For Quick Alerts
  ALLOW NOTIFICATIONS  
  For Daily Alerts

  ವೆಂಕಟೇಶ್, ರಾಣಾ ದಗ್ಗುಬಾಟಿ 'ರಾಣಾ ನಾಯ್ಡು' ಟೀಸರ್ ಔಟ್; ಲಿಪ್‌ಲಾಕ್ ದೃಶ್ಯ ವೈರಲ್!

  |

  ಒಂದೇ ಕುಟುಂಬದ ಕಲಾವಿದರಾದ ನಟ ರಾಣಾ ದಗ್ದುಬಾಟಿ ಹಾಗೂ ದಗ್ಗುಬಾಟಿ ವೆಂಕಟೇಶ್ ಇದೇ ಮೊದಲ ಬಾರಿಗೆ ಒಟ್ಟಿಗೆ ಅಭಿನಯಿಸಿದ್ದು, ಅಭಿಮಾನಿಗಳ ಬಹು ದಿನದ ಆಸೆ ಪೂರೈಕೆ ಆಗಲಿದೆ. ಹೌದು, ಈ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿರುವ ರಾಣಾ ನಾಯ್ಡು ವೆಬ್ ಸರಣಿಯ ಟೀಸರ್ ಇಂದು ( ಸೆಪ್ಟೆಂಬರ್ 24 ) ನೆಟ್‌ಫ್ಲಿಕ್ಸ್ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಂಡಿದೆ.

  ರಾಣಾ ನಾಯ್ಡು ಅಮೆರಿಕಾದ ಖ್ಯಾತ ಕ್ರೈಮ್ ಥ್ರಿಲ್ಲರ್ ಶೋ ರೇ ಡಾನಾವನ್‌ನಿಂದ ಅಧಿಕೃತವಾಗಿ ಪ್ರೇರೇಪಿತಗೊಂಡು ನಿರ್ಮಾಣವಾದ ವೆಬ್ ಸರಣಿಯಾಗಿದೆ. ಈ ವೆಬ್ ಸರಣಿಯ ಟೀಸರ್ ಬಿಡುಗಡೆಯಾದ ನಂತರ ಸಿನಿ ರಸಿಕರ ಗಮನವನ್ನು ಸೆಳೆಯುವಲ್ಲಿ ಸಫಲವಾಗಿದೆ. 'ಏನಾದರೂ ಸಹಾಯ ಬೇಕಾ' ಎಂಬ ರಾಣಾರ ಹಿನ್ನೆಲೆ ಧ್ವನಿಯ ಮೂಲಕ ಟೀಸರ್ ಆರಂಭವಾಗುತ್ತೆ. ನಂತರ ವ್ಯಕ್ತಿಯೋರ್ವ 'ಸಿಟಿಯಲ್ಲಿ ನಿಮ್ಮ ಸಹಾಯದ ಬಗ್ಗೆ ತುಂಬಾ ಕೇಳಿದ್ದೇನೆ, ಯಾರಾದರೂ ಸೆಲೆಬ್ರಿಟಿಗೆ ತೊಂದರೆ ಎದುರಾದಾಗ ಅವರು ನಿಮಗೆ ಕರೆ ಮಾಡ್ತಾರೆ, ಫಿಕ್ಸರ್ ಫಾರ್ ದ ಸ್ಟಾರ್ಸ್' ಎಂದು ಡೈಲಾಗ್ ಹೇಳ್ತಾನೆ.

  ಅಲ್ಲಿಗೆ ರಾಣಾ ಈ ಚಿತ್ರದಲ್ಲಿ ರಾಣಾ ವಿವಾದಕ್ಕೊಳಗಾಗುವ ಹಾಗೂ ಸಂಕಷ್ಟಕ್ಕೆ ಸಿಲುಕುವ ಸೆಲೆಬ್ರಿಟಿಗಳನ್ನು ಸುಪಾರಿ ಮೇರೆಗೆ ಕಾಪಾಡುವ ಫಿಕ್ಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಖಚಿತವಾಗಿದೆ. ರಾಣಾ ಡೀಲ್ ಮಾಡ್ತಿದ್ದಾರೆ ಎಂದರೆ ಅದು ದೊಡ್ಡ ಮಟ್ಟದ್ದೇ ಆಗಿರುತ್ತದೆ ಎಂಬ ರಾಣಾಗೆ ಬಿಲ್ಡಪ್ ಕೊಡುವ ಮತ್ತೊಂದು ಡೈಲಾಗ್ ಇದೆ. ಇದಾದ ಬೆನ್ನಲ್ಲೇ ಕಾರ್ ಚೇಸ್ ದೃಶ್ಯವಿದ್ದು, 'ರಾಣಾನನ್ನು ಸದೆ ಬಡಿಯೋಕೆ ಒಬ್ಬ ವ್ಯಕ್ತಿಯಿದ್ದಾನೆ' ಎಂದಾಗ ಬೇಡಿ ತೊಟ್ಟ ವಯಸ್ಸಾದ ವ್ಯಕ್ತಿಯ ಕೈಗಳನ್ನು ತೋರಿಸಲಾಗುತ್ತದೆ.

  ಬಳಿಕ ವಿಕ್ಟರಿ ವೆಂಕಟೇಶ್ ಬಿಳಿ ಗಡ್ಡಧಾರಿಯಾಗಿ ಪ್ರತ್ಯಕ್ಷರಾಗ್ತಾರೆ. ಇಬ್ಬರ ಮುಖಾಮುಖಿಯ ದೃಶ್ಯವಿದ್ದು ವಿಕ್ಟರಿ ವೆಂಕಟೇಶ್ ರಾಣಾ ದಗ್ಗುಬಾಟಿಗೆ 'ಎಷ್ಟೇ ಆದರೂ ನಾನು ನಿನ್ನ ಅಪ್ಪ, ನನ್ನನ್ನು ಅಪ್ಪ ಅಂತ ಕರಿಯೋದಿಲ್ವಾ' ಎಂದು ಪ್ರಶ್ನೆ ಹಾಕ್ತಾರೆ. ಇದಕ್ಕೆ ಪ್ರತ್ಯುತ್ತರ ನೀಡುವ ರಾಣಾ 'ಒಳ್ಳೆ ಅಪ್ಪನಾಗಿ ಇದ್ದಿದ್ರೆ ಅಪ್ಪ ಅಂತ ಕರೆಯತ್ತಿದ್ದೆ' ಎನ್ನುತ್ತಾರೆ. ಈ ಸಂಭಾಷಣೆ ಬಳಿಕ ರಾಣಾ ವಿಕ್ಟರಿ ವೆಂಕಟೇಶ್‌ಗೆ ಗನ್ ಗುರಿ ಇಡುವು ದೃಶ್ಯವೂ ಇದೆ ಹಾಗೂ ಟೀಸರ್ ಅಂತ್ಯಗೊಂಡು ಅತಿ ಶೀಘ್ರದಲ್ಲಿ ಬರಲಿದೆ ಎಂಬ ಮಾಹಿತಿಯನ್ನು ನೀಡಿದೆ ತಂಡ.

  ಇನ್ನು ಈ ಟೀಸರ್‌ನ ದೃಶ್ಯಗಳಲ್ಲಿ ರಾಣಾ ಸಿಸಿಟಿವಿ ಕ್ಯಾಮೆರಾ ಒಡೆದು ಹಾಕುವುದು, ರಕ್ತಸಿಕ್ತ ಕ್ರಿಕೆಟ್ ಬ್ಯಾಟ್ ಹಿಡಿದು ಹೊಡೆದಾಡುವುದು ಹಾಗೂ ಲಿಪ್ ಲಾಕ್ ಮಾಡುವ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.

  English summary
  Rana Daggubati and Victory Venkatesh starrer Rana Naidu Netflix web series teaser is out now
  Saturday, September 24, 2022, 14:22
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X