ಒಟಿಟಿಗೆ 'ಪುಷ್ಪ': ಯಾವಾಗ? ಯಾವ ಒಟಿಟಿ?

ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ನಟನೆಯ 'ಪುಷ್ಪ' ಸಿನಿಮಾ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಪ್ರದರ್ಶನ ಕಾಣುತ್ತಿದೆ. ಡಿಸೆಂಬರ್ 17 ರಂದು ತೆರೆ ಕಂಡಿದ್ದ ಈ ಸಿನಿಮಾ ಕೇವಲ ನಾಲ್ಕು ದಿನಗಳಲ್ಲಿಯೇ ನೂರು ಕೋಟಿಗೂ ಹೆಚ್ಚು ಹಣ ಗಳಿಸಿ, ಮುನ್ನುಗ್ಗುತ್ತಿದೆ.

ಬಿಡುಗಡೆ ಆಗಿ ವಾರವಾಗುತ್ತಾ ಬರುತ್ತಿದ್ದರೂ ಇನ್ನೂ ಚಿತ್ರಮಂದಿರಗಳಲ್ಲಿ ತುಂಬಿದ ಗೃಹದ ಪ್ರದರ್ಶನ ಕಾಣುತ್ತಿರುವ 'ಪುಷ್ಪ' ಸಿನಿಮಾವನ್ನು ಬ್ಲಾಕ್ ಬಸ್ಟರ್ ಎಂದು ಈಗಾಗಲೇ ಬಾಕ್ಸ್ ಆಫೀಸ್ ತಜ್ಞರು ಘೊಷಿಸಿದ್ದಾರೆ.

ಚಿತ್ರಮಂದಿರದಲ್ಲಿ ಅದ್ಧೂರಿಯಾಗಿ ಪ್ರದರ್ಶನ ಕಾಣುತ್ತಿರುವ ಸಮಯದಲ್ಲಿಯೇ 'ಪುಷ್ಪ' ಸಿನಿಮಾ ಒಟಿಟಿಗೆ ಬರಲಿದೆ. ಹೌದು, ಸಿನಿಮಾವು ಒಟಿಟಿಯಲ್ಲಿ ಬಿಡುಗಡೆ ಆಗುವ ಮೂಲಕ ಚಿತ್ರಮಂದಿರದಲ್ಲಿ ತನ್ನ ಭರ್ಜರಿ ಓಟವನ್ನು ಅಂತ್ಯಗೊಳಿಸಲಿದೆ.

Pushpa Movie Will Release In OTT Very Soon

ಮೂಲಗಳ ಪ್ರಕಾರ, ಸಿನಿಮಾ ಬಿಡುಗಡೆಗೆ ಮುನ್ನವೇ ಸಿನಿಮಾದ ಡಿಜಿಟಲ್ ಹಕ್ಕು ಮಾರಾಟವಾಗಿದ್ದು, ಸಿನಿಮಾ ಬಿಡುಗಡೆ ಆದ 25 ದಿನಕ್ಕೆ ಒಟಿಟಿಗೆ ಬಿಡುಗಡೆ ಮಾಡಬೇಕು ಎಂದು ಕರಾರು ಮಾಡಿಕೊಳ್ಳಲಾಗಿದೆ. ಹಾಗಾಗಿಯೇ ಸಿನಿಮಾವು ಜನವರಿ ಎರಡನೇ ವಾರಕ್ಕೆ ಒಟಿಟಿಗೆ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ.

'ಪುಷ್ಪ' ಸಿನಿಮಾವು ಅಮೆಜಾನ್ ಪ್ರೈಂಗೆ ಮಾರಾಟವಾಗಿದ್ದು, ಅಮೆಜಾನ್ ಪ್ರೈಂನಲ್ಲಿ ಜನವರಿ 10 ರಂದು ಸಿನಿಮಾ ಬಿಡುಗಡೆ ಆಗುವ ದಟ್ಟ ಸಾಧ್ಯತೆ ಇದೆ. ಅಮೆಜಾನ್ ಪ್ರೈಂಗೆ ಭಾರಿ ಮೊತ್ತಕ್ಕೆ 'ಪುಷ್ಪ' ಸಿನಿಮಾ ಸೇಲ್ ಆಗಿದೆ. ಅಮೆಜಾನ್‌ ನವರು ಬರೋಬ್ಬರಿ 30 ಕೋಟಿ ರುಪಾಯಿಯನ್ನು 'ಪುಷ್ಪ' ಸಿನಿಮಾಕ್ಕೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಅಲ್ಲು ಅರ್ಜುನ್ ಅವರದ್ದೇ ಒಡೆತನದ 'ಆಹಾ' ಒಟಿಟಿ ಇದೆ. ಆದರೆ ಸಿನಿಮಾದ ನಿರ್ಮಾಪಕರಾದ ಮೈತ್ರಿ ಮೂವಿ ಮೇಕರ್ಸ್‌ನವರು 'ಪುಷ್ಪ' ಸಿನಿಮಾವನ್ನು ಅಮೆಜಾನ್‌ಗೆ ಮಾರಾಟ ಮಾಡಿದ್ದಾರೆ. ಅಮೆಜಾನ್‌ನವರು ದೊಡ್ಡ ಮೊತ್ತದ ಹಣವನ್ನು ಸಿನಿಮಾಕ್ಕೆ ಆಫರ್ ಮಾಡಿದ್ದರಂತೆ.

ಅಲ್ಲು ಅರ್ಜುನ್‌ ನಟನೆಯ ಈ ಹಿಂದಿನ ಸಿನಿಮಾ 'ಅಲಾ ವೈಕುಂಟಪುರಂಲೋ' ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಿತ್ತು. 'ಪುಷ್ಪ' ಸಹ ನೆಟ್‌ಫ್ಲಿಕ್ಸ್‌ ಪಾಲಾಗುತ್ತದೆ ಎನ್ನಲಾಗಿತ್ತು. ಆದರೆ ಅಮೆಜಾನ್‌ನವರು 'ಪುಷ್ಪ'ನನ್ನು ಬುಟ್ಟಿಗೆ ಹಾಕಿಕೊಂಡಿದ್ದಾರೆ.

'ಪುಷ್ಪ' ಸಿನಿಮಾದ ಮೊದಲ ಭಾಗವಷ್ಟೆ ಈಗ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದೆ. ಸಿನಿಮಾದ ಎರಡನೇ ಭಾಗ ಏಪ್ರಿಲ್ ತಿಂಗಳ ವೇಳೆಗೆ ಬಿಡುಗಡೆ ಆಗಲಿದೆ. 'ಪುಷ್ಪ' ಸಿನಿಮಾವು ರಕ್ತ ಚಂದನ ಕಳ್ಳಸಾಗಣೆ ಮಾಡುವ ವ್ಯಕ್ತಿಯ ಕತೆಯಾಗಿದೆ. ಸಿನಿಮಾದಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಕನ್ನಡಿಗ ಡಾಲಿ ಧನಂಜಯ್, ಜಾಲಿ ರೆಡ್ಡಿ ಪಾತ್ರದಲ್ಲಿ ನಟಿಸಿದ್ದಾರೆ. ಹಾಸ್ಯ ನಟ ಸುನಿಲ್ ಹಾಗೂ ಫಹಾದ್ ಫಾಸಿಲ್ ವಿಲನ್‌ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ಸುಕುಮಾರ್ ನಿರ್ದೇಶನ ಮಾಡಿದ್ದು, ಸಂಗೀತವನ್ನು ದೇವಿಶ್ರೀ ಪ್ರಸಾದ್ ನೀಡಿದ್ದಾರೆ. ಸಿನಿಮಾದಲ್ಲಿ ಮೊದಲ ಬಾರಿಗೆ ನಟಿ ಸಮಂತಾ ಐಟಂ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
Allu Arjun starer new movie Pushpa will release on OTT very soon. As per the reports movie will hit OTT after 25 days of its release in theaters.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X