Kaatera Vs Vikrant Rona: ಓಟಿಟಿಯಲ್ಲಿ 'ವಿಕ್ರಾಂತ್ ರೋಣ' ಗಿಂತ 'ಕಾಟೇರ' ಡಲ್ಲಾಗಿದ್ದು ಏಕೆ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಸಿನಿಮಾ ಥಿಯೇಟರ್ ಬಳಿಕ ಓಟಿಟಿಯಲ್ಲಿ ಸದ್ದು ಮಾಡ್ತಿದೆ. ಜೀ5ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಕನ್ನಡ ಸಿನಿರಸಿಕರು ಮಾತ್ರವಲ್ಲ ಪರಭಾಷಿಕರು ಸಿನಿಮಾ ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. 5 ದಿನಗಳಲ್ಲಿ ಸಿನಿಮಾ 100 ಮಿಲಿಯನ್ ನಿಮಿಷ ಸ್ಟ್ರೀಮಿಂಗ್ ಆಗಿ ಸದ್ದು ಮಾಡ್ತಿದೆ.

ಡಿಸೆಂಬರ್ 29ಕ್ಕೆ ಬಿಡುಗಡೆಯಾಗಿದ್ದ 'ಕಾಟೇರ' ಸಿನಿಮಾ ಫೆಬ್ರವರಿ 9ಕ್ಕೆ ಜೀ5ಗೆ ಎಂಟ್ರಿ ಕೊಟ್ಟಿತ್ತು. ಓಟಿಟಿಗೆ ಬಂದಮೇಲೂ ಥಿಯೇಟರ್‌ಗಳಲ್ಲಿ ಸಿನಿಮಾ ಪ್ರದರ್ಶನವಾಗುತ್ತಿದೆ. ಪ್ರೇಕ್ಷಕರು ಇಂದಿಗೂ ಥಿಯೇಟರ್‌ನಲ್ಲಿ ಸಿನಿಮಾ ನೋಡುತ್ತಿದ್ದಾರೆ. ತರುಣ್ ಸುಧೀರ್ ನಿರ್ದೇಶನ ಹಾಗೂ ದರ್ಶನ್ ನಟನೆಗೆ ಫಿದಾ ಆಗಿದ್ದಾರೆ. ಓಟಿಟಿಯಲ್ಲಿ ವೀಕ್ಷಕರು ಎಷ್ಟು ಹೊತ್ತು ಸಿನಿಮಾ ನೋಡಿದ್ದಾರೆ ಎನ್ನುವುದು ಸ್ಟ್ರೀಮಿಂಗ್ ನಿಮಿಷ ಲೆಕ್ಕಾಚಾರದಲ್ಲಿ ಗೊತ್ತಾಗುತ್ತದೆ. ಅದರಲ್ಲೂ 'ಕಾಟೇರ' ದಾಖಲೆ ಬರೆದಿದೆ ಎಂದು ಜೀ5 ಘೋಷಿಸಿದೆ.

Reason behind Sudeeeps Vikrant Rona got more streaming minutes than Darshans kaatera in zee 5

ಒಂದೂವರೆ ವರ್ಷದ ಹಿಂದೆ ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಕಂಡಿತ್ತು. ಒಂದು ತಿಂಗಳ ಅಂತರಲ್ಲಿ ಓಟಿಟಿಗೆ ಬಂದಿತ್ತು. ಜೀ5ನಲ್ಲೇ ಸಿನಿಮಾ ಸ್ಟ್ರೀಮಿಂಗ್ ಆಗಿತ್ತು. ಕೇವಲ 24 ಗಂಟೆಗಳಲ್ಲಿ 500 ಮಿಲಿಯನ್ಸ್ ಸ್ಟ್ರೀಮಿಂಗ್ ನಿಮಿಷ ವೀಕ್ಷಣೆ ಕಂಡು ಸಿನಿಮಾ ದಾಖಲೆ ಬರೆದಿತ್ತು. ಈ ವಿಚಾರವನ್ನು ಜೀ5 ಸೋಶಿಯಲ್ ಮೀಡಿಯಾದಲ್ಲಿ ಪ್ರಕಟಿಸಿತ್ತು. ಇದೀಗ ಕೆಲವರು 'ಕಾಟೇರ' ಹಾಗೂ 'ವಿಕ್ರಾಂತ್ ರೋಣ' ಸಿನಿಮಾಗಳ ಓಟಿಟಿ ಸ್ಟ್ರೀಮಿಂಗ್ ನಿಮಿಷಗಳ ಬಗ್ಗೆ ಹೋಲಿಕೆ ಚರ್ಚೆ ಶುರು ಮಾಡಿದ್ದಾರೆ. 'ಕಾಟೇರ'ಗಿಂತ 'ವಿಕ್ರಾಂತ್ ರೋಣ' ಗ್ರೇಟ್ ಎನ್ನುತ್ತಿದ್ದಾರೆ.

'ಕಾಟೇರ' ಹಾಗೂ 'ವಿಕ್ರಾಂತ್ ರೋಣ' ಎರಡೂ ಕೂಡ ಅದ್ಭುತ ಸಿನಿಮಾಗಳೇ. ಎರಡೂ ಕೂಡ ನಮ್ಮ ಕನ್ನಡ ಸಿನಿಮಾಗಳೇ. ಎರಡೂ ಚಿತ್ರವನ್ನು ಸಿನಿರಸಿಕರು ದೊಡ್ಡಮಟ್ಟದಲ್ಲಿ ಗೆಲ್ಲಿಸಿದ್ದರು. ಅದರಲ್ಲಿ ದೂಸ್ರಾ ಮಾತಿಲ್ಲ. ಆದರೆ ಖುದ್ದು ಜೀ5 ಎರಡೂ ಸಿನಿಮಾಗಳ ಸ್ಟ್ರೀಮಿಂಗ್ ನಿಮಿಷಗಳ ಲೆಕ್ಕ ಕೊಟ್ಟಿರುವುದರಿಂದ ಇದೀಗ ಭಾರೀ ಚರ್ಚೆ ಶುರುವಾಗಿದೆ. ಅಭಿಮಾನಿಗಳ ನಡುವೆಯೂ ಇದು ಚರ್ಚೆಗೆ ವೇದಿಕೆಯಾಗಿದೆ.

Reason behind Sudeeeps Vikrant Rona got more streaming minutes than Darshans kaatera in zee 5

'ಕಾಟೇರ' ಒಳ್ಳೆ ಸಿನಿಮಾ ಎನ್ನುವುದನ್ನು ಎಲ್ಲರೂ ಒಪ್ಪಲೇಬೇಕು. ಆದರೆ ಜೀ5ನಲ್ಲಿ 100 ಮಿಲಿಯನ್ ಸ್ಟ್ರೀಮಿಂಗ್ ನಿಮಿಷ ಸಾಧಿಸಲು 5 ದಿನಗಳಲ್ಲಿ ಆಗಿದ್ದೇಕೆ? ಅದೇ ಸಮಯದಲ್ಲಿ 'ವಿಕ್ರಾಂತ್ ರೋಣ' 4 ಗಂಟೆಗಳಲ್ಲಿ 500 ಮಿಲಿಯನ್ ನಿಮಿಷ ಸಾಧಿಸಿದ್ದು ಹೇಗೆ? ಎನ್ನುವ ಗೊಂದಲ ಶುರುವಾಗುವುದು ಸಹಜ. ಅದಕ್ಕೆ ಈ ಅಂಶಗಳೇ ಕಾರಣ ಇರಬಹುದು.

1. 'ವಿಕ್ರಾಂತ್ ರೋಣ' ಪ್ಯಾನ್ ಇಂಡಿಯಾ ಸಿನಿಮಾ ಎಂದು ಪ್ರಚಾರ ಮಾಡಲಾಗಿತ್ತು. ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಿತ್ತು. ಜೀ5ನಲ್ಲಿ ಇಂಗ್ಲೀಷ್ ಸಬ್‌ಟೈಟಲ್ಸ್ ಜೊತೆ ಕನ್ನಡ ವರ್ಷನ್ ರಿಲೀಸ್ ಆಗಿತ್ತು. ಹಾಗಾಗಿ ಪರಭಾಷಿಕರು ಸಿನಿಮಾ ನೋಡಿದ್ದರು. ಜಾಕ್ವೆಲಿನ್ ಫರ್ನಾಂಡಿಸ್ ಸ್ಪೆಷಲ್ ಸಾಂಗ್ ಕೂಡ ವೀಕ್ಷಕರನ್ನು ಸೆಳೆದಿರಬಹುದು. ಆದರೆ ಅಚ್ಚ ಕನ್ನಡ ಸಿನಿಮಾ 'ಕಾಟೇರ'. ಕರ್ನಾಟಕದಲ್ಲಿ ಮಾತ್ರ ಪ್ರಚಾರ ಮಾಡಿ ಸಿನಿಮಾ ಬಿಡುಗಡೆ ಮಾಡಲಾಗಿತ್ತು.

2. ಅನೂಪ್ ಭಂಡಾರಿ ನಿರ್ದೇಶನದ 'ವಿಕ್ರಾಂತ್ ರೋಣ' 2D ಜೊತೆಗೆ 3D ವರ್ಷನ್‌ಗಳಲ್ಲಿ ಬಿಡುಗಡೆ ಆಗಿತ್ತು. ಥಿಯೇಟರ್‌ನಲ್ಲಿ ಹೆಚ್ಚಿನ ಪ್ರೇಕ್ಷಕರು 3D ವರ್ಷನ್ ನೋಡಿದ್ದರು. ಹಾಗಾಗಿ ಓಟಿಟಿಯಲ್ಲಿ 2D ನೋಡಲು ಮುಗಿಬಿದ್ದಿದ್ದು ಸುಳ್ಳಲ್ಲ. ವೀವ್ಸ್ ಹೆಚ್ಚಲು ಇದು ಕೂಡ ಕಾರಣ.

3. 'ವಿಕ್ರಾಂತ್ ರೋಣ' ಚಿತ್ರಕ್ಕೆ ಥಿಯೇಟರ್‌ಗಳಲ್ಲಿ ಅದ್ಭುತ ಓಪನಿಂಗ್ ಸಿಕ್ಕಿತ್ತು. ಆದರೆ ಸಿನಿಮಾ ತೆರೆಕಂಡ ಮೂರು ದಿನಕ್ಕೆ ಪೈರಸಿ ಆಗಿ ಚಿತ್ರಕ್ಕೆ ಹಿನ್ನಡೆಯಾಗಿತ್ತು. ಥಿಯೇಟರ್‌ ಪ್ರಿಂಟ್ ಲೀಕ್‌ ಆಗಿ ವೈರಲ್ ಆಗಿತ್ತು. ಹಾಗಾಗಿ ಹೆಚ್ಚು ದಿನ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಂಡಿರಲಿಲ್ಲ. ಅದೇ ಕಾರಣಕ್ಕೆ ಓಟಿಟಿಗೆ ಬಂದ ಮೇಲೆ ಬಹುತೇಕರು ಸಿನಿಮಾ ವೀಕ್ಷಿಸಿದ್ದರು. ಆಕ್ಷನ್ ಥ್ರಿಲ್ಲರ್ ಆಗಿದ್ದರಿಂದ ಹೆಚ್ಚು ಜನರನ್ನು ಸೆಳೆದಿತ್ತು.

4. ಆಕ್ಷನ್ ಥ್ರಿಲ್ಲರ್ ಸಿನಿಮಾಗಳನ್ನು ಜನ ಓಟಿಟಿಯಲ್ಲಿ ನೋಡಲು ಬಹಳ ಜನ ಇಷ್ಟಪಡುತ್ತಾರೆ. ಸುದೀಪ್ ಕನ್ನಡ ಮಾತ್ರವಲ್ಲದೇ ಬಾಲಿವುಡ್, ಕಾಲಿವುಡ್, ಟಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಅಲ್ಲಿನ ಪ್ರೇಕ್ಷಕರಿಗೆ ಪರಿಚಿತರಾಗಿದ್ದಾರೆ. ಹಾಗಾಗಿ ಎಲ್ಲಾ ಭಾಷಿಕರು ಓಟಿಟಿಯಲ್ಲಿ ಸಿನಿಮಾ ನೋಡಿದ್ದರು.

5. 'ಕಾಟೇರ' ಚಿತ್ರವನ್ನು ಹೆಚ್ಚು ಜನ ಥಿಯೇಟರ್‌ನಲ್ಲಿ ನೋಡಿದ್ದಾರೆ. ಹಳ್ಳಿಗಳ ಕಡೆ ಜನ ಟ್ರ್ಯಾಕ್ಟರ್ ಮಾಡಿಕೊಂಡು ಬಂದು ಸಿನಿಮಾ ಕಣ್ತುಂಬಿಕೊಂಡಿದ್ದಾರೆ. ನೂರಾರು ಶೋಗಳು ಸಿನಿಮಾ ಹೌಸ್‌ಫುಲ್ ಆಗಿತ್ತು. ಬರೀ ಬುಕ್‌ಮೈ ಶೋನಲ್ಲಿ 10 ಲಕ್ಷಕ್ಕೂ ಅಧಿಕ ಟಿಕೆಟ್ ಮಾರಾಟವಾಗಿದೆ. ಹಾಗಾಗಿ 'ವಿಕ್ರಾಂತ್‌ ರೋಣ'ಗಿಂತ 'ಕಾಟೇರ'ಗೆ ಓಟಿಟಿಯಲ್ಲಿ ವೀವ್ಸ್ ಕಮ್ಮಿ ಆಗಿರಬಹುದು ಎನ್ನುವುದು ಕೆಲವರ ವಾದ.

More from Filmibeat

English summary
Is Vikrant Rona Beats Kaatera streaming record in Zee5.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X