Game Changer OTT; 'ಗೇಮ್‌ ಚೇಂಜರ್' ಓಟಿಟಿ, ಟಿವಿ ಪಾರ್ಟ್ನರ್ ಫಿಕ್ಸ್; ಸ್ಟ್ರೀಮಿಂಗ್ ಯಾವಾಗ?

ಶಂಕರ್ ನಿರ್ದೇಶನದಲ್ಲಿ ರಾಮ್‌ಚರಣ್ ನಟನೆಯ 'ಗೇಮ್‌ ಚೇಂಜರ್' ಸಿನಿಮಾ ಈ ವಾರ ತೆರೆಗೆ ಬಂದಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಆದರೆ ಮೊದಲ ದಿನವೇ ವಿಶ್ವದಾದ್ಯಂತೆ ಸಿನಿಮಾ 186 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡ ಘೋಷಿಸಿದೆ. ಆದರೆ ಇದು ಫೇಕ್ ಎಂದು ಭಾರೀ ಚರ್ಚೆ ಆಗುತ್ತಿದೆ.

'ಗೇಮ್‌ ಚೇಂಜರ್' ಚಿತ್ರಕ್ಕಿದ್ದ ಹೈಪ್, ಅಡ್ವಾನ್ಸ್ ಬುಕ್ಕಿಂಗ್, ರೆಸ್ಪಾನ್ಸ್ ನೋಡಿದವರು ಇಷ್ಟು ಕಲೆಕ್ಷನ್ ಮಾಡುವುದಕ್ಕೆ ಸಾಧ್ಯವೇ ಇಲ್ಲ. ಸುಮ್ಮನೆ ಪ್ರೇಕ್ಷಕರನ್ನು ಸೆಳೆಯಲು ಚಿತ್ರತಂಡ ಸುಳ್ಳು ಕಲೆಕ್ಷನ್ ಪೋಸ್ಟರ್ ಬಿಟ್ಟಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಸಿನಿಮಾ ಬಿಡುಗಡೆ ಬೆನ್ನಲ್ಲೇ ಪೈರಸಿ ಕೂಡ ಆಗಿತ್ತು. ಚಿತ್ರದ HD ಪ್ರಿಂಟ್ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ.

Ramcharan starrer Game changer movie ott and Satellite partner confirmed

ಎರಡನೇ ದಿನ ಚಿತ್ರಕ್ಕೆ ದೊಡ್ಡಮಟ್ಟದಲ್ಲಿ ಬುಕ್ಕಿಂಗ್ಸ್ ಇರಲಿಲ್ಲ. ಹಾಗಾಗಿ ಸಿನಿಮಾ ಗೆಲುವುದು ಕಷ್ಟ ಎನ್ನಲಾಗ್ತಿದೆ. 300 ರಿಂದ 400 ಕೋಟಿ ರೂ. ಬಜೆಟ್ ಸಿನಿಮಾ ಇದು ಎನ್ನಲಾಗ್ತಿದೆ. ಆದರೆ ಚಿತ್ರಕ್ಕೆ ಸಿಕ್ಕಿರುವ ರೆಸ್ಪಾನ್ಸ್ ನೋಡಿದರೆ ನಿರ್ಮಾಪಕರು ನಷ್ಟ ಎದುರಿಸುವ ಸಾಧ್ಯತೆ ದಟ್ಟವಾಗಿದೆ. ಸಂಕ್ರಾಂತಿ ರಜೆ ಸಮಯದಲ್ಲಿ 'ಗೇಮ್‌ ಚೇಂಜರ್' ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತದೆ ಎನ್ನುವ ಲೆಕ್ಕಾಚಾರವೂ ಇದೆ.

ಬಾಲಕೃಷ್ಣ ನಟನೆಯ 'ಡಾಕು ಮಹಾರಾಜ್' ಕೂಡ ಸಂಕ್ರಾಂತಿ ಸಂಭ್ರಮದಲ್ಲಿ ಬಿಡುಗಡೆಯಾಗಿದೆ. ಚಿತ್ರದ ಬಗ್ಗೆ ಪಾಸಿಟಿವ್ ಟಾಕ್ ಬರ್ತಿದೆ. ಹಾಗಾಗಿ ಶಂಕರ್-ಚರಣ್ ಜೋಡಿ ಬಾಕ್ಸಾಫೀಸ್‌ನಲ್ಲಿ ಗೇಮ್ ಚೇಂಜ್ ಮಾಡ್ತಾರಾ? ಕಾದು ನೋಡಬೇಕಿದೆ. ಇನ್ನು ಸಿನಿಮಾ ಓಟಿಟಿ ಸ್ಟ್ರೀಮಿಂಗ್ ಬಗ್ಗೆ ಭಾರೀ ಚರ್ಚೆ ನಡೀತಿದೆ. ಬಹಳ ಬೇಗ ಸಿನಿಮಾ ಸ್ಮಾಲ್‌ಸ್ಕ್ರೀನ್‌ಗೆ ಬಂದುಬಿಡುವ ನಿರೀಕ್ಷೆಯಿದೆ.

ದೊಡ್ಡ ಸಿನಿಮಾಗಳನ್ನು ಸಾಧ್ಯವಾದಷ್ಟು ನಿಧಾನವಾಗಿ ಓಟಿಟಿಯಲ್ಲಿ ರಿಲೀಸ್ ಮಾಡುತ್ತಾರೆ. ಆದರೆ ನೆಗೆಟಿವ್ ಟಾಕ್ ಸಿಕ್ಕಿ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದ ಸಿನಿಮಾಗಳು ಬೇಗ ಬರುತ್ತದೆ. ಇನ್ನು ಪೈರಸಿ ಪೆಟ್ಟು ಚಿತ್ರ ಕೂಡ ಸಾಧ್ಯವಾದಷ್ಟು ಶೀಘ್ರ ಓಟಿಟಿಗೆ ಅಪ್‌ಲೋಡ್ ಆಗುತ್ತದೆ. 'ಗೇಮ್‌ ಚೇಂಜರ್' ಕತೆ ಕೂಡ ಹೀಗೆ ಆಗುವ ಲೆಕ್ಕಾಚಾರ ಶುರುವಾಗಿದೆ.

Ramcharan starrer Game changer movie ott and Satellite partner confirmed

ರಾಮ್‌ಚರಣ್ ಅಭಿಮಾನಿಗಳಿಗೆ ಇಷ್ಟವಾದರೂ ಉಳಿದವರು 'ಗೇಮ್‌ ಚೇಂಜರ್' ಆವರೇಜ್ ಸಿನಿಮಾ ಎನ್ನುತ್ತಿದ್ದಾರೆ. ಅದ್ಧೂರಿಯಾಗಿ ಸಿನಿಮಾ ಮೂಡಿ ಬಂದಿದ್ದರೂ ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುವಂತಿದೆ. ರೊಟೀನ್ ಸ್ಟೋರಿ ರುಚಿಸುವುದಿಲ್ಲ. ತಂದೆ ಮಗನಾಗಿ ದ್ವಿಪಾತ್ರದಲ್ಲಿ ರಾಮ್‌ಚರಣ್ ನಟಿಸಿದ್ದಾರೆ. ನಟನೆ ವಿಚಾರದಲ್ಲಿ ಎಲ್ಲರೂ ಗಮನ ಸೆಳೆದಿದ್ದಾರೆ. ಅಪ್ಪಣ್ಣ ಪಾತ್ರದಲ್ಲಿ ಚರಣ್ ಹಚ್ಚು ಅಂಕ ಗಿಟ್ಟಿಸಿದ್ದಾರೆ.

ಕಮರ್ಷಿಯಲ್ ಅಂಶಗಳು ಇರುವ ಶಂಕರ್ ಶೈಲಿಯ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಇದು. ಒಂದೊಳ್ಳೆ ಸಂದೇಶ ಕೂಡ ಚಿತ್ರದಲ್ಲಿದೆ. ಆದರೆ ಅಷ್ಟು ಅಷ್ಟರಮಟ್ಟಿಗೆ ಪ್ರೇಕ್ಷಕರನ್ನು ರಂಜಿಸುತ್ತಿಲ್ಲ. ಅಬ್ಬರದ ಮಾಸ್ ಸಿನಿಮಾಗಳನ್ನು ನೋಡಿದವರಿಗೆ 'ಗೇಮ್‌ ಚೇಂಜರ್' ಸೀದಾಸಾದಾ ಸಿನಿಮಾ ಎನಿಸಿಬಿಡುತ್ತದೆ.

'ಗೇಮ್‌ ಚೇಂಜರ್' ಚಿತ್ರದ ಓಟಿಟಿ ಹಾಗೂ ಸ್ಯಾಟಲೈಟ್ ರೈಟ್ಸ್ ಮಾರಾಟವಾಗಿದೆ. ಅಮೇಜಾನ್ ಪ್ರೈಂ ಭಾರೀ ಮೊತ್ತಕ್ಕೆ 5 ಭಾಷೆಗಳ ಓಟಿಟಿ ರೈಟ್ಸ್ ಸ್ವಂತ ಮಾಡಿಕೊಂಡಿದೆ. ಇನ್ನು ಜೀ ಸಂಸ್ಥೆ ತೆಲುಗು, ತಮಿಳು, ತಮಿಳು, ಮಲಯಾಳಂ ಟಿವಿ ರೈಟ್ಸ್ ಕೊಂಡಿಕೊಂಡಿದೆ. ಸ್ಟಾರ್ ಗೋಲ್ಡ್‌ ವಾಹಿನಿಯಲ್ಲಿ ಹಿಂದಿ ವರ್ಷನ್ ಪ್ರೀಮಿಯರ್ ಆಗಲಿದೆ. ತಿಂಗಳ ಒಳಗೆ ಸಿನಿಮಾ ಓಟಿಟಿಗೆ ಬರುವ ನಿರೀಕ್ಷೆಯಿದೆ.

More from Filmibeat

English summary
These platforms acquired Ramcharan and shankar's Game changer movie OTT and satellite rights;
Read more about: tollywood ott ramcharan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X