Don't Miss!
- Sports
IPL 2022 ಫೈನಲ್: ಜೋಸ್ ಬಟ್ಲರ್ಗೆ ಎಚ್ಚರಿಕೆ ನೀಡಿದ ಸಂಜಯ್ ಮಾಂಜ್ರೇಕರ್
- News
ಆಟೋ ಚಾಲನೆ ಮೂಲಕ ಬದುಕು ಕಟ್ಟಿಕೊಂಡ ಹುಬ್ಬಳ್ಳಿ ಮಹಿಳೆ
- Finance
Masked ಆಧಾರ್ ಕಾರ್ಡ್ ಎಂದರೇನು? Download ಮಾಡುವುದು ಹೇಗೆ?
- Automobiles
ಭಾರತದಲ್ಲಿ ಸ್ಥಗಿತಗೊಂಡ ಜನಪ್ರಿಯ ಮಾರುತಿ ಸುಜುಕಿ ಎಸ್-ಕ್ರಾಸ್ ಕಾರು
- Technology
ಪ್ರಸ್ತುತ ನೀವು ಖರೀದಿಸಬಹುದಾದ ಮಧ್ಯಮ ಶ್ರೇಣಿಯ ಅತ್ಯುತ್ತಮ ಸ್ಮಾರ್ಟ್ಫೋನ್ಗಳು!
- Lifestyle
ಮೇ 29 ರಿಂದ ಜೂನ್ 4ರ ವಾರ ಭವಿಷ್ಯ: ಮಿಥುನ, ಸಿಂಹ, ಕುಂಭ ರಾಶಿಯವರು ಆರೋಗ್ಯದ ಬಗ್ಗೆ ಜಾಗರೂಕರಾಗಿರಿ
- Education
BCWD Dolu And Nadaswara Music Training : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಗರುಡ ಗಮನ ವೃಷಭ ವಾಹನ' ಸಿನಿಮಾ ಮೆಚ್ಚಿದ 'ಬಲ್ಲಾಳದೇವ' ರಾಣಾ ದಗ್ಗುಬಾಟಿ
ಕಳೆದ ನವೆಂಬರ್‌ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದ್ದ ರಾಜ್ ಬಿ ಶೆಟ್ಟಿ ನಿರ್ದೇಶಿಸಿರುವ 'ಗರುಡ ಗಮನ ವೃಷಭ ವಾಹನ' ಸಿನಿಮಾ ಹಿಟ್ ಎನಿಸಿಕೊಂಡಿತ್ತು. ಇದೀಗ ಇದೇ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಿದ್ದು, ಅಲ್ಲಿಯೂ ಹಿಟ್ ಆಗಿದೆ.
ಜೀ 5 ಒಟಿಟಿ ವೇದಿಕೆಯಲ್ಲಿ ಸಿನಿಮಾವನ್ನು ನೋಡಿದ ಅನ್ಯ ಭಾಷೆಯ ಸಿನಿ ಪ್ರೇಮಿಗಳು, ತಂತ್ರಜ್ಞರು, ನಟ-ನಟಿಯರು ಸಿನಿಮಾವನ್ನು ನೋಡಿ ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಸಾಮಾಜಿಕ ಜಾಲಾಣಗಳ ಮೂಲಕ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇದೀಗ 'ಬಾಹುಬಲಿ' ಸಿನಿಮಾ ಖ್ಯಾತಿಯ ತೆಲುಗಿನ ಜನಪ್ರಿಯ ನಟ ರಾಣಾ ದಗ್ಗುಬಾಟಿ 'ಗರುಡ ಗಮನ ವೃಷಭ ವಾಹನ' ಸಿನಿಮಾವನ್ನು ವೀಕ್ಷಿಸಿದ್ದು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟ್ವಿಟ್ಟರ್ ಬಳಕೆದಾರನೊಬ್ಬ ರಾಣಾ ದಗ್ಗುಬಾಟಿಗೆ ಟ್ವೀಟ್ ಮಾಡಿ, ''ಸರ್ ಸ್ವಲ್ಪ ಸಮಯ ಬಿಡುವು ಮಾಡಿಕೊಂಡು 'ಗರುಡ ಗಮನ ವೃಷಭ ವಾಹನ' ಸಿನಿಮಾ ನೋಡಿ. ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳಿ'' ಎಂದಿದ್ದಾನೆ.
ಅಭಿಮಾನಿಯ ಆಸೆಯಂತೆ ಸಿನಿಮಾ ವೀಕ್ಷಿಸಿದ ರಾಣಾ ದಗ್ಗುಬಾಟಿ, ಅಭಿಮಾನಿಯ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿ, ''ಸಿನಿಮಾ ಅದ್ಭುತವಾಗಿದೆ, ನನಗೆ ಬಹಳ ಇಷ್ಟವಾಯಿತು'' ಎಂದಿದ್ದಾರೆ. ಒತೆಗೊಂದು ಹೃದಯದ ಇಮೋಜಿಯನ್ನೂ ಪೋಸ್ಟ್ ಮಾಡಿದ್ದಾರೆ.
'ಗರುಡ ಗಮನ ವೃಷಭ ವಾಹನ' ಸಿನಿಮಾವನ್ನು ಮೆಚ್ಚಿಕೊಂಡ ತೆಲುಗು ಚಿತ್ರರಂಗದವರಲ್ಲಿ ರಾಣಾ ದಗ್ಗುಬಾಟಿ ಮೊದಲಿಗರೇನಲ್ಲ. ಕೆಲವು ದಿನಗಳ ಹಿಂದಷ್ಟೆ ಜನಪ್ರಿಯ ಸಿನಿಮಾ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇದೇ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದರು. ಅದಕ್ಕೂ ಮುನ್ನ ನಿರ್ದೇಶಕ ದೇವ ಕಟ್ಟ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
'ಗರುಡ ಗಮನ, ವೃಷಭ ವಾಹನ' ಸಿನಿಮಾ ವೀಕ್ಷಿಸಿದ ರಾಮ್ ಗೋಪಾಲ್ ವರ್ಮಾ, ''ಭಿನ್ನ-ಭಿನ್ನ ಪದಪುಂಜಗಳನ್ನು ಬಳಸಿ ಸಿನಿಮಾವನ್ನು ಹಾಗೂ ರಾಜ್ ಬಿ ಶೆಟ್ಟಿಯನ್ನು ಹೊಗಳಿರುವ ರಾಮ್ ಗೋಪಾಲ್ ವರ್ಮಾ, ''ರಾಜ್ ಬಿ ಶೆಟ್ಟಿ, ನಿಮ್ಮ ಸಿನಿಮಾ (ಸ್ಟ್ರಾಟೋಸ್ಪ್ರಿಕ್) ಬೇರೆ ಲೆವೆಲ್‌ನಲ್ಲಿದೆ ಅಥವಾ ಬಹಳ ಎತ್ತರದಲ್ಲಿದೆ. ನಿಮ್ಮ ಸ್ಕ್ರೀನ್ ಪ್ರೆಸೆನ್ಸ್ (ಮೆಟಾಮಾರ್ಫಿಕ್) ರೂಪಾಂತರಗಳಿಂದ ಕೂಡಿದೆ. ಒಟ್ಟಾರೆ ನಿಮ್ಮ ಸಿನಿಮಾ 'ಅಲ್ಟ್ರಾಸ್ಕೋಪಿಕ್' ಆಗಿದೆ ಎಂದಿದ್ದಾರೆ.
'ಗರುಡ ಗಮನ ವೃಷಭ ವಾಹನ' ಸಿನಿಮಾ ವೀಕ್ಷಿಸಿದ ತೆಲುಗು ಸಿನಿಮಾ ನಿರ್ದೇಶಕ ದೇವಕಟ್ಟ, "2021ರಲ್ಲಿ ತೆರೆಕಂಡ ಭಾರತೀಯ ಸಿನಿಮಾಗಳ ಪೈಕಿ ಅತ್ಯುತ್ತಮ ಚಲನಚಿತ್ರ 'ಗರುಡ ಗಮನ ವೃಷಭ ವಾಹನ'. ನನಗೆ ಶಕ್ತಿ ಇದ್ದಿದ್ದರೆ ಆಸ್ಕರ್‌ಗೆ ಈ ಸಿನಿಮಾವನ್ನು ಆಯ್ಕೆ ಮಾಡುತ್ತಿದ್ದೆ. 'ಗರುಡ ಗಮನ ವೃಷಭ ವಾಹನ' ಚಿತ್ರವನ್ನು ನನ್ನ ಗೆಳೆಯರೊಂದಿಗೆ ನೋಡಿದ್ದೆ. ಸಿನಿಮಾ ಚಿತ್ರೀಕರಿಸಿದ ರೀತಿ ಅದ್ಭುತವಾಗಿದೆ. ಸಿನಿಮಾ ಸಿಕ್ಕಾಪಟ್ಟೆ ಇಷ್ಟ ಆಗಿದ್ದರಿಂದ ಥಿಯೇಟರ್‌ಗೆ ಮತ್ತೆ ಹೋಗಿ ನೋಡಿದಾಗ ಇರಲಿಲ್ಲ. ಈ ಕಾರಣಕ್ಕೆ ಬೇಸರ ಆಗಿತ್ತು" ಎಂದಿದ್ದರು.
ಜೀ5 ಒಟಿಟಿಯಲ್ಲಿ ಬಿಡುಗಡೆ ಆಗಿರುವ 'ಗರುಡ ಗಮನ ವೃಷಭ ವಾಹನ' ಕನ್ನಡ ಸಿನಿಮಾಗಳ ಮಟ್ಟಿಗೆ ದಾಖಲೆಯನ್ನು ಬರೆದಿದೆ. ಜನವರಿ 13 ರಂದು ಈ ಸಿನಿಮಾ ಬಿಡುಗಡೆ ಆಗಿತ್ತು. ಬಿಡುಗಡೆ ಆಗಿ ಮೂರು ದಿನ ಪೂರ್ಣ ಕಳೆಯುವ ಮುನ್ನವೇ 8 ಕೋಟಿಗೂ ಹೆಚ್ಚು ನಿಮಿಷಗಳಷ್ಟು ಸಿನಿಮಾ ಸ್ಟ್ರೀಮಿಂಗ್ ಆಗಿತ್ತು. 8 ಕೋಟಿ ನಿಮಿಷ ಅಂದರೆ 13.33 ಲಕ್ಷ ಗಂಟೆಗೂ ಹೆಚ್ಚು ಕಾಲ ಕೇವಲ ಮೂರೇ ದಿನದಲ್ಲಿ ಸ್ಟ್ರೀಮ್ ಆಗಿತ್ತು. ದೇಶ ಮಾತ್ರವೇ ಅಲ್ಲದೆ ವಿದೇಶಗಳಲ್ಲಿಯೂ ಸಿನಿಮಾವನ್ನು ಜನ ಮುಗಿಬಿದ್ದು ನೋಡಿದ್ದಾರೆ, ನೋಡುತ್ತಿದ್ದಾರೆ.
'ಗರುಡ ಗಮನ ವೃಷಭ ವಾಹನ' ಸಿನಿಮಾವನ್ನು ರಾಜ್ ಬಿ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ರಿಷಬ್ ಶೆಟ್ಟಿ ಹರಿಯಾಗಿಯೂ, ರಾಜ್ ಬಿ ಶೆಟ್ಟಿ ಶಿವನಾಗಿಯೂ ನಟಿಸಿದ್ದಾರೆ. ಮಂಗಳಾದೇವಿಯಲ್ಲಿ ನಡೆವ ಒಂದು ಗ್ಯಾಂಗ್‌ಸ್ಟರ್ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾವನ್ನು ರಕ್ಷಿತ್ ಶೆಟ್ಟಿ ಪ್ರೆಸೆಂಟ್ ಮಾಡಿದ್ದಾರೆ.