ಪುನೀತ್ ನಿರ್ಮಾಣದ 'ಲಾ' ಸಿನಿಮಾ ರಿಲೀಸ್ ಮುಂದಕ್ಕೆ: ಹೊಸ ಬಿಡುಗಡೆ ದಿನಾಂಕ ಇಲ್ಲಿದೆ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಲಾ ಸಿನಿಮಾ ಡಿಜಿಟಲ್ ಫ್ಲಾಟ್ ಫಾರ್ಮ್ ನಲ್ಲಿ ರಿಲೀಸ್ ಆಗಲು ಸಜ್ಜಾಗಿದೆ. ಆನ್ ಲೈನ್ ನಲ್ಲಿ ನೇರವಾಗಿ ಬಿಡುಗಡೆಯಾಗುತ್ತಿರುವ ಕನ್ನಡದ ಮೊದಲ ಸಿನಿಮಾ ಇದಾಗಿದೆ. ಅಲ್ಲದೆ ಕೊರೊನಾ ಲಾಕ್ ಡೌನ್ ನಂತರ ರಿಲೀಸ್ ಆಗುತ್ತಿರುವ ಕನ್ನಡ ಮೊದಲ ಸಿನಿಮಾವಿದು.

ಲಾ ಸಿನಿಮಾ ಜೂನ್ 26ಕ್ಕೆ ಒಟಿಟಿಯಲ್ಲಿ ರಿಲೀಸ್ ಮಾಡುವುದಾಗಿ ಅನೌನ್ಸ್ ಮಾಡಲಾಗಿತ್ತು. ಆದರೆ ಸಿನಿಮಾ ರಿಲೀಸ್ ಬಗ್ಗೆ ಯಾವುದೆ ಮಾಹಿತಿ ನೀಡದೆ ಅಭಿಮಾನಿಗಳಲ್ಲಿ ಗೊಂದಲ ನಿರ್ಮಾಣವಾಗಿತ್ತು. ಸಿನಿಮಾ ರಿಲೀಸ್ ಆಗುತ್ತೋ ಇಲ್ಲವೋ ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದರು.

ಕೊನೆಗೂ ಸಿನಿಮಾ ರಿಲೀಸ್ ಬಿಡುಗಡೆಯಾಗೆ ಇಲ್ಲ. ಈಗ ಹೊಸ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಈ ಬಗ್ಗೆ ಪುನೀತ್ ರಾಜ್ ಕುಮಾರ್ ಮತ್ತು ಅಮೆಜಾನ್ ಪ್ರೈಮ್ ಹೊಸ ಬಿಡುಗಡೆಯ ದಿನಾಂಕವನ್ನು ಪೋಸ್ಟ್ ಮಾಡಿದ್ದಾರೆ "ಹೊಸ ದಿನಾಂಕ ಸತ್ಯಗಳಿಗೆ ಸಾಕ್ಷಿಯಾಗಲಿದೆ. ಲಾ ಸಿನಿಮಾ ಜುಲೈ 17ಕ್ಕೆ ರಿಲೀಸ್ ಆಗಲಿದೆ" ಎಂದು ಪುನೀತ್ ರಾಜ್ ಕುಮಾರ್ ಟ್ವೀಟ್ ಮಾಡಿದ್ದಾರೆ.

Puneeth Rajkumar Productions Law Movie Release Postponed To July 17

ಸಿನಿಮಾ ಜೂನ್ 26ಕ್ಕೆ ರಿಲೀಸ್ ಆಗುತ್ತೋ ಇಲ್ಲವೊ ಎನ್ನುವ ಬಗ್ಗೆ ಸ್ಪಷ್ಟಪಡಿಸುವಂತೆ ಅಭಿಮಾನಿಗಳು ಅಮೆಜಾನ್ ಪ್ರೈಮ್ ಗೆ ಟ್ವೀಟ್ ಮಾಡಿ ಕೇಳುತ್ತಿದ್ದರು. ಅಮೆಜಾನ್ ಪ್ರೈಮ್ ಟ್ವೀಟ್ ಮಾಡಿ ಸಿನಿಮಾ ಅಂದುಕೊಂಡ ದಿನಕ್ಕೆ ಅಂದರೆ ಜೂನ್ 26ಕ್ಕೆ ರಿಲೀಸ್ ಆಗಲಿದೆ ಎಂದು ಹೇಳಿದ್ದರು. ಕೊನೆಗೆ ಹೊಸ ದಿನಾಂಕವನ್ನು ಅಪ್ ಡೇಟ್ ಮಾಡಿದ್ದಾರೆ. ಈ ಮೂಲಕ ಅಭಿಮಾನಿಗಳಲ್ಲಿ ಇದ್ದ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಕುತೂಹಲ ಮೂಡಿಸಿರುವ ಸಿನಿಮಾ ಇದಾಗಿದೆ. ವಿಭಿನ್ನ, ವಿನೂತನ ಸಿನಿಮಾಗಳಿಗೆ ಹೆಚ್ಚು ಒತ್ತು ನೀಡಿರುವ ಪುನೀತ್ ಬ್ಯಾನರ್ ನಿಂದ ಬರ್ತಿರುವ ಸಿನಿಮಾ ಅಂದ್ಮೇಲೆ ಕುತೂಹಲ ಮತ್ತಷ್ಟು ಹೆಚ್ಚಾಗಿಯೆ ಇರುತ್ತೆ. ಸುಮಾರು ಮೂರು ತಿಂಗಳುಗಳ ಬಳಿಕ ಸಿನಿಮಾ ಬರ್ತಿರುವುದರಿಂದ ಅಭಿಮಾನಿಗಳು ಸಿನಿಮಾ ನೋಡಿ ಕಣ್ತುಂಬಿ ಕೊಳ್ಳಲು ಕಾತರರಾಗಿದ್ದರು. ಆದರೀಗ ಮತ್ತೆ ರಿಲೀಸ್ ಡೇಟ್ ಮುಂದಕ್ಕೆ ಹೋಗಿ ನಿರಾಸೆ ಮೂಡಿಸಿದೆ.

More from Filmibeat

English summary
Puneeth Rajkumar Productions Law movie release date postponed. Movie will release on July 17th at OTT.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X