For Quick Alerts
  ALLOW NOTIFICATIONS  
  For Daily Alerts

  ಓಟಿಟಿಯಲ್ಲೂ RRR ಹೊಸ ದಾಖಲೆ: ಹಾಲಿವುಡ್‌ ಸಿನಿಮಾಗಳನ್ನೇ ಹಿಂದಿಕ್ಕಿದ ಜಕ್ಕಣನ ಸಿನಿಮಾ!

  |

  ರಾಜಮೌಳಿ ಮೆಗಾ ಸಿನಿಮಾ RRR ಬಿಡುಗಡೆ ಬಳಿಕವೂ ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಜೂ.ಎನ್‌ಟಿಆರ್, ರಾಮ್‌ ಚರಣ್ ಹಾಗೂ ರಾಜಮೌಳಿ ಕಾಂಬಿನೇಷನ್‌ನಲ್ಲಿ ಬಂದ ಈ ಸಿನಿಮಾ ಭಾರತದಲ್ಲಷ್ಟೇ ಅಲ್ಲ. ವಿದೇಶದಲ್ಲೂ ಬೇಜಾನ್ ಸದ್ದು ಮಾಡುತ್ತಿದೆ.

  ಇದೇ ವರ್ಷ ಮಾರ್ಚ್ ತಿಂಗಳಲ್ಲಿ RRR ಥಿಯೇಟರ್‌ಗೆ ಲಗ್ಗೆ ಇಟ್ಟಿತ್ತು. ಭಾರತದ ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ಚಿಂದಿ ಉಡಾಯಿಸಿತ್ತು. 1100 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡು ಅತೀ ಕಲೆಕ್ಷನ್ ಮಾಡಿದ ನಾಲ್ಕನೇ ಸಿನಿಮಾ ಎನಿಸಿಕೊಂಡಿತ್ತು. ಅಲ್ಲದೇ ಇತ್ತೀಚೆಗಷ್ಟೇ ಸಿನಿಮಾವೀಗ 100 ದಿನಗಳನ್ನು ಕೂಡ ಪೂರೈಸಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಥಿಯೇಟರ್‌ನಿಂದ ಓಟಿಟಿಗೆ ಜಿಗಿದಿದ್ದ RRR ಅಲ್ಲೂ ನಿರಂತರವಾಗಿ ದಾಖಲೆಗಳನ್ನು ಬರೆಯುತ್ತಲೇ ಇದೆ.

  RRR' ಸಿನಿಮಾ ನನಗೆ ಜೆಮಿನಿ ಸರ್ಕಸ್‌ ನೋಡಿದಂತಾಯ್ತು: ರಾಮ್‌ ಗೋಪಾಲ್ ವರ್ಮಾRRR' ಸಿನಿಮಾ ನನಗೆ ಜೆಮಿನಿ ಸರ್ಕಸ್‌ ನೋಡಿದಂತಾಯ್ತು: ರಾಮ್‌ ಗೋಪಾಲ್ ವರ್ಮಾ

  ಇತ್ತೀಚೆಗೆ RRR ಭಾರತದಲ್ಲಷ್ಟೇ ಅಲ್ಲ, ಹಾಲಿವುಡ್‌ ಮಂದಿಯ ಗಮನ ಸೆಳೆದಿದೆ. ಓಟಿಟಿಯಲ್ಲೇ RRR ಸಿನಿಮಾ ನೋಡಿ ಭೇಷ್ ಎಂದಿದ್ದಾರೆ. RRR ಭಾರತದಿಂದ ಆಸ್ಕರ್‌ಗೆ ನಾಮಿನೇಟ್ ಆಗಬೇಕು ಅಂತ ವಿದೇಶಿಗರೇ ಇಚ್ಚೆ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಓಟಿಟಿಯಲ್ಲೂ ಸದ್ದು ಮಾಡುತ್ತಿರೋ RRR ಹೊಸ ದಾಖಲೆಯೊಂದನ್ನು ಬರೆದಿದೆ. ಅದೇನು ಅಂತ ತಿಳಿಯೋಕೆ ಮುಂದೆ ಓದಿ.

  ಪಾಶ್ಮಿಮಾತ್ಯರ ಗಮನ ಸೆಳೆದ RRR

  ಪಾಶ್ಮಿಮಾತ್ಯರ ಗಮನ ಸೆಳೆದ RRR

  RRR ಸಿನಿಮಾ ಓಟಿಟಿಯಲ್ಲಿ ಮೋಡಿ ಮಾಡುತ್ತಿದೆ. ಭಾರತದಲ್ಲಿ ಈ ಸಿನಿಮಾ ಥಿಯೇಟರ್‌ಗಳಲ್ಲಿ ಸೌಂಡ್ ಮಾಡಿತ್ತು. ಅದೇ ಓಟಿಟಿಗೆ ಲಗ್ಗೆ ಇಡುತ್ತಿದ್ದಂತೆ ವಿದೇಶದಲ್ಲೂ ಸೌಂಡ್ ಮಾಡುತ್ತಿದೆ. ಪಾಶ್ಚಿಮಾತ್ಯರಿಗೆ RRR ಸಿನಿಮಾ ತುಂಬಾನೇ ಇಷ್ಟ ಆಗಿದೆ. ಅದರಲ್ಲೂ ಜೂ.ಎನ್‌ಟಿಆರ್ ರೋಲ್ ವಿದೇಶಿಗರ ಗಮನ ಸೆಳೆದಿದೆ. ಜೂ.ಎನ್‌ಟಿಆರ್ ಎಮೋಷನ್ಸ್, ಫೈಟ್, ಡೈಲಾಗ್ ಎಲ್ಲವೂ ಪ್ರೇಕ್ಷಕರ ಗಮನ ಸೆಳೆದಿದೆ. ಯಂಗ್‌ ಟೈಗರ್ ಪರ್ಫಾಮೆನ್ಸ್ ನೋಡಿ ವಿದೇಶಿಗರು ಥ್ರಿಲ್ ಆಗಿದ್ದಾರೆ. ಇನ್ನೊಂದು ನೆಟ್‌ಫ್ಲಿಕ್ಸ್‌ನಲ್ಲೂ ಹೊಸ ದಾಖಲೆಯನ್ನು ಬರೆದಿದೆ.

  ಚಂದ್ರಬಾಬುಗಿಂತ ಜೂ.ಎನ್‌ಟಿಆರ್ ಬೆಸ್ಟ್? ಅಮಿತ್ ಶಾ ಭೇಟಿ ರಹಸ್ಯ ಬಿಚ್ಚಿಟ್ಟ ಕೇಂದ್ರ ಸಚಿವ!ಚಂದ್ರಬಾಬುಗಿಂತ ಜೂ.ಎನ್‌ಟಿಆರ್ ಬೆಸ್ಟ್? ಅಮಿತ್ ಶಾ ಭೇಟಿ ರಹಸ್ಯ ಬಿಚ್ಚಿಟ್ಟ ಕೇಂದ್ರ ಸಚಿವ!

  RRR ಹೊಸ ದಾಖಲೆ

  RRR ಹೊಸ ದಾಖಲೆ

  RRR ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಇಂಗ್ಲಿಷ್ ಹಾಗೂ ಇಂಗ್ಲಿಷೇತರ ಕ್ಯಾಟಗರಿಯಲ್ಲಿ ಈ ಸಿನಿಮಾ ಟ್ರೆಂಡಿಂಗ್‌ನಲ್ಲಿದೆ. ಅಷ್ಟಕ್ಕೂ RRR ಸಿನಿಮಾ ಕಳೆದ 14 ವಾರಗಳಿಂದ ಟ್ರೆಂಡಿಂಗ್‌ನಲ್ಲಿ ಮುಂದುವರೆದಿದೆ. ನೆಟ್‌ಫ್ಲಿಕ್ಸ್ ಇತಿಹಾಸದಲ್ಲಿಯೇ ಇಂತಹದ್ದೊಂದು ಸಾಧನೆಯನ್ನು ಯಾವುದೇ ಸಿನಿಮಾನೂ ಮಾಡಿಲ್ಲ. ಕೆಲವು ದಿನಗಳ ಹಿಂದಷ್ಟೇ RRR ಸಿನಿಮಾ ಹೆಚ್ಚುತ್ತಿರುವ ಕ್ರೇಜ್ ನೋಡಿ ನೆಟ್‌ಫ್ಲಿಕ್ಸ್ ಸಿಇಓನೇ ದಂಗಾಗಿದ್ದರು. ರಾಜಮೌಳಿಯ ಕಲ್ಪನಾ ಲೋಕ ಕಂಡು ಬೆರೆಗಾಗಿದ್ದರು.

  RRR ಯಾವ ಸಿನಿಮಾ ದಾಖಲೆ ಮುರಿದಿದೆ?

  RRR ಯಾವ ಸಿನಿಮಾ ದಾಖಲೆ ಮುರಿದಿದೆ?

  ನೆಟ್‌ಫ್ಲಿಕ್ಸ್‌ನಲ್ಲಿ RRR ಅಬ್ಬರಿಸಿ ಬೊಬ್ಬಿರಿದಿದೆ. ಈ ಮೂಲಕ ಹಾಲಿವುಡ್‌ ಸಿನಿಮಾದ ದಾಖಲೆಯನ್ನು RRR ಮುರಿದಿದೆ. 2021 ನವೆಂಬರ್‌ನಲ್ಲಿ 'ರೆಡ್ ನೋಟಿಸ್' ಸಿನಿಮಾ ರಿಲೀಸ್ ಆಗಿತ್ತು. ಹಾಲಿವುಡ್ ದಿಗ್ಗಜರಾದ ಡ್ವೈನ್ ಜಾನ್ಸನ್, ರಾಯ್ ರೆನಾಲ್ಡ್ಸ್, ಗಾಲ್ ಗಾಡೋಟ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಿತ್ತು. ಇದು ಓಟಿಟಿಯಲ್ಲಿ ಸುಮಾರು 12 ವಾರಗಳ ಕಾಲ ಟ್ರೆಂಡಿಂಗ್‌ನಲ್ಲಿತ್ತು. ಆ ದಾಖಲೆಯನ್ನೀಗ RRR ಮುರಿದಿದೆ.

  ಯುಎಸ್‌ಎನಲ್ಲಿ ಇನ್ನೂ ಫೇಮಸ್

  ಯುಎಸ್‌ಎನಲ್ಲಿ ಇನ್ನೂ ಫೇಮಸ್

  ರಾಜಮೌಳಿ ನಿರ್ದೇಶನದ RRR ಸಿನಿಮಾ ಅಮೆರಿಕದಲ್ಲಿ ಇನ್ನೂ ಜನರು ಎಂಜಾಯ್ ಮಾಡುತ್ತಿದ್ದಾರೆ. ಜನರು ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ತಮ್ಮ ಅನಿಸಿಕೆಗಳನ್ನು ಶೇರ್ ಮಾಡುತ್ತಲೇ ಇದ್ದಾರೆ. ಈ ಮೂಲಕ RRR ಸಿನಿಮಾವನ್ನಿಟ್ಕೊಂಡು ನೆಟ್‌ಫ್ಲಿಕ್ಸ್ ಗೆದ್ದಿರೋದು ಪಕ್ಕಾ ಆಗಿದೆ. ವಿದೇಶದಲ್ಲಿ ಇಷ್ಟೊಂದು ಸದ್ದು ಮಾಡುತ್ತಿರುವ ಸಿನಿಮಾ ಆಸ್ಕರ್‌ಗೆ ನಾಮಿನೇಟ್ ಆಗಲೇ ಬೇಕು ಅನ್ನೋ ಅಭಿಯಾನ ಕೂಡ ಶುರುವಾಗಿದೆ.

  Recommended Video

  Luckyman | Prabhu Deva | ಎಲ್ಲಾ ಪಿಕ್ಚರ್ ಗೆ ಕಾಲ್ ಮಾಡಿ ಬರ್ತೀನಿ ಅಂದ್ದಿದ್ದೆ | Punith Rakumar | Filmibeat
  English summary
  Ram Charan Jr.Ntr Starrer RRR Trending For 14 Consecutive Weeks In Netflix, Know More.
  Wednesday, August 24, 2022, 17:40
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X