ಕೆಜಿಎಫ್‌ 2 ಮತ್ತು RRR ಸಿನಿಮಾ ಒಟಿಟಿ ರಿಲೀಸ್‌ಗೂ ಮುನ್ನ ಆನ್‌ಲೈನ್‌ನಲ್ಲಿ ಲೀಕ್

ಭಾರತೀಯ ಚಿತ್ರರಂಗದಲ್ಲಿ ದಕ್ಷಿಣ ಭಾರತದ ಸಿನಿಮಾಗಳು ಭಾರೀ ಸೆನ್ಸೇಶನ್ ಕ್ರಿಯೇಟ್ ಮಾಡಿದ್ದು, ಇತ್ತೀಚಿಗೆ ಬಾಲಿವುಡ್ ಸಿನಿಮಾಗಳೇ ದಕ್ಷಿಣ ಭಾರತದ ಸಿನಿಮಾಗಳ ಮುಂದೆ ಮಂಡಿಯೂರಿ ಕುಳಿತಿವೆ. ಇದಕ್ಕೆ ನಿರ್ದಶನವೆಂಬತೆ RRR, ಕೆಜಿಎಫ್‌ 2 ಸಿನಿಮಾಗಳು ಬಾಲಿವುಡ್ ಬಾಕ್ಸಾಫೀಸ್‌ನ ಕೊಳ್ಳೆ ಹೊಡೆದು ಮುನ್ನುಗುತ್ತಿದೆ.

ಬಾಲಿವುಡ್ ಸಿನಿಮಾಗಳನ್ನೇ ಹಿಂದಕ್ಕೆ ಹಾಕಿ 'ಕೆಜೆಎಫ್‌ 2' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ರಿಲೀಸ್‌ ಆಗಿ 25 ದಿನಗಳು ಕಳೆದರೂ ಸಹ 'ಕೆಜಿಎಫ್‌' ಹವಾ ಮಾತ್ರ ಇನ್ನು ನಿಂತಿಲ್ಲ. ಈಗಲೂ ಸಹ ಹಲವು ಕಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇತ್ತ 3ಡಿ ಅವತರಣಿಕೆಯಿರುವ 'ಆರ್‌ಆರ್‌ಆರ್‌' ಕೂಡ ಹಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.

ಸದ್ಯ 'RRR' ಹಾಗೂ 'ಕೆಜಿಎಫ್‌ 2' ಎರಡು ಸಿನಿಮಾಗಳು ಒಟಿಟಿಗೆ ಲಗ್ಗೆ ಇಡಲು ಸಿದ್ದವಾಗಿದೆ. ಆದರೆ, ಒಟಿಟಿ ರಿಲೀಸ್‌ಗೂ ಮುನ್ನ ಈ ಎರಡು ಸಿನಿಮಾಗಳು ಪೈರಸಿ ಆಗಿದ್ದು, ಆನ್‌ಲೈನ್‌ನಲ್ಲಿ ಪೂರ್ತಿ ಸಿನಿಮಾ ಲೀಕ್ ಆಗಿದೆ.

 ಆನ್‌ಲೈನ್‌ ಲೀಕ್‌ ಆಯ್ತು 'ಕೆಜಿಎಫ್ 2' ಮತ್ತು 'RRR'

ಆನ್‌ಲೈನ್‌ ಲೀಕ್‌ ಆಯ್ತು 'ಕೆಜಿಎಫ್ 2' ಮತ್ತು 'RRR'

ಇತ್ತೀಚಿನ ದಿನಗಳಲ್ಲಿ ಬಿಗ್‌ ಬಜೆಟ್‌ನ ಸಿನಿಮಾಗಳು ಥಿಯೇಟರ್‌ಗೆ ಬರುವ ಮುಂಚೆಯೇ ಸಿನಿಮಾಗಳನ್ನು ಪೈರಸಿ ಮಾಡಿ ಆನ್‌ಲೈನ್‌ನಲ್ಲಿ ಬಿಡುವುದು ಕಾಮನ್‌ ಆಗಿಬಿಟ್ಟಿದೆ. ಈಗ ಈ ಸಾಲಿಗೆ RRR ಹಾಗೂ 'ಕೆಜಿಎಫ್‌ 2' ಸಿನಿಮಾ ಸೇರಿಕೊಂಡಿದ್ದು, ಒಟಿಟಿಗೆ ಬರುವ ಮುನ್ನವೇ ಆನ್‌ಲೈನ್‌ ಅಲ್ಲಿ ಲೀಕ್‌ ಆಗಿದೆ. ಕೆಲವು ಸೈಟ್‌ಗಳಲ್ಲಿ ಸಿನಿಮಾವನ್ನು HD ಗುಣಮಟ್ಟದಲ್ಲಿ ಡೌನ್‌ ಲೋಡ್ ಮಾಡಿಕೊಳ್ಳಲು ಕೊಟ್ಟಿವೆ. ಹೀಗಾಗಿ 'RRR' ಹಾಗೂ 'ಕೆಜಿಎಫ್‌ 2' ಒಟಿಟಿ ರಿಲೀಸ್‌ಗೂ ಮುನ್ನ ಸಿನಿಮಾ ಆನ್‌ಲೈನ್‌ ಅಲ್ಲಿ ಲೀಕ್‌ ಆಗಿರುವುದು ಭಾರೀ ನಷ್ಟಕ್ಕೆ ಕಾರಣವಾಗಿದೆ.

 ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ 'ಕೆಜಿಎಫ್‌ 2'

ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ 'ಕೆಜಿಎಫ್‌ 2'

ಎಸ್‌.ಎಸ್‌ ರಾಜಮೌಳಿ ನಿರ್ದೇಶನದ RRR ಸಿನಿಮಾ ವಿಶ್ವದಾದ್ಯಂತ ರಿಲೀಸ್‌ ಆಗಿ ಭಾರೀ ಕಲೆಕ್ಷನ್ ಮಾಡಿಕೊಂಡಿತ್ತು.ಜೂನಿಯರ್ ಎನ್‌ಟಿಆರ್‌ ಹಾಗೂ ರಾಮ್‌ಚರಣ್ ತೇಜಾ ನಟನೆಯನ್ನು ಸಿನಿ ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ವಿಶ್ವದಾದ್ಯಂತ ಬಾಕ್ಸಾಫೀಸ್‌ನಲ್ಲಿ 1,127 ಕೋಟಿ ರೂಪಾಯಿಗಳನ್ನು ಗಳಿಕೆ ಮಾಡುವ ಮೂಲಕ ದಾಖಲೆ ಮಾಡಿತ್ತು. ಇದಾದ ಬಳಿಕ 'ಕೆಜಿಎಫ್‌ 2' ಕೂಡ 1129 ಕೋಟಿ ಕಲೆಕ್ಷನ್ ಮಾಡಿ RRR ಸಿನಿಮಾವನ್ನು ಹಿಂದಿಕ್ಕಿದೆ. ಅಲ್ಲದೆ ವಿಶ್ವದಾದ್ಯಂತ ಅತಿ ಹೆಚ್ಚು ಗಳಿಕೆ ಕಂಡ ಭಾರತದ ಮೂರನೇ ಸಿನಿಮಾ ಎಂದಾಗಿದೆ.

 ಪೈರಸಿಯಿಂದ ಬಿಗ್‌ ಬಜೆಟ್‌ ಸಿನಿಮಾಗಳಿಗೆ ಭಾರೀ ಹೊಡೆತ

ಪೈರಸಿಯಿಂದ ಬಿಗ್‌ ಬಜೆಟ್‌ ಸಿನಿಮಾಗಳಿಗೆ ಭಾರೀ ಹೊಡೆತ

ಈ ಹಿಂದೆಯೂ ಬಿಗ್‌ ಬಜೆಟ್‌ ಸಿನಿಮಾಗಳು ಪೈರಸಿಗೆ ಒಳಗಾಗಿದ್ದವು. ನಟ ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್' ಸಿನಿಮಾ ಕೂಡ ಪೈರಸಿ ಆಗಿತ್ತು. ಇದಾದ ಬಳಿಕ ಇತ್ತೀಚಿಗೆ ರಿಲೀಸ್‌ ಆದ 'ಜೇಮ್ಸ್‌', 'ಏಕ್‌ ಲವ್ ಯಾ' ಸಿನಿಮಾಗಳು ಕೂಡ ಸಿನಿಮಾ ಬಿಡುಗಡೆಗೂ ಮುಂಚೆಯೇ ಪೈರಸಿ ಆಗಿ ಆನ್‌ಲೈನ್‌ ಅಲ್ಲಿ ಹರಿದಾಡ್ತಿತ್ತು. ಇದರಿಂದಾಗಿ ಸಿನಿಮಾಗಳು ಕೂಡ ಅಷ್ಟರ ಮಟ್ಟಿಗೆ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ. ಈಗ ಮಹೇಶ್‌ ಬಾಬು ನಟನೆಯ 'ಸರ್ಕಾರು ವಾರಿ ಪಾಟ' ಸಿನಿಮಾದ ಹಲವು ದೃಶ್ಯಗಳು ಕೂಡ ಬಿಡುಗಡೆಗೂ ಮುಂಚೆಯೇ ಆನ್‌ಲೈನ್‌ನಲ್ಲಿ ಹರಿದಾಡ್ತಿದೆ. ಪೈರಸಿ ವಿರುದ್ದ ಎಷ್ಟೇ ಕ್ರಮಗಳನ್ನು ತೆಗೆದುಕೊಂಡರೂ ಸಹ ಯಾವುದೇ ಪ್ರಯೋಜನವಾಗ್ತಿಲ್ಲ. ಬದಲಾಗಿ ಬಿಗ್ ಬಜೆಟ್‌ ಸಿನಿಮಾಗಳೇ ಪೈರಸಿಗೆ ಒಳಗಾಗ್ತಿವೆ. 'ಕೆಜಿಎಫ್‌ 2' ಕೂಡ ರಿಲೀಸ್‌ಗೂ ಮುಂಚೆ ಪೈರಸಿ ಆಗಿದೆ ಅಂತ ಹೇಳಲಾಗ್ತಿತ್ತು. ಈಗ ಒಟಿಟಿಗೆ ಬರುವ ಮುನ್ನವೇ 'ಕೆಜಿಎಫ್‌ 2' ಮತ್ತು 'RRR' ಸಿನಿಮಾ ಪೈರಸಿ ಆಗಿದ್ದು, ಆನ್‌ಲೈನ್‌ ಲೀಕ್‌ ಆಗಿದೆ.

 ಒಟಿಟಿಗೂ ಮುನ್ನವೇ 'ಕೆಜಿಎಫ್‌ 2', 'RRR' ಆನ್‌ಲೈನ್ ಲೀಕ್

ಒಟಿಟಿಗೂ ಮುನ್ನವೇ 'ಕೆಜಿಎಫ್‌ 2', 'RRR' ಆನ್‌ಲೈನ್ ಲೀಕ್

ಸದ್ಯ ಈಗ 'ಕೆಜಿಎಫ್‌ 2' ಹಾಗೂ 'RRR' ಸಿನಿಮಾಗಳು ಪೈರಸಿ ಆಗಿದ್ದು, ಒಟಿಟಿಯಲ್ಲಿ ರಿಲೀಸ್ ಆದರೂ ಅಷ್ಟಾಗಿ ಸ್ಪಂದನೆ ಸಿಗುವುದಿಲ್ಲ ಅಂತ ಹೇಳಲಾಗ್ತಿದೆ. ಈ ಎರಡು ಸಿನಿಮಾಗಳು HD ಕ್ವಾಲಿಟಿಯಲ್ಲಿ ಆನ್‌ಲೈನ್‌ನಲ್ಲಿ ಲಭ್ಯವಾಗುತ್ತಿರುವುದರಿಂದ ಒಟಿಟಿಯಲ್ಲಿ ರಿಲೀಸ್‌ ಆದರೂ, ಹೆಚ್ಚು ಜನ ನೋಡದೇ ಇರುವ ಸಾಧ್ಯತೆ ಇದೆ. ಈಗಾಗಲೇ ಪೂರ್ತಿ ಸಿನಿಮಾ ಲೀಕ್ ಆಗಿ ಹಲವು ಜನರಿಗೆ ಲಿಂಕ್‌ಗಳು ಫಾರ್ವರ್ಡ್‌ ಆಗಿಬಿಟ್ಟಿದೆ. ಹೀಗಾಗಿ ಇನ್ನು ಕೆಲವೇ ದಿನಗಳಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸಿನಿಮಾ ರಿಲೀಸ್‌ ಮಾಡಲು ಎರಡೂ ಚಿತ್ರತಂಡದವರು ನಿರ್ಧರಿಸಿದ್ದರು. ಆದರೆ ಒಟಿಟಿಗೆ ಬರುವ ಮುನ್ನವೇ ಸಿನಿಮಾ ಲೀಕ್ ಆಗಿರುವುದರಿಂದ ಚಿತ್ರತಂಡಕ್ಕೆ ಭಾರೀ ತಲೆನೋವಾಗಿದೆ.

More from Filmibeat

English summary
Jr NTR and Ram Charan starrer RRR and Yash starrer KGF Chapter 2 full HD movies leaked online before OTT release.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X