twitter
    For Quick Alerts
    ALLOW NOTIFICATIONS  
    For Daily Alerts

    ಪುನೀತ್ ರಾಜ್‌ಕುಮಾರ್ ನಿರ್ಮಾಣದ 'ಲಾ' ಸಿನಿಮಾ ಬಗ್ಗೆ ಹೊಸ ಅಪ್‌ಡೇಟ್‌

    |

    ಪುನೀತ್ ರಾಜ್‌ಕುಮಾರ್ ಅವರು ತಮ್ಮ ಪಿಆರ್‌ಕೆ ನಿರ್ಮಾಣ ಸಂಸ್ಥೆಯಿಂದ ಉತ್ತಮ ಕಥಾಆಧರಿತ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವುದು ಗೊತ್ತಿರುವ ಸಂಗತಿ.

    ಪಿಆರ್‌ಕೆ ಪ್ರೊಡಕ್ಷನ್‌ ನಿಂದ ನಿರ್ಮಾಣವಾದ ಮಾಯಾಬಜಾರ್, ಕವಲುದಾರಿ ಸಿನಿಮಾಗಳು ಉತ್ತಮ ಹಿಟ್ ಸಿನಿಮಾಗಳು ಎನಿಸಿಕೊಂಡಿವೆ. ಇವುಗಳ ನಂತರ ಈಗ ಸಾಲು-ಸಾಲು ಸಿನಿಮಾಗಳನ್ನು ಪುನೀತ್ ನಿರ್ಮಿಸುತ್ತಿದ್ದಾರೆ.

    ಅಮೆಜಾನ್ ಪ್ರೈಮ್ ವಿಡಿಯೋ ಮೊದಲ ಕನ್ನಡ ಚಿತ್ರ ''ಲಾ'' ವಿಶೇಷಗಳೇನು?ಅಮೆಜಾನ್ ಪ್ರೈಮ್ ವಿಡಿಯೋ ಮೊದಲ ಕನ್ನಡ ಚಿತ್ರ ''ಲಾ'' ವಿಶೇಷಗಳೇನು?

    ಪಿಆರ್‌ಕೆ ಪ್ರೊಡಕ್ಷನ್‌ನ ಫ್ರೆಂಚ್ ಬಿರಿಯಾನಿ, ಲಾ ಸಿನಿಮಾಗಳು ಬಿಡುಗಡೆಗೆ ತಯಾರಾಗಿದ್ದು, ಕೆಲವೇ ದಿನಗಳಲ್ಲಿ ಒಟಿಟಿಗಳಲ್ಲಿ ಬಿಡುಗಡೆ ಆಗಲಿವೆ. 'ಲಾ' ಸಿನಿಮಾ ಬಗ್ಗೆ ಹೊಸ ಅಪ್‌ಡೇಟ್ ಒಂದನ್ನು ಪುನೀತ್ ರಾಜ್‌ಕುಮಾರ್ ನೀಡಿದ್ದಾರೆ.

    ಮೋಶನ್ ಪೋಸ್ಟರ್ ಬಿಡುಗಡೆ

    ಮೋಶನ್ ಪೋಸ್ಟರ್ ಬಿಡುಗಡೆ

    'ಲಾ' ಸಿನಿಮಾದ ಮೋಶನ್ ಪೋಸ್ಟರ್ ಅನ್ನು ಪುನೀತ್ ರಾಜ್‌ಕುಮಾರ್ ಅವರು ಇಂದು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಬಿಡುಗಡೆ ಮಾಡಿದ್ದಾರೆ. ಇದರ ಜೊತೆಗೆ ಸಿನಿಮಾದ ಟ್ರೇಲರ್ ನಾಳೆ ಬಿಡುಗಡೆ ಆಗಲಿದೆ ಎಂದು ಸಹ ಹೇಳಿದ್ದಾರೆ.

    ಪ್ರಜ್ವಲ್ ದೇವರಾಜ್ ಪತ್ನಿ ನಾಯಕಿ

    ಪ್ರಜ್ವಲ್ ದೇವರಾಜ್ ಪತ್ನಿ ನಾಯಕಿ

    'ಲಾ 'ಸಿನಿಮಾವು ನಾಯಕಿ ಪ್ರಧಾನ ಸಿನಿಮಾ ಆಗಿದ್ದು, ಕಾನೂನು ಹೋರಾಟದ ಕತೆಯುಳ್ಳ ಸಿನಿಮಾ ಇದಾಗಿದೆ. ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಂದ್ರನ್ ನಟಿಸಿದ್ದಾರೆ. ವಕೀಲೆಯ ಪಾತ್ರವನ್ನು ಅವರು ಸಿನಿಮಾದಲ್ಲಿ ನಿರ್ವಹಿಸಿದ್ದಾರೆ.

    ವರ್ಷಕ್ಕೆ ನೆಟ್‌ಫ್ಲಿಕ್ಸ್‌ ಗಳಿಸುವ ಒಟ್ಟು ಆದಾಯ ಎಷ್ಟು ಗೊತ್ತೆ?ವರ್ಷಕ್ಕೆ ನೆಟ್‌ಫ್ಲಿಕ್ಸ್‌ ಗಳಿಸುವ ಒಟ್ಟು ಆದಾಯ ಎಷ್ಟು ಗೊತ್ತೆ?

    ಸಿನಿಮಾದ ಟ್ರೇಲರ್ ಜುಲೈ 09ರಂದು ಬಿಡುಗಡೆ

    ಸಿನಿಮಾದ ಟ್ರೇಲರ್ ಜುಲೈ 09ರಂದು ಬಿಡುಗಡೆ

    ಸಿನಿಮಾದ ಟ್ರೇಲರ್ ನಾಳೆ (ಜುಲೈ 09) ರಂದು ಬಿಡುಗಡೆ ಆಗುತ್ತದೆ ಎಂದು ಪುನೀತ್ ರಾಜ್‌ಕುಮಾರ್ ಹೇಳಿದ್ದು, ಸಿನಿಮಾವು ಅಮೆಜಾನ್ ಪ್ರೈಂ ನಲ್ಲಿ ಇದೇ ತಿಂಗಳ 17 ರಂದು ಬಿಡುಗಡೆ ಆಗಲಿದೆ. ಸಿನಿಮಾವನ್ನು ಪುನೀತ್ ಪತ್ನಿ ಅಶ್ವಿನಿ ಹಾಗೂ ಗೋವಿಂದ್ ಎನ್ನುವರು ನಿರ್ಮಿಸಿದ್ದಾರೆ. ನಿರ್ದೇಶನ ರಘು ಸಮರ್ಥ್ ಅವರದ್ದು.

    ಫ್ರೆಂಚ್ ಬಿರಿಯಾನಿ ಮುಂದಿನ ತಿಂಗಳು ಬಿಡುಗಡೆ

    ಫ್ರೆಂಚ್ ಬಿರಿಯಾನಿ ಮುಂದಿನ ತಿಂಗಳು ಬಿಡುಗಡೆ

    ಪಿಆರ್‌ಕೆ ಪ್ರೊಡಕ್ಷನ್‌ನಿಂದ ನಿರ್ಮಿತವಾಗಿರುವ ಫ್ರೆಂಚ್ ಬಿರಿಯಾನಿ ಮುಂದಿನ ತಿಂಗಳು ಅಮೆಜಾನ್ ಪ್ರೈಂ ನಲ್ಲಿ ಬಿಡುಗಡೆ ಆಗುತ್ತಿದೆ. ಇದರ ಜೊತೆಗೆ O2 ಎಂಬ ವಿಜ್ಞಾನ ಥ್ರಿಲ್ಲರ್ ಕತೆಯುಳ್ಳ ಸಿನಿಮಾವನ್ನು ಸಹ ನಿರ್ಮಾಣ ಮಾಡುತ್ತಿದೆ.

    ಪುನೀತ್ ನಿರ್ಮಾಣದ 'ಲಾ' ಸಿನಿಮಾ ರಿಲೀಸ್ ಮುಂದಕ್ಕೆ: ಹೊಸ ಬಿಡುಗಡೆ ದಿನಾಂಕ ಇಲ್ಲಿದೆಪುನೀತ್ ನಿರ್ಮಾಣದ 'ಲಾ' ಸಿನಿಮಾ ರಿಲೀಸ್ ಮುಂದಕ್ಕೆ: ಹೊಸ ಬಿಡುಗಡೆ ದಿನಾಂಕ ಇಲ್ಲಿದೆ

    English summary
    PRK productions Law movie will release on Amazon on July 17. Puneeth Rajkumar says trailer will out on July 09.
    Wednesday, July 8, 2020, 23:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X