ಪೂರಿ ಜಗನ್ನಾಥ್ ಮಗನ 'ರೊಮ್ಯಾಂಟಿಕ್' ಚಿತ್ರ ಆನ್‌ಲೈನ್ನಲ್ಲಿ ಬಿಡುಗಡೆ!
ಸ್ಟಾರ್ ನಿರ್ದೇಶಕ ಪೂರಿ ಜಗನ್ನಾಥ್ ಮಗ ಆಕಾಶ ಅಭಿನಯದ ರೊಮ್ಯಾಂಟಿಕ್ ಸಿನಿಮಾ 2020ರ ಮೇ ತಿಂಗಳಲ್ಲಿ ಬಿಡುಗಡೆಯಾಗಬೇಕಿತ್ತು. ಆದ್ರೆ, ಕೊರೊನಾ ವೈರಸ್ ಪರಿಣಾಮ ರಿಲೀಸ್ ಯೋಜನೆ ತಲೆಕೆಳಗಾಯಿತು. ಇದೀಗ, ಆನ್‌ಲೈನ್‌ನಲ್ಲಿ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.
ತೆಲುಗಿನ ಖ್ಯಾತ ವೆಬ್‌ಸೈಟ್ ವರದಿ ಮಾಡಿರುವ ಪ್ರಕಾರ, ಪೂರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ಆನ್‌ಲೈನ್ ಬಿಡುಗಡೆ ಕುರಿತು ಒಟಿಟಿ ಸಂಸ್ಥೆ ಜೊತೆ ಮಾತುಕತೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದ್ರೆ, ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.
ಸದ್ಯದ ಪರಿಸ್ಥಿತಿಯಲ್ಲಿ ಆನ್‌ಲೈನ್‌ನಲ್ಲಿ ಸಿನಿಮಾ ಬಿಡುಗಡೆ ಮಾಡುವುದು ಇಂಡಸ್ಟ್ರಿಯ ಹೊಸ ಟ್ರೆಂಡ್ ಆಗಿದೆ. ಸ್ಟಾರ್ ನಟರ ಚಿತ್ರಗಳು ಸಹ ಒಟಿಟಿಯಲ್ಲಿ ತೆರೆಕಂಡಿರುವ ಉದಾಹರಣೆಗಳಿವೆ.

ಇನ್ನುಳಿದಂತೆ ರೊಮ್ಯಾಂಟಿಕ್ ಚಿತ್ರಕ್ಕೆ ಪೂರಿ ಜಗನ್ನಾಥ್ ಕಥೆ-ಚಿತ್ರಕಥೆ ಹಾಗೂ ಸಂಭಾಷಣೆ ಮಾಡಿದ್ದು, ಅನಿಲ್ ಪದುರಿ ನಿರ್ದೇಶನ ಮಾಡಿದ್ದಾರೆ.
ರೊಮ್ಯಾಂಟಿಕ್ ಸಿನಿಮಾ ಈಗಾಗಲೇ ಹವಾ ಕ್ರಿಯೇಟ್ ಮಾಡಿದೆ. ಬೋಲ್ಡ್ ದೃಶ್ಯಗಳು, ಪೋಸ್ಟರ್ ಮೂಲಕ ಹೆಚ್ಚು ಸದ್ದು ಮಾಡುತ್ತಿದೆ. ಆಕಾಶ್ ಪೂರಿ ಜೊತೆ ಕೇತಿಕಾ ಶರ್ಮಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್ ಸಹ ಬಿಡುಗಡೆಯಾಗಿದ್ದು, ಇಬ್ಬರ ಜೋಡಿ ಸಿನಿಪ್ರೇಕ್ಷಕರ ಹೃದಯ ಬಡಿತ ಹೆಚ್ಚಿಸಿದೆ.


Click it and Unblock the Notifications











