For Quick Alerts
  ALLOW NOTIFICATIONS  
  For Daily Alerts

  ಅಪ್ಪು ಅತಿಯಾಗಿ ಮೆಚ್ಚಿದ 'ಮ್ಯಾನ್ ಆಫ್ ದಿ ಮ್ಯಾಚ್' ಟ್ರೈಲರ್ ಔಟ್!

  |

  'ಮ್ಯಾನ್‌ ಆಫ್ ದಿ ಮ್ಯಾಚ್' ಈ ಚಿತ್ರ ಟೈಟಲ್ ಮೂಲಕವೇ ಕುತೂಹಲ ಮೂಡಿಸಿತ್ತು. ಈಗ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದೆ ಚಿತ್ರತಂಡ. ಟ್ರೈಲರ್‌ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು ಈ ಕಥೆಯನ್ನು ನಟ ಪುನೀತ್ ರಾಜ್‌ಕುಮಾರ್ ಕೂಡ ತುಂಬಾನೇ ಇಷ್ಟಪಟ್ಟಿದ್ದರು.

  ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರ ಪಿಆರ್‌ಕೆ ಪ್ರೊಡಕ್ಷನ್ಸ್‌ 'ಮ್ಯಾನ್ ಆಫ್ ದಿ ಮ್ಯಾಚ್' ಚಿತ್ರವನ್ನು ನಿರ್ಮಾಣ ಮಾಡಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಡಿ ಸತ್ಯ ಪ್ರಕಾಶ್‌ ನಿರ್ದೇಶನವಿದೆ. ಈ ಚಿತ್ರ ವಿಡಂಬನೆ ಲಘುಹಾಸ್ಯದವನ್ನು ಹೊತ್ತಿದೆ ಎನ್ನುವುದು ಟ್ರೈಲರ್‌ನಲ್ಲಿ ರಿವೀಲ್ ಆಗಿದೆ.

  ಕೊರೊನಾ 4ನೇ ಅಲೆ: ಥಿಯೇಟರ್‌ಗಳಲ್ಲಿ 50% ಆಕ್ಯುಪೆನ್ಸಿ ಬಗ್ಗೆ ಸದ್ದು!ಕೊರೊನಾ 4ನೇ ಅಲೆ: ಥಿಯೇಟರ್‌ಗಳಲ್ಲಿ 50% ಆಕ್ಯುಪೆನ್ಸಿ ಬಗ್ಗೆ ಸದ್ದು!

  ಚಿತ್ರದ ಮುಖ್ಯ ಪಾತ್ರಗಳಲ್ಲಿ ನಟ ರಾಜ್‌ ಎಸ್‌ ಭಟ್‌, ಧರ್ಮಣ್ಣ ಕಡೂರು, ವೀಣಾ ಸುಂದರ್‌, ಅಥರ್ವ ಪ್ರಕಾಶ್ ಮತ್ತು ವಾಸುಕಿ ವೈಭವ್ ಕಾಣಿಸಿಕೊಂಡಿದ್ದಾರೆ. ಟ್ರೈಲರ್‌ನಲ್ಲಿ ಚಿತ್ರದ ರಿಲೀಸ್ ದಿನಾಂಕವನ್ನು ಪ್ರಕಟ ಮಾಡಲಾಗಿದೆ. ಒಟಿಟಿ ಪ್ಲ್ಯಾಟ್ ಫಾರ್ಮ್‌ನಲ್ಲಿ ಚಿತ್ರ ರಿಲೀಸ್ ಆಗುತ್ತಿದ್ದು, ಮೇ 5ರಂದು ಅಮೆಜಾನ್‌ನಲ್ಲಿ ಚಿತ್ರ ರಿಲೀಸ್ ಆಗುತ್ತಿದೆ.

  ಸದ್ಯ ರಿಲೀಸ್ ಆಗಿರುವ 'ಮ್ಯಾನ್‌ ಆಫ್‌ ದಿ ಮ್ಯಾಚ್' ಚಿತ್ರದ ಟ್ರೈಲರ್ ಕಾಮಿಡಿ ಮೂಲಕ ಸಾಕಷ್ಟು ಕುತೂಹಲವನ್ನು ಹುಟ್ಟು ಹಾಕಿದೆ. ಮಾನವನ ಭಾವನೆಗಳು ಮತ್ತು ಸಾಮಾಜಿಕ ಸವಾಲುಗಳನ್ನು ಬಿಚ್ಚಿಡಲಾಗಿದೆ. ನಟರಾಜ್ ಸಿನಿಮಾದಲ್ಲಿ ನಿರ್ದೇಶಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  ತನ್ನ ಮುಂಬರುವ 'ಮ್ಯಾನ್ ಆಫ್ ದಿ ಮ್ಯಾಚ್' ಎಂಬ ಸಿನಿಮಾಗೆ ಆಡಿಷನ್ ನಡೆಸುತ್ತಿರುತ್ತಾರೆ. ಹಲವು ಮಂದಿ ಈ ಸಿನಿಮಾದಲ್ಲಿ ಅಭಿನಯಿಸಲು ಬರುತ್ತಾರೆ. ಆಗ ಅಲ್ಲಿ ನಡೆಯುವ ವಿಭಿನ್ನ ಸನ್ನಿವೇಶಗಳನ್ನು ನಡೆಯುತ್ತವೆ. ನಿರ್ದೇಶಕ ಪಾತ್ರಧಾರಿಗಳಿಂದ ಭಿನ್ನ ಸನ್ನಿವೇಶಗಳನ್ನು ಮಾಡಿಸುತ್ತಾರೆ. ಆಗ, ಅವರ ಮಧ್ಯೆ ಸಂಘರ್ಷ ಶುರುವಾಗುತ್ತದೆ. ಈ ಅಂಶಗಳು ಟ್ರೈಲರ್‌ನಲ್ಲಿ ಇರುವುದರಿಂದ ಕುತೂಹಲ ಹೆಚ್ಚಾಗುತ್ತದೆ.

  ದರ್ಶನ್ ಸ್ಲಿಮ್ ಆಗಿದ್ದು 'ಕ್ರಾಂತಿ' ಸಿನಿಮಾಗಲ್ಲ: ಆ ಹೊಸ ಸಿನಿಮಾ ಯಾವುದು?ದರ್ಶನ್ ಸ್ಲಿಮ್ ಆಗಿದ್ದು 'ಕ್ರಾಂತಿ' ಸಿನಿಮಾಗಲ್ಲ: ಆ ಹೊಸ ಸಿನಿಮಾ ಯಾವುದು?

  ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಸತ್ಯ ಪ್ರಕಾಶ್ 'ಮ್ಯಾನ್‌ ಆಫ್‌ ದಿ ಮ್ಯಾಚ್' ಎಂಬುದು ನನ್ನ ಹೃದಯಕ್ಕೆ ಹತ್ತಿರವಾದ ಸಿನಿಮಾ. ನಾನು ಒಂದು ದಿನ ಪುನೀತ್‌ ಸರ್ ಜೊತೆಗೆ ಮಾತನಾಡುತ್ತಿದ್ದೆ. ಒಂದು ದಿನ ಮೊದಲ ಲಾಕ್‌ಡೌನ್‌ ವೇಳೆ, 'ಮ್ಯಾನ್ ಆಫ್ ದಿ ಮ್ಯಾಚ್' ಕಥೆಯನ್ನು ನಾನು ಹಂಚಿಕೊಂಡೆ. ಅವರಿಗೆ ತಕ್ಷಣ ಇಷ್ಟವಾಯಿತು. ಇದು ಒಂದು ಉತ್ತಮ ಐಡಿಯಾ ಎಂದು ಪುನೀತ್ ಸರ್ ಹೇಳಿದ್ರು. ಇಂತಹ ಹೊಸ ಹೆಜ್ಜೆಗಳನ್ನು ನಾವು ಇಡಬೇಕು. ಹೊಸ ತಲೆಮಾರಿನ ಸಿನಿಮಾ ನಿರ್ಮಾಣ ಮಾಡಬೇಕು ಎಂದು ಸಿನಿಮಾ ಮಾಡಲು ಒಪ್ಪಿದ್ದರು". ಎಂದಿದ್ದಾರೆ.

  "ಇದರಲ್ಲಿ ಅದ್ಭುತವಾದ ಪಂಚ್ ಡೈಲಾಗ್‌ಗಳಿವೆ. ಆಕರ್ಷಕ ಕಥೆ ಮತ್ತು ಹಾಸ್ಯ ಇದೆ. ಅಲ್ಲದೆ, ಚಿಂತನೆಗೆ ವಿಷಯವೂ ಇದೆ." ಎಂದು ನಿರ್ದೇಶಕ ಸತ್ಯ ರಾಜ್ ಹೇಳಿದ್ದಾರೆ. ಇನ್ನು ನಾಯಕ ನಟರಾಜ್ ಕೂಡ ಚಿತ್ರದ ಬಗ್ಗೆ ಮಾತನಾಡಿದ್ದರೆ. "ಪಿಆರ್‌ಕೆ ಪ್ರೊಡಕ್ಷನ್ಸ್‌ ಕಾರಣದಿಂದ ನಾನು ಈ ಸಿನಿಮಾದ ಭಾಗವಾಗಿದ್ದೇನೆ. ಇದು ವಿಶಿಷ್ಟ ಪರಿಕಲ್ಪನೆಯನ್ನು ಹೊಂದಿದೆ. ಅಲ್ಲದೆ, ಆಕರ್ಷಕ ಪಾತ್ರ ವರ್ಗ ಮತ್ತು ಪ್ರಶಸ್ತಿ ವಿಜೇತ ನಿರ್ದೇಶಕ ಡಿ ಸತ್ಯ ಪ್ರಕಾಶ್ ಸಿನಿಮಾ ಎಂಬ ಕಾರಣಕ್ಕೆ ನನಗೆ ಕುತೂಹಲ ಮೂಡಿಸಿತು. ಈ ಸಿನಿಮಾ ಶೂಟಿಂಗ್ ಸಮಯದ ಅನುಭವ ವಿಶಿಷ್ಟವಾಗಿತ್ತು. ನನ್ನ ಪಾತ್ರ ಮತ್ತು ಕಥೆಗೆ ನಾನು ಬೇಗ ಹೊಂದಿಕೊಂಡೆ." ಎಂದಿದ್ದಾರೆ.

  English summary
  Puneeth Rajkumar Most Liked Man Of The Match Movie Trailer Out, Know More

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X