ಒಟಿಟಿಯಲ್ಲಿ 'ಅನಿಮಲ್' ಬಿಗ್ ಟ್ವಿಸ್ಟ್: ನಿಮ್ಮ ತಾಳ್ಮೆಗೆ ದೊಡ್ಡ ಸವಾಲು!
ಜವಾನ್ ಸಿನಿಮಾ ನಂತರ ಬಾಲಿವುಡ್‌ನಲ್ಲಿ ದಾಖಲೆ ಬರೆಯುತ್ತಿರುವ ಚಿತ್ರ, ರಣಣಬೀರ್ ಕಪೂರ್, ರಶ್ಮಿಕಾ ಮಂದಣ್ಣ ಮತ್ತು ಬಾಬಿ ಡಿಯೋಲ್ ಅವರ 'ಅನಿಮಲ್'. ಈ ಸಿನಿಮಾ ಬಿಡುಗಡೆಯಾದಾಗಿನಿಂದ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಲೇ ಇದೆ. ಈಗಾಗಲೇ ವಿಶ್ವಾದ್ಯಂತ 600 ಕೋಟಿ ಗಳಿಸಿದ್ದು, ಸನ್ನಿ ಡಿಯೋಲ್ ಅವರ 'ಗದರ್ 2' ಕಲೆಕ್ಷನ್ ದಾಖಲೆಯನನ್ನೂ ಮೀರಿಸಿದೆ.
ಸಿನಿಮಾದಲ್ಲಿ ಸಕತ್ ವೈಲೆಂಟ್ ಮತ್ತು ಬೋಲ್ಡ್ ದೃಶ್ಯಗಳು ಹೇರಳವಾಗಿದ್ದವು. ಇದು ಸಾಕಷ್ಟು ಟೀಕೆಗಳಿಗೂ ಕಾರಣವಾಗಿತ್ತು. ಆದರೆ, ಇತ್ತೀಚಿನ ವರದಿಗಳ ಪ್ರಕಾರ, 'ಅನಿಮಲ್' ಶೀಘ್ರದಲ್ಲೇ ಕೆಲವು ಕಟ್ ಮಾಡಿರದ ದೃಶ್ಯಗಳೊಂದಿಗೆ ಒಟಿಟಿಗೆ ಕಾಲಿಡಲಿದೆ. ಇದು ಸಂದೀಪ್ ರೆಡ್ಡಿ ವಂಗಾ ಅವರ ಅಭಿಮಾನಿಗಳಲ್ಲಿ ಸಕತ್ ಖುಷಿಗೆ ಕಾರಣವಾಗಿದೆ.

ನೆಟ್‌ಫ್ಲಿಕ್ಸ್‌ನಲ್ಲಿ 'ಅನಿಮಲ್' ಬಿಡುಗಡೆ
ವರದಿಯ ಪ್ರಕಾರ, ರಣಬೀರ್ ಕಪೂರ್ ಅಭಿನಯದ ಚಿತ್ರವು ಜನವರಿ 2024 ರಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ಜನವರಿ 14 ಮತ್ತು 15 ಕ್ಕೆ ಸ್ಟ್ರೀಮಿಂಗ್ ಆಗುವ ಸಾಧ್ಯತೆಯಿದೆ. 2023ರ ಡಿಸೆಂಬರ್ 1 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಅನಿಮಲ್ ಸಿನಿಮಾ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಭಾರಿ ಮೊತ್ತಕ್ಕೆ ಖರೀದಿಸಿದೆ.
ಕತ್ತರಿ ಹಾಕದ ದೃಶ್ಯಗಳೊಂದಿಗೆ 'ಅನಿಮಲ್' ಸ್ಟ್ರೀಮಿಂಗ್
ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ, ತ್ರಿಪ್ತಿ ಧಿಮ್ರಿ, ಅನಿಲ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದಲ್ಲಿ ಸಾಕಷ್ಟು ಹಿಂಸಾಚಾರವಿತ್ತು. ಕುಟುಂಬ ಸಮೇತರಾಗಿ ನೋಡಕು ಸಾದ್ಯವಾದಷ್ಟು ಬೋಲ್ಡ್ ಸೀನ್‌ಗಳಿದ್ದವು. ಈಗ ಅದಕ್ಕೆ ಮತ್ತಷ್ಟು ಕತ್ತರಿ ಪ್ರಯೋಗವಾಗದ ಮತ್ತು ಪ್ರೇಕ್ಷಕರು ಚಿತ್ರಮಂದಿರಗಳಲ್ಲಿ ನೋಡದ ಕೆಲವು ಡಿಲೀಟೆಡ್ ದೃಶ್ಯಗಳೊಂದಿಗೆ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ ಎಂದು ವರದಿಯಾಗಿದೆ.

ಮತ್ತಷ್ಟು ತಾಳ್ಮೆ ಪರೀಕ್ಷಿಸಲಿದೆ 'ಅನಿಮಲ್'!
'ಅನಿಮಲ್' ಸಿನಿಮಾ ಈಗಾಗಲೇ ಮೂರೂವರೆ ಗಂಟೆ ಇದ್ದು ಜನರ ತಾಳ್ಮೆ ಪರೀಕ್ಷಿಸಿದೆ. ಹಲವು ಮಂದಿ ಸಿನಿಮಾ ತುಂಬಾ ಉದ್ದವಾಯಿತು ಎಂದು ಆರೋಪಿಸಿದ್ದರು. ಆದರೆ, ಈಗ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿರುವ ಸಿನಿಮಾ ಮತ್ತಷ್ಟು ಸುದೀರ್ಘವಾಗಿರಲಿದೆ. ಹೌದು, ಥೀಯೇಟರ್‌ಗಳಲ್ಲಿಯೇ ಉದ್ದವಾಯಿತು ಎಂದು ಜನ ಹೇಳುತ್ತಿದ್ದರು.
ಈಗ ಒಟಿಟಿಯಲ್ಲಿಯೂ ಕೂಡ 'ಅನಿಮಲ್' ಸುಮಾರು 3 ಗಂಟೆ 51 ನಿಮಿಷಗಳು ಇದಲಿದೆ. ಅಂದರೆ ಬರೋಬ್ಬರಿ ನಾಲ್ಕು ಗಂಟೆ. ಆದರೆ, ಥಿಯೇಟರ್‌ನಂತೆ ಇಲ್ಲಿ ನಾವು ಇಷದಟು ಸಮಯ ಕಳೆಯಬೇಕಿಲ್ಲ. ಈಗಾಗಲೇ ಸಿನಿಮಾದ ಹಾಡುಗಳನ್ನು ನೋಡಿರುವ ಕಾರಣ ಫಾರ್ವರ್ಡ್ ಮಾಡಿಕೊಂಡು ನೋಡಬಹುದು. ಜೊತೆಗೆ ಟೈಮ್ ಸ್ಫೀಡ್ ಜಾಸ್ತಿ ಮಾಡುವ ಆಯ್ಕೆ ಕೂಡ ಇದೆ.
ಅನಿಮಲ್‌ನಲ್ಲಿ ರಣಬೀರ್ ಕಪೂರ್ ಮತ್ತು ಬಾಬಿ ಡಿಯೋಲ್ ಕಿಸ್ ಸೀನ್!
ಈ ಹಿಂದೆ ನ್ಯೂಸ್ 18 ಜೊತೆ ಮಾತನಾಡಿದ ಬಾಬಿ ಡಿಯೋಲ್, 'ಅನಿಮಲ್' ಚಿತ್ರದಲ್ಲಿ ರಣಬೀರ್ ಕಪೂರ್ ಜೊತೆ ಕಿಸ್ ಸೀನ್ ಇದ್ದ ಬಗ್ಗೆ ಹೇಳಿದ್ದರು. ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಇಬ್ಬರು ನಡುವೆ ಕಿಸ್ ಸೀನ್ ಇತ್ತು. ಕಿಸ್ ಆದ ಬಳಿಕ ರಣಬೀರ್ ಕಪೂರ್, ಖಳನಾಯಕನ್ಉ ಕೊಲ್ಲುತ್ತಾರೆ ಎಂದು ನಿರ್ದೇಶಕರು ಹೇಳಿದ್ದರು ಎಂದು ತಿಳಿಸಿದ್ದರು.
ಇನ್ನು, ಚಿತ್ರದ ಹಲವು ಬೋಲ್ಡ್ ದೃಶ್ಯಗಳಿಗೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಕತ್ತರಿ ಪ್ರಯೋಗ ಮಾಡಿದೆ. ಅದರಲ್ಲಿ ನಟ ರಣಬೀರ್ ಕಪೂರ್ ಮತ್ತು ನಟಿ ತ್ರಿಪ್ತಿ ಧಿಮ್ರಿ ನಡುವಿನ ಇಂಟಿಮೇಟ್ ಸೀನ್ ಬಳಿಕ ಇರುವ ದೃಶ್ಯಗಳಲ್ಲಿ ಹಲವು ಸೀನ್‌ಗಳಿಗೆ ಕತ್ತರಿ ಹಾಕಲಾಗಿದೆ. ಅದನ್ನು ಕೂಡ ಒಟಿಟಿಯಲ್ಲಿ ನೋಡಬಹುದು. ಇನ್ನು, ಸಿನಿಮಾಗೆ 'ವಯಸ್ಕರಿಗೆ ಮಾತ್ರ' ಪ್ರಮಾಣಪತ್ರ ಸಿಕ್ಕಿದೆ.


Click it and Unblock the Notifications











