Vettaiyan OTT: ದೀಪಾವಳಿ ಸಡಗರದಲ್ಲಿ ಘೋಷಣೆ ಆಯ್ತು 'ವೆಟ್ಟೆಯಾನ್' ಓಟಿಟಿ ರಿಲೀಸ್ ಡೇಟ್

ಚಿತ್ರಮಂದಿರಗಳಲ್ಲಿ ರಜನಿಕಾಂತ್ ನಟನೆಯ 'ವೆಟ್ಟೆಯಾನ್' ಆರ್ಭಟ ಕಮ್ಮಿ ಆಗಿದೆ. ಇದೀಗ ಓಟಿಟಿಯತ್ತ ಸಿನಿಮಾ ಮುಖ ಮಾಡಿದೆ. ಜ್ಞಾನವೇಲ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ ಪ್ರೇಕ್ಷಕರ ಮನಗೆದ್ದಿದ್ದು ಸುಳ್ಳಲ್ಲ. ಅಕ್ಟೋಬರ್ 10ಕ್ಕೆ ತೆರೆಗೆ ಬಂದಿದ್ದ ಸಿನಿಮಾ ತಿಂಗಳಿಗೂ ಮುನ್ನ ಓಟಿಟಿಗೆ ಬರ್ತಿದೆ.

ಅಮಿತಾಬ್ ಬಚ್ಚನ್, ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ, ಕಿಶೋರ್, ಮಂಜು ವಾರಿಯರ್ ಸೇರಿದಂತೆ ಘಟಾನುಘಟಿ ಕಲಾವಿದರು 'ವೆಟ್ಟೆಯಾನ್' ಚಿತ್ರದಲ್ಲಿದ್ದಾರೆ. ರಜನಿಕಾಂತ್ ಅಭಿಮಾನಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ನಿರ್ದೇಶಕರು ಈ ಆಕ್ಷನ್ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಮನರಂಜನೆ ಜೊತೆ ಜೊತೆಗೆ ಒಂದೊಳ್ಳೆ ಸಂದೇಶವನ್ನು ಚಿತ್ರ ಹೊತ್ತು ಬಂದಿತ್ತು. ಎನ್‌ಕೌಂಟರ್ ಸರೀನಾ? ತಪ್ಪಾ? ಎನ್ನುವ ಚರ್ಚೆ ಚಿತ್ರದಲ್ಲಿ ನಡೆದಿತ್ತು.

Rajinikantha and amitabh bachchan starrer Vettaiyan OTT Release Date Announced

ಲೈಕಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ 'ವೆಟ್ಟೆಯಾನ್' ಸಿನಿಮಾ ನಿರ್ಮಾಣವಾಗಿತ್ತು. ಬಹುಕೋಟಿ ವೆಚ್ಚದಲ್ಲಿ ಮೂಡಿ ಬಂದಿದ್ದ ಸಿನಿಮಾ ಮೊದಲ ವಾರವೇ ಭರ್ಜರಿ ಕಲೆಕ್ಷನ್ ಮಾಡಿತ್ತು. ಆದರೆ ಬಳಿಕ ತಮಿಳುನಾಡಿನಲ್ಲಿ ಬಂದ ಮಳೆ ಕೊಂಚ ಚಿತ್ರಕ್ಕೆ ಹಿನ್ನಡೆ ತಂದಿತ್ತು. ಇನ್ನು ಕರ್ನಾಟಕದಲ್ಲಿ ಕೂಡ ಸಿನಿಮಾ ಉತ್ತಮ ಗಳಿಕೆ ಕಂಡಿದ್ದು ಸುಳ್ಳಲ್ಲ.

ಅಂದಾಜು 200 ಕೋಟಿ ರೂ. ಬಜೆಟ್ಟಿನ 'ವೆಟ್ಟೆಯಾನ್' ಸಿನಿಮಾ 400 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ ಎನ್ನಲಾಗ್ತಿದೆ. ಚಿತ್ರದಿಂದ ವಿತರಕರು ನಷ್ಟ ಅನುಭವಿಸಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿಬರ್ತಿದೆ. ಆದರೆ ಸ್ಯಾಟಲೈಟ್ ರೈಟ್ಸ್, ಡಿಜಿಟಲ್ ರೈಟ್ಸ್ ಒಳ್ಳೆ ಬೆಲೆಗೆ ಮಾರಾಟವಾಗಿ ನಿರ್ಮಾಪಕರು ನಿಟ್ಟುಸಿರು ಬಿಟ್ಟಿದ್ದಾರೆ ಎನ್ನಲಾಗ್ತಿದೆ. ಕಳೆದ ವರ್ಷ ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾ 600 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು.

'ಜೈಲರ್' ಸಕ್ಸಸ್‌ನಿಂದ ನಿರ್ಮಾಪಕರು ಖುಷಿ ಆಗಿದ್ದರು. ರಜನಿಕಾಂತ್, ನಿರ್ದೇಶಕ ನೆಲ್ಸನ್, ಸಂಗೀತ ನಿರ್ದೇಶಕ ಅನಿರುದ್ಧ್ ಕಾರ್‌ಗಳನ್ನು ಉಡುಗೊರೆ ಕೊಟ್ಟು ಲಾಭದಲ್ಲಿ ಕೂಡ ಪಾಲು ಕೊಟ್ಟಿದ್ದರು. ಆದರೆ 'ವೆಟ್ಟೆಯಾನ್' ಆ ಮಟ್ಟಿಗೆ ಗೆಲ್ಲಲಿಲ್ಲ. ಎಲ್ಲಾ ವಿಭಾಗದಲ್ಲಿ ಫಸ್ಟ್ ಕ್ಲಾಸ್ ಎನಿಸಿಕೊಂಡರೂ ಪ್ರೇಕ್ಷಕರನ್ನು ಸಿನಿಮಾ ದೊಡ್ಡಮಟ್ಟದಲ್ಲಿ ಸೆಳೆಯುವಲ್ಲಿ ವಿಫಲವಾಗಿತ್ತು.

'ವೆಟ್ಟೆಯಾನ್' ಚಿತ್ರದ ಕಥೆ ಏನು ಎನ್ನುವುದನ್ನು ನೋಡುವುದಾದರೆ ಶರಣ್ಯ ಎಂಬ ಯುವತಿಯ ಅತ್ಯಾಚಾರ, ಕೊಲೆ ನಡೆಯುತ್ತದೆ. ಅದಕ್ಕೆ ಕಾರಣ ಯಾರು ಎಂದು ಪೊಲೀಸರು ತನಿಖೆ ನಡೆಸುತ್ತಾರೆ. ಗುಣ ಎಂಬ ಯುವಕನೇ ಅದಕ್ಕೆಲ್ಲಾ ಕಾರಣ ಎಂದು ಎಸ್ಪಿ ಅಥಿಯಾನ್(ರಜನಿಕಾಂತ್) ಆತನನ್ನು ಎನ್‌ಕೌಂಟರ್ ಮಾಡುತ್ತಾನೆ. ಆದರೆ ಬಳಿಕ ಗುಣ ಅಪರಾಧಿ ಅಲ್ಲ ಎಂದು ಗೊತ್ತಾಗುತ್ತದೆ. ಬಳಿಕ ತನಿಖೆ ಪುನರಾರಂಭವಾಗುತ್ತದೆ. ಶರಣ್ಯ ಸಾವಿಗೆ ಕಾರಣ ಯಾರು? ಅದರ ಹಿಂದೆ ಇರುವ ಷಡ್ಯಂತ್ರ ಏನು? ಎನ್ನುವುದನ್ನು ಅಥಿಯಾನ್ ಭೇದಿಸುತ್ತಾನೆ.

ನವೆಂಬರ್ 8ಕ್ಕೆ ಅಮೇಜಾನ್ ಪ್ರೈಂ ವೀಡಿಯೋದಲ್ಲಿ 'ವೆಟ್ಟೆಯಾನ್' ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಸಿನಿಮಾ ತೆರೆಕಂಡು ತಿಂಗಳಿಗೂ ಮುನ್ನವೇ ಓಟಿಟಿಗೆ ಬರುತ್ತಿರುವುದು ವಿಶೇಷ. ಅಂದಾಜು 90 ಕೋಟಿ ರೂ.ಗೆ ಸಿನಿಮಾ ಡಿಜಿಟಲ್ ರೈಟ್ಸ್ ಅನ್ನು ಅಮೇಜಾನ್ ಪ್ರೈಂ ಕೊಂಡುಕೊಂಡಿದೆ. ಇನ್ನು ಈಗಾಗಲೇ ಚಿತ್ರದ HD ಪ್ರಿಂಟ್ ಲೀಕ್ ಆಗಿದೆ ಎಂದು ಹೇಳಲಾಗುತ್ತಿದೆ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಿಗೆ ಡಬ್ ಆಗಿ 'ವೆಟ್ಟೆಯಾನ್' ಸಿನಿಮಾ ಬಿಡುಗಡೆ ಆಗಿತ್ತು. ಆದರೆ ಹಿಂದಿಯಲ್ಲಿ ಸಿನಿಮಾ ದೊಡ್ಡದಾಗಿ ಸದ್ದು ಮಾಡಲಿಲ್ಲ. ಕನ್ನಡಕ್ಕೂ ಡಬ್ ಆಗಿ ಸಿನಿಮಾ ತೆರೆಗಪ್ಪಳಿಸಿತ್ತು. ಕರ್ನಾಟಕದಲ್ಲಿ ಸಿನಿಮಾ 25 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗ್ತಿದೆ. ಸದ್ಯ ರಜನಿಕಾಂತ್ 'ಕೂಲಿ' ಚಿತ್ರದಲ್ಲಿ ನಟಿಸ್ತಿದ್ದಾರೆ. ಮುಂದೆ 'ಜೈಲರ್-2' ಸಿನಿಮಾ ಮಾಡುವ ಸಾಧ್ಯತೆ ಹೆಚ್ಚಾಗಿದೆ.

More from Filmibeat

English summary
Official: Rajiniakanth's Vettaiyan locked its OTT release date; Here's when you can stream TJ Gnanavel's action thriller;
Read more about: ott rajinikanth kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X