ಬಾಕ್ಸ್‌ ಆಫೀಸ್ ಧೂಳೆಬ್ಬಿಸಿದ 'ಅಣ್ಣಾತೆ' ನೆಟ್‌ಫ್ಲಿಕ್ಸ್‌ನಲ್ಲೂ ನಂಬರ್ 1

ರಜನೀಕಾಂತ್ ನಟನೆಯ 'ಅಣ್ಣಾತೆ' ಸಿನಿಮಾ ತನ್ನ ವಿಜಯಯಾತ್ರೆಯನ್ನು ಒಟಿಟಿಯಲ್ಲಿಯೂ ಮುಂದುವರೆಸಿದೆ. ಚಿತ್ರಮಂದಿರದಲ್ಲಿ ಸೂಪರ್ ಹಿಟ್ ಎನಿಸಿಕೊಂಡ ಈ ಸಿನಿಮಾ ಈಗ ನೆಟ್‌ಫ್ಲಿಕ್ಸ್‌ನಲ್ಲೂ ನಂಬರ್ 1.

'ಅಣ್ಣಾತೆ' ಸಿನಿಮಾ ಬಿಡುಗಡೆ ಆಗಿ ಕೇವಲ 20 ದಿನಕ್ಕೆ ನೆಟ್‌ಫ್ಲಿಕ್ಸ್‌ಗೆ ಬಂತು. ನೆಟ್‌ಫ್ಲಿಕ್ಸ್‌ ಬಂದಿದ್ದೇ ತಡ ಅಲ್ಲಿಯೂ ನಂಬರ್ 1 ಆಗಿದೆ. ಭಾರತದಲ್ಲಿ 'ಅಣ್ಣಾತೆ' ಸಿನಿಮಾ ನಂಬರ್ 1 ಸ್ಥಾನದಲ್ಲಿ ಟ್ರೆಂಡ್ ಆಗುತ್ತಿದೆ.

'ಅಣ್ಣಾತೆ' ಸಿನಿಮಾದ ತಮಿಳು ವರ್ಶನ್ ನೆಟ್‌ಫ್ಲಿಕ್ಸ್‌ನಲ್ಲಿ ಮೊದಲ ಸ್ಥಾನದಲ್ಲಿ ಟ್ರೆಂಡ್ ಆಗುತ್ತಿದ್ದರೆ ಹಿಂದಿ ಅವತರಣಿಕೆ ಎರಡನೇ ಸ್ಥಾನದಲ್ಲಿದೆ. 9 ನೇ ಸ್ಥಾನದಲ್ಲಿ ಇದೇ ಸಿನಿಮಾದ ತೆಲುಗು ಅವತರಣಿಕೆ ಸ್ಥಾನ ಪಡೆದುಕೊಂಡಿದೆ.

Rajinikanths Annaatthe Movie Trending Number 01 In Netflix

'ಅಣ್ಣಾತೆ' ಸಿನಿಮಾವು ನವೆಂಬರ್ 04ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಮೊದಲ ವಾರದಲ್ಲಿ 202 ಕೋಟಿ ಹಣವನ್ನು ವಿಶ್ವದೆಲ್ಲೆಡೆಯಿಂದ ಕಲೆಕ್ಷನ್ ಮಾಡಿತ್ತು, ಆದರೆ ಎರಡನೇ ವಾರಕ್ಕೆ ಕಲೆಕ್ಷನ್ ಗಣನೀಯವಾಗಿ ಕುಸಿದಿದೆಯಾದರೂ ಎರಡನೇ ವಾರದಲ್ಲಿ ಕೇವಲ 25 ಕೋಟಿ ಹಣ ಗಳಿಸಿದೆ. ಒಟ್ಟು ಕಲೆಕ್ಷನ್‌ 225.12 ಕೋಟಿಗೆ ಏರಿಕೆಯಾಗಿದೆ. ಎರಡನೇ ವಾರದಲ್ಲಿ ಕೆಲವು ಬೇರೆ ಸಿನಿಮಾಗಳ ಪ್ರತಿಸ್ಪರ್ಧೆ ಎದುರಿಸಬೇಕಾಗಿ ಬಂದ ಕಾರಣ ಕಲೆಕ್ಷನ್‌ ಇಳಿಮುಖವಾಗಿತ್ತು.

'ಅಣ್ಣಾತೆ' ಸಿನಿಮಾ ಬಿಡುಗಡೆ ಆದ ಕೇವಲ 18 ದಿನಗಳಲ್ಲಿ 250 ಕೋಟಿ ಕಲೆಕ್ಷನ್ ಮಾಡಿ ದಾಖಲೆ ನಿರ್ಮಾಣ ಮಾಡಿತು. ಆ ಮೂಲಕ 2021ರಲ್ಲಿ ಅತಿ ಹೆಚ್ಚು ಹಣ ಗಳಿಸಿದ ತಮಿಳಿನ ಸಿನಿಮಾ ಎನಿಸಿಕೊಂಡಿತು. ಇದು ಮಾತ್ರವೇ ಅಲ್ಲದೆ, ಮೊದಲ ದಿನ ಅತಿ ಹೆಚ್ಚು ಹಣ ಗಳಿಸಿದ ತಮಿಳು ಸಿನಿಮಾ ಎಂಬ ದಾಖಲೆಯನ್ನೂ ತನ್ನ ಹೆಸರಿಗೆ ಸೇರಿಸಿಕೊಂಡಿತು 'ಅಣ್ಣಾತೆ'.

'ಅಣ್ಣಾತೆ' ಸಿನಿಮಾವು ನೆಟ್‌ಫ್ಲಿಕ್ಸ್‌ನಲ್ಲಿ ತಮಿಳು, ತೆಲುಗು, ಹಿಂದಿ, ಮಲಯಾಳಂ ಹಾಗೂ ಕನ್ನಡ ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯವಿದೆ. ಕನ್ನಡದಲ್ಲಿ ರಜನೀಕಾಂತ್‌ಗೆ ನಟ ಸಾಯಿಕುಮಾರ್ ಧ್ವನಿ ನೀಡಿದ್ದಾರೆ.

'ಅಣ್ಣಾತೆ' ಸಿನಿಮಾವನ್ನು ಶಿವ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಅಜಿತ್ ನಟನೆಯ 'ವಿಶ್ವಾಸಂ' ಸಿನಿಮಾವನ್ನು ಇವರು ನಿರ್ದೇಶಿಸಿದ್ದರು. 'ಅಣ್ಣಾತೆ' ಸಿನಿಮಾದಲ್ಲಿ ರಜನೀಕಾಂತ್ ಜೊತೆಗೆ ತಂಗಿಯ ಪಾತ್ರದಲ್ಲಿ ಕೀರ್ತಿ ಸುರೇಶ್, ಗೆಳತಿ ಪಾತ್ರದಲ್ಲಿ ನಯನತಾರಾ, ವಿಲನ್‌ಗಳಾಗಿ ಜಗಪತಿಬಾಬು, ಅಭಿಮನ್ಯು ಸಿಂಗ್, ಪ್ರಕಾಶ್ ರಾಜ್ ನಟಿಸಿದ್ದಾರೆ. ಜೊತೆಗೆ ಖುಷ್ಬು, ಮೀನಾ ಸಹ ಇದ್ದಾರೆ. ಸಿನಿಮಾಕ್ಕೆ ಸಂಗೀತವನ್ನು ಇಮ್ಮಾನ್ ನೀಡಿದ್ದು, ಎಸ್‌ಪಿ ಬಾಲಸುಬ್ರಹ್ಮಣ್ಯಂ ಹಾಡಿರುವ ಕೊನೆಯ ಹಾಡು ಹಿಟ್ ಆಗಿದೆ.

More from Filmibeat

English summary
Rajinikanth's Annaatthe movie is trending number 01 in Netflix in India. Annaatthe movie achieved grand success in theater also.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X