ಓಟಿಟಿ ಸಂಸ್ಥೆಗಳಿಗೆ ಕನ್ನಡ ಸಿನಿಮಾಗಳಿಂದಲೇ ನಷ್ಟವಾಯ್ತಾ? ಏನಿದರ ಅಸಲಿಯತ್ತು?

ಟಿವಿ, ಮೊಬೈಲು ಇಲ್ಲದ ಕಾಲದಲ್ಲಿ ಸಿನಿಮಾಗಳು ಥಿಯೇಟರ್‌ಗಳಲ್ಲಿ ವರ್ಷಗಳ ಕಾಲ ಪ್ರದರ್ಶನ ಕಾಣುತ್ತಿದ್ದವು. ಜನ ಮುಗಿಬಿದ್ದು ಸಿನಿಮಾ ನೋಡುತ್ತಿದ್ದರು. ಆದರೆ ಈಗ ಒಂದೆರಡು ವಾರಕ್ಕೆ ಥಿಯೇಟರ್‌ಗಳಲ್ಲಿ ಸಿನಿಮಾಗಳ ಬ್ಯುಸಿನೆಸ್ ಮುಗಿದು ಓಟಿಟಿ ಕಡೆ ಮುಖ ಮಾಡುವಂತಾಗಿದೆ. ಆದರೆ ಯಾಕೋ ಬರಬರುತ್ತಾ ಕನ್ನಡ ಸಿನಿಮಾಗಳ ಮೇಲೆ ಓಟಿಟಿ ಸಂಸ್ಥೆಗಳು ಮಲತಾಯಿ ಧೋರಣೆ ತೋರುತ್ತಿವೆ.

ಕನ್ನಡ ಸಿನಿಮಾಗಳನ್ನು ಓಟಿಟಿ ಸಂಸ್ಥೆಗಳು ಕೊಂಡುಕೊಳ್ಳುತ್ತಿಲ್ಲ ಅನ್ನೋದು ಹೊಸ ಆರೋಪ. ಇದಕ್ಕೆ ಒಬ್ಬೊಬ್ಬರು ಒಂದೊಂದು ಕಾರಣಗಳನ್ನು ಮುಂದಿಡುತ್ತಿದ್ದಾರೆ. ನೆಟ್‌ಫ್ಲಿಕ್ಸ್ ಕನ್ನಡ ಸಿನಿಮಾಗಳಷ್ಟು ಅಷ್ಟಾಗಿ ಕೊಂಡುಕೊಳ್ಳಲ್ಲ. ಇನ್ನುಳಿದಂತೆ ಜೀ5 ಹಾಗೂ ಅಮೇಜಾನ್ ಪ್ರೈಂ ಪ್ಲಾಟ್‌ಫಾರ್ಮ್‌ಗಳು ಮಾತ್ರ ಕನ್ನಡ ಸಿನಿಮಾಗಳನ್ನು ಸ್ಟ್ರೀಮಿಂಗ್ ಮಾಡ್ತಾ ಬರುತ್ತಿದೆ. ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಿಗೆ ಐದಾರು ಓಟಿಟಿ ಪ್ಲಾಟ್‌ಫಾರ್ಮ್‌ಗಳು ಲಭ್ಯವಿದೆ. ಕನ್ನಡ ಸಿನಿಮಾಗಳಿಗೆ ಪ್ರೈಂ- ಜೀ5 ಬಿಟ್ರೆ ಬೇರೆ ದಾರಿಯಿಲ್ಲ ಎನ್ನುವಂತಾಗಿದೆ.

Reason behind why OTT platforms are not buying Kannada films these days

ಅಮೇಜಾನ್ ಸಂಸ್ಥೆ ಹೆಚ್ಚಾಗಿ ಕನ್ನಡ ಸಿನಿಮಾಗಳ ಡಿಜಿಟಲ್ ರೈಟ್ಸ್ ಕೊಂಡುಕೊಳ್ಳುತ್ತಿತ್ತು. ಆದರೆ ಈ ವರ್ಷ ಅದು ಕೂಡ ಕೈ ಎತ್ತಿಬಿಟ್ಟಿದೆ. ನಷ್ಟವಾಗುತ್ತಿದೆ ಎನ್ನುವ ನೆಪವೊಡ್ಡಿ ಕೊಂಡೊಕೊಳ್ಳಲು ಹಿಂದೇಟು ಹಾಕುತ್ತಿದೆ. ಓಟಿಟಿಯಿಂದ ಅಲ್ಪ ಸ್ವಲ್ಪ ಹಣ ಬರುತ್ತದೆ ಎಂದುಕೊಂಡಿದ್ದವರಿಗೆ ಭಾರೀ ನಿರಾಸೆಯಾಗುತ್ತಿದೆ. ಕನ್ನಡದಲ್ಲಿ ದೊಡ್ಡ ಸಿನಿಮಾಗಳನ್ನು ಮಾತ್ರ ಓಟಿಟಿ ಸಂಸ್ಥೆಗಳು ಕೊಂಡುಕೊಳ್ಳುತ್ತಿದೆ. ಸಣ್ಣ ಸಿನಿಮಾಗಳು ಚೆನ್ನಾಗಿ ಇದ್ದರೂ ಕೂಡ ವ್ಯವಹಾರ ಕುದುರಿಸಲು ಪ್ರಯತ್ನಿಸುತ್ತಿಲ್ಲ.

ಈ ವರ್ಷ ಈಗಾಗಲೇ 204 ಕನ್ನಡ ಸಿನಿಮಾಗಳು ರಿಲೀಸ್ ಆಗಿವೆ. ಆದರೆ ಓಟಿಟಿಗೆ ಬಂದ ಸಿನಿಮಾಗಳ ಸಂಖ್ಯೆ ಬಹಳ ಕಮ್ಮಿಯಿದೆ. ಅಮೇಜಾನ್ ಪ್ರೈಂ ಪ್ರತಿ ವರ್ಷ ಕನ್ನಡ ಸಿನಿಮಾಗಳನ್ನು ಕೊಂಡುಕೊಳ್ಳಲು ಒಂದಷ್ಟು ಬಜೆಟ್‌ ಅನ್ನು ಎತ್ತಿ ಇಡುತ್ತದೆ. ಈ ವರ್ಷ ಬಹಳ ಬೇಗ ಆ ಬಜೆಟ್ ಖಾಲಿಯಾಗಿದೆ. ಕೊಂಡುಕೊಂಡ ಸಿನಿಮಾಗಳಿಂದ ಕೂಡ ನಷ್ಟವಾಗಿದೆ. ಹಾಗಾಗಿ ಹೊಸದಾಗಿ ಯಾವುದೇ ಸಿನಿಮಾ ಕೊಂಡುಕೊಳ್ಳುತ್ತಿಲ್ಲ ಎನ್ನುವ ಚರ್ಚೆ ನಡೀತಿದೆ. ಅಮೇಜಾನ್ ಪ್ರೈಂ ಮುಂದಿನ ವರ್ಷವೇ ಕನ್ನಡ ಸಿನಿಮಾ ರೈಟ್ಸ್ ಖರೀದಿಸುವುದು ಎನ್ನಲಾಗ್ತಿದೆ.

ಇತ್ತೀಚೆಗೆ ಕನ್ನಡ ಸಿನಿಮಾಗಳನ್ನು ಓಟಿಟಿ ಸಂಸ್ಥೆಗಳು ನೇರವಾಗಿ ಕೊಂಡುಕೊಳ್ಳುತ್ತಿಲ್ಲ. ಥಿಯೇಟರ್‌ಗಳಲ್ಲಿ ನಾಲ್ಕು ವಾರ ಯಶಸ್ವಿಯಾಗಿ ಪ್ರದರ್ಶನ ಕಂಡು ಹಿಟ್ ಟಾಕ್ ಗಿಟ್ಟಿಸಿಕೊಂಡ ಸಿನಿಮಾಗಳನ್ನು ಮಾತ್ರ ಕೊಂಡುಕೊಳ್ಳಲು ಮನಸ್ಸು ಮಾಡುತ್ತಿದ್ದಾರಂತೆ. ಇನ್ನುಳಿದಂತೆ ಸ್ಟಾರ್‌ಗಳ ಸಿನಿಮಾಗಳ ಮೇಲೆ ಹಣ ಹೂಡುತ್ತಾರೆ ಎನ್ನುವ ಮಾತಿದೆ. ಇತ್ತೀಚೆಗೆ ನಟ ಧನಂಜಯ್ ಸಂದರ್ಶನವೊಂದರಲ್ಲಿ ನಮ್ಮ 'ಟಗರುಪಲ್ಯ' ಚಿತ್ರದಲ್ಲಿ 3 ಲಕ್ಷ ಜನ ನೋಡಿದರೂ ಓಟಿಟಿಯವರು ಕೊಂಡುಕೊಳ್ಳುತ್ತಿಲ್ಲ ಎಂದಿದ್ದರು.

ನಟ ಧನಂಜಯ್ ಮಾತನಾಡಿ "ನಾನೊಬ್ಬ ಸ್ಟಾರ್ ನಟನಾಗಿ ನನ್ನ ಸಿನಿಮಾ ಡಿಜಿಟಲ್ ರೈಟ್ಸ್ ಸೇಲ್ ಮಾಡೋಕೆ ಆಗ್ತಿಲ್ಲ. ಯಾರೂ ತಗೊಂಡಿಲ್ಲ. ಡಿಜಿಟಲ್, ಸ್ಯಾಟಲೈಟ್ ಮಾರ್ಕೆಟ್ ತುಂಬಾ ಡೌನ್ ಇದೆ. ಯಾವ ಸಿನಿಮಾ ಕೂಡ ನಮಗೆ ವರ್ಕ್‌ಔಟ್ ಆಗ್ತಿಲ್ಲ ಎನ್ನುತ್ತಿದ್ದಾರೆ. ಬೇರೆ ಭಾಷೆ ಸಿನಿಮಾ ತಗೊತ್ತಿದ್ದಾರೆ ನಮ್ಮದು ತಗೋತ್ತಿಲ್ಲ ಎಂದು ಟ್ವಿಟ್ಟರ್‌ನಲ್ಲಿ ಕಾಮೆಂಟ್ ಮಾಡಿದರೆ ಪ್ರಯೋಜನ ಇಲ್ಲ. ಅಂತಿಮವಾಗಿ ನೋಡುವವರು ಜಾಸ್ತಿ ಆಗಬೇಕು. ಕನ್ನಡ ಸಿನಿಮಾಗಳ ಡಬ್ ವರ್ಷನ್‌ನ ಜಾಸ್ತಿ ನೋಡ್ತಿದ್ದಾರೆ ಅಂತ. ಹಾಗಿರುವಾಗ ನಾವು ಏನು ಹೇಳೋಕೆ ಸಾಧ್ಯ. ಎಷ್ಟೇ ಕ್ವಾಲಿಟಿ ಸಿನಿಮಾ ಮಾಡಿದರೂ ಎಲ್ಲರೂ ಹೋರಾಡುವಂತಾಗಿದೆ" ಎಂದಿದ್ದರು.

ಅಂತೂ ಇಂತೂ ಇತ್ತೀಚೆಗೆ ಅಮೇಜಾನ್ ಸಂಸ್ಥೆ ಈ ಚಿತ್ರವನ್ನು ಖರೀದಿಸಿತ್ತು. ಈ ವಾರವೇ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಇತ್ತೀಚೆಗೆ ಕೆಲ ಸಿನಿಮಾಗಳನ್ನು 'ಪೇ ಫರ್ ವೀವ್' ಪದ್ದತಿಯಲ್ಲಿ ಓಟಿಟಿ ಸಂಸ್ಥೆಗಳು ಕೊಂಡುಕೊಳ್ಳುತ್ತಿದೆ. ಆದರೆ ಸಿನಿಮಾ ರಿಲೀಸ್ ಆಗಿ ಒಂದು ತಿಂಗಳ ಒಳಗೆ ಈ ನಿಯಮಕ್ಕೆ ಒಪ್ಪಿದರೆ ಮಾತ್ರ ಅದು ಸಾಧ್ಯ. ಇಲ್ಲದಿದ್ದರೆ ಈ ಅವಕಾಶವನ್ನು ಕೂಡ ನಿರ್ಮಾಪಕರು ಕಳೆದುಕೊಳ್ಳಬೇಕಾಗುತ್ತದೆ.

ಈ ವರ್ಷ ಯಾವುದೋ ಒಂದೆರಡು ಸಿನಿಮಾಗಳಿಂದ ಓಟಿಟಿ ಸಂಸ್ಥೆಗಳು ನಷ್ಟ ಅನುಭವಿಸಿಲ್ಲ. ಯಾವುದೋ ಒಂದು ಸಿನಿಮಾ ಮೇಲೆ ಆರೋಪ ಮಾಡುವುದು ತಪ್ಪಾಗುತ್ತದೆ. ಸರಿಯಾದ ರೀತಿಯಲ್ಲಿ ಸಿನಿಮಾಗಳನ್ನು ಆಯ್ಕೆ ಮಾಡಬೇಕು. ಬರೀ ಸ್ಟಾರ್ ನಟರ ಸಿನಿಮಾಗಳನ್ನು ನಂಬಿ ಹಣ ಹಾಕಿ ಕಳೆದುಕೊಂಡು ಈಗ ಯಾವುದೇ ಸಿನಿಮಾ ತೆಗೆದುಕೊಳ್ಳಲ್ಲ ಎನ್ನುವುದು ಸರಿಯಲ್ಲ, ಸ್ಟಾರ್‌ಗಳ ಮುಖ ನೋಡದೇ ಜನ ಮೆಚ್ಚಿದ ಸಿನಿಮಾಗಳನ್ನು ಖರೀದಿಸಬೇಕು ಎನ್ನುವ ವಾದವೂ ಇದೆ.

ಓಟಿಟಿಯವರು ಕನ್ನಡ ಸಿನಿಮಾಗಳನ್ನು ಯಾಕೆ ಕೊಂಡುಕೊಳ್ಳುತ್ತಿಲ್ಲ? ನಿಜಕ್ಕೂ ನಷ್ಟವಾಗಿದ್ಯಾ? ಎನ್ನುವ ಚರ್ಚೆ ಬಗ್ಗೆ ನಿರ್ದೇಶಕ ಮಂಸೋರೆ ಫಿಲ್ಮ್ ಬೀಟ್ ಜೊತೆ ಮಾತನಾಡಿದ್ದಾರೆ. "ಓಟಿಟಿ ಸಂಸ್ಥೆಯಲ್ಲಿರುವವರು ಒಳ್ಳೆಯ ಸಿನಿಮಾಗಳನ್ನು ನೋಡಿ ಖರೀದಿಸಿ. ಅಂಡರ್‌ಸ್ಟ್ಯಾಂಡಿಂಗ್ ಅಲ್ಲಿ ಸಿನಿಮಾ ತಗೊಂಡು ನಷ್ಟ ಮಾಡಿಕೊಂಡು ಇದೀ ಇಂಡಸ್ಟ್ರಿ ಮೇಲೆ ಗೂಬೆ ಕೂರಿಸಬೇಡಿ. ಆಯ್ಕೆ ಪ್ರಕ್ರಿಯೆ ಎಲ್ಲಾ ಸಿನಿಮಾಗಳಿಗೂ ಒಂದೇರೀತಿ ಇರಲಿ. ಎಲ್ಲರಿಗೂ ಲಭ್ಯವಾಗಿರಿ. ಎಲ್ಲರಿಗೂ ಸ್ಪಂದಿಸಿ. ನಿಮಗೆ ಬೇಕಾದವರ ಜೊತೆ ಮಾತ್ರ ಮಾತನಾಡುವುದು. ಉಳಿದವರನ್ನು ಅಲೆಸುವ ಕೆಲಸ ಮಾಡಬೇಡಿ" ಎಂದಿದ್ದಾರೆ. ಕೊನೆಯದಾಗಿ "ನಾವು ಓಟಿಟಿ ಸಂಸ್ಥೆಗಳ ಮೇಲೆ ನಮ್ಮ ಸಿನಿಮಾಗಳನ್ನು ಕೊಂಡುಕೊಳ್ಳಲೇಬೇಕು ಎಂದು ಒತ್ತಡ ಹೇರಲು ಸಾಧ್ಯವಿಲ್ಲ" ಎಂದು ವಿವರಿಸಿದ್ದಾರೆ.

ಒಟ್ಟಾರೆಯಾಗಿ ಕನ್ನಡ ಸಿನಿರಸಿಕರು ಓಟಿಟಿಯಲ್ಲಿ ಹೆಚ್ಚು ಕನ್ನಡ ಸಿನಿಮಾಗಳನ್ನು ವೀಕ್ಷಿಸದ ಹೊರತು ಈ ಸಮಸ್ಯೆ ಮುಂದುವರೆಯುತ್ತಲೇ ಇರುತ್ತದೆ. ಇದು ಹೀಗೆ ಮುಂದುವರೆದೆ ಕನ್ನಡ ಸಿನಿಮಾಗಳಿಗೆ ಇರುವ ಒಂದು ಆದಾಯದ ದಾರಿ ಕೂಡ ಮುಚ್ಚಿಕೊಳ್ಳುತ್ತದೆ. ಇದು ಕನ್ನಡ ಚಿತ್ರರಂಗಕ್ಕೆ ಮಾರಕವಾಗುವ ಸಾಧ್ಯತೆ ದಟ್ಟವಾಗಿದೆ.

More from Filmibeat

English summary
why ott platforms are not interested in kannada Movies?;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X