ಸಸ್ಪೆನ್ಸ್ ಥ್ರಿಲ್ಲರ್ ರವಿ ಬೋಪಣ್ಣ ಓಟಿಟಿಯಲ್ಲಿ ಬಿಡುಗಡೆ; ಯಾವ ಅಪ್ಲಿಕೇಶನ್ ನಲ್ಲಿ ಲಭ್ಯ?

ರವಿ ಬೋಪಣ್ಣ ಕಳೆದ ವರ್ಷ ಆಗಸ್ಟ್ 12ರಂದು ಬಿಡುಗಡೆಗೊಂಡಿದ್ದ ಕನ್ನಡದ ಚಿತ್ರ. ಕ್ರೇಜಿ ಸ್ಟಾರ್ ರವಿಚಂದ್ರನ್, ಕಿಚ್ಚ ಸುದೀಪ್ ಹಾಗೂ ರಾಧಿಕಾ ಕುಮಾರಸ್ವಾಮಿ ರೀತಿಯ ಸ್ಟಾರ್ಸ್ ಚಿತ್ರದಲ್ಲಿ ನಟಿಸಿದ್ದರೂ ಸಹ ಚಿತ್ರ ಬಿಡುಗಡೆಯ ಮುನ್ನವಾಗಲಿ ಅಥವಾ ಬಿಡುಗಡೆಯಾದ ನಂತರವಾಗಲಿ ಸದ್ದು ಮಾಡುವಲ್ಲಿ ಯಶಸ್ವಿಯಾಗಲಿಲ್ಲ.
ಹೌದು, ನಟ ಕಿಚ್ಚ ಸುದೀಪ್ ಸಹ ಈ ಚಿತ್ರದಲ್ಲಿ ಅತಿಥಿ ಪಾತ್ರವನ್ನು ನಿರ್ವಹಿಸಿದ್ದರು. ಲಾಯರ್ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಂಡಿದ್ದರು. ಇನ್ನು ಈ ಚಿತ್ರ 2018ರಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದ್ದ ಮಲಯಾಳಂ ಚಿತ್ರ ಜೋಸೆಫ್‌ನ ರಿಮೇಕ್ ಆಗಿದ್ದು, ಚಿತ್ರತಂಡ ಚಿತ್ರ ಬಿಡುಗಡೆಗೂ ಮುನ್ನ ಎಲ್ಲಿಯೂ ಸಹ ಈ ವಿಷಯವನ್ನು ಬಿಟ್ಟುಕೊಟ್ಟಿರಲಿಲ್ಲ.
ಚಿತ್ರದಲ್ಲಿ ನಾಯಕ ನಿವೃತ್ತ ಪೊಲೀಸ್ ತನಿಖಾಧಾರಿಯಾಗಿದ್ದು, ಪೊಲೀಸ್ ಇಲಾಖೆಯ ಕೆಲ ಪ್ರಕರಣಗಳಿಗೆ ಸಹಾಯ ಮಾಡುತ್ತಾ ಏಕಾಂಗಿ ಬದುಕು ನಡೆಸುತ್ತಾ ಮದ್ಯವ್ಯಸನಿಯಾಗಿರುತ್ತಾನೆ. ತನ್ನ ಮಾಜಿ ಪ್ರೇಯಸಿಯ ಕೊಲೆಯಾದ ಮೃತದೇಹವನ್ನು ಅತ್ಯಂತ ಕ್ರೂರ ಸ್ಥಿತಿಯಲ್ಲಿ ನೋಡಿದ್ದ ನಾಯಕ ಕುಡಿತಕ್ಕೆ ಶರಣಾಗಿರುತ್ತಾನೆ. ಇದೇ ಕಾರಣಕ್ಕೆ ತನ್ನ ಪತ್ನಿಯಿಂದಲೂ ಸಹ ದೂರಾಗಿರುತ್ತಾನೆ.
ಹೀಗೆ ದೂರಾದ ಪತ್ನಿ ಸಹ ಅಪಘಾತಕ್ಕೊಳಗಾಗಿ ಸಾವನ್ನಪ್ಪುತ್ತಾಳೆ. ಹೀಗೆ ಒಂದೆಡೆ ಪ್ರೇಯಸಿ ಕೊಲೆ ಮತ್ತೊಂದೆಡೆ ಪತ್ನಿಯ ಅನುಮಾನಾಸ್ಪದ ಸಾವು ನಾಯಕನನ್ನು ಚಿಂತಿಗೆ ದೂಡುವುದರ ಜತೆಗೆ ಪತ್ನಿಯ ಸಾವಿನ ಮೇಲಿನ ಅನುಮಾನವನ್ನು ಹೆಚ್ಚಿಸುತ್ತೆ. ಹೀಗೆ ಪತ್ನಿಯ ಸಾವಿನ ಹಿಂದೆ ಬೀಳುವ ನಾಯಕನಿಗೆ ಸಾವಿನ ಹಿಂದಿನ ಸತ್ಯ ತಿಳಿಯುತ್ತಾ ಎಂಬುದೇ ಚಿತ್ರದ ಕಥೆ.
ಹೀಗೆ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದ ರವಿ ಬೋಪಣ್ಣ ತಡವಾಗಿ ಓಟಿಟಿಗೆ ಬಂದಿದ್ದು ನಿನ್ನೆಯಿಂದ ( ಏಪ್ರಿಲ್ 15 ) ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಲಭ್ಯವಿದೆ.
ಓಟಿಟಿಯಲ್ಲಿ ಲಭ್ಯವಿರುವ ಮಲಯಾಳಂ ಥ್ರಿಲ್ಲರ್ ಚಿತ್ರಗಳು
ಕ್ರೈಮ್ ಥ್ರಿಲ್ಲರ್‌ಗಳು: ದೃಶ್ಯಂ, ದೃಶ್ಯಂ 2, ಮೆಮೊರಿಸ್, ಇಜ್ರಾ, ಅದಿರನ್, ನಾಯಟ್ಟು, ಸಿ ಯು ಸೂನ್, ಒಪ್ಪಂ, ಮುಂಬೈ ಪೊಲೀಸ್ ಹಾಗೂ ನೈಟ್ ಡ್ರೈವ್
ಹಾರರ್ ಥ್ರಿಲ್ಲರ್‌ಗಳು: ಮಣಿಚಿತ್ರತಳು, ಭಾರ್ಗವಿ ನಿಲಯಂ, ಇಜ್ರಾ, ಆಕಾಶ ಗಂಗಾ, ನೈನ್.


Click it and Unblock the Notifications











