Tagaru Palya: ಓಟಿಟಿಗೆ ಬರಲೇಯಿಲ್ಲ ಧನಂಜಯ್ ನಿರ್ಮಾಣದ 'ಟಗರುಪಲ್ಯ': ಅಷ್ಟಕ್ಕೂ ಏನಾಯ್ತು?

ಡಾಲಿ ಧನಂಜಯ್ ನಿರ್ಮಾಣದ 'ಟಗರುಪಲ್ಯ' ಸಿನಿಮಾ ಈ ವರ್ಷದ ಡೀಸೆಂಟ್ ಹಿಟ್ ಎನಿಸಿಕೊಂಡಿದೆ. ಸ್ವತಃ ನಿರ್ಮಾಪಕರೇ ಹೇಳಿರುವಂತೆ 3 ಲಕ್ಷಕ್ಕೂ ಹೆಚ್ಚು ಟಿಕೆಟ್ ಮಾರಾಟವಾಗಿದೆ. ಹೊಸ ಕಲಾವಿದರ ಚಿತ್ರಕ್ಕೆ ಈ ಮಟ್ಟಿಗಿನ ಪ್ರತಿಕ್ರಿಯೆ ಸಿಕ್ಕಿರುವುದು ವಿಶೇಷ. ಕನ್ನಡ ಸಿನಿಮಾಗಳನ್ನು ಓಟಿಟಿ ಸಂಸ್ಥೆಗಳು ಕೊಂಡುಕೊಳ್ಳುತ್ತಿಲ್ಲ ಎನ್ನುವ ಗೊಂದಲದ ನಡುವೆ 'ಟಗರುಪಲ್ಯ' ಸ್ಟ್ರೀಮಿಂಗ್‌ಗೆ ಸಿದ್ಧವಾಗಿತ್ತು.

ಅಮೇಜಾನ್ ಪ್ರೈಂನಲ್ಲಿ ಡಿಸೆಂಬರ್ 8ಕ್ಕೆ 'ಟಗರುಪಲ್ಯ' ಸಿನಿಮಾ ರಿಲೀಸ್ ಆಗಬೇಕಿತ್ತು. ಮೂರು ದಿನಗಳ ಕಳೆದರೂ ಸಿನಿಮಾ ಬಂದಿಲ್ಲ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಂದಹಾಗೆ ನಾಗಭೂಷಣ್ ಹಾಗೂ ಅಮೃತಾ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಅಕ್ಟೋಬರ್ 27ಕ್ಕೆ 'ಟಗರುಪಲ್ಯ' ಸಿನಿಮಾ ಥಿಯೇಟರ್‌ಗಳಲ್ಲಿ ರಿಲೀಸ್ ಆಗಿತ್ತು. ಪ್ರೇಕ್ಷಕರಿಗೆ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು.

Reason behind Tagarupalya Ott Streaming delay

ಉಮೇಶ್ ಕೆ. ಕೃಪಾ ಚೊಚ್ಚಲ ನಿರ್ದೇಶನದ 'ಟಗರುಪಲ್ಯ' ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನಿರ್ದೇಶನವಿದೆ. ರಂಗಾಯಣ ರಘು, ತಾರಾ, ಶರತ್ ಲೋಹಿತಾಶ್ವ, ಚಿತ್ರಾ ಶೆಣೈ, ವಾಸುಕಿ ವೈಭವ್, ಬಿರಾದಾರ್ ಚಿತ್ರದ ತಾರಾಗಣದಲ್ಲಿದ್ದಾರೆ. ಸಿಂಪಲ್ ಕಥೆಯನ್ನು ಬಹಳ ಸೊಸಗಾಗಿ ತೆರೆಗೆ ತಂದು ಚಿತ್ರತಂಡ ಗೆದ್ದಿತ್ತು. ಸಣ್ಣಪುಟ್ಟ ತಪ್ಪುಗಳ ನಡುವೆಯೂ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿತ್ತು.

ಕೊವಿಡ್ ಸಮಯದಲ್ಲಿ 'ಇಕ್ಕಟ್' ಎನ್ನುವ ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದ ನಾಗಭೂಷಣ್ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದ ಎರಡನೇ ಸಿನಿಮಾ ಇದು. ಇನ್ನು ನಟ ಲವ್ಲಿ ಸ್ಟಾರ್ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ಈ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಮೊದಲ ಪ್ರಯತ್ನದಲ್ಲೇ ಆಕೆ ಕೂಡ ಭರವಸೆ ಮೂಡಿಸಿದ್ದರು. ಸೆವೆನ್ ಸ್ಟಾರ್ ಸುಲ್ತಾನ ಎನ್ನುವ ಟಗರು ಕೂಡ ಚಿತ್ರದ ಪ್ರಮುಖ ಭಾಗವಾಗಿತ್ತು.

ಮಂಡ್ಯ ಹಳ್ಳಿಯೊಂದರ ಊರ ಗೌಡರ ಮಗಳ ಮದುವೆ ನಿಶ್ಚಯವಾಗುತ್ತದೆ. ಮನೆದೇವರಿಗೆ ಟಗರು ಬಲಿ ಕೊಟ್ಟು ಪೂಜೆ ಮಾಡಲು ಮುಂದಾಗುತ್ತಾರೆ. ದೇವಿಗೆ ಬಲಿ ಕೊಡಲು ತಂದ ಟಗರು ಅಷ್ಟು ಸುಲಭವಾಗಿ ಬಲಿಯಾಗಲು ಒಪ್ಪುವುದಿಲ್ಲ. ಮುಂದೇನಾಗುತ್ತದೆ? ಎನ್ನುವ ಕಥೆಯನ್ನು 2 ಗಂಟೆಗಳ ಕಾಲ ಹೇಳುವ ಪ್ರಯತ್ನ ಚಿತ್ರದಲ್ಲಾಗಿತ್ತು. ಈಗಾಗಲೇ ಥಿಯೇಟರ್‌ನಲ್ಲಿ ಸಿನಿಮಾ ನೋಡಿದವರು, ನೋಡದವರು ಓಟಿಟಿಯಲ್ಲಿ ನೋಡಲು ಕಾತರಾಗಿದ್ದರು. ಆದರೆ ಸಿನಿಮಾ ಸ್ಟ್ರೀಮಿಂಗ್ ಆಗಲೇಯಿಲ್ಲ.

Reason behind Tagarupalya Ott Streaming delay

ತಾಂತ್ರಿಕ ಸಮಸ್ಯೆಗಳಿಂದ ಅಮೇಜಾನ್‌ ಪ್ರೈಂನಲ್ಲಿ ಸಿನಿಮಾ ಸ್ಟ್ರೀಮಿಂಗ್ ತಡವಾಗುತ್ತಿದೆ. ಆದರೆ ಅಭಿಮಾನಿಗಳು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಶೀಘ್ರದಲ್ಲೇ ಸಮಸ್ಯೆ ಬಗೆಹರಿದು ಸಿನಿಮಾ ಓಟಿಟಿ ವೀಕ್ಷಕರ ಮುಂದೆ ಬರುವ ಸಾಧ್ಯತೆಯಿದೆ.

ಡಾಲಿ ಪಿಕ್ಚರ್ಸ್ ಸಂಸ್ಥೆ ಹುಟ್ಟು ಹಾಕಿ ಧನಂಜಯ್ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದಾರೆ. ಚಿಕ್ಕ ಬಜೆಟ್‌ನಲ್ಲಿ ಸದಭಿರುಚಿ ಸಿನಿಮಾಗಳನ್ನು ನಿರ್ಮಿಸುವ ಕೆಲಸ ಮಾಡುತ್ತಿದ್ದಾರೆ. ಮೊದಲಿಗೆ 'ಬಡವ ರಾಸ್ಕಲ್' ಸಿನಿಮಾ ನಿರ್ಮಿಸಿ ನಟಿಸಿದ್ದರು. ಬಳಿಕ 'ಹೆಡ್‌ಬುಷ್' ಚಿತ್ರಕ್ಕೂ ತಾವೇ ಬಂಡವಾಳ ಹೂಡಿದ್ದರು. ಆ ಸಂಸ್ಥೆಯ ಮೂರನೇ ಸಿನಿಮಾ 'ಟಗರುಪಲ್ಯ'.

ಕನ್ನಡ ಸಿನಿಮಾಗಳನ್ನು ಓಟಿಟಿ ಸಂಸ್ಥೆಗಳು ಕೊಂಡುಕೊಳ್ಳುತ್ತಿಲ್ಲ ಎನ್ನುವ ಚರ್ಚೆ ನಡೀತಿದೆ. ಮೊನ್ನೆ ಮೊನ್ನೆವರೆಗೂ 'ಟಗರುಪಲ್ಯ' ರೈಟ್ಸ್ ಕೂಡ ಮಾರಾಟವಾಗಿಲ್ಲ ಎನ್ನಲಾಗಿತ್ತು. ಸ್ವತಃ ಧನಂಜಯ್ ಇತ್ತೀಚೆಗೆ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಈ ಬಗ್ಗೆ ಹೇಳಿಕೊಂಡಿದ್ದರು. ಆ ಬಳಿಕ ಅಮೇಜಾನ್ ಪ್ರೈಂನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುವ ಸುದ್ದಿ ಹೊರಬಿದ್ದಿತ್ತು.

More from Filmibeat

English summary
why Tagarupalya Ott release getting delayed;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X