For Quick Alerts
  ALLOW NOTIFICATIONS  
  For Daily Alerts

  'ರಾಧೆ ಶ್ಯಾಮ್'ಗೆ ಭರ್ಜರಿ ಒಟಿಟಿ ಆಫರ್: ಡೀಲ್ ಬೇಡ ಅಂತಿದ್ದಾರೆ ನಿರ್ಮಾಪಕ!

  |

  ಪ್ರಭಾಸ್ ಮತ್ತು ಪೂಜಾ ಹೆಗ್ಡೆ ನಟಿಸಿರುವ 'ರಾಧೆ ಶ್ಯಾಮ್' ಸಿನಿಮಾ ಚಿತ್ರೀಕರಣ ಮುಗಿಸಿ ರಿಲೀಸ್‌ಗೆ ರೆಡಿಯಾಗಿದೆ. ಜುಲೈ 30ನೇ ತಾರೀಖು ತೆರೆಗೆ ಬರುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದೆ. ಸದ್ಯದ ಕೋವಿಡ್ ಪರಿಸ್ಥಿತಿಯಲ್ಲಿ ನಿಗದಿತ ದಿನಕ್ಕೆ ಸಿನಿಮಾ ಚಿತ್ರಮಂದಿರಕ್ಕೆ ಬರುವುದು ಬಹುತೇಕ ಅನುಮಾನ.

  ಈ ಮಧ್ಯೆ ರಾಧೆ ಶ್ಯಾಮ್ ಚಿತ್ರದ ಒಟಿಟಿ ಬಿಡುಗಡೆ ಬಗ್ಗೆ ಸುದ್ದಿಗಳು ಚರ್ಚೆಯಲ್ಲಿದೆ. ಪ್ರಭಾಸ್ ಸಿನಿಮಾ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಗಲಿದೆ ಎಂಬ ಸುದ್ದಿ ಗಟ್ಟಿಯಾಗಿ ಕೇಳಿಬರ್ತಿದೆ. ಆದರೆ, ನಿರ್ಮಾಪಕರು ಮಾತ್ರ ಥಿಯೇಟರ್‌ನಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿದು ಬಂದಿದೆ. ಈ ನಡುವೆ ರಾಧೆ ಶ್ಯಾಮ್ ಚಿತ್ರ ಅವನ್ನು ನಾವೇ ರಿಲೀಸ್ ಮಾಡುತ್ತೇವೆ ಎಂದು ಮುಂದೆ ಬಂದಿರುವ ಅಮೇಜಾನ್ ಪ್ರೈಮ್ ಬಹುದೊಡ್ಡ ಮೊತ್ತದ ಆಫರ್ ಕೊಟ್ಟಿದೆ. ಎಷ್ಟು? ಮುಂದೆ ಓದಿ....

  'ರಾಧೆ ಶ್ಯಾಮ್' ವೀಕ್ಷಿಸಿದ ಪ್ರಭಾಸ್: ಪೂಜಾ ಹೆಗ್ಡೆ ಬಗ್ಗೆ ಹೇಳಿದ್ದೇನು?'ರಾಧೆ ಶ್ಯಾಮ್' ವೀಕ್ಷಿಸಿದ ಪ್ರಭಾಸ್: ಪೂಜಾ ಹೆಗ್ಡೆ ಬಗ್ಗೆ ಹೇಳಿದ್ದೇನು?

  350 ಕೋಟಿ ಬಜೆಟ್?

  350 ಕೋಟಿ ಬಜೆಟ್?

  ಯುವಿ ಕ್ರಿಯೇಷನ್ಸ್ ಮತ್ತು ಟಿ-ಸಿರೀಸ್ ಜಂಟಿಯಾಗಿ ನಿರ್ಮಾಣ ಮಾಡಿರುವ ರಾಧೆಶ್ಯಾಮ್ ಚಿತ್ರದ ಬಜೆಟ್ 350 ಕೋಟಿ ಎಂದು ಹೇಳಲಾಗಿದೆ. ಇಷ್ಟು ದೊಡ್ಡ ಬಜೆಟ್ ಹಾಕಿ ಸಿನಿಮಾ ನಿರ್ಮಿಸಿರುವ ನಿರ್ಮಾಪಕರು ನಷ್ಟ ಮಾಡಿಕೊಳ್ಳಲು ಸಿದ್ದರಿಲ್ಲ. ಥಿಯೇಟರ್ ರಿಲೀಸ್ ಮಾಡಿದ್ರೆ ಲಾಭ ಮಾಡಬಹುದು ಎಂಬ ಲೆಕ್ಕಾಚಾರದಲ್ಲಿದೆ ಚಿತ್ರತಂಡ.

  ಅಮೆಜಾನ್ ಆಫರ್ 400 ಕೋಟಿ?

  ಅಮೆಜಾನ್ ಆಫರ್ 400 ಕೋಟಿ?

  ರಾಧೆಶ್ಯಾಮ್ ಚಿತ್ರವನ್ನು ನಾವೇ ಎಕ್ಸ್‌ಕ್ಲೂಸಿವ್ ಆಗಿ ರಿಲೀಸ್ ಮಾಡುತ್ತೇವೆ ಎಂದು ಅಮೇಜಾನ್ ಪ್ರೈಮ್ ಸಂಸ್ಥೆ ಮುಂದೆ ಬಂದಿದೆ. ಅದಕ್ಕಾಗಿ ಸುಮಾರು 400 ಕೋಟಿ ನೀಡುವುದಾಗಿ ಒಪ್ಪಂದಕ್ಕೆ ಸಿದ್ದವಿದೆ. ಆದರೆ, ನಿರ್ಮಾಪಕರು ಥಿಯೇಟರ್ ರಿಲೀಸ್ ಕಡೆ ಹೆಚ್ಚು ಒಲವು ತೋರಿದ್ದಾರೆ ಎನ್ನುವುದು ಇಂಡಸ್ಟ್ರಿ ಟಾಕ್.

  500 ಕೋಟಿ ಬಜೆಟ್: ಅರ್ಧದಷ್ಟು ಹಣ ಕಲಾವಿದರ ಸಂಭಾವನೆಗೆ ಖರ್ಚು?500 ಕೋಟಿ ಬಜೆಟ್: ಅರ್ಧದಷ್ಟು ಹಣ ಕಲಾವಿದರ ಸಂಭಾವನೆಗೆ ಖರ್ಚು?

  ಸಲ್ಮಾನ್ ಖಾನ್ ರಾಧೆ ಚಿತ್ರಕ್ಕೆ ಸಿಕ್ಕಿದ್ದೆಷ್ಟು?

  ಸಲ್ಮಾನ್ ಖಾನ್ ರಾಧೆ ಚಿತ್ರಕ್ಕೆ ಸಿಕ್ಕಿದ್ದೆಷ್ಟು?

  ಸಲ್ಮಾನ್ ಖಾನ್ ನಟನೆಯಲ್ಲಿ ಮೂಡಿಬಂದಿದ್ದ 'ರಾಧೆ' ಚಿತ್ರವನ್ನು ಜೀ 5 ಖರೀದಿ ಮಾಡಿತ್ತು. ಈದ್ ಹಬ್ಬದ ಪ್ರಯುಕ್ತ ಮೇ ತಿಂಗಳಲ್ಲಿ ಎಕ್ಸ್‌ಕ್ಲೂಸಿವ್ ಆಗಿ ರಿಲೀಸ್ ಮಾಡಿತ್ತು. ನಿರೀಕ್ಷೆಯನ್ನು ಹುಸಿಗೊಳಿಸಿದ ರಾಧೆ ಫ್ಲಾಪ್ ಪಟ್ಟಿಗೆ ಸೇರಿಕೊಂಡಿದೆ. ಅಂದ್ಹಾಗೆ, ಜೀ ಸಂಸ್ಥೆ ಈ ಚಿತ್ರವನ್ನು 250 ಕೋಟಿ ನೀಡಿ ಖರೀದಿ ಮಾಡಿತ್ತು.

  ನೆಟ್‌ಫ್ಲಿಕ್ಸ್ 300 ಕೋಟಿ?

  ನೆಟ್‌ಫ್ಲಿಕ್ಸ್ 300 ಕೋಟಿ?

  ಈ ಹಿಂದೆ ನೆಟ್‌ಫ್ಲಿಕ್ಸ್ ಒಟಿಟಿ ವೇದಿಕೆ ರಾಧೆ ಶ್ಯಾಮ್ ಚಿತ್ರಕ್ಕೆ 300 ಕೋಟಿ ನೀಡಲು ಮುಂದಾಗಿತ್ತು. ಆ ಸಂದರ್ಭದಲ್ಲೂ ಯುವಿ ಕ್ರಿಯೇಷನ್ಸ್ ಹಿಂದೆ ಸರಿಯಿತು. ಈಗ ಅಮೇಜಾನ್ 400 ಕೋಟಿ ಆಫರ್ ತಂದಿದೆ. ಈಗಲೂ ನಿರ್ಮಾಪಕರು ನೋ ಎನ್ನುತ್ತಿದ್ದಾರೆ.

  English summary
  Prabhas and Pooja Hegde starrer radhe shyam movie get big offer for exclusive release from amazon?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X