Bigg Boss Kannada OTT: ಸೋನು ಬಿಟ್ಟರೆ ಜನಕ್ಕೆ ಬೇರೆ ಸ್ಪರ್ಧಿಗಳು ಗೊತ್ತಿಲ್ಲ; ಬಿಗ್‌ಬಾಸ್ ಓಟಿಟಿ ನೋಡಿದವರು ಏನಂದ್ರು?
ಕಳೆದ ಮೂರು ದಿನಗಳಿಂದ ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ ವೀಕ್ಷಕರನ್ನು ರಂಜಿಸುತ್ತಿದೆ. ಬೇರೆ ಬೇರೆ ಕ್ಷೇತ್ರಗಳಿಂದ 16 ಜನ ಭಿನ್ನ ವ್ಯಕ್ತಿತ್ವದ ಸ್ಪರ್ಧಿಗಳು ದೊಡ್ಮನೆ ಸೇರಿದ್ದಾರೆ. 24 ಗಂಟೆಗಳ ಕಾಲ ಮನೆಯಲ್ಲಿ ಏನೆಲ್ಲಾ ನಡೆಯುತ್ತೆ ಅನ್ನುವುದನ್ನು ವೂಟ್‌ನಲ್ಲಿ ಲೈವ್ ನೋಡಬಹುದು.
ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಬಿಗ್ ಬಾಸ್ 8 ಸೀಸನ್‌ಗಳು ಯಶಸ್ವಿಯಾಗಿ ಮುಕ್ತಾಯವಾಗಿದೆ. 9 ಸೀಸನ್‌ಗೂ ಮುನ್ನ ಓಟಿಟಿ ಮೊದಲ ಸೀಸನ್ ಶುರುವಾಗಿದೆ. ಈ ಶೋನಲ್ಲಿ ಕೊನೆ ಹಂತದವರೆಗೂ ಉಳಿದುಕೊಳ್ಳುವವರು 9 ಸೀಸನ್‌ಗೆ ನೇರವಾಗಿ ಎಂಟ್ರಿ ಕೊಡಲಿದ್ದಾರೆ. ಹಾಗಾಗಿ ಸಹಜವಾಗಿಯೇ ಓಟಿಟಿ ಶೋ ಕೂಡ ಕುತೂಹಲ ಕೆರಳಿಸಿದೆ.
Recommended Video

ನಿಧಾನವಾಗಿ ಬಿಗ್‌ಬಾಸ್ ಓಟಿಟಿ ಕ್ರೇಜ್ ಶುರುವಾಗ್ತಿದೆ. ಫಿಲ್ಮಿ ಬೀಟ್ ಒಂದಷ್ಟು ಜನರನ್ನು ಬಿಗ್‌ಬಾಸ್ ಓಟಿಟಿ ಬಗ್ಗೆ ಮಾತನಾಡಿಸಿದೆ. ಶೋ ಬಗ್ಗೆ ಜನರನ್ನು ಕೇಳಿದರೆ ಒಬ್ಬೊಬ್ಬರು ಒಂದೊಂದು ರೀತಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರಿಗೆ ವೂಟ್‌ನಲ್ಲಿ ಶೋ ನೋಡಲು ಸಾಧ್ಯವಾಗುತ್ತಿಲ್ಲ. ಇನ್ನು ಕೆಲವರಿಗೆ ಶೋ ಇಷ್ಟವೇ ಇಲ್ಲ. ಮತ್ತೆ ಕೆಲವರ ಪ್ರಕಾರ ಈಗ ಹೋಗಿರುವ ಸ್ಪರ್ಧಿಗಳ ಬದಲು ಬೇರೆ ಸ್ಪರ್ಧಿಗಳು ಹೋಗಬೇಕಿತ್ತಂತೆ. ಹೀಗೆ ಭಿನ್ನ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

ಸೋನು ಮಾತ್ರ ಎಲ್ಲರಿಗೂ ಗೊತ್ತು!
ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಸ್ಪರ್ಧಿಗಳಲ್ಲಿ ಬಹುತೇಕರು ಯಾರು ಅನ್ನುವುದೇ ಜನರಿಗೆ ಗೊತ್ತಿಲ್ಲ. ಆದರೆ ಪಾಸಿಟಿವೋ ನೆಗೆಟಿವೋ ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಮಾತ್ರ ಬಹುತೇಕರಿಗೆ ಚಿರಪರಿಚಿತರಾಗಿದ್ದಾರೆ. ಕೆಲವರು ಸೋನು ಬಿಗ್ ಬಾಸ್ ಮನೆಗೆ ಯಾಕೆ ಹೋದರು. ಬೇರೆ ಯಾರು ಸಿಗಲಿಲ್ವಾ? ಎಂದು ಕೇಳ್ತಿದ್ದಾರೆ.

ವಿದ್ಯಾರ್ಥಿಗಳಿಗೂ ಅವಕಾಶ ಕೊಡಬೇಕಂತೆ!
ಪ್ರತಿ ಸೀಸನ್‌ನಂತೆ ಈ ಸೀಸನ್‌ನಲ್ಲೂ ಬೇರೆ ಬೇರೆ ಕ್ಷೇತ್ರಗಳ ವ್ಯಕ್ತಿಗಳನ್ನು ಬಿಗ್ ಬಾಸ್ ಶೋಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳಿಗೂ ಅವಕಾಶ ಕೊಡಬೇಕು ಅನ್ನುವುದು ಕೆಲವರ ವಾದ. ಇನ್ನು ಸೃಜನ್ ಲೋಕೇಶ್‌ರಂತಹ ಸೆಲೆಬ್ರೆಟಿಗಳು ಇದ್ದರೆ ಶೋನಲ್ಲಿ ಮನರಂಜನೆ ಹೆಚ್ಚಾಗಿರುತ್ತದೆ ಅನ್ನುವವರು ಇದ್ದಾರೆ.

ಟಿವಿಯಲ್ಲೂ ಬಿಗ್‌ಬಾಸ್ ಬರಬೇಕು
ನಮ್ಮ ಬಳಿ ಸ್ಮಾರ್ಟ್ ಫೋನ್ ಇಲ್ಲ. ವೂಟ್‌ಗೆ ಸಬ್‌ಸ್ಕ್ರೈಬ್ ಆಗಿಲ್ಲ. ಹಾಗಾಗಿ ಟಿವಿಯಲ್ಲಿ ಶೋ ಬಂದರೆ ಚೆನ್ನಾಗಿರುತ್ತದೆ. ಸಾಮಾನ್ಯವಾಗಿ ಟಿವಿ ಎಲ್ಲರ ಮನೆಯಲ್ಲೂ ಇರುತ್ತದೆ. ಮನೆಯಲ್ಲಿ ಸಂಜೆ ಎಲ್ಲರೂ ಕೂತು ಶೋ ನೋಡಬಹುದು ಎಂದು ಸಾಕಷ್ಟು ಜನ ಹೇಳಿದ್ದಾರೆ.

ಚಂದು ಬಿಗ್‌ಬಾಸ್‌ಗೆ ಬರಬೇಕಿತ್ತು!
ಕಾಫಿ ನಾಡು ಚಂದು. ಇತ್ತೀಚೆಗೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಸೋಷಿಯಲ್ ಮೀಡಿಯಾ ಸ್ಟಾರ್. ಚಿಕ್ಕಮಗಳೂರಿನ ಚಂದು ವೃತ್ತಿಯಲ್ಲಿ ಆಟೋ ಡ್ರೈವರ್. ಸೋಶಿಯಲ್ ಮೀಡಿಯಾದಲ್ಲಿ ಅನೇಕ ವಿಡಿಯೋಗಳನ್ನು ಹಂಚಿಕೊಂಡು ಫೇಮಸ್ ಆಗಿದ್ದಾರೆ. ತಮ್ಮದೇ ಆದ ಶೈಲಿಯಲ್ಲಿ ಬರ್ತ್‌ಡೇ ವಿಶ್ ಮಾಡುವ ಮೂಲಕ ನೋಡುಗರಲ್ಲಿ ನಗು ಉಕ್ಕಿಸಿದ್ದಾರೆ. ಚಂದು ಈ ಬಾರಿ ಬಿಗ್ ಬಾಸ್ ಮನೆಗೆ ಹೋಗುತ್ತಾರೆ ಅಂತಲೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಅವಕಾಶ ಸಿಗಲೇ ಇಲ್ಲ. ಕಾಫಿ ನಾಡು ಚಂದು ಇದ್ದಿದ್ದರೆ ಶೋ ಮತ್ತಷ್ಟು ಚೆನ್ನಾಗಿರುತ್ತಿತ್ತು ಅನ್ನುವವರು ಇದ್ದಾರೆ.

ಕಿಚ್ಚನಿಗಾಗಿ ಶೋ ನೋಡ್ತಿವಿ
ಕನ್ನಡದಲ್ಲಿ ಬಿಗ್‌ಬಾಸ್ ಶೋ ಅಂದಾಕ್ಷಣ ನೆನಪಾಗುವುದು ನಟ ಕಿಚ್ಚ ಸುದೀಪ್. ಎಲ್ಲಾ ಸೀಸನ್‌ಗಳನ್ನು ಸುದೀಪ್ ಒಬ್ಬರೇ ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಬಾಲಿವುಡ್‌ನಲ್ಲಿ ಸಲ್ಮಾನ್ ಖಾನ್ ಬಿಟ್ಟರೆ ನಂತರ ಇಷ್ಟು ಸೀಸನ್‌ಗಳಲ್ಲಿ ನಿರೂಪಕರಾಗಿ ರಂಜಿಸಿದವರು ಸುದೀಪ್ ಒಬ್ಬರೇ. ಎಷ್ಟೋ ಜನ ಸುದೀಪ್ ನಿರೂಪಣೆ ನೋಡುವುದಕ್ಕೆ ಶೋ ನೋಡ್ತಾರೆ. ಓಟಿಟಿ ಶೋನ ಕೂಡ ಸುದೀಪ್ ಹೋಸ್ಟ್ ಮಾಡ್ತಿದ್ದು, ಎಲ್ಲರ ಗಮನ ಸೆಳೆದಿದೆ.


Click it and Unblock the Notifications











