New OTT Releases This Week; ಈ ವಾರ ಓಟಿಟಿಗೆ ಬರ್ತಿರೋ ಸಿನಿಮಾ, ಸೀರಿಸ್ ಕಂಪ್ಲೀಟ್ ಲಿಸ್ಟ್

ದಿನದಿಂದ ದಿನಕ್ಕೆ ಓಟಿಟಿ ಪ್ರಾಬಲ್ಯ ಹೆಚ್ಚಾಗುತ್ತಲೇ ಇದೆ. ಟಿವಿ ಬಂದಮೇಲೆ ಜನ ಥಿಯೇಟರ್‌ಗೆ ಬರೋದು ಕಮ್ಮಿ ಆಗಲಿಲ್ಲ ಎನ್ನುವ ಮಾತು ಹಿಂದೆ ಇತ್ತು. ಆದರೆ ಓಟಿಟಿ ಬಂದಮೇಲೆ ಪ್ರೇಕ್ಷಕರು ಥಿಯೇಟರ್‌ಗೆ ಬರೋಕ್ಕೆ ಬಹಳ ಯೋಚಿಸುತ್ತಿರುವುದು ಸುಳ್ಳಲ್ಲ.

ದೊಡ್ಡ ದೊಡ್ಡ ಸಿನಿಮಾಗಳೇ 25 ದಿನಕ್ಕೆ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಡುತ್ತಿವೆ. ಸಿನಿಮಾ ನೋಡಿದವರ ಪ್ರತಿಕ್ರಿಯೆ ನೋಡಿಕೊಂಡು ಥಿಯೇಟರ್‌ಗೆ ಹೋಗಬೇಕೋ ಬೇಡವೋ ಎಂದು ನಿರ್ಧರಿಸುವವರು ಇದ್ದಾರೆ. 20 ದಿನ ಕಾದರೆ ಓಟಿಟಿ ಬರುತ್ತೆ ಬಿಡು ಎಂದು ಕೆಲವರು ಹೇಳುವುದನ್ನು ಕೇಳುತ್ತಿರುತ್ತೇವೆ. ಈ ವಾರ ಸಾಕಷ್ಟು ಇಂಟ್ರೆಸ್ಟಿಂಗ್ ಸಿನಿಮಾ, ವೆಬ್ ಸೀರಿಸ್ ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ.

Raghu Thatha to Mr Bachchan New Ott Releases This Week

ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಯ ಸಿನಿಮಾ, ಸೀರಿಸ್ ಓಟಿಟಿಗೆ ಬರ್ತಿದೆ. ಕೆಲ ಸಿನಿಮಾಗಳು ಕೊಂಚಮಟ್ಟಿಗೆ ನಿರೀಕ್ಷೆ ಮೂಡಿಸಿದೆ. ಈಗಾಗಲೇ ಒಂದೆರಡು ಸಿನಿಮಾ ಸ್ಟ್ರೀಮಿಂಗ್ ಆರಂಭಿಸಿದೆ. ಸಾಮಾನ್ಯವಾಗಿ ಶುಕ್ರವಾರ ಹೆಚ್ಚು ಸಿನಿಮಾಗಳು ಓಟಿಟಿಗೆ ಬರುತ್ತವೆ, ಆದರೆ ಈ ವಾರ ಒಂದು ದಿನ ಮೊದಲೇ ಬಂದಿವೆ.

ಅಮೇಜಾನ್ ಪ್ರೈಂ

1. ಭೀಮ

ಕಳೆದ ವಾರವೇ 'ಭೀಮ' ಕನ್ನಡ ವರ್ಷನ್ ಓಟಿಟಿಗೆ ಬಂದಿತ್ತು. ಇದೀಗ ಸಿನಿಮಾ ತೆಲುಗು, ತಮಿಳು, ಮಲಯಾಳಂ ಭಾಷೆಗಳಿಗೆ ಡಬ್ ಆಗಿ ಸ್ಟ್ರೀಮಿಂಗ್ ಆರಂಭಿಸಿದೆ. ಆಡಿಯೋ ಬದಲಿಸಿ ಪರಭಾಷಿಕರು ಸಿನಿಮಾ ನೋಡುವ ಅವಕಾಶ ಸಿಕ್ಕಿದೆ. ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿರುವ 'ಭೀಮ' ಸಿನಿಮಾ ಆಗಸ್ಟ್ 9ಕ್ಕೆ ತೆರೆಗೆ ಬಂದಿತ್ತು. ಗಾಂಜಾ, ಡ್ರಗ್ಸ್ ಮಾಫಿಯಾ ಸುತ್ತಾ ಸುತ್ತುವ ಸಿನಿಮಾ ಮಾಸ್ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಉಣಬಡಿಸಿತ್ತು. ಈ ವರ್ಷ ಕನ್ನಡದ ಮೊದಲ ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾ ಎನಿಸಿಕೊಂಡಿತ್ತು.

Raghu Thatha to Mr Bachchan New Ott Releases This Week

2. ದಿ ಮನಿ ಗೇಮ್(ಇಂಗ್ಲೀಷ್ ವೆಬ್ ಸೀರಿಸ್) ಸೆಪ್ಟೆಂಬರ್ 10

ನೆಟ್‌ಫ್ಲಿಕ್ಸ್

1. ಮಿ. ಬಚ್ಚನ್

ರವಿತೇಜಾ ನಟನೆಯ ತೆಲುಗಿನ 'ಮಿಸ್ಟರ್ ಬಚ್ಚನ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಹರೀಶ್ ಶಂಕರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಆಗಸ್ಟ್ 15ಕ್ಕೆ ತೆರೆಗೆ ಬಂದಿದ್ದ ಸಿನಿಮಾ ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ತಮಿಳು, ಕನ್ನಡ ಭಾಷೆಗಳಿಗೂ ಡಬ್ ಆಗಿ ವೀಕ್ಷಣೆಗೆ ಲಭ್ಯವಿದೆ. ಭಾಗ್ಯಶ್ರೀ ಬ್ರೋಸ್ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಜಗಪತಿ ಬಾಬು ಮುಖ್ಯವಾದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

2. ಆಯ್(ತೆಲುಗು ಸಿನಿಮಾ) ಸೆಪ್ಟೆಂಬರ್ 12

3. ಬ್ರೇಕಿಂಗ್ ಡೌನ್ ದಿ ವಾಲ್(ಡಾಕ್ಯುಮೆಂಟರಿ) ಸೆಪ್ಟೆಂರ್ 12

4. ಮಿಡ್ನೈಟ್ ಎಟ್ ದಿ ಪೆರಾ ಪ್ಯಾಲೆಸ್ ಸೀಸನ್- 2 (ಇಂಗ್ಲೀಷ್ ಸೀರಿಸ್)- ಸೆಪ್ಟೆಂಬರ್ 12

5. ಸೆಕ್ಟರ್-36(ಹಿಂದಿ ಸಿನಿಮಾ) ಸೆಪ್ಟೆಂಬರ್ 13

6. ಬೆರ್ಲಿನ್(ಹಿಂದಿ ಸಿನಿಮಾ) ಸೆಪ್ಟೆಂಬರ್ 13

ಜಿಯೋ ಸಿನಿಮಾ

1. ಕಲ್‌ಬರಿ ರೆಕಾರ್ಡ್ಸ್ (ಹಿಂದಿ ಸಿನಿಮಾ)ಸೆಪ್ಟೆಂಬರ್ 12

ಸೋನಿ ಲಿವ್

1. ಬೆಂಚ್ ಲೈಫ್(ವೆಬ್ ಸೀರಿಸ್) ಸೆಪ್ಟೆಂಬರ್ 10

2. ತಲವನ್(ಮಲಯಾಳಂ ಸಿನಿಮಾ) ಸೆಪ್ಟೆಂಬರ್ 10

ಜೀ-5

1. ರಘುತಾತ

ಕೀರ್ತಿ ಸುರೇಶ್ ನಟನೆಯ 'ರಘುತಾತ' ಸಿನಿಮಾ ಇದೇ ವಾರ ಓಟಿಟಿಗೆ ಬರ್ತಿದೆ. ಆಗಸ್ಟ್ 15ಕ್ಕೆ ತಮಿಳಿನಲ್ಲಿ ಮಾತ್ರ ಸಿನಿಮಾ ಬೆಳ್ಳಿಪರದೆಗೆ ಬಂದಿತ್ತು. ಇದೀಗ ಕನ್ನಡ, ತೆಲುಗು ಭಾಷೆಗಳಿಗೂ ಡಬ್ ಆಗಿ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ. ಜೀ-5ನಲ್ಲಿ ಸೆಪ್ಟೆಂಬರ್ 13ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಿಸಿದೆ.

2. ನುನಾಕುಳಿ(ಮಲಯಾಳಂ ಸಿನಿಮಾ) ಸೆಪ್ಟೆಂಬರ್ 13

More from Filmibeat

English summary
Ott Releases This week: New Movies And Series To Watch On Netflix, Prime, Zee-5 And More;
Read more about: ott sandalwood telugu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X