For Quick Alerts
  ALLOW NOTIFICATIONS  
  For Daily Alerts

  '777 ಚಾರ್ಲಿ'ಗೆ 50 ದಿನ: ಒಟಿಟಿಗೆ ಲಗ್ಗೆ ಇಟ್ಟ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ!

  |

  ಸಿನಿಮಾ ಅಂದ್ಮೇಲೆ ವಿಭಿನ್ನವಾಗಿ ಯೋಚನೆ ಮಾಡಬೇಕು. ಪ್ರೇಕ್ಷಕರಿಗೆ ವಿಶಿಷ್ಟ ಕಲ್ಪನೆಯ ಸಿನಿಮಾ ನೀಡಿದರೆ, ಆರಾಮಾಗಿ ಚಿತ್ರಮಂದಿರಗಳು ತುಂಬುತ್ತವೆ. ಸಿನಿಪ್ರಿಯರು ಮುಗಿಬಿದ್ದು ಸಿನಿಮಾ ನೋಡುತ್ತಾರೆ. ಇಂತಹ ವಿಶಿಷ್ಟ ಸಿನಿಮಾಗಳ ಸಾಲಿಗೆ ಸೇರಿದ್ದೇ '777 ಚಾರ್ಲಿ'.

  'ಕೆಜಿಎಫ್' ಬಳಿಕ ಪೂರ್ಣ ಪ್ರಮಾಣದಲ್ಲಿ ಪ್ಯಾನ್ ಇಂಡಿಯಾ ಸಿನಿಮಾವಾಗಿ ರಿಲೀಸ್‌ ಆಗಿತ್ತು. ಅದರಲ್ಲೂ ಡಾಗ್ ಪ್ರಿಯರಿಗೆ '777 ಚಾರ್ಲಿ' ಬೆಸ್ಟ್ ಫಿಲ್ಮ್ ಎನಿಸಿಕೊಂಡಿತ್ತು. ಸಿನಿಮಾ ನೋಡಿ ಅದೆಷ್ಟೋ ಮಂದಿ ಭಾವುಕರಾಗಿದ್ದರು. ಕನ್ನಡದ ಈ ಸ್ಮಾಲ್ ಬಜೆಟ್ ಸಿನಿಮಾಗೆ ಆಲ್‌ ಇಂಡಿಯಾ ಲೆವೆಲ್‌ನಲ್ಲಿ ಮಸ್ತ್ ರೆಸ್ಪಾನ್ಸ್ ಸಿಕ್ಕಿತ್ತು.

  ಸಿನಿಮಾದಲ್ಲಿ ಇಲ್ಲದ '777 ಚಾರ್ಲಿ' ದೃಶ್ಯ ರಿಲೀಸ್ ಮಾಡಿದ ತಂಡ: ಸೂಪರ್ ಎಂದ ಫ್ಯಾನ್ಸ್!ಸಿನಿಮಾದಲ್ಲಿ ಇಲ್ಲದ '777 ಚಾರ್ಲಿ' ದೃಶ್ಯ ರಿಲೀಸ್ ಮಾಡಿದ ತಂಡ: ಸೂಪರ್ ಎಂದ ಫ್ಯಾನ್ಸ್!

  '777 ಚಾರ್ಲಿ' ಸಿನಿಮಾ ದೇಶದಾದ್ಯಂತ ಸಿನಿಪ್ರಿಯರ ಮನಸ್ಸುಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಬಾಕ್ಸಾಫೀಸ್‌ನಲ್ಲೂ '777 ಚಾರ್ಲಿ' ಆಟ ಚೆನ್ನಾಗಿ ನಡೆದಿದೆ. ಈ ವರ್ಷ ತೆರೆಕಂಡ ಬೆಸ್ಟ್ ಸಿನಿಮಾಗಳ ಪೈಕಿ '777 ಚಾರ್ಲಿ' ಕೂಡ ನಿಂತಿದೆ. ಇದೇ ಸಿನಿಮಾವೀಗ 50 ದಿನಗಳನ್ನು ಪೂರೈಸಿದ್ದು ಒಟಿಟಿಗೆ ಲಗ್ಗೆ ಇಟ್ಟಿದೆ. ಥಿಯೇಟರ್‌ನಲ್ಲಿ ಚಾರ್ಲಿ ಮಾಡಿದ ಮೋಡಿ ಒಟಿಟಿಯಲ್ಲೂ ಮಾಡುತ್ತಾ? ಅನ್ನೋದೇ ಈಗ ದೊಡ್ಡ ಚಾಲೆಂಜ್.

  '777 ಚಾರ್ಲಿ' 50 ಡೇಸ್

  '777 ಚಾರ್ಲಿ' 50 ಡೇಸ್

  '777 ಚಾರ್ಲಿ' ಬಿಡುಗಡೆಯಾಗಿ ಇಂದಿಗೆ ( ಜುಲೈ 29) 50 ದಿನಗಳಾಗಿವೆ. ಇಡೀ ತಂಡ 50 ದಿನಗಳನ್ನು ಪೂರೈಸಿದ ಖುಷಿಯಲ್ಲಿದೆ. ರಕ್ಷಿತ್ ಶೆಟ್ಟಿ ಹುಟ್ಟು ಹಬ್ಬ ಆಚರಿಸಿಕೊಂಡ ಕೆಲವೇ ದಿನಗಳ ಬಳಿಕ ಸಿನಿಮಾ ಬಿಡುಗಡೆಯಾಗಿತ್ತು. ಜೂನ್ 10 ರಂದು '777 ಚಾರ್ಲಿ' ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಆಗಿತ್ತು. ಅಲ್ಲಿಂದ ಇಲ್ಲಿವರೆಗೂ ಚಾರ್ಲಿಗೆ ನೆಗೆಟಿವ್ ರಿಪೋರ್ಟ್ ಬಂದಿಲ್ಲ. '777 ಚಾರ್ಲಿ' ಈ ವರ್ಷ ಬಿಡುಗಡೆಯಾದ ಕನ್ನಡದ ಎರಡನೇ ಪ್ಯಾನ್ ಇಂಡಿಯಾ ಸಿನಿಮಾ ಅಷ್ಟೇ ಅಲ್ಲ. ಬಾಕ್ಸಾಫೀಸ್‌ನಲ್ಲೂ ಸಕ್ಸಸ್ ಕಂಡ ಸಿನಿಮಾ ಎಂಬ ಪ್ರಶಂಸೆಗೂ ಪಾತ್ರವಾಗಿತ್ತು.

  ಒಟಿಟಿ ಲಗ್ಗೆ ಇಡಲು ಸಜ್ಜಾದ '777 ಚಾರ್ಲಿ': ವಿಶೇಷ ದಿನದಂದೇ ಸ್ಟ್ರೀಮಿಂಗ್ಒಟಿಟಿ ಲಗ್ಗೆ ಇಡಲು ಸಜ್ಜಾದ '777 ಚಾರ್ಲಿ': ವಿಶೇಷ ದಿನದಂದೇ ಸ್ಟ್ರೀಮಿಂಗ್

  '777 ಚಾರ್ಲಿ' ಒಟಿಟಿಯಲ್ಲಿ ರಿಲೀಸ್

  ಕನ್ನಡ ಸಿನಿಮಾ '777 ಚಾರ್ಲಿ' 50 ದಿನಗಳನ್ನು ಪೂರೈಸಿದ ಬೆನ್ನಲ್ಲೇ ಒಟಿಟಿಗೆ ಲಗ್ಗೆ ಇಟ್ಟಿದೆ. ಥಿಯೇಟರ್‌ನಲ್ಲಿ ಸದ್ದು ಮಾಡಿದ ಬಳಿಕ ವೂಟ್‌ನಲ್ಲಿ ಬಿಡುಗಡೆಯಾಗಲು ನಿರ್ಧರಿಸಿದೆ. ಈ ಮೊದಲೇ ಜುಲೈ 29ಕ್ಕೆ ಸಿನಿಮಾ ಒಟಿಟಿ ರಿಲೀಸ್‌ ಬಗ್ಗೆ ಚಿತ್ರತಂಡ ಮಾಹಿತಿ ನೀಡಿತ್ತು. ಅದರಂತೆ ಜುಲೈ 29ರಂದು ಸಿನಿಮಾ ಒಟಿಟಿಯಲ್ಲಿ ಪ್ರೀಮಿಯರ್ ಆಗಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಪ್ರೀಮಿಯರ್ ಕಂಡಿದೆ.

  ಚಾರ್ಲಿ ಮಾಡಿದ ಬ್ಯುಸಿನೆಸ್ 150 ಕೋಟಿ ರೂ.

  ಚಾರ್ಲಿ ಮಾಡಿದ ಬ್ಯುಸಿನೆಸ್ 150 ಕೋಟಿ ರೂ.

  ರಕ್ಷಿತ್ ಶೆಟ್ಟಿ ಹಾಗೂ ಕಿರಣ್ ರಾಜ್ ಕಾಂಬಿನೇಷನ್‌ ಸಿನಿಮಾ '777 ಚಾರ್ಲಿ' ಬಾಕ್ಸಾಫೀಸ್‌ನಲ್ಲಿ ಡಿಸೆಂಟ್ ಕಲೆಕ್ಷನ್ ಮಾಡಿತ್ತು. 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಸಿನಿಮಾ ಬರೋಬ್ಬರಿ 150 ಕೋಟಿ ರೂ. ಬ್ಯುಸಿನೆಸ್ ಮಾಡಿದೆ ಎಂಬುದಾಗಿ ರಕ್ಷಿತ್ ಶೆಟ್ಟಿ ಹೇಳಿದ್ದರು. ಥಿಯೇಟರ್‌ ಕಲೆಕ್ಷನ್ ಜೊತೆ ಇದರಲ್ಲಿ ಸ್ಯಾಟಲೈಟ್ ರೈಟ್ಸ್ ಹಾಗೂ ಒಟಿಟಿ ಹಕ್ಕುಗಳು ಕೂಡ ಸೇರಿವೆ. ಇದರಲ್ಲಿ ಶೇ. 10ರಷ್ಟು ಲಾಭ ಸಿನಿಮಾ ತಂಡಕ್ಕೂ ಹಾಗೂ ಶೇ.5ರಷ್ಟು ಹಣವನ್ನು ಶ್ವಾನ ಹಾಗೂ ಪ್ರಾಣಿ ರಕ್ಷಣೆಗೆ ನೀಡಲು ತೀರ್ಮಾನಿಸಿದ್ದರು ರಕ್ಷಿತ್ ಶೆಟ್ಟಿ.

  '777 ಚಾರ್ಲಿ ಮೇಕಿಂಗ್ ಬಲು ಕಷ್ಟ

  '777 ಚಾರ್ಲಿ ಮೇಕಿಂಗ್ ಬಲು ಕಷ್ಟ

  ಚಾರ್ಲಿ ಸಿನಿಮಾ ಮಾಡಲು ನಿರ್ಧರಿಸಿದ್ದಾಗ, ಮೊದಲು 80 ದಿನಗಳು ಎಂದು ಅಂದಾಜು ಮಾಡಲಾಗಿತ್ತು. ಆದರೆ, ಪ್ರಾಯೋಗಿಕವಾಗಿ ಇದು ಸಾಧ್ಯವಿರಲಿಲ್ಲ. ಸುಮಾರು 160ಕ್ಕೂ ಹೆಚ್ಚು ದಿನ ಈ ಸಿನಿಮಾ ಶೂಟ್ ಮಾಡಲಾಗಿತ್ತು. ಚಾರ್ಲಿಗೆ ತರಬೇತಿ ನೀಡಲು ಹೆಚ್ಚು ಸಮಯ ಹಿಡಿದಿತ್ತು. ಕಿರಣ್‌ ರಾಜ್‌ ಮಾಧ್ಯಮಗಳಿಗೆ ನೀಡಿದ್ದ ಸಂದರ್ಶನದಲ್ಲಿ "ಚಾರ್ಲಿಗೆ 450 ಟಾಸ್ಕ್‌ಗಳನ್ನು ನೀಡಲಾಗಿತ್ತು" ಎಂದು ಹೇಳಿದ್ದರು. ಥಿಯೇಟರ್‌ನಲ್ಲಿ '777 ಚಾರ್ಲಿ' ನೋಡದವರಿಗೆ ವೂಟ್‌ನಲ್ಲಿ ನೋಡುವ ಅವಕಾಶ" ಸಿಕ್ಕಿದೆ.

  Recommended Video

  Sudeep|Veerendra Heggade |'ವಿಕ್ರಾಂತ್ ರೋಣ' ರಿಲೀಸ್ ದಿನವೇ ಭೇಟಿ ಆಗಿದ್ದು ಯಾಕೆ | Vikrant Rona *Sandalwood
  English summary
  Rakshit Shetty Starrer 777 Charlie Completes 50 Days And Premiere in Voot Select, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X