ಓಟಿಟಿಯಲ್ಲಿ ರಜನಿಕಾಂತ್ 'ಕೂಲಿ' ಜೊತೆ ಉಪೇಂದ್ರ ಹೆಸರು ಫುಲ್ ಟ್ರೆಂಡಿಂಗ್

ಲೋಕೇಶ್ ಕನಕರಾಜ್ ನಿರ್ದೇಶನದ ಮಲ್ಟಿಸ್ಟಾರರ್ 'ಕೂಲಿ' ಸಿನಿಮಾ ಓಟಿಟಿಗೆ ಬಂದಿದೆ. ಪ್ರೈಂ ವೀಡಿಯೋದಲ್ಲಿ 5 ಭಾಷೆಗಳಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ರಜನಿಕಾಂತ್ ಜೊತೆಗೆ ಉಪೇಂದ್ರ, ನಾಗಾರ್ಜುನ, ಆಮೀರ್ ಖಾನ್ ಹಾಗೂ ರಚಿತಾ ರಾಮ್ ನಟಿಸಿದ್ದಾರೆ. ಚಿತ್ರಮಂದಿರಗಳಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದಿದ್ದ ಚಿತ್ರಕ್ಕೆ ಓಟಿಟಿಯಲ್ಲೂ ಅದೇ ರೆಸ್ಪಾನ್ಸ್ ಸಿಕ್ತಿದೆ.

ಓಟಿಟಿಯಲ್ಲಿ ಕೆಲವರು ಸಿನಿಮಾ ನೋಡಿ ಇಷ್ಟು ಒಳ್ಳೆ ಸಿನಿಮಾವನ್ನು ಯಾಕೆ ಚೆನ್ನಾಗಿಲ್ಲ ಎಂದು ಟ್ರೋಲ್ ಮಾಡಿದ್ರೋ ಗೊತ್ತಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸಿನಿಮಾ ಚೆನ್ನಾಗಿಲ್ಲ, ಜನ ಹೇಳಿದ್ದು ನಿಜ. ಲೋಕೇಶ್- ರಜನಿಕಾಂತ್ ಸೇರಿ ಇಂತಹ ಸಿನಿಮಾ ಯಾಕೆ ಮಾಡಿದ್ರೋ ಅಂತ ಟ್ರೋಲ್ ಮಾಡುವವರು ಇದ್ದಾರೆ. ಇದೆಲ್ಲದರ ನಡುವೆ ಸಿನಿಮಾ ಅಮೇಜಾನ್ ಪ್ರೈಂ ವೀಡಿಯೋ ಟಾಪ್ ಟ್ರೆಂಡಿಂಗ್‌ನ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

Rajinikanth upendra s Multi-Starrer Coolie Tops Amazon Prime Video Despite Mixed Reviews

ಆಗಸ್ಟ್ 14ಕ್ಕೆ 'ಕೂಲಿ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗಪ್ಪಳಿಸಿತ್ತು. ಮಿಶ್ರ ಪ್ರತಿಕ್ರಿಯೆ ಸಿಗುತ್ತಿದ್ದಂತೆ ಕೆಲವರು ಚಿತ್ರಮಂದಿರಕ್ಕೆ ಹೋಗಲು ಹಿಂದೇಟು ಹಾಕಿದ್ದರು. ಓಟಿಟಿಯಲ್ಲಿ ನೋಡೋಣ ಎಂದು ಸುಮ್ಮನಾಗಿದ್ದರು. ಅವರೆಲ್ಲರೂ ಒಟ್ಟಿಗೆ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಹಾಗಾಗಿ ಓಟಿಟಿಯಲ್ಲಿ ಸಿನಿಮಾ ಟ್ರೆಂಡ್ ಕ್ರಿಯೇಟ್ ಮಾಡ್ತಿದೆ. ಚಿತ್ರದಲ್ಲಿ ತಲೈವಾಗಿಂತ ನೆಗೆಟಿವ್ ರೋಲ್‌ನಲ್ಲಿ ನಟಿಸಿದ್ದ ಮಲಯಾಳಂ ನಟ ಸೌಬಿನ್ ಸಾಹಿರ್, ಕಲ್ಯಾಣಿ ಆಗಿ ಮಿಂಚಿದ್ದ ರಚಿತಾ ರಾಮ್ ಹಾಗೂ ದೇವ ಆಪ್ತ ಕಲೀಶಾ ಆಗಿ ಒಂದೆರಡು ಸನ್ನಿವೇಶಗಳಲ್ಲಿ ನಟಿಸಿದ್ದ ಉಪೇಂದ್ರ ಸ್ಕ್ರೀನ್ ಪ್ರೆಸೆನ್ಸ್ ಚೆನ್ನಾಗಿತ್ತು.

ತಮಿಳು ಪ್ರೇಕ್ಷಕರು ಕೂಡ ಉಪ್ಪಿ ಪರ್ಫಾರ್ಮನ್ಸ್ ನೋಡಿ ಥ್ರಿಲ್ ಆಗಿದ್ದರು. ಸಿನಿಮಾ ಓಟಿಟಿಗೆ ಬಂದಮೇಲೂ ರಿಯಲ್ ಸ್ಟಾರ್ ಹೆಸರು ಮಾರ್ದನಿಸುತ್ತಿದೆ. ಅನಿರುದ್ಧ್ ಜಬರ್ದಸ್ತ್ ಬಿಜಿಎಂ ಹಿನ್ನೆಲೆಯಲ್ಲಿ ಉಪೇಂದ್ರ ಎಂಟ್ರಿ ಸೀನ್ ವೈರಲ್ ಆಗ್ತಿದೆ. ಆ ವೀಡಿಯೋ ಕಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ತೇಲಿಬಿಟ್ಟು ಟ್ರೆಂಡ್ ಮಾಡುತ್ತಿದ್ದಾರೆ. ಸ್ಯಾಂಡಲ್‌ವುಡ್ ಬುದ್ಧಿವಂತನ ಆರ್ಭಟಕ್ಕೆ ಬಹುಪರಾಕ್ ಎನ್ನುತ್ತಿದ್ದಾರೆ.

Rajinikanth upendra s Multi-Starrer Coolie Tops Amazon Prime Video Despite Mixed Reviews

ಲೋಕೇಶ್ ಕನಕರಾಜ್ ಹಾಗೂ ರಜನಿಕಾಂತ್ ಕಾಂಬಿನೇಷನ್ ಅಂದಾಗಲೇ 'ಕೂಲಿ' ಸಿನಿಮಾ ಬಗ್ಗೆ ಹೈಪ್ ಕ್ರಿಯೇಟ್ ಆಗಿತ್ತು. ಉಪ್ಪಿ, ನಾಗಾರ್ಜುನ ಹಾಗೂ ಆಮೀರ್ ಖಾನ್ ಜೊತೆಯಾಗುತ್ತಾರೆ ಎಂದಾಗ ನಿರೀಕ್ಷೆ ಡಬಲ್ ಆಗಿತ್ತು. ಆ ನಿರೀಕ್ಷೆ ತಲುಪುವಲ್ಲಿ ಸಿನಿಮಾ ಸೋತಿತ್ತು. ಆದರೂ ತಕ್ಕಮಟ್ಟಿಗೆ ಬಾಕ್ಸಾಫೀಸ್‌ನಲ್ಲಿ ಸಿನಿಮಾ ಸದ್ದು ಮಾಡಿತ್ತು. ಓಟಿಟಿಗೆ ಬಂದರೂ ಕೆಲವರು ಚಿತ್ರಮಂದಿರಗಳಲ್ಲೇ ನೋಡುವ ಪ್ರಯತ್ನ ಮಾಡುತ್ತಿದ್ದಾರೆ. ವಿಶ್ವದಾದ್ಯಂತ 500 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿರುವ ಅಂದಾಜಿದೆ.

ತೆಲುಗು ನಟ ನಾಗಾರ್ಜುನ ಇದೇ ಮೊದಲ ಬಾರಿಗೆ ಖಳನಟನಾಗಿ ಅಬ್ಬರಿಸಿದ್ದಾರೆ. ಆದರೆ ಯಾಕೋ ಅವರ ಪರ್ಫಾರ್ಮನ್ಸ್ ಅಷ್ಟಾಗಿ ಪ್ರೇಕ್ಷಕರನ್ನು ಆಕರ್ಷಿಸಲಿಲ್ಲ. ಅವರಿಗಿಂತ ಮಲಯಾಳಂ ನಟ ಸೌಬಿನ್ ಸಾಹಿರ್ ಹೆಚ್ಚು ಅಂಕ ಗಿಟ್ಟಿಸಿದ್ದಾರೆ. ಟ್ರೈಲರ್ ಬಿಡುಗಡೆ ಆಗುವವರೆಗೂ ರಚಿತಾ ರಾಮ್ ಚಿತ್ರದಲ್ಲಿ ನಟಿಸಿರುವ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಬಳಿಕ ಸಣ್ಣ ಗೆಸ್ಟ್ ಅಪಿಯರೆನ್ಸ್ ಎಂದೇ ಕೆಲವರು ಭಾವಿಸಿದ್ದರು. ಆದರೆ ಇದೀಗ ಕಥೆಗೆ ಟ್ವಿಸ್ಟ್ ಕೊಡುವ ಪಾತ್ರದಲ್ಲಿ ರಚ್ಚು ಕಮಾಲ್ ಮಾಡಿದ್ದಾರೆ. ನಿರ್ದೇಶಕ ಲೋಕೇಶ್ ಕನಕರಾಜ್ ಹೀರೊ ಆಗಿ ನಟಿಸುವ ಚಿತ್ರಕ್ಕೆ ಡಿಂಪಲ್ ಕ್ವೀನ್ ಹೀರೊಯಿನ್ ಎನ್ನುವ ಗುಸುಗುಸು ಶುರುವಾಗಿದೆ.

ರಜನಿಕಾಂತ್ 'ಜೈಲರ್- 2' ಚಿತ್ರದಲ್ಲಿ ನಟಿಸುತ್ತಿದ್ದಾರೆ. 'ಕೈದಿ'-2 ಸಿನಿಮಾ ಕಡೆ ಲೋಕೇಶ್ ಮುಖ ಮಾಡಿದ್ದಾರೆ. 'ಕೂಲಿ' ಸಿನಿಮಾ 1000 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡುತ್ತದೆ ಎನ್ನುವ ನಿರೀಕ್ಷೆ ಇತ್ತು. ಅದೆಲ್ಲಾ ಈಗ ಸುಳ್ಳಾಗಿದೆ. ತಿಂಗಳಿಗೂ ಮುನ್ನ ಸಿನಿಮಾ ಓಟಿಟಿಗೆ ಬಂದು ನಿರಾಸೆ ಮೂಡಿಸಿದೆ.

More from Filmibeat

English summary
Rajinikanth Starrer Coolie Garners Attention on OTT, Reviews Stay Divided
Read more about: rajinikanth upendra
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X