ಕೇವಲ 29 ದಿನಗಳಿಗೇ ಓಟಿಟಿಗೆ ಬಂತು 50 ದಿನಗಳ ನಂತರ ಬರಬೇಕಿದ್ದ ಲಕ್ಕಿಮ್ಯಾನ್!

ಪುನೀತ್ ರಾಜ್ ಕುಮಾರ್, ಡಾರ್ಲಿಂಗ್ ಕೃಷ್ಣ, ಸಂಗೀತಾ ಶೃಂಗೇರಿ ಹಾಗೂ ರೋಶಿನಿ ಪ್ರಕಾಶ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಲಕ್ಕಿ ಮ್ಯಾನ್ ಚಿತ್ರ ಸೆಪ್ಟೆಂಬರ್ 9ರಂದು ಬಿಡುಗಡೆಯಾಗಿ ಭರ್ಜರಿ ಓಪನಿಂಗ್ ಪಡೆದುಕೊಂಡಿತು. ಬಿಡುಗಡೆಯ ಹಿಂದಿನ ದಿನವೇ ರಾಜ್ಯದ ಪ್ರಮುಖ ನಗರ ಹಾಗೂ ಪಟ್ಟಣಗಳಲ್ಲಿ ಲಕ್ಕಿ ಮ್ಯಾನ್ ಚಿತ್ರದ ಪ್ರೀಮಿಯರ್ ಶೋಗಳನ್ನು ಕೂಡ ಆಯೋಜನೆ ಮಾಡಲಾಗಿತ್ತು.

ಪುನೀತ್ ರಾಜ್ ಕುಮಾರ್ ನಿಧನದ ನಂತರ ಬಿಡುಗಡೆಯಾದ ಅಪ್ಪು ಅಭಿನಯದ ಎರಡನೇ ಚಿತ್ರವಾದ ಲಕ್ಕಿ ಮ್ಯಾನ್ ಅಪ್ಪು ಅಭಿನಯದ ಕೊನೆಯ ಕಮರ್ಷಿಯಲ್ ಚಿತ್ರವಾಗಿತ್ತು. ಹೌದು, ಪುನೀತ್ ನಟನೆಯ ಜತೆಗೆ ಡ್ಯಾನ್ಸ್ ಹಾಗೂ ಫೈಟ್ ಮಾಡಿದ ಅಂತಿಮ ಚಿತ್ರ ಈ ಲಕ್ಕಿ ಮ್ಯಾನ್. ಹೀಗಾಗಿಯೇ ಪುನೀತ್ ಅವರ ಡಾನ್ಸ್ ಅನ್ನು ಬೆಳ್ಳಿತೆರೆ ಮೇಲೆ ಕೊನೆಯ ಬಾರಿಗೆ ಕಣ್ತುಂಬಿಕೊಳ್ಳೋಣ ಎಂದು ಅಪ್ಪು ಅಭಿಮಾನಿಗಳು ಸೇರಿದಂತೆ ಸಿನಿ ರಸಿಕರು ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿದ್ದರು.

ರಿಮೇಕ್ ಚಿತ್ರವಾಗಿದ್ದರೂ ಸಹ ಲಕ್ಕಿ ಮ್ಯಾನ್ ಪುನೀತ್ ರಾಜ್ ಕುಮಾರ್ ಕೃಪೆಯಿಂದಾಗಿ ನಿರೀಕ್ಷೆಗೂ ಮೀರಿದ ಓಪನಿಂಗ್ ಪಡೆದುಕೊಂಡಿತ್ತು ಹಾಗೂ ಒಂದೊಳ್ಳೆ ಕಲೆಕ್ಷನ್ ಕೂಡ ಮಾಡಿತು. ಹೀಗೆ ಚಿತ್ರಮಂದಿರದಲ್ಲಿ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದ ಲಕ್ಕಿ ಮ್ಯಾನ್ ಇಂದಿನಿಂದ ( ಅಕ್ಟೋಬರ್ 7 ) ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುತ್ತಿದೆ.

ಹೇಳಿದ್ದಕ್ಕಿಂತ ಮುನ್ನವೇ ಓಟಿಟಿಗೆ ಬಂತು ಲಕ್ಕಿ ಮ್ಯಾನ್

ಹೇಳಿದ್ದಕ್ಕಿಂತ ಮುನ್ನವೇ ಓಟಿಟಿಗೆ ಬಂತು ಲಕ್ಕಿ ಮ್ಯಾನ್

ಇನ್ನು ಲಕ್ಕಿ ಮ್ಯಾನ್ ಯಶಸ್ವಿಯಾದ ಬೆನ್ನಲ್ಲೇ ಚಿತ್ರತಂಡ ಪುಟ್ಟದಾಗಿ ಸುದ್ದಿಗೋಷ್ಠಿಯೊಂದನ್ನು ಕರೆದಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ್ದ ನಟ ಡಾರ್ಲಿಂಗ್ ಕೃಷ್ಣಗೆ ಲಕ್ಕಿ ಮ್ಯಾನ್ ಇನ್ನೇನು ಕೆಲವೇ ದಿನಗಳಲ್ಲಿ ಓಟಿಟಿಗೆ ಬರಲಿದೆ ಎಂಬ ಸುದ್ದಿ ಹರಿದಾಡ್ತಿದೆ ಇದು ನಿಜಾನಾ ಎಂಬ ಪ್ರಶ್ನೆ ಎದುರಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿದ್ದ ನಟ ಡಾರ್ಲಿಂಗ್ ಕೃಷ್ಣ ಲಕ್ಕಿ ಮ್ಯಾನ್ ಸದ್ಯಕ್ಕೆ ಓಟಿಟಿಯಲ್ಲಿ ಪ್ರಸಾರವಾಗುವುದಿಲ್ಲ ಕನಿಷ್ಠವೆಂದರೂ ಐವತ್ತು ದಿನ ಚಿತ್ರಮಂದಿರದಲ್ಲಿ ಪ್ರದರ್ಶನವಾಗಲಿದೆ ಎಂದು ಆಶ್ವಾಸನೆ ನೀಡಿದ್ದರು.

50 ಅಲ್ಲ 29!

50 ಅಲ್ಲ 29!

ಹೀಗೆ ಚಿತ್ರತಂಡ ನೀಡಿದ ಹೇಳಿಕೆಯ ಪ್ರಕಾರ ಲಕ್ಕಿ ಮ್ಯಾನ್ ಚಿತ್ರ ಚಿತ್ರಮಂದಿರದಲ್ಲಿ ಅರ್ಧ ಶತಕವನ್ನು ಪೂರೈಸಿದ ನಂತರ ಓಟಿಟಿಗೆ ಲಗ್ಗೆ ಇಡಬೇಕಿತ್ತು. ಆದರೆ ಬಿಡುಗಡೆಗೊಂಡ 29ನೇ ದಿನವೇ ಲಕ್ಕಿ ಮ್ಯಾನ್ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಆಗುತ್ತಿದೆ.

ಇತ್ತೀಚೆಗೆ ಚಿತ್ರಗಳು ಚಿತ್ರಮಂದಿರದಲ್ಲಿ ಹೆಚ್ಚು ದಿನ ನಿಲ್ಲುವುದು ಕಷ್ಟ!

ಇತ್ತೀಚೆಗೆ ಚಿತ್ರಗಳು ಚಿತ್ರಮಂದಿರದಲ್ಲಿ ಹೆಚ್ಚು ದಿನ ನಿಲ್ಲುವುದು ಕಷ್ಟ!

ಇನ್ನು ಇತ್ತೀಚಿನ ದಿನಗಳಲ್ಲಿ ಚಿತ್ರವೊಂದು ಚಿತ್ರಮಂದಿರದಲ್ಲಿ ಅರ್ಧ ಶತಕ ಬಾರಿಸುವುದು ದೊಡ್ಡ ಸವಾಲು ಎಂದೇ ಹೇಳಬಹುದು. ಒಳ್ಳೆಯ ಕಂಟೆಂಟ್ ಉಳ್ಳ ಸ್ವಮೇಕ್ ಚಿತ್ರಗಳು ಮಾತ್ರ ಚಿತ್ರಮಂದಿರದಲ್ಲಿ ತುಸು ಹೆಚ್ಚು ದಿನ ನಿಲ್ಲಲಿವೆ. ಇನ್ನು ರಿಮೇಕ್ ಚಿತ್ರಗಳನ್ನಂತೂ ಕನ್ನಡ ಸಿನಿ ಪ್ರೇಮಿಗಳು ಇತ್ತೀಚಿನ ದಿನಗಳಲ್ಲಿ ಸ್ವೀಕರಿಸುವುದನ್ನೇ ಬಿಟ್ಟು ಬಿಟ್ಟಿದ್ದಾರೆ. ಪುನೀತ್ ರಾಜ್ ಕುಮಾರ್ ಕೊನೆಯ ಕಮರ್ಷಿಯಲ್ ಚಿತ್ರ ಎಂಬ ಕಾರಣಕ್ಕೆ ಲಕ್ಕಿ ಮ್ಯಾನ್ ತುಸು ಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟಿತು. ಇಲ್ಲವಾಗಿದ್ದರೆ ಇನ್ನೂ ಬೇಗನೆ ಲಕ್ಕಿ ಮ್ಯಾನ್ ಓಟಿಟಿಗೆ ಲಗ್ಗೆ ಇಡುತ್ತಿತ್ತು ಎಂದರೆ ತಪ್ಪಾಗಲಾರದು.

More from Filmibeat

English summary
Puneeth Rajkumar starrer Lucky Man is streaming on Amazon Prime Video. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X