Coolie OTT: ತಿಂಗಳಿಗೂ ಮುನ್ನ ಓಟಿಟಿಗೆ ರಜನಿಕಾಂತ್ 'ಕೂಲಿ'; 4 ಭಾಷೆಗಳಲ್ಲಿ ಸ್ಟ್ರೀಮಿಂಗ್
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಮುಂದುವರೆಸಿದೆ, ಆಗಸ್ಟ್ 14ಕ್ಕೆ ತೆರೆಗೆ ಬಂದಿದ್ದ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ರಜನಿಕಾಂತ್ ಹಾಗೂ ಸ್ಟಾರ್ ಡೈರೆಕ್ಟ್ ಲೋಕೇಶ್ ಕನಕರಾಜ್ ಕಾಂಬಿನೇಷನ್ ಸಿನಿಮಾ ಎನ್ನುವ ಕಾರಣಕ್ಕೆ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಆದರೆ ನಿರಾಸೆ ಮೂಡಿಸಿತ್ತು.
ಹಿಟ್ ಸಿನಿಮಾಗಳ ಸರದಾರ ಲೋಕೇಶ್ ಜೊತೆ ರಜನಿಕಾಂತ್ ಕೈ ಜೋಡಿಸಿದ್ದಾರೆ ಎಂದಾಗಲೇ ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಮಾಡುತ್ತದೆ ಎನ್ನುವ ಲೆಕ್ಕಾಚಾರ ನಡೆದಿತ್ತು. ಉಪೇಂದ್ರ, ನಾಗಾರ್ಜುನ, ಆಮೀರ್ ಖಾನ್ ರೀತಿಯ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದು ಇನ್ನಿಲ್ಲದ ಕುತೂಹಲ ಮೂಡಿಸಿತ್ತು. ಆದರೆ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರನ್ನು ರಂಜಿಸಲಿಲ್ಲ. ಮಿಶ್ರ ಪ್ರತಿಕ್ರಿಯೆ ನಡುವೆಯೂ 'ಕೂಲಿ' 500 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದ್ದಾನೆ ಎನ್ನಲಾಗ್ತಿದೆ.

ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ 'ಕೂಲಿ' ಸಿನಿಮಾ ನಿರ್ಮಾಣವಾಗಿದೆ. ಚಿತ್ರಕ್ಕಾಗಿ ರಜನಿಕಾಂತ್ 150 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗ್ತಿದೆ. ಲೋಕೇಶ್ ಕನಕರಾಜ್ 50 ಕೋಟಿ ರೂ. ಜೇಬಿಗಿಳಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಚಿತ್ರದ ಪ್ಲಸ್ ಪಾಯಿಂಟ್ ಆಗಿತ್ತು. ಆಮೀರ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸಿದ್ದು ಅತ್ತ ಹಿಂದಿ ಬೆಲ್ಟ್‌ನಲ್ಲಿ ಚಿತ್ರದ ಗಳಿಕೆಗೆ ಬಲ ತುಂಬಿತ್ತು.
ರಜಿನಿ, ನಾಗಾರ್ಜುನ, ಆಮೀರ್ ಖಾನ್‌ಗಿಂತ ಮಲಯಾಳಂ ನಟ ಸೌಬಿನ್ ಸಾಹಿರ್ ಹಾಗೂ ರಚಿತಾ ರಾಮ್ ಪಾತ್ರಗಳು ಚಿತ್ರದಲ್ಲಿ ಹೈಲೆಟ್ ಆಗಿದೆ. ಅವರಿಬ್ಬರ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗ್ತಿದೆ. 3ನೇ ವಾರ 'ಕೂಲಿ' ಸಿನಿಮಾ ಚಿತ್ರಮಂದಿಗಳಲ್ಲಿ ಪ್ರದರ್ಶನ ಮುಂದುವರೆಸಿದೆ. ಇದೆಲ್ಲದರ ನಡುವೆ ಓಟಿಟಿ ಸ್ಟ್ರೀಮಿಂಗ್ ಬಗ್ಗೆ ಚರ್ಚೆ ಶುರುವಾಗಿದೆ. ತಿಂಗಳಿಗೂ ಮುನ್ನ ಸಿನಿಮಾ ಓಟಿಟಿಗೆ ಬರುವ ಗುಸುಗುಸು ಶುರುವಾಗಿದೆ.

ದೊಡ್ಡ ಸಿನಿಮಾಗಳ ಓಟಿಟಿ ರೈಟ್ಸ್ ಭಾರೀ ಮೊತ್ತಕ್ಕೆ ಬಿಕರಿಯಾಗುತ್ತದೆ. ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದಾಗ ಬಹಳ ಬೇಗ ಓಟಿಟಿಗೆ ತರುವ ಪ್ರಯತ್ನ ನಡೆಯುತ್ತದೆ. 'ಥಗ್ ಲೈಫ್', 'ಹರಿಹರ ವೀರಮಲ್ಲು', 'ಕಿಂಗ್ಡಮ್' ಹೀಗೆ ಇತ್ತೀಚೆಗೆ ದೊಡ್ಡ ಸಿನಿಮಾಗಳು ತಿಂಗಳಿಗೂ ಮುನ್ನ ಡಿಜಿಟಲ್ ಸ್ಟ್ರೀಮಿಂಗ್ ಆರಂಭಿಸಿದ್ದವು. ಅದೇ ಸಾಲಿಗೆ 'ಕೂಲಿ' ಸೇರುತ್ತಾನೆ ಎನ್ನಲಾಗ್ತಿದೆ.
ಸೆಪ್ಟೆಂಬರ್ 11ಕ್ಕೆ 'ಕೂಲಿ' ಸಿನಿಮಾ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತದೆ ಎನ್ನುವ ಊಹಾಪೋಹ ಶುರುವಾಗಿದೆ. ತಮಿಳು, ಕನ್ನಡ, ತೆಲುಗು, ಮಲಯಾಳಂ ವರ್ಷನ್ ಓಟಿಟಿಗೆ ಬರಲಿದ್ದು ಹಿಂದಿ ವರ್ಷನ್ ಮಾತ್ರ ಕೊಂಚ ತಡವಾಗಿ ರಿಲೀಸ್ ಆಗುತ್ತದೆ ಎನ್ನುವ ಚರ್ಚೆ ನಡೀತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ. ಅಭಿಮಾನಿಗಳಿಗೆ 'ಕೂಲಿ' ಅದ್ಭುತ ಅನುಭವ ನೀಡಲಿಲ್ಲ. ಆದರೆ ಕೆಲವರು ಮಾತ್ರ ಸಿನಿಮಾ ಚೆನ್ನಾಗಿದೆ ಎಂದು ಮೆಚ್ಚಿಕೊಂಡಿದ್ದಾರೆ.
ನಿನ್ನೆ(ಆಗಸ್ಟ್ 31) 'ಕೂಲಿ' ಕಲೆಕ್ಷನ್ ಕೊಂಚ ಹೆಚ್ಚಾಗಿದೆ ಎಂದು ಹೇಳಲಾಗ್ತಿದೆ. ಭಾನುವಾರ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಇನ್ನು ಭಾರತದಲ್ಲಿ ಸಿನಿಮಾ 279 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಅಂದಾಜಿಸಲಾಗುತ್ತಿದೆ. 2 ವರ್ಷಗಳ ಹಿಂದೆ ಬಂದಿದ್ದ 'ಜೈಲರ್' ಚಿತ್ರಕ್ಕಿಂತಲೂ 'ಕೂಲಿ' ಆರ್ಭಟ ಡಲ್ ಎಂದೇ ಹೇಳಬಹುದು. ನೆಲ್ಸನ್ ನಿರ್ದೇಶನದ 'ಕೂಲಿ' ಸಿನಿಮಾ 600 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವುದಾಗಿ ಹೇಳಲಾಗಿತ್ತು.
ಕರ್ನಾಟಕದಲ್ಲಿ 'ಕೂಲಿ' ಸಿನಿಮಾ ಗಳಿಕೆ ಚೆನ್ನಾಗಿದೆ. 22 ಕೋಟಿ ರೂ.ಗೆ ರೈಟ್ಸ್ ಕೊಂಡುಕೊಂಡಿದ್ದರು. ಅಂತೂ ಇಂತೂ ವಿತರಕರು ನಷ್ಟದಿಂದ ತಪ್ಪಿಸಿಕೊಂಡಿದ್ದಾರೆ. ಕನ್ನಡ ವರ್ಷನ್‌ಗೂ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ.
ವಿಶೇಷ ಸೂಚನೆ:
'ಕೂಲಿ' ಸಿನಿಮಾ ಓಟಿಟಿ ರಿಲೀಸ್ ಡೇಟ್ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಹೊರಬಂದಿಲ್ಲ. ಸೆಪ್ಟೆಂಬರ್ 11ರಂದು ಸ್ಟ್ರೀಮಿಂಗ್ ಆಗಬಹುದು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ.


Click it and Unblock the Notifications











