ವೆಬ್ ಸರಣಿ ಆಗಲಿದೆ ಮಾಜಿ ಪ್ರಧಾನಿ ಪಿವಿ ನರಸಿಂಹರಾವ್ ಜೀವನ

ಇದು ಬಯೋಪಿಕ್‌ಗಳ ಕಾಲ. ರೌಡಿಗಳು, ಡಾನ್‌ಗಳು, ಕ್ರೀಡಾಪಟುಗಳು, ರಾಜಕಾರಣಿಗಳು, ಸಮಾಜ ಸೇವಕರು, ನಿಜವಾದ ಸಾಧಕರು ಹೀಗೆ ಎಲ್ಲರ ಜೀವನವನ್ನು ಸಿನಿಮಾ ಮಾಡಲಾಗುತ್ತಿದೆ. ಸಾಲು-ಸಾಲು ಬಯೋಪಿಕ್‌ಗಳು ತೆರೆ ಕಂಡಿವೆ, ಕಾಣುತ್ತಿವೆ.

ಅದರಲ್ಲಿಯೂ ರಾಜಕಾರಣಿಗಳ ಜೀವನ ಆಧರಿತ ಸಿನಿಮಾಗಳು, ವೆಬ್ ಸರಣಿಗಳಿಗೆ ಭಾರಿ ಬೇಡಿಕೆಯೇ ಇದೆ. ನರೇಂದ್ರ ಮೋದಿ, ಮನಮೋಹನ್ ಸಿಂಗ್ ಸೇರಿದಂತೆ ಹಲವು ಪ್ರಮುಖ ರಾಜಕಾರಣಿಗಳ ಜೀವನ ಸಿನಿಮಾ ಆಗಿದೆ.

ಇದೀಗ ಭಾರತದ ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರ ಜೀವನ ವೆಬ್ ಸರಣಿ ಆಗಲಿದೆ. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕರು ಪಿ.ವಿ.ನರಸಿಂಹರಾವ್ ಜೀವನವನ್ನು ವೆಬ್ ಸರಣಿ ಮಾಡಲು ಮುಂದೆ ಬಂದಿದ್ದು, ದಕ್ಷಿಣ ಭಾರತದ ಜನಪ್ರಿಯ ನಿರ್ಮಾಪಕರು ವೆಬ್ ಸರಣಿಗೆ ಬಂಡವಾಳ ಹೂಡಲಿದ್ದಾರೆ.

ಪ್ರಕಾಶ್ ಝಾ ನಿರ್ದೇಶನ

ಪ್ರಕಾಶ್ ಝಾ ನಿರ್ದೇಶನ

ತೆಲಂಗಾಣದಲ್ಲಿ ಹುಟ್ಟಿ ಬೆಳೆದ ಪಿ.ವಿ.ನರಸಿಂಹರಾವ್ ಬಗ್ಗೆ ತೆಲುಗು ಜನಗಳಿಗೆ ವಿಪರೀತ ಅಭಿಮಾನ. ಇದೇ ಅಭಿಮಾನದ ಕಾರಣದಿಂದ ಇದೀಗ ವೆಬ್ ಸರಣಿ ನಿರ್ಮಾಣಕ್ಕೆ ಕೈ ಹಾಕಿದ್ದಾರೆ ಜನಪ್ರಿಯ ಸಿನಿಮಾ ನಿರ್ಮಾಪಕ ಅಲ್ಲು ಅರವಿಂದ್. ವೆಬ್ ಸರಣಿಯನ್ನು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಪ್ರಕಾಶ್ ಝಾ ನಿರ್ದೇಶನ ಮಾಡಲಿದ್ದಾರೆ. ಈ ವೆಬ್ ಸರಣಿಯು ತೆಲುಗು, ತಮಿಳು, ಮಲಯಾಳಂ, ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ವೀಕ್ಷಿಸಲು ಲಭ್ಯವಾಗಲಿದೆ. ಇದು ಭಾರತದ ಮೊದಲ ಪ್ಯಾನ್ ಇಂಡಿಯಾ ವೆಬ್ ಸರಣಿ ಆಗಲಿದೆ.

'ಆಹಾ' ಒಟಿಟಿಯಲ್ಲಿ ಪ್ರಸಾರ

'ಆಹಾ' ಒಟಿಟಿಯಲ್ಲಿ ಪ್ರಸಾರ

ವೆಬ್ ಸರಣಿಗೆ 'ಹಾಫ್ ಲಯನ್' ಎಂದು ಹೆಸರಿಡಲಾಗಿದೆ. ಪಿ.ವಿ.ನರಸಿಂಹರಾವ್ ಬಾಲ್ಯ, ಯೌವ್ವನ, ಹೋರಾಟ, ರಾಜಕೀಯ, ಪ್ರಧಾನಿಯಾಗಿ ಕಾರ್ಯ ಇನ್ನಿತರೆ ವಿಷಯಗಳ ಮೇಲೆ ವೆಬ್ ಸರಣಿ ಬೆಳಕು ಚೆಲ್ಲಲಿದೆ. ಈ ವೆಬ್ ಸರಣಿಯ ಅಲ್ಲು ಅರವಿಂದ್ ಮಾಲೀಕತ್ವದ 'ಆಹಾ' ಒಟಿಟಿಯಲ್ಲಿ ಪ್ರಸಾರವಾಗಲಿದೆ. ವೆಬ್ ಸರಣಿಯನ್ನು ಆಹಾ ಸ್ಟುಡಿಯೋಸ್ ಮತ್ತು ಅಪ್ಲಾಸ್ ಎಂಟರ್ಟೈನ್‌ಮೆಂಟ್ ಜಂಟಿಯಾಗಿ ನಿರ್ಮಾಣ ಮಾಡಲಿದೆ. ವೆಬ್ ಸರಣಿಗೆ ಪಾತ್ರಧಾರಿಗಳ ಆಯ್ಕೆ ನಡೆಯುತ್ತಿದ್ದು, ಚಿತ್ರೀಕರಣ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ.

'ಹಾಫ್ ಲಯನ್' ಪುಸ್ತಕ ಆಧರಿಸಿ ನಿರ್ಮಾಣ

'ಹಾಫ್ ಲಯನ್' ಪುಸ್ತಕ ಆಧರಿಸಿ ನಿರ್ಮಾಣ

ಪಿ.ವಿ.ನರಸಿಂಹರಾವ್ ಭಾರತದ ದುರದೃಷ್ಟವಂತ ಪ್ರಧಾನಿ ಎಂದೂ ಕರೆಯಲಾಗುತ್ತದೆ. ಅವರ ಸೇವಾ ಅವಧಿಯಲ್ಲಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣ, ಹಿಂದು-ಮುಸ್ಲಿಂ ಧಂಗೆಗಳು ಇನ್ನೂ ಹಲವು ಸೂಕ್ಷ್ಮ ವಿಷಯಗಳು ನಡೆದವು. ಬಾಬ್ರಿ ಮಸೀದಿ ಧ್ವಂಸ ಘಟನೆಯನ್ನು ತಡೆಯುವಲ್ಲಿ ನರಸಿಂಹರಾವ್ ವಿಫಲರಾದರು ಎಂಬ ಆರೋಪವೂ ಅವರ ಮೇಲಿದೆ. ಅವರ ಜೀವನ, ಆಡಳಿತ, ಆಡಳಿತಾವಧಿಯಲ್ಲಿ ನಡೆದ ಘಟನೆಯಗಳ ಬಗ್ಗೆ ವಿನಯ್ ಸತ್ಪತಿ ಅವರು ಪುಸ್ತಕ ಬರೆದಿದ್ದು, ಪುಸ್ತಕವನ್ನು ಆಧರಿಸಿಯೇ ಇದೀಗ ವೆಬ್ ಸರಣಿ ನಿರ್ಮಾಣಗೊಳ್ಳಲಿದೆ.

ಹಲವು ಬಯೋಪಿಕ್‌ಗಳು ತೆರೆಗೆ ಬಂದಿವೆ

ಹಲವು ಬಯೋಪಿಕ್‌ಗಳು ತೆರೆಗೆ ಬಂದಿವೆ

ಕೆಲವು ವರ್ಷಗಳಲ್ಲಿ ಬಾಲಿವುಡ್ ಹಾಗೂ ಇತರ ಚಿತ್ರರಂಗದಲ್ಲಿ ಹಲವು ಬಯೋಪಿಕ್‌ಗಳು ತೆರೆಗೆ ಬಂದಿವೆ ಮತ್ತು ಸೂಪರ್ ಹಿಟ್ ಆಗಿವೆ. ಮಿಲ್ಕಾ ಸಿಂಗ್‌ರ ಜೀವನ ಆಧರಿತ 'ಭಾಗ್ ಮಿಲ್ಕಾ ಭಾಗ್' ಸಿನಿಮಾ ದೊಡ್ಡ ಹಿಟ್ ಆದ ಬಳಿಕ ಸಾಲು-ಸಾಲಾಗಿ ಕ್ರೀಡಾಪಟುಗಳ ಜೀವನ ಸಿನಿಮಾ ಆಗಲು ಆರಂಭವಾದವು. ಮೇರಿಕೋಮ್ ಜೀವನ ಆಧರಿಸಿದ ಸಿನಿಮಾ ತೆರೆಗೆ ಬಂತು. ಸೈನಾ ನೆಹ್ವಾಲ್ ಜೀವನ ಆಧರಿಸಿದ 'ಸೈನಾ' ಸಿನಿಮಾ ತೆರೆಗೆ ಬಂತು. ಹಾಕಿ ಆಟಗಾರ ಸಂದೀಪ್ ಸಿಂಗ್ ಜೀವನ ಆಧರಿಸಿದ 'ಸೂರ್ಮ', 'ಎಂಎಸ್ ಧೋನಿ', 'ಅಜರ್', 'ಪಾನ್ ಸಿಂಗ್ ತೋಮರ್' , ಪೋಗಟ್ ಜೀವನ ಆಧರಿಸಿದ 'ದಂಗಲ್' ಇನ್ನೂ ಹಲವು ಸಿನಿಮಾಗಳು ಈಗಾಗಲೇ ತೆರೆಗೆ ಬಂದಿವೆ. ಇದೀಗ ಕ್ರಿಕೆಟಿಗ ಕಪಿಲ್ ದೇವ್ ಜೀವನ ಆಧರಿಸಿದ '83', ಮಿಥಾಲಿ ರಾಜ್ ಜೀವನ ಆಧರಿಸಿದ 'ಶಭಾಸ್ ಮಿಥು' ತೆರೆಗೆ ಬರಲಿವೆ.

More from Filmibeat

English summary
India's former prime minister PV Narasimha Rao's biopic is on the making. His life will be stream as web series in Aha OTT.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X