Sapta Sagaradaache Ello: ತಿಂಗಳಿಗೂ ಮೊದ್ಲೆ ಓಟಿಟಿಗೆ ಮನು-ಪ್ರಿಯಾ ಕಥೆ? ಗೊಂದಲಕ್ಕೆ ಕಾರಣ ಏನು?

ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ನಟನೆಯ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮೊದಲ ವಾರಾಂತ್ಯದಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ ಸಿನಿಮಾ ವಾರದ ದಿನಗಳಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆಯುತ್ತಿದೆ. ಮನು- ಪ್ರಿಯಾ ಪ್ರೇಮ್ ಕಹಾನಿ ನೋಡಿ ಸಿನಿ ರಸಿಕರು ಫಿದಾ ಆಗಿದ್ದಾರೆ.

ಹೇಮಂತ್ ರಾವ್ ಅಂಡ್ ಟೀಂ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗುತ್ತಿದೆ. ಈ ಭಾವನಾತ್ಮಕ ಪ್ರೇಮ್‌ ಕಹಾನಿ ಪ್ರೇಕ್ಷಕರ ಮನಗೆದ್ದಿದೆ. ಸಿನಿಮಾ ಸಕ್ಸಸ್ ಸಂಭ್ರಮದಲ್ಲಿ ಚಿತ್ರತಂಡ ರಾಜ್ಯಾದ್ಯಂತ ವಿಜಯಯಾತ್ರೆ ಕೈಗೊಂಡಿದೆ. ಸಿನಿಮಾ ನೋಡಿ ಕೊಂಡಾಡುತ್ತಿರುವ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಲು ಚಿತ್ರತಂಡ ಮುಂದಾಗಿದೆ. ಹೇಮಂತ್ ಟೇಕಿಂಗ್, ರಕ್ಷಿತ್‌- ರುಕ್ಮಿಣಿ ಕೆಮೆಸ್ಟ್ರಿ, ಚರಣ್ ರಾಜ್ ಮ್ಯೂಸಿಕ್ ಎಲ್ಲಾ ಸೇರಿ ತೆರೆಮೇಲೆ ಮ್ಯಾಜಿಕ್ ಕ್ರಿಯೇಟ್ ಆಗಿದೆ.

Rakshit Shettys Sapta Sagaradaache Ello OTT streaming confusion

ಕೆಲವೇ ಪಾತ್ರಗಳನ್ನಿಟ್ಟುಕೊಂಡು ಬಹಳ ವಿಭಿನ್ನವಾದ ಪ್ರೇಮಕತೆ ಕಟ್ಟಿಕೊಟ್ಟು ಚಿತ್ರತಂಡ ಗೆದ್ದಿದೆ. ಕತ್ತೆ, ಪುಟ್ಟಿ ಪ್ರೇಮ್ ಕಹಾನಿಗೆ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯಿ ಸಿಕ್ತಿದೆ. 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ನೋಡಿದವರೆಲ್ಲಾ ಮೆಚ್ಚಿ ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ ಮುಂದುವರೆದ ಭಾಗ ನೋಡಲು ಉತ್ಸುಕರಾಗಿದ್ದಾರೆ. ಇದೆಲ್ಲದರ ನಡುವೆ ಸಿನಿಮಾ ಓಟಿಟಿಗೆ ಬರೋದು ಯಾವಾಗ? ಎನ್ನುವ ಚರ್ಚೆ ಶುರುವಾಗಿದೆ.

ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಸಿನಿಮಾ ಓಟಿಟಿ ಚರ್ಚೆ ಯಾಕೆ? ಅನ್ನಿಸೋದು ಸಹಜ. ಅದಕ್ಕೆ ಕಾರಣ 2ನೇ ಭಾಗ ಅಕ್ಟೋಬರ್ 20ಕ್ಕೆ ತೆರೆಗೆ ಬರುತ್ತಿರುವುದು. ಸಾಮಾನ್ಯವಾಗಿ ಸೀಕ್ವೆಲ್ ಸಿನಿಮಾಗಳನ್ನು ಬಹಳ ಗ್ಯಾಪ್‌ ಬಳಿಕ ತೆರೆಗೆ ತರಲಾಗುತ್ತದೆ. ಆದರೆ 'ಸಪ್ತ ಸಾಗರದಾಚೆ ಎಲ್ಲೋ'- ಸೈಡ್ A ಬಿಡುಗಡೆಯಾದ 50 ದಿನಗಳ ಬಳಿಕ ಸೈಡ್- B ರಿಲೀಸ್ ಮಾಡಲಾಗುತ್ತಿದೆ. ಹಾಗಾಗಿ ಮೊದಲ ಭಾಗ ಓಟಿಟಿಗೆ ಬರೋದು ಯಾವಾಗ ಎನ್ನುವ ಚರ್ಚೆ ಶುರುವಾಗಿದೆ.

Rakshit Shettys Sapta Sagaradaache Ello OTT streaming confusion

ಸಿನಿಮಾ ಅಮೇಜಾನ್ ಪ್ರೈಂ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುವ ಸುಳಿವು ಸಿಕ್ತಿದೆ. ಆದರೆ ಯಾವಾಗ? ಎನ್ನುವುದೇ ಇಲ್ಲಿ ಪ್ರಶ್ನೆಯಾಗಿದೆ. ಸಾಮಾನ್ಯವಾಗಿ ಯಾವುದೇ ಸಿನಿಮಾ ಥಿಯೇಟರ್‌ನಲ್ಲಿ ಬಿಡುಗಡೆಯಾದ 49 ದಿನಗಳ ಬಳಿಕ ಓಟಿಟಿ ಸ್ಟ್ರೀಮಿಂಗ್‌ಗೆ ಒಪ್ಪಂದ ಆಗಿರುತ್ತದೆ. ಆದರೆ 'ಸಪ್ತ ಸಾಗರದಾಚೆ ಎಲ್ಲೋ' 2ನೇ ಭಾಗ ಥಿಯೇಟರ್‌ಗೆ ಬರೋಕು ಮೊದ್ಲೆ ಮೊದಲ ಭಾಗ ಓಟಿಟಿಗೆ ಬರುತ್ತಾ? ಎನ್ನುವ ಕುತೂಹಲ ಮೂಡಿದೆ.

ಓಟಿಟಿಯಲ್ಲಿ ಮೊದಲ ಭಾಗ ನೋಡಿದವರು 2ನೇ ಭಾಗ ನೋಡಲು ಥಿಯೇಟರ್‌ಗೆ ಬರುವ ಸಾಧ್ಯತೆಯಿದೆ. ಹಾಗಾಗಿ ಅಕ್ಟೋಬರ್ 2ನೇ ವಾರದಲ್ಲಿ ಸೈಡ್‌- A ಓಟಿಟಿಗೆ ಬರುವ ಸಾಧ್ಯತೆಯಿದೆ. ಅದೇ ಕಾರಣಕ್ಕೆ 2 ಸಿನಿಮಾಗಳ ನಡುವೆ 50 ದಿನಗಳ ಅಂತರ ಇರುವಂತೆ ಚಿತ್ರತಂಡ ನೋಡಿಕೊಂಡಿದೆ ಎನ್ನಲಾಗ್ತಿದೆ. ಅಥವಾ ಅಕ್ಟೋಬರ್‌ನಲ್ಲಿ ಸೈಡ್‌- B ರಿಲೀಸ್ ನವೆಂಬರ್‌ನಲ್ಲಿ ಎರಡೂ ಭಾಗಗಳನ್ನು ಒಟ್ಟಿಗೆ ಡಿಜಿಟಲ್ ಫ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಮಾಡುತ್ತಾರಾ? ಅನ್ನುವ ಊಹಾಪೋಹ ಶುರುವಾಗಿದೆ. ಇನ್ನು ಚಿತ್ರವನ್ನು ತೆಲುಗಿಗೆ ಡಬ್ ಮಾಡಿ ರಿಲೀಸ್ ಮಾಡುವ ಬಗ್ಗೆಯೂ ಚರ್ಚೆ ನಡೀತಿದೆ.

ಈಗಾಗಲೇ ಹೈದರಾಬಾದ್‌ನಲ್ಲಿ 'ಸಪ್ತ ಸಾಗರದಾಚೆ ಎಲ್ಲೋ' ಕೆಲ ಶೋಗಳು ಪ್ರದರ್ಶನವಾಗುತ್ತಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಹಾಗಾಗಿ ಚಿತ್ರವನ್ನು ತೆಲುಗಿಗೆ ಡಬ್ ಮಾಡುವ ಮಾತುಗಳು ಕೇಳಿಬರ್ತಿದೆ. ಇತ್ತೀಚೆಗೆ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಕನ್ನಡದಲ್ಲಿ ಸಕ್ಸಸ್ ಕಂಡ ಬಳಿಕ 'ಬಾಯ್ಸ್ ಹಾಸ್ಟೆಲ್' ಹೆಸರಿನಲ್ಲಿ ಡಬ್ ಆಗಿ ರಿಲೀಸ್ ಆಗಿತ್ತು. ಅದಕ್ಕೂ ಮುನ್ನ 'ಕಾಂತಾರ' ಕನ್ನಡದಲ್ಲಿ ಹಿಟ್ ಆದ ಬಳಿಕ ಬೇರೆ ಭಾಷೆಗಳಿಗೆ ಡಬ್ ಆಗಿ ಸೂಪರ್ ಹಿಟ್ ಆಗಿತ್ತು.

More from Filmibeat

English summary
Sapta Sagaradaache- Side A and Side B Ott Release date.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X