ಡಾನ್ಸ್​ ರಿಯಾಲಿಟಿ ಶೋಗೆ ಜಡ್ಜ್​ ಆದ ಶಿವಗಾಮಿ

ದಕ್ಷಿಣ ಭಾರತದ ಸ್ಟಾರ್ ಹಿರಿಯ ನಟಿ​ ರಮ್ಯ ಕೃಷ್ಣ ತಮ್ಮ ಅಭಿಮಾನಿಗಳಿಗೆ ಗುಡ್​ನ್ಯೂಸ್​ ನೀಡಿದ್ದು, ಮತ್ತೆ ಅವರು ತೆರೆ ಮೇಲೆ ಕಾಣಲು ಸಜ್ಜಾಗಿದ್ದಾರೆ. ರಾಜ್​ಮೌಳಿ ನಿರ್ದೇಶನದ ಬಾಹುಬಲಿ ಚಿತ್ರದ ಬಳಿಕ ಕಿರು ತೆರೆ ಹಾಗೂ ಹಿರಿ ತೆರೆಯಿಂದ ಅಂತರ ಕಾಯ್ದುಕೊಂಡಿದ್ದ ರಮ್ಯಾ ಕೃಷ್ಣ ಇದೀಗ ಮತ್ತೆ ಮುಖ್ಯಭೂಮಿಕೆಗೆ ಬಂದಿದ್ದಾರೆ.

ತೆಲುಗಿನ ಆಹಾ ಓಟಿಟಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಶೋವೊಂದಕ್ಕೆ ರಮ್ಯಾ ಕೃಷ್ಣ ಜಡ್ಜ್​ ಆಗಿ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ. ಕೇವಲ ನಟನೆಯಷ್ಟೇ ಅಲ್ಲದೇ ಡಾನ್ಸ್​ನಲ್ಲೂ ಪರಿಣಿತಿ ಹೊಂದಿರುವ ರಮ್ಯಾ ಕೃಷ್ಣ ಅವರನ್ನು ರಿಯಾಲಿಟಿ ಶೋ ತಂಡ ಜಡ್ಜ್​ ಆಗಿ ಆಯ್ಕೆ ಮಾಡಿದ್ದಾರೆ.

ತೆಲುಗಿನಲ್ಲಿ ಬಹಳಷ್ಟು ಜನಪ್ರಿಯತೆ ಪಡೆದಿರುವ ಡಾನ್ಸ್​ ಐಕಾನ್​ ಶೋಗಾಗಿ ಇಬ್ಬರು ಜನ ತೀರ್ಪುಗಾರರನ್ನು ಆಯ್ಕೆ ಮಾಡಲಾಗಿದ್ದು, ದಕ್ಷಿಣ ಭಾರತದ ಲೇಡಿ ಸೂಪರ್​ ರಮ್ಯಾ ಕೃಷ್ಣ ಅವರೊಂದಿಗೆ, ಕಿಂಗ್​ ಆಫ್​ ದಿ ಹುಕ್​ ಸ್ಟೆಪ್​ ಮಾಸ್ಟರ್​ ಶೇಖರ್​ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ.

Ramya Krishna To Be Judge In Dance Icon

ಇನ್ನು ತಾವು ಡಾನ್ಸ್​ ಐಕಾನ್​ ಕಾರ್ಯಕ್ರಮದ ತೀರ್ಪುಗಾರರಾಗಿ ಆಯ್ಕೆಯಾಗಿರುವುದಕ್ಕೆ ರಮ್ಯಾ ಕೃಷ್ಣ ಕೂಡ ಖುಷಿ ವ್ಯಕ್ತಪಡಿಸಿದ್ದು, ಇಂತಹ ಅವಕಾಶ ನೀಡಿದ ಕಾರ್ಯಕ್ರಮದ ಆಯೋಜಕರಿಗೆ ಧನ್ಯವಾದ ತಿಳಿಸಿದ್ದಾರೆ. ಡಾನ್ಸ್​ ಐಕಾನ್​ ಮೂಲಕ ನಾನು ಓಟಿಟಿಗೆ ಮೊದಲ ಬಾರಿಗೆ ಪದಾರ್ಪಣೆ ಮಾಡುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಾನು ಉತ್ಸುಕಳಾಗಿದ್ದೇನೆ. ಮೊದಲ ಬಾರಿಗೆ ತೀರ್ಪು ನೀಡುವ ಅವಕಾಶ ಸಿಕ್ಕಿದೆ. ಈವರೆಗೂ ನಾನು ವಿವಿಧ ರೀತಿಯ ಪಾತ್ರಗಳನ್ನು ಮಾಡಿ ಅಭಿಮಾನಿಗಳನ್ನು ರಂಜಿಸಿದ್ದೇನೆ. ಇದೀಗ ವೀಕೆಂಡ್​ ದಿನಗಳಲ್ಲಿ ಓಟಿಟಿಯಲ್ಲಿ ಅವರು ನನ್ನನ್ನು ನೋಡಬಹುದು. ಈ ಕಾರ್ಯಕ್ರಮದ ಮೂಲಕ ಶ್ರೇಷ್ಠ ನೃತ್ಯ ತಾರೆಗಳನ್ನು ನಾನು ಭೇಟಿಯಾಗಬಹುದು ಎಂದು ರಮ್ಯಾ ಕೃಷ್ಣ ಖುಷಿ ಹಂಚಿಕೊಂಡಿದ್ದಾರೆ.

ಇನ್ನು ಕಾರ್ಯಕ್ರಮದ ಆಯೋಜಕರು ಕೂಡ ಮಾತನಾಡಿದ್ದು, ಡಾನ್ಸ್​ ಐಕಾನ್ ​ ಕಾರ್ಯಕ್ರಮಕ್ಕೆ ದಕ್ಷಿಣ ಭಾರತದ ಲೇಡಿ ಸೂಪರ್​ ಸ್ಟಾರ್​ ರಮ್ಯಾ ಕೃಷ್ಟ ಅವರನ್ನು ಆಯ್ಕೆ ಮಾಡಿದ್ದೇವೆ. ರಮ್ಯಾ ಕೃಷ್ಣ ಅವರ ಚಾರ್ಮಿಂಗ್​, ಆ್ಯಕ್ಟೀವ್​ನೆಸ್ ​ ಎಲ್ಲರಿಗೂ ಸ್ಫೂರ್ತಿ. ಅವರ ವೃತ್ತಿ ಜೀವನದ ಏರಿಳಿತಗಳನ್ನು ನೋಡಿ ಯುವ ಜನತೆ ಕಲಿಯುವ ಅಂಶ ಬಹಳಷ್ಟಿದೆ ಎಂದರು. ಇನ್ನು ಡಾನ್ಸ್​ ಐಕಾನ್​ ಶೋ ಶನಿವಾರ ಹಾಗೂ ಭಾನುವಾರ ಆಹಾ ಓಟಿಟಿಯಲ್ಲಿ ಪ್ರಸಾರವಾಗಲಿದೆ.

More from Filmibeat

English summary
South India actress Ramya Krishna to be judge in her ott debut dance icon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X