Su From So OTT: ಓಟಿಟಿಗೆ ಬಂದೇ ಬಿಡ್ತು 'ಸು ಫ್ರಮ್ ಸೋ'; ಅಭಿಮಾನಿಗಳಿಗೆ ಬೇಸರ

ರಾಜ್ ಬಿ ಶೆಟ್ಟಿ ನಿರ್ಮಿಸಿ ನಟಿಸಿದ್ದ 'ಸು ಫ್ರಮ್ ಸೋ' ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಿಸಿದೆ. 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಸ್ಟಾರ್ ನಟರಿಲ್ಲ, ಹೆಚ್ಚು ಪ್ರಚಾರ ಇಲ್ಲ, ಕಡಿಮೆ ಬಜೆಟ್ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿ ಮುನ್ನುಗ್ಗುತ್ತಿದೆ. ಕನ್ನಡ ಮಾತ್ರವಲ್ಲದೇ ಮಲಯಾಳಂ ಹಾಗೂ ತೆಲುಗು ಭಾಷೆಗಳಿಗೂ ಡಬ್ ಆಗಿ ಗೆದ್ದಿದೆ.

ಜೆಪಿ ತುಮ್ಮಿನಾಡ್ ನಿರ್ದೇಶನದ ಕಾಮಿಡಿ ಎಂಟರ್‌ಟೈನರ್ ಸಿನಿಮಾ ಅಬಾಲ ವೃದ್ಧರಾಗಿ ಎಲ್ಲಾ ವರ್ಗದ ಪ್ರೇಕ್ಷಕರನ್ನು ರಂಜಿಸಿದೆ. ಮಲ್ಟಿಪ್ಲೆಕ್ಸ್, ಸಿಂಗಲ್ ಸ್ಕ್ರೀನ್ ಎನ್ನುವ ಭೇದಭಾವ ಇಲ್ಲದೇ ಎಲ್ಲಾ ಕಡೆ ಹೌಸ್‌ಫುಲ್ ಪ್ರದರ್ಶನ ಕಂಡು ದರ್ಬಾರ್ ನಡೆಸಿದೆ. ಲಕ್ಷ ಲಕ್ಷ ಜನ ಆನ್ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿ ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ. ಆರಂಭದಿಂದ ಕೊನೆವರೆಗೂ ನಗಿಸೋ ಸಿನಿಮಾ ಕೊನೆಯಲ್ಲಿ ಒಂದೊಳ್ಳೆ ಸಂದೇಶ ಸಾರಿ ಪ್ರೇಕ್ಷಕರಿಗೆ ಇಷ್ಟವಾಗಿದೆ.

Raj B Shetty s Su From So Creates 120 Crore History in Kannada Cinema OTT Release on Jio Hotstar Soon

ಅಜಯ್ ದೇವಗನ್, ಕಿಚ್ಚ ಸುದೀಪ್ ಸೇರಿದಂತೆ ಖ್ಯಾತನಾಮರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಚಿತ್ರತಂಡದ ಬೆನ್ನು ತಟ್ಟಿದ್ದಾರೆ. ಕರಾವಳಿ ಹಿನ್ನೆಲೆ ಕಥೆ ಆ ಭಾಗದ ಜನರನ್ನು ಮಾತ್ರವಲ್ಲ ದೇಶ ವಿದೇಶಗಳಲ್ಲಿ ಸದ್ದು ಮಾಡಿದೆ. ಪೇಯ್ಡ್ ಪ್ರೀಮಿಯರ್‌ ಶೋನಿಂದಲೇ 'ಸು ಫ್ರಮ್ ಸೋ' ಸಿನಿಮಾ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿತ್ತು. ನೋಡ ನೋಡುತ್ತಲೇ ಮೌತ್‌ ಟಾಕ್ ಚಿತ್ರವನ್ನು ದೊಡ್ಡಮಟ್ಟಕ್ಕೆ ತೆಗೆದುಕೊಂಡು ಹೋಯಿತು.

ಆರಂಭದಲ್ಲಿ ಕೆಲವೇ ಸ್ಕ್ರೀನ್‌ಗಳಲ್ಲಿ ಅದೂ ಕೂಡ ಮಲ್ಲಿಪ್ಲೆಕ್ಸ್‌ಗಳಲ್ಲಿ ಸಿನಿಮಾ ತೆರೆಕಂಡಿತ್ತು. ಬಳಿಕ ತಮ್ಮ ಶಕ್ತಿಯಿಂದಲೇ ಸಿನಿಮಾ ಸ್ಕ್ರೀನ್‌ಗಳ ಸಂಖ್ಯೆ ಹೆಚ್ಚಿಸಿಕೊಂಡಿತ್ತು. ಭಾವ, ಕರುಣಾಕರ ಗುರೂಜಿ, ಅಶೋಕ ಹಾಗೂ ರವಿಯಣ್ಣ ಪಾತ್ರಗಳು ಪ್ರೇಕ್ಷಕರ ಮನಸ್ಸಿನಲ್ಲಿ ಜಾಗ ಮಾಡಿಕೊಂಡಿದೆ. ಮರ್ಲೂರಿನ ಕಥೆ ಮುಂದೆ ಬೇರೆ ಭಾಷೆಗಳಿಗೆ ರೀಮೆಕ್ ಆಗುವ ಸಾಧ್ಯತೆಯಿದೆ.

Raj B Shetty s Su From So Creates 120 Crore History in Kannada Cinema OTT Release on Jio Hotstar Soon

ಓಟಿಟಿ ರಿಲೀಸ್

'ಸು ಫ್ರಮ್ ಸೋ' ಸಿನಿಮಾ ಚಿತ್ರಮಂದಿರಗಳಲ್ಲಿ 25 ದಿನ ಪೂರೈಸಿ 50ನೇ ದಿನದತ್ತ ದಾಪುಗಾಲು ಇಟ್ಟಿದೆ. ಇಂತಹ ಸಮಯದಲ್ಲೇ ಸಿನಿಮಾ ಓಟಿಟಿಗೆ ಬರ್ತಿದೆ. ಸೆಪ್ಟೆಂಬರ್ 5ರಂದು ತಪ್ಪಿದರೆ 8ರಂದು ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಡುವುದು ಖಚಿತವಾಗಿದೆ. ಜಿಯೋ ಹಾಟ್‌ಸ್ಟರ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಪ್ರೇಕ್ಷಕರು ಚಿತ್ರಮಂದಿರದಲ್ಲೇ ಇನ್ನು ನೋಡುತ್ತಿದ್ದಾರೆ, ಇಷ್ಟು ಬೇಗ ಓಟಿಟಿಗೆ ಯಾಕೆ? ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಓಟಿಟಿ ರೈಟ್ಸ್

ಸೂಪರ್ ಹಿಟ್ 'ಸು ಫ್ರಮ್ ಸೋ' ಚಿತ್ರದ ಓಟಿಟಿ ಹಾಗೂ ಸ್ಯಾಟಲೈಟ್ಸ್ ರೈಟ್ಸ್ ಸೇರಿ ಒಟ್ಟು 7 ಕೋಟಿ ರೂ.ಗೆ ಮಾರಾಟವಾಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಸಿನಿಮಾ ಪ್ರೀಮಿಯರ್ ಆಗಲಿದೆ. ಹೊಸಬರ ಚಿತ್ರಕ್ಕೆ ದೊಡ್ಡ ದೊಡ್ಡಮಟ್ಟದಲ್ಲಿ ಬ್ಯುಸಿನೆಸ್ ಆಗಿರುವುದು ವಿಶೇಷ. ಅಂದಾಜು 5 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿತ್ತು.

'ಸು ಫ್ರಮ್ ಸೋ' ಬಾಕ್ಸಾಫೀಸ್

ವಿಶ್ವದಾದ್ಯಂತ 'ಸು ಫ್ರಮ್ ಸೋ' ಸಿನಿಮಾ 120 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಹೇಳಲಾಗ್ತಿದೆ. 'KGF- 2', 'ಕಾಂತಾರ' ಹಾಗೂ 'KGF- 1' ಬಳಿಕ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಕನ್ನಡ ಸಿನಿಮಾ ಎನ್ನುವ ಹೆಗ್ಗಳಿಕೆಗೆ 'ಸು ಫ್ರಮ್ ಸೋ' ಪಾತ್ರವಾಗಿದೆ.

ಸೀಕ್ವೆಲ್ ಮಾಡಲ್ಲ

ಸಾಮಾನ್ಯವಾಗಿ ಯಾವುದೇ ಸಿನಿಮಾ ಹಿಟ್ ಆಗಿಬಿಟ್ಟರೆ ಸೀಕ್ವೆಲ್ ಚರ್ಚೆ ಶುರುವಾಗುತ್ತಿದೆ. 'ಸು ಫ್ರಮ್ ಸೋ' ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಕೂಡ ಪಾರ್ಟ್-2 ಮಾಡುವ ಸುಳಿವು ಕೊಟ್ಟಿದ್ದಾರೆ. ಆದರೆ ರಾಜ್ ಬಿ ಶೆಟ್ಟಿ ಮಾತನಾಡಿ ನನಗೆ ಸೀಕ್ವೆಲ್ ಮಾಡುವ ಮನಸ್ಸಿಲ್ಲ, ಬದಲಿಗೆ ಬೇರೆ ಸಿನಿಮಾ ಮಾಡುತ್ತೇವೆ ಎಂದಿದ್ದಾರೆ.

More from Filmibeat

English summary
When and where to watch Raj B Shetty’s film Su From So. After a 25-day successful run in theaters, the comedy entertainer is set for OTT release.
Read more about: raj b shetty sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X