Toby: ಮರೆತೇ ಹೋಗಿದ್ದ 'ಟೋಬಿ' ಓಟಿಟಿ ರಿಲೀಸ್ ಡೇಟ್ ಘೋಷಣೆ: ಪ್ರೈಂ, ಜೀ5ನಲ್ಲಿ ಅಲ್ಲ ಸ್ಟ್ರೀಮಿಂಗ್

ಸ್ಯಾಂಪಲ್‌ಗಳಿಂದ ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದ 'ಟೋಬಿ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ. ರಾಜ್ ಬಿ. ಶೆಟ್ಟಿ ಸಿನಿಮಾ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ರಾಜ್ ನಟನೆ, ಚೈತ್ರಾ ನಟನೆ ಬಗ್ಗೆಯೂ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಸಿನಿಮಾ ದೊಡ್ಡದಾಗಿ ಗೆಲ್ಲಲಿಲ್ಲ. ಇದೀಗ ಓಟಿಟಿ ಸ್ಟ್ರೀಮಿಂಗ್‌ಗೆ ರೆಡಿಯಾಗಿದೆ.

ಆಗಸ್ಟ್ 25ಕ್ಕೆ 'ಟೋಬಿ' ಸಿನಿಮಾ ತೆರೆಗಪ್ಪಳಿಸಿತ್ತು. ಬಳಿಕ ಚಿತ್ರವನ್ನು ಮಲಯಾಳಂಗೂ ಡಬ್ ಮಾಡಿ ಅಲ್ಲೂ ಥ್ರಿಯೇಟ್ರಿಕಲ್ ರಿಲೀಸ್ ಮಾಡಲಾಗಿತ್ತು. ಒಂದು ವರ್ಗದ ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾದರೂ ಎಲ್ಲರನ್ನು ಸೆಳೆಯುವಲ್ಲಿ ವಿಫಲವಾಗಿತ್ತು. ಟಿ. ಕೆ ದಯಾನಂದ್ ಬತರೆದ ಕಥೆಗೆ ಸ್ವತಃ ರಾಜ್‌ ಬಿ. ಶೆಟ್ಟಿ ಚಿತ್ರಕಥೆ ಬರೆದಿದ್ದರು. ನಿರ್ದೇಶಕ ಬಾಸಿಲ್ ಆಕ್ಷನ್ ಕಟ್ ಹೇಳಿದ್ದರು.

Raj B Shetty Starrer Toby OTT Release Date Confirmed, check platform

ರವಿ ರೈ ಕಳಸ ನಿರ್ಮಾಣದ 'ಟೋಬಿ' ಚಿತ್ರಕ್ಕೆ ವಿಮರ್ಶಕರಿಂದರೂ ಒಳ್ಳೆ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಒಂದು ವರ್ಗದ ಪ್ರೇಕ್ಷಕರು ಮಾತ್ರ ಇದು ಓಟಿಟಿ ಸಿನಿಮಾ ಎಂದುಬಿಟ್ಟಿದ್ದರು. ಹಾಗಾಗಿ ಸಿನಿಮಾ ಡಿಜಿಟಲ್ ಸ್ಟ್ರೀಮಿಂಗ್ ಬಗ್ಗೆ ಭಾರೀ ನಿರೀಕ್ಷೆ ಇತ್ತು. ದೊಡ್ಡ ದೊಡ್ಡ ಸಿನಿಮಾಗಳೇ ತಿಂಗಳಿಗೂ ಮೊದಲು ಓಟಿಟಿಗೆ ಬರ್ತಿವೆ. ಆದರೆ 'ಟೋಬಿ' ತೆರೆಗೆ ಬಂದು 5 ತಿಂಗಳು ಕಳೆದರೂ ಓಟಿಟಿಗೆ ಬಂದಿರಲಿಲ್ಲ. ಕೆಲವರು ಚಿತ್ರಚನ್ನು ಮರೆತೇಬಿಟ್ಟಿದ್ದರು.

ಅಂತೂ ಇಂತೂ 'ಟೋಬಿ' ಸಿನಿಮಾ ಓಟಿಟಿ ಸ್ಟ್ರೀಮಿಂಗ್ ಡೇಟ್ ಫಿಕ್ಸ್ ಆಗಿದೆ. ಡಿಸೆಂಬರ್ 22ಕ್ಕೆ ಸೋನಿಲಿವ್‌ನಲ್ಲಿ ಅಪ್‌ಲೋಡ್‌ ಆಗಲಿದೆ. ಅಧಿಕೃತವಾಗಿ ಈ ವಿಚಾರವನ್ನು ಸೋನಿಲಿವ್ ಸಂಸ್ಥೆ ಘೋಷಿಸಿದೆ. ಕನ್ನಡ ಹಾಗೂ ಮಲಯಾಳಂ ವರ್ಷನ್‌ಗಳಲ್ಲಿ ಸಿನಿಮಾ ವೀಕ್ಷಕರಿಗೆ ಸಿಗಲಿದೆ.

ಅಮೇಜಾನ್ ಪ್ರೈಂ ಹಾಗೂ ಜೀ5ನಲ್ಲಿ ಕನ್ನಡ ಸಿನಿಮಾಗಳು ಹೆಚ್ಚು ರಿಲೀಸ್ ಆಗುತ್ತವೆ. ಆದರೆ ಇತ್ತೀಚೆಗೆ ಪ್ರೈಂ ಕನ್ನಡ ಸಿನಿಮಾಗಳನ್ನು ಕೊಂಡುಕೊಳ್ಳಲು ಮೀನಾಮೇಷ ಎಣಿಸುತ್ತಿದೆ. ಆಗೊಮ್ಮೆ ಈಗೊಮ್ಮೆ ಸೋನಿಲಿವ್ ಕನ್ನಡ ಸಿನಿಮಾಗಳನ್ನು ಸ್ಟ್ರೀಮಿಂಗ್ ಮಾಡುತ್ತಿದೆ. ಇದೀಗ 'ಟೋಬಿ' ಕೂಡ ರಿಲೀಸ್‌ಗೆ ರೆಡಿಯಾಗಿದೆ. ತೆಲುಗು ಹಾಗೂ ಹಿಂದಿ ವೀಕ್ಷಕರು ತಮ್ಮ ಭಾಷೆಗಳಿಗೆ ಡಬ್ ಮಾಡುವಂತೆ ಕೇಳುತ್ತಿದ್ದಾರೆ.

Raj B Shetty Starrer Toby OTT Release Date Confirmed, check platform

ಸಮಾಜದಲ್ಲಿ ಬಹಳ ತುಳಿತಕ್ಕೆ ಒಳಗಾದವು ಒಮ್ಮೆಲೆ ತಿರುಗಿ ಬಿದ್ದರೆ ಏನಾಗುತ್ತಲೇ ಎನ್ನುವ ಒಂದೆಳೆ ಕಥೆ ಇಟ್ಟುಕೊಂಡು 'ಟೋಬಿ' ಸಿನಿಮಾ ಮಾಡಲಾಗಿತ್ತು. ಕುರಿ ಮಾರಿಯಾದರೆ ಏನಾಗುತ್ತದೆ ಅದೇ 'ಟೋಬಿ' ಮೋಷನ್ ಪೋಸ್ಟರ್ ರಿಲೀಸ್ ವೇಳೆಯೇ ರಾಜ್‌. ಬಿ ಶೆಟ್ಟಿ ಹೇಳಿದ್ದರು.

ರಾಜ್‌ ಬಿ. ಶೆಟ್ಟಿ ಜೊತೆಗೆ ಸಂಯುಕ್ತಾ ಹೊಡನಾಡ್, ಗೋಪಾಲಕೃಷ್ಣ ದೇಶಪಾಂಡೆ, ಸಂಧ್ಯಾ ಅರಕೆರೆ, ಭರತ್ ಜಿಬಿ, ಯೋಗಿ ಬಂಕೇಶ್ವರ್ 'ಟೋಬಿ' ಚಿತ್ರದ ತಾರಾಗಣದಲ್ಲಿದ್ದಾರೆ. ಮಿಧುನ್ ಮುಕುಂದನ್ ಸಂಗೀತ, ಪ್ರವೀಣ್ ಶೇರಿಯಾನ್ ಛಾಯಾಗ್ರಹಣ ಚಿತ್ರಕ್ಕಿದೆ. ರವಿ ರೈ ಕಳಸ ಜೊತೆಗೆ ರಾಜ್‌. ಬಿ ಶೆಟ್ಟಿ ಕೂಡ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಚಿತ್ರವನ್ನು ವಿತರಣೆ ಮಾಡಿತ್ತು.

ಚಿಕ್ಕಂದಿನಿಂದಲೂ ಶೋಷಣೆಗೆ ಗುರಿಯಾದ ಬಾಲಕ ಬಹಳ ಒರಟನಾಗಿ ಬೆಳೆಯುತ್ತಾನೆ. ಕೋಪ ಬಂದರೆ ಅವನನ್ನು ತಡೆಯೋದು ಬಹಳ ಕಷ್ಟ. ತನ್ನ ಪ್ರೀತಿ ಪಾತ್ರರ ಮಾತುಗಳನ್ನು ಮಾತುಗಳನ್ನು ಕೇಳುವ ಆತನನ್ನು ಕೆಲವರು ಕೆಟ್ಟ ಕೆಲಸಗಳಿಗೆ ಬಳಸಿಕೊಳ್ಳುತ್ತಾರೆ. ಸತ್ಯ ಅರಿವಾದ ಬಳಿಕ ಕುರಿಯಂತಿದ್ದ ಆತ ಮಾರಿಯಾಗಿ ಅಬ್ಬರಿಸುತ್ತಾನೆ. 'ಗರುಡಗಮನ ವೃಷಭ ವಾಹನ' ಚಿತ್ರದ ಶಿವ ಪಾತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಂತೆ ರಾಜ್ ಬಿ. ಶೆಟ್ಟಿ 'ಟೋಬಿ'ಯಾಗಿ ಆರ್ಭಟಿಸಿದ್ದರು. ಸಿನಿಮಾ ಈ ವೀಕೆಂಡ್‌ನಲ್ಲೇ ಓಟಿಟಿಗೆ ಬರ್ತಿದ್ದು ಕನ್ನಡ ಸಿನಿರಸಿಕರು ಕಾಯುತ್ತಿದ್ದಾರೆ.

More from Filmibeat

English summary
Toby OTT release date: when and where to watch Raj b shetty action film;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X