For Quick Alerts
  ALLOW NOTIFICATIONS  
  For Daily Alerts

  ಒಟಿಟಿಯತ್ತ ರಮೇಶ್ ಚಿತ್ತ: ವೆಬ್ ಸರಣಿ ನಿರ್ದೇಶಿಸಲು ತಯಾರು

  |

  ಕನ್ನಡ ಚಿತ್ರರಂಗದಲ್ಲಿ ಬಹಳ ಅಪ್‌ಡೇಟೆಡ್ ಆಗಿರುವ ನಟ ರಮೇಶ್ ಅರವಿಂದ್. ಸದಾ ಹೊಸ ಸಾಧ್ಯತೆಗಳ ಬಗ್ಗೆ ಅವರ ಅನ್ವೇಷಣೆ, ಕಲಿಕೆ ಸಾಗುತ್ತಲೇ ಇರುತ್ತದೆ. ಹೊಸ ಪರಿಸ್ಥಿತಿಗಳಿಗೆ, ತಂತ್ರಜ್ಞಾನಕ್ಕೆ ಯಾವುದೇ ಮಾದರಿಯ ಬದಲಾವಣೆಗೆ ತಮ್ಮನ್ನು ಒಡ್ಡಿಕೊಳ್ಳುತ್ತಾರೆ ರಮೇಶ್.

  ಕೊರೊನಾ ಲಾಕ್‌ಡೌನ್ ನಂತರ ಒಟಿಟಿಗಳು ತಮ್ಮ ವ್ಯಾಪ್ತಿಯನ್ನು ಬಹುವಾಗಿ ಹಿಗ್ಗಿಸಿಕೊಂಡಿದ್ದು ಸ್ಟಾರ್ ನಟರು, ಸ್ಟಾರ್ ನಿರ್ದೇಶಕರೇ ಒಟಿಟಿಯಲ್ಲಿ ಸಿನಿಮಾ ಬಿಡುಗಡೆ ಮಾಡಲು ನಾ ಮುಂದು-ತಾ ಮುಂದು ಎಂದು ಸಾಲಿನಲ್ಲಿದ್ದಾರೆ. ಇಷ್ಟೇ ಅಲ್ಲದೆ ಹೊಸ ಬಗೆಯಲ್ಲಿ ಕತೆ ಹೇಳುವ ಅವಕಾಶವನ್ನು ಒಟಿಟಿಯು ವೆಬ್ ಸರಣಿ ಮೂಲಕ ನೀಡಿದೆ.

  ಇದೀಗ ನಟ ರಮೇಶ್ ಅರವಿಂದ್ ಅವರು ವೆಬ್ ಸರಣಿ ನಿರ್ದೇಶನಕ್ಕೆ ಮನಸ್ಸು ಮಾಡಿದ್ದು, ಲಾಕ್‌ಡೌನ್ ಅವಧಿಯಲ್ಲಿ ವೆಬ್ ಸರಣಿಗಾಗಿಯೆಂದೇ ಕತೆಯೊಂದನ್ನು ತಯಾರು ಮಾಡಿಟ್ಟುಕೊಂಡಿದ್ದಾರೆ.

  ಕನಿಷ್ಟ 10 ಗಂಟೆಗಳ ವೆಬ್ ಸರಣಿ ನಿರ್ಮಾಣ ಮಾಡುವ ಯೋಜನೆಯಲ್ಲಿರುವ ರಮೇಶ್ ಅದಕ್ಕಾಗಿ ಇತಿಹಾಸಕ್ಕೆ ಸಂಬಂಧಿಸಿದ ಕತೆಯೊಂದನ್ನು ತಯಾರು ಮಾಡಿದ್ದಾರೆ. ಇತಿಹಾಸಕ್ಕೆ ಸಂಬಂಧಿಸಿದ್ದಾದರೂ ಕತೆ ನಡೆಯುವುದು ವರ್ತಮಾನದಲ್ಲಿಯೇ.

  ವೆಬ್ ಸರಣಿಯ ತಂತ್ರದ ಬಗ್ಗೆ ಬಹಳ ಉತ್ಸುಕರಾಗಿರುವ ರಮೇಶ್ ಅರವಿಂದ್, ಈ ಮಾದರಿಯಲ್ಲಿ ನೀವು ಭಿನ್ನ ರೀತಿಯ ಕತೆಗಳನ್ನು ಹೇಳಬಹುದು. ನಿರ್ದಿಷ್ಟ ಪ್ರೇಕ್ಷಕರಿಗೆ ನಿರ್ದಿಷ್ಟ ಕತೆ ಹೇಳುವ ಅವಕಾಶವೂ ವೆಬ್ ಸರಣಿ ಹಾಗೂ ಒಟಿಟಿಗಳಿಂದ ಪ್ರಾಪ್ತವಾಗಿದೆ. ಹಲವು ಮಾದರಿಯ ಕತೆಗಳನ್ನು ನಿರ್ದೇಶಕ ವೆಬ್ ಸರಣಿಗಳಲ್ಲಿ ಪ್ರಯತ್ನಿಸಬಹುದು ಎಂದಿದ್ದಾರೆ ರಮೇಶ್ ಅರವಿಂದ್.

  ರಮೇಶ್ ಅರವಿಂದ್ ನಟಿಸಿ, ನಿರ್ದೇಶಿಸಿರುವ '100' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಅದರ ಜೊತೆಗೆ ಇನ್ನೊಂದು ಸಿನಿಮಾಕ್ಕೆ ಕತೆ ರಚಿಸಿದ್ದಾರೆ. ಇದರ ಹೊರತಾಗಿ ಲಾಕ್‌ಡೌನ್ ಅಂತ್ಯವಾದ ಬಳಿಕ ಎರಡು ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ. 'ಶಿವಾಜಿ ಸೂರತ್ಕಲ್ 2' ಮತ್ತು ಹೊಸಬರ ಜೊತೆಗೆ ಹೊಸ ಥ್ರಿಲ್ಲರ್ ಸಿನಿಮಾದಲ್ಲಿ ರಮೇಶ್ ನಟಿಸಲಿದ್ದಾರೆ.

  English summary
  Actor, director Ramesh Arvind planning to direct a web series. He wrote story for web series in lock down time now fine tuning the story.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X