ರಂಜನಿ ರಾಘವನ್ ಅಭಿಮಾನಿಗಳಿಗೆ ಡಬಲ್ ಸರ್ಪ್ರೈಸ್!

By ಪ್ರಿಯಾ ದೊರೆ

ನಟಿ ರಂಜಿನಿ ರಾಘವನ್ ತುಂಬಾ ಖುಷಿ ಮೂಡಿನಲ್ಲಿದ್ದಾರೆ. ಅವರ ಅಭಿಮಾನಿಗಳಿಗೆ ಡಬಲ್ ಧಮಾಕ ಕೂಡ ಸಿಕ್ಕಿದೆ. ಕೇವಲ ಧಾರಾವಾಹಿಯಲ್ಲಿ ರಂಜನಿಯನ್ನು ನೋಡುತ್ತಿದ್ದ ಅಭಿಮಾನಿಗಳು ಇನ್ನು ಮುಂದೆ ಸಿನಿಮಾದಲ್ಲೂ ನೋಡಬಹುದು.

ನಟಿ ರಂಜನಿ ರಾಘವನ್ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಿದ್ದಾರೆ. ರಂಜನಿ ಅಭಿನಯದ ಸಿನಿಮಾಗಳು ರಿಲೀಸ್‌ಗೂ ರೆಡಿಯಾಗಿವೆ.

ರಂಜನಿ ರಾಘವನ್ ಸಾಹಿತ್ಯ, ಕಲೆಯ ವಾತಾವರಣದಲ್ಲಿ ಹುಟ್ಟಿ ಬೆಳೆದವರು. ಕಲೆ ರಂಜನಿ ಅವರ ರಕ್ತದಲ್ಲೇ ಇದ್ದಿದ್ದರಿಂದ ನಟನೆಯಷ್ಟೇ ಅಲ್ಲದೇ, ಡ್ಯಾನ್ಸ್, ಸಾಹಿತ್ಯದಲ್ಲೂ ಸಾಧನೆ ಮಾಡಿದ್ದಾರೆ. ಹಾಗಾಗಿಯೇ ಸಾಹಿತ್ಯ ಹಾಗೂ ಕಲಾ ಲೋಕದಲ್ಲಿ ಮಿಂಚುತ್ತಿದ್ದಾರೆ.

ಸಣ್ಣ ಪಾತ್ರದ ಮೂಲಕ ನಟನೆಗೆ ಬಂದ ನಟಿ!

ಸಣ್ಣ ಪಾತ್ರದ ಮೂಲಕ ನಟನೆಗೆ ಬಂದ ನಟಿ!

ಬೆಂಗಳೂರಿನಲ್ಲಿ ವಾಸವಿರುವ ರಂಜನಿ ನಾಗವೇಣಿ ಎಂಬ ಚಿಕ್ಕ ಪಾತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆದಾದ ಬಳಿಕ 'ಆಕಾಶ ದೀಪಾ' ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ರಂಜನಿ 'ಪುಟ್ಟಗೌರಿ' ಪಾತ್ರದ ಮೂಲಕ ಜನತೆಗೆ ಪರಿಚಯವಾದರು. ಈ ಧಾರಾವಾಹಿ ಬಹಳ ಹೆಸರು ತಂದುಕೊಟ್ಟಿತು. ಅಷ್ಟೇ ಅಲ್ಲದೇ, 'ಪುಟ್ಟಗೌರಿ' ಧಾರಾವಾಹಿ ಮುಗಿದ ಮೇಲೆ ಸಿನಿಮಾಗಳಲ್ಲಿ ನಟಿಸಿದರು.

ಕಥೆ ಬರೆದು ಧಾರಾವಾಹಿ ನಿರ್ಮಾಣ!

ಕಥೆ ಬರೆದು ಧಾರಾವಾಹಿ ನಿರ್ಮಾಣ!

'ಪುಟ್ಟಗೌರಿ' ಧಾರಾವಾಹಿಯ ಬಳಿಕ ರಂಜನಿ ರಾಘವನ್ ಅವರು ಸುಮ್ಮನೆ ಕೂರದೇ, ಕ್ರಿಯೇಟಿವ್ ಆಗಿ ಕಥೆ ಬರೆದರು. ಇಷ್ಟ ದೇವತೆ ಎಂಬ ಧಾರಾವಾಹಿಯ ಕಥೆ ಬರೆದು ಡೈರೆಕ್ಟ್ ಕೂಡ ಮಾಡಿದರು. ಇದಾದ ಬಳಿಕ ಸಿನಿಮಾದಲ್ಲಿ ಉತ್ತಮ ಚಾನ್ಸ್ ಸಿಕ್ಕಿತು. ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಿಂದ ಬಿಕಾಂ ಮುಗಿಸಿ, ನಂತರ ಎಂಬಿಎ ಮಾಡಿರುವ ರಂಜನಿ ಒಬ್ಬ ಸೃಜನಶೀಲ ಬರಹಗಾರ್ತಿ ಕೂಡ. 'ಕತೆ ಡಬ್ಬಿ' ಎಂಬ ಪುಸ್ತಕವನ್ನು ಬರೆದಿದ್ದಾರೆ. ಈ ಮೂಲಕ ರಂಜನಿ ಅವರು ಇತರೆ ನಟಿಯರಿಗಿಂತ ಡಿಫರೆಂಟ್ ಆಗಿ ಗುರುತಿಸಿಕೊಂಡಿದ್ದಾರೆ.

ಸಿನಿಮಾಗಳಲ್ಲೂ ಸಕ್ರಿಯರಾಗಿರುವ ರಂಜನಿ!

ಸಿನಿಮಾಗಳಲ್ಲೂ ಸಕ್ರಿಯರಾಗಿರುವ ರಂಜನಿ!

ಸಿನಿಮಾಗಳಲ್ಲೂ ನಟಿಸುತ್ತಿರುವ ರಂಜನಿ, ಈಗಾಗಲೇ ರಾಜಹಂಸ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಬಳಿಕ ಸೂಫಿ ಸಿನಿಮಾದಲ್ಲೂ ನಟಿಸಿದ್ದಾರೆ. ಇನ್ನು ದಿಗಂತ್ ಅಭಿನಯದ 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಸಿನಿಮಾದಲ್ಲೂ ಬಣ್ಣ ಹಚ್ಚಿದ್ದಾರೆ. ಜೊತೆಗೆ 'ಟಕ್ಕರ್' ಸಿನಿಮಾದಲ್ಲೂ ನಟಿಸಿದ್ದು, ಇವರೆಡೂ ಚಿತ್ರಗಳು ರಿಲೀಸ್ ಆಗಿದ್ದವು. ಇದೀಗ ಇವೆರಡೂ ಸಿನಿಮಾಗಳನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳ ಬಹುದು.

ಒಟಿಟಿಯಲ್ಲಿ ರಂಜನಿ ರಾಘವನ್!

ಒಟಿಟಿಯಲ್ಲಿ ರಂಜನಿ ರಾಘವನ್!

ರಂಜನಿ ರಾಘವನ್ ನಟಿಸಿದ 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಹಾಗೂ 'ಟಕ್ಕರ್' ಸಿನಿಮಾಗಳು ಒಟ್ಟಿಗೆ ಒಟಿಟಿಯಲ್ಲಿ ಇಂದು ರಿಲೀಸ್ ಆಗಿವೆ. ಅಮೆಜಾನ್ ಪ್ರೈಮ್‌ನಲ್ಲಿ ಈ ಎರಡೂ ಸಿನಿಮಾಗಳು ಸ್ಟ್ರೀಮ್ ಆಗುತ್ತಿವೆ. ಇದು ರಂಜನಿ ಅವರಿಗೂ ಡಬಲ್ ಸಂಭ್ರಮವಾಗಿದ್ದು, ಅವರ ಅಭಿಮಾನಿಗಳಿಗೂ ಸರ್‌ಪ್ರೈಸ್ ಆಗಿದೆ. ಈ ಸಂತಸವನ್ನು ಸೋಶಿಯಲ್ ಮೀಡಿಯಾದಲ್ಲಿ ಸ್ವತಃ ರಂಜನಿ ಅವರೇ ಹಂಚಿಕೊಂಡಿದ್ದಾರೆ. "ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ರಂಜನಿ ರಾಘವನ್ ಅಂತ ಟೈಪ್ ಸರ್ಚ್ ಕೊಟ್ಟರೆ ಎರಡೂ ಸಿನಿಮಾಗಳು ಬರುತ್ತೆ. ಇಂತಹ ಒಟಿಟಿ ಪ್ಲಾಟ್ ಫಾರ್ಮ್ ನಲ್ಲಿ ನನ್ನ ಸಿನಿಮಾಗಳು ಸ್ಟ್ರೀಮ್ ಆಗುತ್ತಿರೋದನ್ನ ನೋಡಿಕೊಳ್ಳೋಕೆ ಏನೋ ಒಂಥರಾ ಖುಷಿ ಕೊಡುತ್ತೆ ಕಣ್ರಿ" ಎಂದು ಇನ್‌ಸ್ಟಾಗ್ರಾಂನಲ್ಲಿ ಸ್ಟೇಟಸ್ ಹಾಕಿ ಸಂತಸ ಹಂಚಿಕೊಂಡಿದ್ದಾರೆ.

More from Filmibeat

English summary
Ranjani Raghavan, Puttagowri Maduve, Ranjani Raghavan Serial, Actress Ranjani Raghavan, Ranjani Raghavan Movies In Amazon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X