ಪುನೀತ್ ರಾಜ್‌ಕುಮಾರ್ ನಿರ್ಮಾಣದ 'ಲಾ' ಸಿನಿಮಾ ಬಗ್ಗೆ ಹೊಸ ಅಪ್‌ಡೇಟ್‌

ಪುನೀತ್ ರಾಜ್‌ಕುಮಾರ್ ಅವರು ತಮ್ಮ ಪಿಆರ್‌ಕೆ ನಿರ್ಮಾಣ ಸಂಸ್ಥೆಯಿಂದ ಉತ್ತಮ ಕಥಾಆಧರಿತ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವುದು ಗೊತ್ತಿರುವ ಸಂಗತಿ.

ಪಿಆರ್‌ಕೆ ಪ್ರೊಡಕ್ಷನ್‌ ನಿಂದ ನಿರ್ಮಾಣವಾದ ಮಾಯಾಬಜಾರ್, ಕವಲುದಾರಿ ಸಿನಿಮಾಗಳು ಉತ್ತಮ ಹಿಟ್ ಸಿನಿಮಾಗಳು ಎನಿಸಿಕೊಂಡಿವೆ. ಇವುಗಳ ನಂತರ ಈಗ ಸಾಲು-ಸಾಲು ಸಿನಿಮಾಗಳನ್ನು ಪುನೀತ್ ನಿರ್ಮಿಸುತ್ತಿದ್ದಾರೆ.

ಪಿಆರ್‌ಕೆ ಪ್ರೊಡಕ್ಷನ್‌ನ ಫ್ರೆಂಚ್ ಬಿರಿಯಾನಿ, ಲಾ ಸಿನಿಮಾಗಳು ಬಿಡುಗಡೆಗೆ ತಯಾರಾಗಿದ್ದು, ಕೆಲವೇ ದಿನಗಳಲ್ಲಿ ಒಟಿಟಿಗಳಲ್ಲಿ ಬಿಡುಗಡೆ ಆಗಲಿವೆ. 'ಲಾ' ಸಿನಿಮಾ ಬಗ್ಗೆ ಹೊಸ ಅಪ್‌ಡೇಟ್ ಒಂದನ್ನು ಪುನೀತ್ ರಾಜ್‌ಕುಮಾರ್ ನೀಡಿದ್ದಾರೆ.

ಮೋಶನ್ ಪೋಸ್ಟರ್ ಬಿಡುಗಡೆ

ಮೋಶನ್ ಪೋಸ್ಟರ್ ಬಿಡುಗಡೆ

'ಲಾ' ಸಿನಿಮಾದ ಮೋಶನ್ ಪೋಸ್ಟರ್ ಅನ್ನು ಪುನೀತ್ ರಾಜ್‌ಕುಮಾರ್ ಅವರು ಇಂದು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಬಿಡುಗಡೆ ಮಾಡಿದ್ದಾರೆ. ಇದರ ಜೊತೆಗೆ ಸಿನಿಮಾದ ಟ್ರೇಲರ್ ನಾಳೆ ಬಿಡುಗಡೆ ಆಗಲಿದೆ ಎಂದು ಸಹ ಹೇಳಿದ್ದಾರೆ.

ಪ್ರಜ್ವಲ್ ದೇವರಾಜ್ ಪತ್ನಿ ನಾಯಕಿ

ಪ್ರಜ್ವಲ್ ದೇವರಾಜ್ ಪತ್ನಿ ನಾಯಕಿ

'ಲಾ 'ಸಿನಿಮಾವು ನಾಯಕಿ ಪ್ರಧಾನ ಸಿನಿಮಾ ಆಗಿದ್ದು, ಕಾನೂನು ಹೋರಾಟದ ಕತೆಯುಳ್ಳ ಸಿನಿಮಾ ಇದಾಗಿದೆ. ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಂದ್ರನ್ ನಟಿಸಿದ್ದಾರೆ. ವಕೀಲೆಯ ಪಾತ್ರವನ್ನು ಅವರು ಸಿನಿಮಾದಲ್ಲಿ ನಿರ್ವಹಿಸಿದ್ದಾರೆ.

ಸಿನಿಮಾದ ಟ್ರೇಲರ್ ಜುಲೈ 09ರಂದು ಬಿಡುಗಡೆ

ಸಿನಿಮಾದ ಟ್ರೇಲರ್ ಜುಲೈ 09ರಂದು ಬಿಡುಗಡೆ

ಸಿನಿಮಾದ ಟ್ರೇಲರ್ ನಾಳೆ (ಜುಲೈ 09) ರಂದು ಬಿಡುಗಡೆ ಆಗುತ್ತದೆ ಎಂದು ಪುನೀತ್ ರಾಜ್‌ಕುಮಾರ್ ಹೇಳಿದ್ದು, ಸಿನಿಮಾವು ಅಮೆಜಾನ್ ಪ್ರೈಂ ನಲ್ಲಿ ಇದೇ ತಿಂಗಳ 17 ರಂದು ಬಿಡುಗಡೆ ಆಗಲಿದೆ. ಸಿನಿಮಾವನ್ನು ಪುನೀತ್ ಪತ್ನಿ ಅಶ್ವಿನಿ ಹಾಗೂ ಗೋವಿಂದ್ ಎನ್ನುವರು ನಿರ್ಮಿಸಿದ್ದಾರೆ. ನಿರ್ದೇಶನ ರಘು ಸಮರ್ಥ್ ಅವರದ್ದು.

ಫ್ರೆಂಚ್ ಬಿರಿಯಾನಿ ಮುಂದಿನ ತಿಂಗಳು ಬಿಡುಗಡೆ

ಫ್ರೆಂಚ್ ಬಿರಿಯಾನಿ ಮುಂದಿನ ತಿಂಗಳು ಬಿಡುಗಡೆ

ಪಿಆರ್‌ಕೆ ಪ್ರೊಡಕ್ಷನ್‌ನಿಂದ ನಿರ್ಮಿತವಾಗಿರುವ ಫ್ರೆಂಚ್ ಬಿರಿಯಾನಿ ಮುಂದಿನ ತಿಂಗಳು ಅಮೆಜಾನ್ ಪ್ರೈಂ ನಲ್ಲಿ ಬಿಡುಗಡೆ ಆಗುತ್ತಿದೆ. ಇದರ ಜೊತೆಗೆ O2 ಎಂಬ ವಿಜ್ಞಾನ ಥ್ರಿಲ್ಲರ್ ಕತೆಯುಳ್ಳ ಸಿನಿಮಾವನ್ನು ಸಹ ನಿರ್ಮಾಣ ಮಾಡುತ್ತಿದೆ.

More from Filmibeat

English summary
PRK productions Law movie will release on Amazon on July 17. Puneeth Rajkumar says trailer will out on July 09.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X