಬರಕ್ಕೆ ಶೋ ಕಳೆದುಕೊಂಡು ಮಂಕಾದ ಚಿತ್ರಗಳ ಪಟ್ಟಿ

  ಸಿನಿಮಾ ರಿಲೀಸ್ ಆದ 7 ವಾರಕ್ಕೆ ಓಟಿಟಿಗೆ ಸ್ಟ್ರೀಮಿಂಗ್‌ಗೆ ಒಪ್ಪಂದ ಆಗಿದ್ದರೂ ಕೆಲವೊಮ್ಮೆ ಡೇಟ್ ಪೋಸ್ಟ್‌ಪೋನ್ ಮಾಡಲಾಗುತ್ತದೆ. ಸಿನಿಮಾ ಥಿಯೇಟರ್‌ನಲ್ಲೇ ಒಳ್ಳೆ ಪ್ರದರ್ಶನ ಕಂಡರೆ ಸಹಜವಾಗಿಯೇ ಓಟಿಟಿಗೆ ಬರುವುದು ತಡವಾಗುತ್ತದೆ. 'ಕಾಂತಾರ' ಚಿತ್ರದ ವಿಚಾರದಲ್ಲೂ ಅದೇ ಆಗುತ್ತಿದೆ.

  ನವೆಂಬರ್ 4ಕ್ಕೆ ಓಟಿಟಿಗೆ 'ಕಾಂತಾರ'?

  ನವೆಂಬರ್ 4ಕ್ಕೆ ಓಟಿಟಿಗೆ 'ಕಾಂತಾರ'?

  ವಿಶ್ವದಾದ್ಯಂತ 'ಕಾಂತಾರ' ಸಿನಿಮಾ ಆರ್ಭಟ ಹೇಗಿದೆ ಎನ್ನುವುದನ್ನು ಬಿಡಿಸಿ ಹೇಳುವುದು ಬೇಕಾಗಿಲ್ಲ. ಹಾಗಾಗಿ ಸದ್ಯಕ್ಕೆ ಸಿನಿಮಾ ಓಟಿಟಿಗೆ ಬರೋದು ಅನುಮಾನ. ಆದರೆ ಸೋಶಿಯಲ್ ಮೀಡಿಯಾದಲ್ಲಿ ನವೆಂಬರ್ 4ಕ್ಕೆ ಸಿನಿಮಾ ಅಮೇಜಾನ್ ಪ್ರೈಂ ಬರುತ್ತೆ ಎನ್ನುವ ಸುದ್ದಿಯನ್ನು ತೇಲಿಬಿಟ್ಟಿದ್ದಾರೆ. ಕೆಲವರು ಇದು ನಿಜ ಎಂದೇ ನಂಬಿಕೊಂಡಿದ್ದಾರೆ. ಜೊತೆಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ನಾವು ಥಿಯೇಟರ್‌ಗೆ ಹೋಗಿ ಸಿನಿಮಾ ನೋಡುತ್ತೇವೆ ಎನ್ನುತ್ತಿದ್ದಾರೆ.

  ನಿರ್ಮಾಪಕ ಕಾರ್ತಿಕ್ ಗೌಡ ಕ್ಲಾರಿಟಿ

  ನಿರ್ಮಾಪಕ ಕಾರ್ತಿಕ್ ಗೌಡ ಕ್ಲಾರಿಟಿ

  "ಕಾಂತಾರ ಸಿನಿಮಾ ನವೆಂಬರ್ 4ಕ್ಕೆ ಓಟಿಟಿಗೆ ಬರುತ್ತೆ ಎನ್ನುವುದು ಸುಳ್ಳು. ಯಾರು ಇದನ್ನು ನಂಬಬೇಡಿ" ಎಂದು ನಿರ್ಮಾಪಕ ಕಾರ್ತಿಕ್ ಗೌಡ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಇನ್ನು 'ಕಾಂತಾರ' ಸಿನಿಮಾ 200 ಕೋಟಿ ಗಳಿಕೆಯತ್ತ ಮುನ್ನುಗ್ಗುತ್ತಿದೆ. ಕರ್ನಾಟಕದಲ್ಲಿ ಪುನೀತ್ ರಾಜ್‌ಕುಮಾರ್ 'ಗಂಧದಗುಡಿ' ಸಿನಿಮಾ ಬಂದಿದ್ದರೂ ಪ್ರೇಕ್ಷಕರು ಕಾಂತಾರ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಸಿನಿಮಾ 25 ದಿನ ಪೂರೈಸಿ ಮುನ್ನುಗ್ಗುತ್ತಿದೆ.

  ತಮಿಳುನಾಡಿನಲ್ಲಿ ಸ್ಕ್ರೀನ್‌ಗಳ ಸಂಖ್ಯೆ ಹೆಚ್ಚಳ

  ತಮಿಳುನಾಡಿನಲ್ಲಿ ಸ್ಕ್ರೀನ್‌ಗಳ ಸಂಖ್ಯೆ ಹೆಚ್ಚಳ

  ಕನ್ನಡ ಸಿನಿಮಾಗಳು ತಮಿಳುನಾಡಿನಲ್ಲಿ ರಿಲೀಸ್ ಆಗುವುದೇ ಕಷ್ಟ ಎನ್ನುವ ಕಾಲವೊಂದಿತ್ತು. ಆದರೆ 'ಕಾಂತಾರ' ಸಿನಿಮಾ ದಿನದಿಂದ ದಿನಕ್ಕೆ ಸ್ಕ್ರೀನ್‌ಗಳ ಸಂಖ್ಯೆ ಹೆಚ್ಚಿಸಿಕೊಂಡು ಮುನ್ನುಗ್ಗುತ್ತಿದೆ. 100ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ತಮಿಳು ವರ್ಷನ್ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರು ಸಿನಿಮಾ ನೋಡಿ ಕೊಂಡಾಡುತ್ತಿದ್ದಾರೆ.

  ಹಿಂದಿ ಬೆಲ್ಟ್‌ನಲ್ಲೂ 'ಕಾಂತಾರ' ಕ್ರಾಂತಿ

  ಹಿಂದಿ ಬೆಲ್ಟ್‌ನಲ್ಲೂ 'ಕಾಂತಾರ' ಕ್ರಾಂತಿ

  ಅಕ್ಟೋಬರ್ 14ಕ್ಕೆ ಹಿಂದಿಗೆ ಡಬ್ ಆಗಿ 'ಕಾಂತಾರ' ಸಿನಿಮಾ ರಿಲೀಸ್ ಆಗಿತ್ತು. ಮೊದಲ ದಿನದಿಂದಲೂ ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ. ಈ ವಾರ ಅಕ್ಷಯ್ ಕುಮಾರ್ ನಟನೆಯ 'ರಾಮ್‌ಸೇತು' ಹಾಗೂ ಅಜಯ್ ದೇವಗನ್ ನಟನೆಯ 'ಥ್ಯಾಂಕ್‌ಗಾಡ್' ಸಿನಿಮಾಗಳು ತೆರೆಗೆ ಬಂದಿವೆ. ಆದರೂ ಕೂಡ 'ಕಾಂತಾರ' ಹಿಂದಿ ವರ್ಷನ್ ಹವಾ ಜೋರಾಗಿದೆ. ಈವರೆಗೆ ಹಿಂದಿ ವರ್ಷನ್ ಭಾರತದಲ್ಲಿ 31.70 ಕೋಟಿ ರೂ. ಕಲೆಕ್ಷನ್ ಮಾಡಿದೆ.

  English summary
  Producer Karthik Gowda Gives Clarity on About Rishab Shetty Starrer Kantara On OTT Release. Know more.
  Friday, October 28, 2022, 17:26
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X