ಹಿಟ್ ಲಿಸ್ಟ್ ಸೇರಿದ 2 ಕನ್ನಡ ಚಿತ್ರಗಳು ಶುಕ್ರವಾರ(ಅಕ್ಟೋಬರ್ 17) ಓಟಿಟಿಗೆ ಬಂತು; ಈಗ್ಲೇ ನೋಡಿ

ಕನ್ನಡ ಸಿನಿರಸಿಕರಿಗೆ 'ಕಾಂತಾರ- 1' ಸಿನಿಮಾ ಭರ್ಜರಿ ಮನರಂಜನೆ ಉಣಬಡಿಸುತ್ತಿದೆ. ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಿಗೆ ಸಿನಿಮಾ ಡಬ್ ಆಗಿ ರಿಲೀಸ್ ಆಗಿದೆ. ಈಗಾಗಲೇ ಸಿನಿಮಾ 700 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಸದ್ದು ಮಾಡ್ತಿದೆ. ಇತ್ತ ಓಟಿಟಿಯಲ್ಲಿ ಈ ವಾರ 2 ಕನ್ನಡ ಸಿನಿಮಾಗಳು ಸ್ಟ್ರೀಮಿಂಗ್ ಆರಂಭಿಸಿವೆ.

ಈ ವರ್ಷ 6 ತಿಂಗಳು ಕನ್ನಡದ ಯಾವುದೇ ದೊಡ್ಡ ಸಿನಿಮಾ ಗೆಲ್ಲಲಿಲ್ಲ. ನಡುವೆ ಬಂದಿದ್ದ 'ಯುದ್ಧಕಾಂಡ-2' ಹಾಗೂ 'ಮಾದೇವ' ಚಿತ್ರಗಳು ತಕ್ಕಮಟ್ಟಿಗೆ ಸದ್ದು ಮಾಡಿದ್ದವು. ಬಳಿಕ 'ಎಕ್ಕ' ಸಿನಿಮಾ ಪ್ರೇಕ್ಷಕರನ್ನು ದೊಡ್ಡಮಟ್ಟದಲ್ಲಿ ಚಿತ್ರಮಂದಿರಗಳಿಗೆ ಸೆಳೆದಿತ್ತು. ಆದರೆ ಅಷ್ಟರಲ್ಲೇ 'ಸು ಫ್ರಂ ಸೋ' ಸಿನಿಮಾ ಬಂದು ಎಲ್ಲರ ಲೆಕ್ಕಾಚಾರ ಉಲ್ಟಾ ಮಾಡಿತ್ತು.

Recently Released 2 critically acclaimed kannada movies now streaming on Ott

ಬಹಳ ದೊಡ್ಡಮಟ್ಟದಲ್ಲಿ 'ಸು ಫ್ರಂ ಸೋ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಬಳಿಕ 'ಏಳುಮಲೆ', 'ಕಾಂತಾರ- 1' ಚಿತ್ರಗಳು ಸದ್ದು ಮಾಡಿದ್ದವು. ನಡುವೆ 'ಅಂದೊಂದಿತ್ತು ಕಾಲ' ಸಿನಿಮಾ ಬಂದು ಗಮನ ಸೆಳೆಯಿತು. ವರ್ಷಾಂತ್ಯಕ್ಕೆ 'ಕೆಡಿ', 'ಡೆವಿಲ್', '45', 'ಮಾರ್ಕ್' ರೀತಿಯ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರ್ತಿವೆ.

ಈ ವಾರ ಓಟಿಟಿಯಲ್ಲಿ ಕನ್ನಡ ಸಿನಿರಸಿಕರಿಗೆ 2 ಸಿನಿಮಾಗಳು ವೀಕ್ಷಣೆಗೆ ಸಿಗಲಿವೆ. ಎರಡೂ ಸಿನಿಮಾಗಳು ಡಿಜಿಟಲ್ ಸ್ಟ್ರೀಮಿಂಗ್ ಆರಂಭಿಸಿವೆ. ನೀವು ಈಗ್ಲೇ ವೀಕ್ಷಿಸಬಹುದು.

Recently Released 2 critically acclaimed kannada movies now streaming on Ott

1. ಅಂದೊಂದಿತ್ತು ಕಾಲ

ಕೀರ್ತಿ ಕೃಷ್ಣಪ್ಪ ನಿರ್ದೇಶನದ 'ಅಂದೊಂದಿತ್ತು ಕಾಲ' ಸಿನಿಮಾ ಅಮೇಜಾನ್ ಪ್ರೈಂ ವೀಡಿಯೋಗೆ ಲಗ್ಗೆ ಇಟ್ಟಿದೆ. ವಿನಯ್ ರಾಕ್‌ಕುಮಾರ್, ಅದಿತಿ ಪ್ರಭುದೇವ ಹಾಗೂ ನಿಶಾ ರವಿಕೃಷ್ಣನ್ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಭುವನ್ ಸುರೇಶ್ ಎಂಬುವವರು ಚಿತ್ರಕ್ಕೆ ಹಣ ಹೂಡಿದ್ದರು. ಆಗಸ್ಟ್ 29ರಂದು ತೆರೆಗೆ ಬಂದಿದ್ದ ಸಿನಿಮಾವನ್ನು ಈಗ ಓಟಿಟಿಯಲ್ಲೇ ನೋಡಬಹುದು.

ಸಿನಿಮಾದೊಳಗೊಂದು ಸಿನಿಮಾ ಕಥೆ ಈ ಚಿತ್ರದಲ್ಲಿದೆ. ಹಳ್ಳಿಯ ಬಡ ಕುಟುಂಬದ ಹುಡುಗ ಕುಮಾರನಿಗೆ ಸಿನಿಮಾ ನಿರ್ದೇಶಕನಾಗುವ ಕನಸು. ಒಂದ್ಕಡೆ ಮನೆ ಜವಾಬ್ದಾರಿ ನಿಭಾಯಿಸುತ್ತಾ ಮತ್ತೊಂದು ಕಡೆ ತನ್ನ ಕನಸು ನನಸು ಮಾಡಿಕೊಳ್ಳಲು ಹೊರಟ ಕುಮಾರನ ಜರ್ನಿಯನ್ನು ಈ ಚಿತ್ರದಲ್ಲಿ ನೋಡಬಹುದು.

2. ಏಳುಮಲೆ

ತರುಣ್ ಸುಧೀರ್ ನಿರ್ಮಾಣದ ಸಿನಿಮಾ 'ಏಳುಮಲೆ' ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ದೊಡ್ಡಮಟ್ಟದಲ್ಲಿ ಸಿನಿಮಾ ನೋಡಿ ಪ್ರೇಕ್ಷಕರು ಗೆಲ್ಲಿಸಲಿಲ್ಲ ಎನ್ನುವುದೇ ಬೇಸರದ ಸಂಗತಿ. ಪುನೀತ್ ರಂಗಸ್ವಾಮಿ ನಿರ್ದೇಶನದ ಚಿತ್ರದಲ್ಲಿ ರಾಣಾ ಹಾಗೂ ಪ್ರಿಯಾಂಕ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ.

ಜಗಪತಿ ಬಾಬು, ನಾಗಾಭರಣ ಹಾಗೂ ಕಿಶೋರ್ ಚಿತ್ರದ ಪಾತ್ರವರ್ಗದಲ್ಲಿದ್ದಾರೆ. ಒಂದು ರಾತ್ರಿಯಲ್ಲಿ ನಡೆಯುವ ಕಥೆ ಚಿತ್ರದಲ್ಲಿದೆ. ಮಲೆ ಮಾದೇಶ್ವರ ಬೆಟ್ಟದ ಸುತ್ತಾಮುತ್ತಾ ವೀರಪ್ಪನ್ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಒಂದು ಲವ್ ಸ್ಟೋರಿಯನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾವನ್ನು ಜೀ-5ನಲ್ಲಿ ನೀವು ವೀಕ್ಷಿಸಬಹುದು.

ಸೆಪ್ಟೆಂಬರ್ 5ರಂದು 'ಏಳುಮಲೆ' ಸಿನಿಮಾ ತೆರೆಗೆ ಬಂದಿತ್ತು. 9.2 IMDB ರೇಟಿಂಗ್ ಕೂಡ ಚಿತ್ರಕ್ಕೆ ಸಿಕ್ಕಿತ್ತು. ಸಿನಿಮಾ 5 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಗಮನ ಸೆಳೆದಿತ್ತು. ಈಗ ಮನೆಯಲ್ಲೇ ಕೂತು ಸಿನಿಮಾ ನೋಡಿ.

More from Filmibeat

Read more about: sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X