ಮತ್ತೊಂದು ಕನ್ನಡ ಡಾರ್ಕ್ ಕಾಮಿಡಿ ಥ್ರಿಲ್ಲರ್ ಸಿನಿಮಾ ಓಟಿಟಿಗೆ ಬಂತು; ಈಗ್ಲೇ ನೋಡಿ

ಓಟಿಟಿ ಸಂಸ್ಥೆಗಳು ಕನ್ನಡದ ಚಿಕ್ಕ ಸಿನಿಮಾಗಳನ್ನು ಕೊಂಡುಕೊಳ್ಳುವುದಿಲ್ಲ ಎನ್ನುವ ಆರೋಪವಿದೆ. ಪೇ ಫಾರ್ ವೀವ್ ಪದ್ಧತಿಯಲ್ಲಿ ಮಾತ್ರ ಒಂದಷ್ಟು ಸಿನಿಮಾಗಳನ್ನು ಸ್ಟ್ರೀಮಿಂಗ್ ಮಾಡಲಾಗುತ್ತಿದೆ. ಇದೀಗ ಸದ್ದಿಲ್ಲದೇ ಮತ್ತೊಂದು ಕನ್ನಡ ಸಿನಿಮಾ ಓಟಿಟಿಗೆ ಎಂಟ್ರಿ ಕೊಟ್ಟಿದೆ.

ಇತ್ತೀಚೆಗೆ ಕಾಮಿಡಿ ಎಂಟರ್‌ಟೈನರ್ 'ಮೂರನೇ ಕೃಷ್ಣಪ್ಪ' ಸಿನಿಮಾ ಓಟಿಟಿಗೆ ಬಂದಿತ್ತು. ಅದರ ಬೆನ್ನಲ್ಲೇ ಮತ್ತೊಂದು ಸಿನಿಮಾ ಚಂದಾದಾರರ ವೀಕ್ಷಣೆಗೆ ಲಭ್ಯವಿದೆ. ಅನಿರುದ್ದ್ ಜತ್ಕರ್ ನಟನೆಯ 'ಶೆಫ್ ಚಿದಂಬರ' ಸಿನಿಮಾ ಅಮೇಜಾನ್ ಪ್ರೈಂನಲ್ಲಿ ರಿಲೀಸ್ ಆಗಿದೆ. ಮಧ್ಯರಾತ್ರಿಯಿಂದಲೇ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ.

Recent released kannada movie ott streaming now

ಅನಿರುದ್ದ್ ಜತ್ಕರ್ ಓಟಿಟಿಯಲ್ಲಿ ತಮ್ಮ ಸಿನಿಮಾ ವೀಕ್ಷಿಸುವಂತೆ ಮನವಿ ಮಾಡಿದ್ದಾರೆ. ಆನಂದ್ ರಾಜ್ ನಿರ್ದೇಶನದ ಡಾರ್ಕ್ ಕಾಇಡಿ ಥ್ರಿಲ್ಲರ್ ಸಿನಿಮಾ ಇದು. ಚಿತ್ರದಲ್ಲಿ ಅನಿರುದ್ಧ್ ಜೊತೆ ರಚೆಲ್ ಡೇವಿಡ್, ನಿಧಿ ಸುಬ್ಬಯ್ಯ, ಶಿವಮಣಿ, ಶರತ್ ಲೋಹಿತಾಶ್ವ ಸೇರಿದಂತೆ ಹಲವರು ನಟಿಸಿದ್ದಾರೆ.

ಬಾಣಸಿಗ ಚಿದಂಬರನ ನೋವು ನಲಿವಿನ ಕಥೆಯನ್ನು ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ. ಯಾರಿಗೋ ಸಹಾಯ ಮಾಡಲು ಹೋಗಿ ಚಿದಂಬರ ಹೇಗೆ ಸಮಸ್ಯೆಗೆ ಸಿಲುಕುತ್ತಾನೆ. ಅದರಿಂದ ಹೊರ ಬರಲು ಏನೆಲ್ಲಾ ಸರ್ಕಸ್ ಮಾಡುತ್ತಾನೆ ಎನ್ನುವುದೇ 'ಶೆಫ್ ಚಿದಂಬರ' ಸಿನಿಮಾ ಕಥೆ.

Recent released kannada movie ott streaming now

ಬಾಣಸಿಗ ಚಿದಂಬರ(ಅನಿರುದ್ಧ್) ಸಾಲದ ಸುಳಿಗೆ ಸಿಲುಕಿರುತ್ತಾನೆ. ಅತ್ತ ಶ್ರೀಮಂತ ಮಹಿಳೆ ಮೋನಾ(ನಿಧಿ ಸುಬ್ಬಯ್ಯ)ಗೆ ಸಮಸ್ಯೆ ಎದುರಾಗಿರುತ್ತದೆ. ಆಕೆಗೆ ಸಹಾಯ ಮಾಡಿದರೆ ತಾನು ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಸಹಾಯ ಮಾಡುತ್ತಾಳೆ ಎಂದು ಚಿದಂಬರ ಒಪ್ಪುತ್ತಾನೆ. ಅಷ್ಟರಲ್ಲೇ ಒಬ್ಬ ವ್ಯಕ್ತಿಯ ಅವನ ಫ್ಲಾಟ್‌ನಲ್ಲಿ ಸತ್ತು ಹೊಸ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ಚಿದಂಬರ ಈ ಸಮಸ್ಯೆಯಿಂದ ಹೇಗೆ ಹೊರಬರುತ್ತಾನೆ? ಒಂದಲ್ಲ ಎರಡು ಪ್ರಕರಣಗಳು ಅವನ ಹೆಗಲು ಏರುವುದು ಯಾಕೆ? ಅದರಿಂದ ಪಾರಾಗುತ್ತಾನಾ? ಇಲ್ವಾ? ಎನ್ನುವುದೇ ಸಿನಿಮಾ ಕಥೆ.

ಬಹಳ ದಿನಗಳ ಬಳಿಕ ಅನಿರುದ್ದ್ ಹೀರೊ ಆಗಿ ನಟಿಸಿದ ಸಿನಿಮಾ ಇದು. 'ರಾಜಾಸಿಂಹ' ಬಳಿಕ ಅನಿರುದ್ಧ್ ಸಿಲ್ವರ್ ಸ್ಕ್ರೀನ್ ಇಂದ ದೂರಾಗಿದ್ದರು. ಕಿರುತೆರೆಯ 'ಜೊತೆ ಜೊತೆಯಲಿ' ನಟಿಸಿ ಗೆದ್ದಿದ್ದರು. 'ಶೆಫ್ ಚಿದಂಬರ' ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಜೂನ್ 14ಕ್ಕೆ ಸಿನಿಮಾ ತೆರೆಗೆ ಬಂದಿತ್ತು. ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬಂದರೂ ಪ್ರೇಕ್ಷಕರನ್ನು ದೊಡ್ಡಮಟ್ಟದಲ್ಲಿ ಸೆಳೆಯಲು ಸಿನಿಮಾ ವಿಫಲವಾಗಿತ್ತು.

'ಶೆಫ್ ಚಿದಂಬರ' ಜೊತೆಗೆ ಡಾಲಿ ಧನಂಜಯ್ ನಟನೆಯ 'ಕೋಟಿ', ವಸಿಷ್ಠ ಸಿಂಹ 'ಲವ್‌ಲೀ' ಸಿನಿಮಾಗಳು ಕೂಡ ಬಂದಿತ್ತು. ಹಾಗಾಗಿ 'ಶೆಫ್ ಚಿದಂಬರ'ಗೆ ದೊಡ್ಡ ರೆಸ್ಪಾನ್ಸ್ ಸಿಕ್ಕಿರಲಿಲ್ಲ. ಸದ್ಯ ಸಿನಿಮಾ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈಗಾಗಲೇ ಚಿದಂಬರನ ಪಜೀತಿಯನ್ನು ನೋಡಿ ಕೆಲವರು ಮೆಚ್ಚಿಕೊಂಡಿದ್ದಾರೆ.

ದಮ್ತಿ ಪಿಕ್ಚರ್ಸ್ ಬ್ಯಾನರ್‌ನಲ್ಲಿ ರೂಪಾ ಡಿ. ಎನ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಉದಯ್ ಲೀಲಾ ಛಾಯಾಗ್ರಹಣ, ರಿತ್ವಿಕ್ ಮುರಳಿಧರ್ ಸಂಗೀತ ಚಿತ್ರಕ್ಕಿದೆ. ಕಾಮಿಡಿ ಸಿನಿಮಾ ಆಗಿದ್ದರೂ ಸ್ಟೈಲಿಶ್ ಆಕ್ಷನ್ ಸೀಕ್ವೆನ್ಸ್ ಚಿತ್ರದಲ್ಲಿದೆ. ಶ್ರೀಲಂಕಾದಲ್ಲಿ ನಡೆದ ನೈಜ ಘಟನೆ ಆಧರಿಸಿ 'ಶೆಫ್ ಚಿದಂಬರ' ಸಿನಿಮಾ ಕಟ್ಟಿಕೊಟ್ಟಿರುವುದಾಗಿ ಚಿತ್ರತಂಡ ಹೇಳಿತ್ತು.

ಇತ್ತೀಚೆಗೆ 'ಬ್ಲಿಂಕ್', 'ಶಾಖಾಹಾರಿ', 'ಕರಟಕ ದಮನಕ' ಸೇರಿದಂತೆ ಹಲವು ಸಿನಿಮಾಗಳು ಚಿತ್ರಮಂದಿರಕ್ಕಿಂತ ಓಟಿಟಿಯಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿವೆ. ಅದೇ ಸಾಲಿಗೆ 'ಶೆಫ್ ಚಿದಂಬರ' ಸೇರುತ್ತಾ ಕಾದು ನೋಡಬೇಕಿದೆ.

More from Filmibeat

English summary
After moorane krishnappa this kannada movie streaming on ott;
Read more about: ott kannada aniruddha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X