Peddi OTT: ಹೊಸ ರೂಪದಲ್ಲಿ ಓಟಿಟಿಗೆ 'ಪೆದ್ದಿ'; ಜಾನ್ವಿ ವಿವಾದಾತ್ಮಕ ದೃಶ್ಯ ಬದಲಾಯ್ತು.. ಹೊಸ ದೃಶ್ಯ ಸೇರ್ಪಡೆ

ರಾಮ್‌ಚರಣ್ ನಟನೆಯ ಬ್ಲಾಕ್‌ಬಸ್ಟರ್ 'ಪೆದ್ದಿ' ಸಿನಿಮಾ ಓಟಿಟಿಗೆ ಬಂದಿದೆ. ಜೂನ್ 4ರಂದು ತೆರೆಗೆ ಬಂದಿದ್ದ ಸಿನಿಮಾ ತಿಂಗಳ ಬಳಿಕ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಸ್ಪೋರ್ಟ್ಸ್ ಡ್ರಾಮಾ ಸಿನಿಮಾ ವಿವಾದಕ್ಕೆ ಸಿಲುಕಿದ್ದು ಗೊತ್ತೇಯಿದೆ. ಮುಖ್ಯನಾಗಿ ನಾಯಕಿ ಪಾತ್ರ ಪೋಷಣೆ ಹಾಗೂ ಒಂದೆರಡು ದೃಶ್ಯಗಳಲ್ಲಿ ನಾಯಕಿಯನ್ನು ತೋರಿಸಿದ್ದ ಪರಿ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು. ಓಟಿಟಿಯಲ್ಲಿ ಆ ತಪ್ಪುಗಳನ್ನು ಸರಿಪಡಿಸಿಕೊಂಡಿದೆ ಚಿತ್ರತಂಡ.

ಸಿನಿಮಾ ಬಿಡುಗಡೆಯಾಗಿ 3 ದಿನಕ್ಕೆ ನಿರ್ದೇಶಕ ಬುಚ್ಚಿಬಾಬು ಕ್ಷಮೆ ಕೇಳಿದ್ದರು. ವಿವಾದಾತ್ಮಕ ದೃಶ್ಯಗಳನ್ನು ಬದಲಿಸುವುದಾಗಿ ಹೇಳಿದ್ದಾರೆ. 3 ವಾರಗಳ ಬಗ್ಗೆ ಒಂದಷ್ಟು ಬದಲಾವಣೆ ಮಾಡಿ ಹೊಸ ದೃಶ್ಯವನ್ನು ಸೇರಿಸಿ ಸಿನಿಮಾ ಪ್ರದರ್ಶನ ಮಾಡಿದ್ದರು. ಇದೀಗ ಓಟಿಟಿಯಲ್ಲಿ ಕೂಡ ತಪ್ಪು ಸರಿಪಡಿಸಿಕೊಂಡು ಚಿತ್ರತಂಡ ಸಿನಿರಸಿಕರ ಮೆಚ್ಚುಗೆಗೆ ಪಾತ್ರವಾಗಿದೆ. 'ಪೆದ್ದಿ' ಮದುವೆಗೆ ಹುಡುಗಿ ನೋಡಲು ಹೋಗುವ ಸನ್ನಿವೇಶವನ್ನು ಸೇರಿಸಲಾಗಿದೆ.

Ramcharan and Janhvi Kapoor Peddi Ott New edited version steaming now on netflix

ಮಾರ್ಕೆಟ್‌ನಲ್ಲಿ ನಾಯಕಿ ಅಚ್ಚಿಯಮ್ಮ (ಜಾನ್ವಿ ಕಪೂರ್) ತಮ್ಮ ತಂದೆ ಪರ ಮತಯಾಚಿಸುವ ಸನ್ನಿವೇಶ ಇದೆ. ಆ ಸಮಯದಲ್ಲಿ ನಾಯಕ 'ಪೆದ್ದಿ' ಆಕೆಯನ್ನು ನೋಡಿ ಇಷ್ಟಪಡುತ್ತಾನೆ. ಆಕೆಯ ಅಂದ ಚೆಂದವನ್ನು ಪಕ್ಕದಲ್ಲೇ ಇದ್ದ ಸ್ನೇಹಿತನಿಗೆ ವರ್ಣಿಸಿ ಹೇಳುತ್ತಾನೆ. "ಕಾಡಿಗೆ ಬೇಡದ ಆ ಕಣ್ಣುಗಳು.. ಮೂಗುತಿ ಬೇಡದ ಆ ಮೂಗು, ಅಸಲಿಗೆ ಅಲಂಕಾರವೇ ಬೇಡದ ಸುಂದ್ರಿ ಈ ಚಿಕ್ರಿ" ಎಂದು ರಾಮ್‌ಚರಣ್ ಹೇಳುವಾಗ ಜಾನ್ವಿ ಎದೆ, ಸೊಂಟದ ಮೇಲೆ ಕ್ಯಾಮರಾ ಫೋಕಸ್ ಆಗಿತ್ತು. ಇದು ಭಾರೀ ಆಕ್ರೋಶಕ್ಕೆ ಕಾರಣಕ್ಕೆ ಕಾರಣವಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಬೇರೆ ದೃಶ್ಯಗಳನ್ನು ಸೇರಿಸಿ ಆ ಸನ್ನಿವೇಶವನ್ನು ಎಡಿಟ್ ಮಾಡಿದ್ದಾರೆ.

ಹೊಸ ದೃಶ್ಯ ಸೇರ್ಪಡೆ

ಅಪ್ಪಲ ಸೂರಿ ಆಗಿ ಜಗಪತಿ ಬಾಬು ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪೆದ್ದಿ ಹಾಗೂ ಸೂರಿ ನಡುವೆ ಆತ್ಮೀಯ ಒಡನಾಟ ಇರುತ್ತದೆ. ಅದನ್ನು ತೋರಿಸಲು ಒಂದಷ್ಟು ದೃಶ್ಯಗಳನ್ನು ಚಿತ್ರೀಕರಿಸಲಾಗಿತ್ತು. ಆದರೆ ಎಡಿಟಿಂಗ್ ವೇಳೆ ಅದಕ್ಕೆ ಕತ್ತರಿ ಬಿದ್ದಿತ್ತು. ಮುಖ್ಯವಾಗಿ ಪೆದ್ದಿಗೆ ಹೆಣ್ಣು ನೋಡಲು ಹೋಗುವ ಸನ್ನಿವೇಶ. ಸೂರಿ ಕಾರಣಕ್ಕೆ ಮದುವೆ ಮಾತುಕತೆ ಮುರಿದು ಬೀಳುವುದು ಬಹಳ ಚೆನ್ನಾಗಿದೆ. ರನ್‌ಟೈಮ್ ಹೆಚ್ಚಾಗುತ್ತದೆ ಎಂದು ಈ ದೃಶ್ಯ ತೆಗೆದು ಹಾಕಿದ್ದರು. ಸಿನಿಮಾ ಪ್ರಚಾರದ ವೇಳೆ ಜಗಪತಿ ಬಾಬು ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಆ ಸನ್ನಿವೇಶವನ್ನು ಸೇರಿಸಿ ಓಟಿಟಿಯಲ್ಲಿ ಸ್ಟ್ರೀಮಿಂಗ್ ಮಾಡಲಾಗ್ತಿದೆ.

4 ಭಾಷೆಗಳಲ್ಲಿ ಸ್ಟ್ರೀಮಿಂಗ್

ಬೇರೆ ಹುಡುಗನ ಜೊತೆ ನಾಯಕಿ ಅಚ್ಚಿಯಮ್ಮ ಮದುವೆ ಮಾತುಕತೆ ನಡೆಯುತ್ತಿರುತ್ತದೆ. ಪೈಲ್ವಾನ್ ಪೆದ್ದಿ ನೇರವಾಗಿ ಆಕೆಯ ಮನೆಗೆ ನುಗ್ಗಿ ತಮ್ಮ ಪ್ರೀತಿ ಬಗ್ಗೆ ಹೇಳುತ್ತಾನೆ. ಆ ಮಾತುಕತೆ ಮುರಿದು ಬೀಳುತ್ತದೆ. ಆ ದೃಶ್ಯವನ್ನು ಕೂಡ ಈಗ ಓಟಿಟಿಯಲ್ಲಿ ವೀಕ್ಷಿಸಬಹುದು. ಸದ್ಯ ಓಟಿಟಿಯಲ್ಲಿ ಚಿತ್ರದ ರನ್‌ಟೈಮ್ 3 ಗಂಟೆ 5 ನಿಮಿಷ ಇದೆ. ಕನ್ನಡ ಸೇರಿ ದಕ್ಷಿಣದ ನಾಲ್ಕು ಭಾಷೆಗಳಲ್ಲಿ ಸಿನಿಮಾ ಓಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ. ಹಿಂದಿ ವರ್ಷನ್ ಮಾತ್ರ ಕೊಂಚ ತಡವಾಗಿ ಸ್ಟ್ರೀಮಿಂಗ್ ಆರಂಭಿಸಲಿದೆ.

ಸ್ಫೂರ್ತಿದಾಯಕ ಕಥೆ

ಬೆಟ್ಟಗುಡ್ಡಗಳ ನಡುವೆ ಇರುಬವ ಬುಡಕಟ್ಟು ಜನರ ಊರು ಕೇರಿ, ಅವರ ನೋವು ನಲಿವಿನ ಕಥೆ ಚಿತ್ರದಲ್ಲಿದೆ. ಆ ಊರು ಹಾಗೂ ಅಲ್ಲಿನ ಜನರ ಐಡೆಂಟಿಟಿಗಾಗಿ ನಾಯಕ 'ಪೆದ್ದಿ' ಹೋರಾಡುವುದೇ ಸಿನಿಮಾ ಕಥೆ. ತನ್ನ ಊರಿಗೆ ರೈಲು ನಿಲ್ದಾಣ ಬೇಕು, ಅದರಿಂದ ನನ್ನ ಊರಿನ ಅಭಿವೃದ್ಧಿ ಆಗಬೇಕು ಎಂದು ಕನಸು ಕಾಣುತ್ತಾನೆ. ಹಳ್ಳಿಯಲ್ಲಿ ದುಡ್ಡಿಗಾಗಿ ಕ್ರಿಕೆಟ್ ಆಡಿಕೊಂಡಿದ್ದ ಪೆದ್ದಿ ಬಳಿಕ ಕುಸ್ತಿ ಪೈಲ್ವಾನ್ ಆಗುತ್ತಾನೆ. ಕೊನೆಗೆ ಒಂದು ಕಾಲು ಕಳೆದುಕೊಂಡು ಪ್ಯಾರಾ ಅಥ್ಲಿಕ್ ಆಗಿ ಕನಸು ನನಸು ಮಾಡಿಕೊಳ್ಳುವ ಕಥೆ ಪ್ರೇಕ್ಷಕರ ಮನಗೆದ್ದಿದೆ.

Read more about: ramcharan tollywood janhvi kapoor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X