Don't Miss!
- News ಲೋಕಸಭೆ ಚುನಾವಣೆ : ಶೇ 100ರಷ್ಟು ಮತದಾನವಾದರೆ ಸಿಗಲಿದೆ ಪ್ರಶಸ್ತಿ
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- Finance ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಸೇವಾವಧಿ ವಿಸ್ತರಣೆ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವೇಶ್ಯಾಗೃಹಗಳ ಕಥನ 'ರಾತ್ರಿಯ ಯಾತ್ರಿಕ' ಕನ್ನಡ ವೆಬ್ ಸರಣಿ 'ಹಂಗಾಮಾ'ನಲ್ಲಿ ಆರಂಭ
ಹಂಗಮಾ ಡಿಜಿಟಲ್ ಮೀಡಿಯಾ ಒಡೆತನದ ಪ್ರಮುಖ ವಿಡಿಯೋ ಆನ್ ಡಿಮ್ಯಾಂಡ್ ಪ್ಲಾಟ್ಫಾರ್ಮ್ ಆಗಿರುವ ಹಂಗಮಾ ಪ್ಲೇ ಇಂದು (ಜನವರಿ 28) ಕನ್ನಡದಲ್ಲಿ ಹಂಗಾಮಾ ಒರಿಜಿನಲ್ 'ರಾತ್ರಿಯ ಯಾತ್ರಿಕ', ಎಂಬ ಹೊಸ ಕಾರ್ಯಕ್ರಮವನ್ನು ಆರಂಭಿಸಿದೆ. ಈ ಸರಣಿಯು ವೇಶ್ಯಾಗೃಹ ಅಥವಾ ರೆಡ್ ಲೈಟ್ ಏರಿಯಾಗಳೆಂದು ಗುರುತಿಸಲಾದ ಪ್ರದೇಶಗಳ 5 ವಿಭಿನ್ನ ಮತ್ತು ಚಿಂತನಶೀಲ ಕಥೆಗಳನ್ನು ಒಳಗೊಂಡಿರಲಿದೆ.
ಪ್ರತಿಯೊಂದು ಕಥೆಯು ಅಪೂರ್ಣ ಜೀವನದ ಮತ್ತು ಅನ್ವೇಷಣೆಯ ಪಾತ್ರಗಳನ್ನು ಕತೆ ಒಳಗೊಂಡಿವೆ. ಪ್ರೀತಿ, ದೈಹಿಕ ಸುಖ, ನಿರಾಶ್ರಿತರ ಕತೆಗಳನ್ನು ಒಳಗೊಂಡಿವೆ. ವೇಶ್ಯೆಯ ಮಗನೆಂದು ನಾಚಿಕೆಪಡುವ ವ್ಯಕ್ತಿಯೊಬ್ಬ ಆತ ಅತಿಯಾಗಿ ದ್ವೇಷಿಸುವ ಸ್ಥಳದಲ್ಲೇ ಹೇಗೆ ಅರಿವು ಪಡೆಯುತ್ತಾನೆ; 69 ವರ್ಷದ ವ್ಯಕ್ತಿಯೊಬ್ಬ ಹೇಗೆ ತನ್ನ ದೈಹಿಕ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಹಾತೊರೆಯುತ್ತಾನೆ ಮತ್ತು ಅದಕ್ಕಾಗಿ ಸಮಾಜದ ಬಗ್ಗೆ ಹೆದರದೆ, ನಾಚಿಕೆ ಪಡದೆ ಜೀವಿಸುತ್ತಾನೆ; ಜೈಲಿನಿಂದ ಹೊರಬಂದ ಪ್ರೇಮಿಯೊಬ್ಬ ವಾಸ್ತವಿಕತೆಯನ್ನು ಒಪ್ಪಿಕೊಂಡು ಹೇಗೆ ತನ್ನ ಹೊಸ ಬದುಕಿನ ಅಧ್ಯಾಯವನ್ನು ಪ್ರಾರಂಭಿಸುತ್ತಾನೆ; 18 ವರ್ಷ ವಯಸ್ಸಿನ ಹುಡುಗನೊಬ್ಬ ಎಲ್ಲಾ ಲೌಕಿಕ ಸುಖಗಳನ್ನು ತ್ಯಜಿಸುವ ಮೊದಲು ಏಕೆ ಒಮ್ಮೆ ದೈಹಿಕ ಸುಖ ಪಡೆಯಲು ಬಯಸುತ್ತಾನೆ; ಜನರನ್ನು ದೋಚಿ ಜೀವನ ನಡೆಸುವ ವ್ಯಕ್ತಿಯೊಬ್ಬನ ಬಳಿ ಇರುವ ಅಮೂಲ್ಯವಾದ ವಸ್ತುವೊಂದನ್ನು ಕದ್ದು ಹೋಗುವ ಸಂದರ್ಭಗಳ ರೋಚಕ ಕಥೆಗಳು ಸರಣಿಯಲ್ಲಿ ಇರಲಿವೆ. ಇಲ್ಲಿ ಬರುವ ಪ್ರತಿಯೊಂದು ಪಾತ್ರಗಳು ತಮ್ಮ ಜೀವನದಲ್ಲಿ ಮೊದಲ ಬಾರಿಗೆ 'ರೆಡ್ ಲೈಟ್' ಏರಿಯಾಗೆ ಭೇಟಿ ನೀಡುತ್ತವೆ ಮತ್ತು ಅಂತಿಮವಾಗಿ ಇಲ್ಲಿ ಸಾಂತ್ವನ ಮತ್ತು ಪರಿಹಾರವನ್ನು ಕಂಡುಕೊಳ್ಳುತ್ತವೆ.
ಆಘಾತ ತಂದ ನಿರ್ಣಯ: ವಿಜಯ್ ವಿರುದ್ಧ ಚಿತ್ರಮಂದಿರ ಮಾಲೀಕರು ತೀವ್ರ ಅಸಮಾಧಾನ
ರಾತ್ರಿ ಯಾತ್ರಿಕ ಸರಣಿ ಪ್ರದರ್ಶನವು ಸದ್ಯ ಹಂಗಮಾ ಪ್ಲೇ, ಹಂಗಾಮಾದ ವೀಡಿಯೊ ಆನ್ ಡಿಮ್ಯಾಂಡ್ ಪ್ಲಾಟ್ಫಾರ್ಮ್ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಈ ಫ್ಲಾಟ್ ಫಾರ್ಮ್ ನ ಸಂಗೀತ, ಮನರಂಜನೆ, ಚಲನಚಿತ್ರಗಳು ಮುಂತಾದ ವಿಭಾಗಗಳಲ್ಲಿ 350 ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳು ಮತ್ತು 930 ಕ್ಕೂ ಹೆಚ್ಚು ಕನ್ನಡದ ಸಣ್ಣ ವೀಡಿಯೊಗಳು ವೀಕ್ಷಣೆಗೆ ಲಭ್ಯವಿವೆ. ಎಂಎಕ್ಸ್ ಪ್ಲೇಯರ್, ಏರ್ಟೆಲ್ ಎಕ್ಸ್ಸ್ಟ್ರೀಮ್ ಆ್ಯಪ್, ವಿ ಮೂವೀಸ್ ಮತ್ತು ಟಿವಿ, ಅಮೆಜಾನ್ ಫೈರ್ ಟಿವಿ ಸ್ಟಿಕ್, ಟಾಟಾ ಸ್ಕೈ ಬಿಂಜ್, ಡಿಶ್ಎಸ್ಎಂಆರ್ಟಿ ಸ್ಟಿಕ್, ಡಿ 2 ಹೆಚ್ ಸ್ಟ್ರೀಮ್, ಡಿಶ್ಎಸ್ಎಂಆರ್ಟಿ ಹಬ್, ಫ್ಲಿಪ್ ಕಾರ್ಟ್ ವಿಡಿಯೋ, ಸೋನಿ ಲೈವ್, ಐಎಸ್ಪಿಗಳಾದ ಮೇಘಬೆಲಾ ಬ್ರಾಡ್ಬ್ಯಾಂಡ್, ಅಲೈಯನ್ಸ್ ಬ್ರಾಡ್ಬ್ಯಾಂಡ್, ಎಸಿಟಿ ಫೈಬರ್ನೆಟ್ ಮತ್ತು ನೆಟ್ಪ್ಲಸ್, ಮತ್ತು ಸ್ಮಾರ್ಟ್ ಟಿವಿಗಳಾದ ಟಿಸಿಎಲ್, ಒನ್ಪ್ಲಸ್ ಟಿವಿ, ಎಲ್ ಜಿ, ಸೋನಿ ಬ್ರಾವಿಯಾ, ಸಿವಿಟಿಇ, ತೋಷಿಬಾ ಮತ್ತು ಕ್ಲೌಡ್ವಾಕರ್ ಗಳಲ್ಲಿ ಇದನ್ನು ವೀಕ್ಷಿಸಬಹುದು. ಹೆಚ್ಚುವರಿಯಾಗಿ, ಶಿಯೋಮಿಯೊಂದಿಗಿನ ಹಂಗಾಮಾದ ಒಪ್ಪಂದದಿಂದಾಗಿ ಗ್ರಾಹಕರಿಗೆ ಮಿ ಟಿವಿಯಲ್ಲಿ ಹಂಗಮಾ ಪ್ಲೇ ಮೂಲಕವೂ ಈ ಕಾರ್ಯಕ್ರಮ ವೀಕ್ಷಣೆಗೆ ಲಭ್ಯವಾಗಲಿದೆ.
ಕಾರ್ಯಕ್ರಮದ ಕುರಿತು ಮಾತನಾಡಿದ ಹಂಗಮಾ ಡಿಜಿಟಲ್ ಮೀಡಿಯಾದ ಸಿಒಒ ಸಿದ್ಧಾರ್ಥ ರಾಯ್, "ಕಳೆದ ಕೆಲವು ವರ್ಷಗಳಲ್ಲಿ, ಸ್ಥಳೀಯ ಭಾಷೆಗಳಲ್ಲಿ ಮನರಂಜನೆ, ಕಾರ್ಯಕ್ರಮ ಮತ್ತು ಕತೆಗಳ ನಿರೂಪಣೆಗೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ರಾತ್ರಿಯ ಯಾತ್ರಿಕ ಮನುಷ್ಯನ ಭಾವನೆಗಳನ್ನು ಬಿಂಬಿಸುವ ವಿಶಿಷ್ಟವಾದ ಐದು ಕಥೆಗಳನ್ನು ಒಳಗೊಂಡಿದೆ. ಇದನ್ನು ವಿಶ್ವಾದ್ಯಂತ ಇರುವ ಕನ್ನಡ-ಮಾತನಾಡುವ ಪ್ರೇಕ್ಷಕರು ಮೆಚ್ಚುತ್ತಾರೆ ಎಂಬ ಭರವಸೆ ಇದೆ. ಈ ವರ್ಷ ಕನ್ನಡದಲ್ಲಿ ಹೆಚ್ಚಿನ ಶೋ, ಚಲನಚಿತ್ರ ಹಾಗೂ ಕಿರುಚಿತ್ರ ಸೇರಿದಂತೆ ಸಣ್ಣ ವೀಡಿಯೋಗಳನ್ನು ಬಿಡುಗಡೆ ಮಾಡುವ ಉದ್ದೇಶ ಹಾಕಿಕೊಂಡಿದ್ದು ನಮ್ಮ ಬಳಕೆದಾರರ ಸಂಖ್ಯೆಯನ್ನು ಎರಡು ಪಟ್ಟು(2x) ಹೆಚ್ಚಿಸುವ ಗುರಿ ಹೊಂದಿದ್ದೇವೆ" ಎಂದರು.
ಬಂಧನ ಭೀತಿಯಲ್ಲಿ 'ತಾಂಡವ್' ವೆಬ್ ಸರಣಿ ನಿರ್ಮಾಪಕ, ನಿರ್ದೇಶಕ
ಸರಣಿಯ ಬಗ್ಗೆ ಮಾತನಾಡಿದ ಅನಿಲ್ ವಿ ಕುಮಾರ್ ಪ್ರೊಡಕ್ಷನ್ ನ ಸಂಸ್ಥಾಪಕ ಅನಿಲ್ ವಿ ಕುಮಾರ್, "ಈ ಸರಣಿಯಲ್ಲಿ ಒಂದು ಈವರೆಗೆ ಎಲ್ಲೂ ಕಾಣಿಸದ ವಿಭಿನ್ನ ಪರಿಕಲ್ಪನೆಯಿದೆ. ಗಟ್ಟಿಯಾದ ಮತ್ತು ಸೂಕ್ಷ್ಮ ಪಾತ್ರಗಳ ಮೂಲಕ ರೆಡ್ ಲೈಟ್ ಏರಿಯಾಗಳ ಜನರ ಭಾವನೆಯನ್ನು ಎತ್ತಿ ತೋರಿಸುತ್ತದೆ. ಆಯಾ ಪಾತ್ರಗಳಿಗೆ ಜೀವತುಂಬಿದ ನಟರು ಮತ್ತು ಸಿಬ್ಬಂದಿಗಳ ಜೊತೆ ಕೆಲಸ ಮಾಡಿದ್ದಕ್ಕೆ ನನಗೆ ಸಂತೋಷವಾಗಿದೆ. ಪ್ರೇಕ್ಷಕರಿಂದ ಬರಲಿರುವ ಪ್ರತಿಕ್ರಿಯೆಗಳನ್ನು ನಾನು ಎದುರು ನೋಡುತ್ತಿದ್ದೇನೆ" ಎಂದರು.
ಈ ಸರಣಿಯಲ್ಲಿ ಸುಧೀರ್ ಪಾಂಡೆ, ಅಂಜು ಮಹೇಂದ್ರು, ಇಕ್ಬಾಲ್ ಖಾನ್, ಬರ್ಖಾ ಸೇನ್ ಗುಪ್ತಾ, ಪರಾಗ್ ತ್ಯಾಗಿ, ಅವಿನಾಶ್ ಮುಖರ್ಜಿ, ಶೈನಿ ದೋಶಿ, ರೆನೀ ಧ್ಯಾನಿ, ಮಾನ್ಸಿ ಶ್ರೀವಾಸ್ತವ, ರೇಹ್ನಾ ಪಂಡಿತ್, ಆಕಾಶ್ದೀಪ್ ಅರೋರಾ, ಸುಪ್ರಿಯಾ ಶುಕ್ರಾ ಮತ್ತು ಇಂದ್ರೇಶ್ ಮಲಿಕ್ ಅಭಿನಯಿಸಿದ್ದಾರೆ. ಹಂಗಮಾ ಡಿಜಿಟಲ್ ಮೀಡಿಯಾ ಸಹಯೋಗದೊಂದಿಗೆ ಅನಿಲ್ ವಿ ಕುಮಾರ್ ಪ್ರೊಡಕ್ಷನ್ಸ್ ನಿರ್ಮಿಸಿದ ಈ ಕಾರ್ಯಕ್ರಮದ ಎಲ್ಲಾ ಸಂಚಿಕೆಗಳನ್ನು ಅನಿಲ್ ವಿ ಕುಮಾರ್ ನಿರ್ದೇಶಿಸಿದ್ದಾರೆ.