Thamma OTT: ರಶ್ಮಿಕಾ ನಟನೆಯ ಸಿನಿಮಾ ದಿಢೀರ್ ಓಟಿಟಿಗೆ ಬಂತು; ಟ್ವಿಸ್ಟ್ ಏನಂದ್ರೆ?

ಕೊಡಗಿನ ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್ ಅಂಗಳದಲ್ಲಿ ಕೂಡ ಕಮಾಲ್ ಮಾಡ್ತಿದ್ದಾರೆ. ಸ್ಟಾರ್ ನಟರ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಪಡೆಯುತ್ತಿದ್ದಾರೆ. ಆಕೆ ನಟಿಸುವ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡ್ತಿವೆ. ಇದೀಗ 'ಥಮ್ಮಾ' ಸಿನಿಮಾ ದಿಢೀರ್ ಓಟಿಟಿಗೆ ಬಂದಿದೆ.

ಆದಿತ್ಯ ಸರ್ಪಾಟಿದಾರ್ ನಿರ್ದೇಶನದ ರೊಮ್ಯಾಂಟಿಕ್ ಕಾಮಿಡಿ ಹಾರರ್ ಸಿನಿಮಾ 'ಥಮ್ಮಾ' ಒಂದೂವರೆ ತಿಂಗಳ ಹಿಂದೆ ತೆರೆಗೆ ಬಂದಿತ್ತು. ರಿಷಬ್ ಶೆಟ್ಟಿ 'ಕಾಂತಾರ-1' ಎದುರು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು. 157 ಕೋಟಿ ನೆಟ್ ಕಲೆಕ್ಷನ್ ಸೇರಿದಂತೆ ಒಟ್ಟು 211 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಹೇಳಲಾಗ್ತಿದೆ. ಇದೀಗ ಸಿನಿಮಾ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗ್ತಿದೆ.

Rashmika Mandanna s Thamma Hits OTT After 211 Crore Box Office Run

'ಥಮ್ಮಾ' ಸಿನಿಮಾ ಪ್ರೈಂ ವೀಡಿಯೋಗೆ ಬಂದಿರುವುದು ನಿಜ. ಆದರೆ ಎಲ್ಲಾ ಚಂದಾದಾರರು ವೀಕ್ಷಿಸಲು ಸಾಧ್ಯವಿಲ್ಲ. 349 ರೂಪಾಯಿ ಪಾವತಿಸಿ ಸದ್ಯಕ್ಕೆ ಓಟಿಟಿಯಲ್ಲಿ ಸಿನಿಮಾ ನೋಡಬಹುದು. ಡಿಸೆಂಬರ್ 16ರ ಬಳಿಕ ಎಲ್ಲಾ ಚಂದಾದಾರರು ವೀಕ್ಷಿಸಲು ಅವಕಾಶ ಸಿಗುವ ಸಾಧ್ಯತೆಯಿದೆ. ಚಿತ್ರದಲ್ಲಿ ಆಯುಷ್ಮಾನ್ ಖುರಾನ ಜೊತೆ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಅಕ್ಟೋಬರ್ 21ರಂದು ಸಿನಿಮಾ ಬಿಡುಗಡೆ ಆಗಿತ್ತು.

ಜವಾಜುದ್ದಿನ್ ಸಿದ್ದಿಕಿ, ಪರೇಶ್ ರಾವಲ್, ಅಂಕಿತ್ ಮೋಹನ್, ಗೀತಾ ಅಗರ್‌ವಾಲ್ ಶರ್ಮಾ, ಫೈಸಲ್ ಮಲೀಕ್ ಚಿತ್ರದ ತಾರಾಗಣದಲ್ಲಿದ್ದಾರೆ. ಇನ್ನುಳಿದಂತೆ ನೋರಾ ಫತೇಹಿ, ಮಲೈಕಾ ಅರೋರಾ, ಸತ್ಯರಾಜ್, ವರುಣ್ ಧವನ್ ಚಿತ್ರದಲ್ಲಿ ಅತಿಥಿ ಪಾತ್ರಗಳಲ್ಲಿ ಬಂದು ಹೋಗುತ್ತಾರೆ.

Rashmika Mandanna s Thamma Hits OTT After 211 Crore Box Office Run

ಮ್ಯಾಡಾಕ್ ಫಿಲ್ಮ್ಸ್ ಸಂಸ್ಥೆಯ ಹಾರರ್ ಕಾಮಿಡಿ ಸರಣಿ ಸಿನಿಮಾಗಳ ಸಾಲಿಗೆ ಸೇರುವ ಸಿನಿಮಾ 'ಥಮ್ಮಾ'. ಒಬ್ಬ ಪತ್ರಕರ್ತನ ಸುತ್ತಾ ಈ ಸಿನಿಮಾ ಕಥೆ ಸುತ್ತುತ್ತದೆ. ಚಿತ್ರದಲ್ಲಿ ರಶ್ಮಿಕಾಗೆ ಒಂದೊಳ್ಳೆ ಪಾತ್ರ ಸಿಕ್ಕಿತ್ತು. ವಿಭಿನ್ನ ಅವತಾರದಲ್ಲಿ ಕೊಡಗಿನ ಸುಂದರಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಆಕೆಯ ಖಾತೆಗೆ ಮತ್ತೊಂದು ಹಿಟ್ ಸೇರಿಕೊಂಡಂತಾಗಿದೆ.

'ಥಮ್ಮಾ' ಚಿತ್ರ ಕಥೆ ಏನು ಅಂದ್ರೆ? ದೆಹಲಿ ಮೂಲದ ಪತ್ರಕರ್ತ ಅಲೋಕ್ ಗೋಯಲ್ (ಆಯುಷ್ಮಾನ್ ಖುರಾನಾ) ತನ್ನ ಸಹೋದ್ಯೋಗಿಗಳ ಜೊತೆ ಒಂದು ಕಾರ್ಯಾಚರಣೆಗಾಗಿ ಕಾಡಿಗೆ ಹೋಗುತ್ತಾನೆ. ಕರಡಿಯೊಂದು ಆತನ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತದೆ. ಆದರೆ ಬೇತಾಳ ಜನಾಂಗದ ತಡಕಾ (ರಶ್ಮಿಕಾ ಮಂದಣ್ಣ) ಅವನನ್ನು ರಕ್ಷಿಸುತ್ತಾಳೆ. ಮುಂದೆ ಇಬ್ಬರ ನಡುವೆ ಪ್ರೀತಿ ಹುಟ್ಟುತ್ತದೆ. ತಡಕಾ ಕಾರಣದಿಂದ ಅಲೋಕ್‌ ಜೀವನದಲ್ಲಿ ಏನೆಲ್ಲಾ ಆಗುತ್ತದೆ? ಯಾವೆಲ್ಲಾ ಸಮಸ್ಯೆಗಳಲ್ಲಿ ಸಿಲುಕುತ್ತಾನೆ. ಅಷ್ಟಕ್ಕೂ ಕಥೆಗೆ ತಿರುವು ಕೊಡುವ ಯಕ್ಷಸನ್ (ನವಾಜುದ್ದೀನ್ ಸಿದ್ದಿಕಿ) ಯಾರು? ತಡಕಾಳಿಗೂ ಆತನಿಗೂ ಏನು ಸಂಬಂಧ? ಇದಕ್ಕೆಲ್ಲಾ ಉತ್ತರ ಬೇಕು ಅಂದ್ರೆ ನೀವು 'ಥಮ್ಮಾ' ಸಿನಿಮಾ ನೋಡಬೇಕು.

'ಥಮ್ಮಾ' ಕಥೆ ಚೆನ್ನಾಗಿದ್ದರೂ ಚಿತ್ರಕಥೆ ಕೈಕೊಟ್ಟು ಸಿನಿಮಾ ಅಲ್ಲಲ್ಲಿ ಬೋರ್ ಹೊಡೆಸುತ್ತದೆ. ಛಾಯಾಗ್ರಹಣ, ಗ್ರಾಫಿಕ್ಸ್ ಎಲ್ಲವೂ ಚೆನ್ನಾಗಿದೆ. ಆದರೆ ಎಡಿಟಿಂಗ್ ಇನ್ನಷ್ಟು ಹರಿತವಾಗಿದ್ದು ಒಂದಷ್ಟು ದೃಶ್ಯಗಳಿಗೆ ಕತ್ತರಿ ಹಾಕಬೇಕಿತ್ತಯ. ಅದೆಲ್ಲಾ ಏನೇ ಇದ್ದರೂ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಕ್ಸಸ್ ಕಂಡಿದೆ. ಈಗಾಗಲೇ ನೋಡಿದವರು, ನೋಡದವರು ಓಟಿಟಿಯಲ್ಲಿ ನೋಡಬಹುದು. 349 ರೂ. ಕೊಟ್ಟು ನೋಡಬೇಕಾ ಎಂದುಕೊಳ್ಳವವರು 15 ದಿನ ಕಾಯುವುದು ಉತ್ತಮ.

ಮ್ಯಾಡಾಕ್ ಹಾರರ್ ಕಾಮಿಡಿ ಯೂನಿವರ್ಸ್‌ನಲ್ಲಿ ಬಂದ 5 ಸಿನಿಮಾಗಳು ಗೆದ್ದಿವೆ. ಕಳೆದ ವರ್ಷ 'ಸ್ತ್ರೀ -2' ಸಿನಿಮಾ ಕೊಂಚ ಹೆಚ್ಚೇ ಸದ್ದು ಮಾಡಿತ್ತು. 800 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಇನ್ನುಳಿದಂತೆ 'ಸ್ತ್ರೀ', 'ಭೇದಿಯಾ', 'ಮುಂಜ್ಯಾ' ಸಿನಿಮಾಗಳು ಗೆಲುವಿನ ದಡ ಸೇರಿವೆ. ಬಾಕ್ಸಾಫೀಸ್ ಕೊಳ್ಳೆ ಹೊಡೆದಿವೆ. 'ಥಮ್ಮಾ' ಕೂಡ ಅದೇ ಪಟ್ಟಿ ಸೇರಿಕೊಂಡಿದೆ. ಮುಂದೆ ಈ ಸರಣಿಯಲ್ಲಿ ಮತ್ತಷ್ಟು ಸಿನಿಮಾಗಳು ಬರಲಿವೆ.

More from Filmibeat

Read more about: rashmika mandanna bollwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X