ಹೊಚ್ಚ ಹೊಸ ಕನ್ನಡ ಕ್ರೈಂ ಥ್ರಿಲ್ಲರ್ ಸಿನಿಮಾ ಓಟಿಟಿಗೆ ಬಂದಿದೆ; ಈಗ್ಲೇ ನೋಡಿ

ಈ ವಾರ ಏಳೆಂಟು ಕನ್ನಡ ಸಿನಿಮಾಗಳು ತೆರೆಗಪ್ಪಳಿಸಿವೆ. ಆದರೆ ಯಾವುದೇ ಸಿನಿಮಾ ಬಗ್ಗೆ ಪ್ರೇಕ್ಷಕರಿಗೆ ಹೆಚ್ಚಿನ ನಿರೀಕ್ಷೆ ಇಲ್ಲ. ಇದ್ದಿದ್ದರಲ್ಲಿ ಶ್ರೇಯಸ್- ಪ್ರಿಯಾ ವಾರಿಯರ್ ನಟನೆಯ 'ವಿಷ್ಣು ಪ್ರಿಯ' ಕೊಂಚ ಮಟ್ಟಿಗೆ ಭರವಸೆ ಮೂಡಿಸಿದೆ. ಇನ್ನುಳಿದಂತೆ ಸದ್ಯಕ್ಕೆ ದೊಡ್ಡ ಸಿನಿಮಾಗಳು ತೆರೆಗೆ ಬರುವ ಸುಳಿವು ಸಿಕ್ತಿಲ್ಲ.

ಇತ್ತ ಓಟಿಟಿಯಲ್ಲಿ ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಆರ್ಭಟ ಜೋರಾಗಿದೆ. ಕಳೆದ ಶನಿವಾರ ಸಿನಿಮಾ ಜೀ5ಗೆ ಬಂದು ಸದ್ದು ಮಾಡ್ತಿದೆ. ಕೇವಲ 72 ಗಂಟೆಗಳಲ್ಲಿ 100 ಮಿಲಿಯನ್ ಸ್ಟ್ರೀಮಿಂಗ್ ಮಿನಿಟ್ಸ್ ವೀಕ್ಷಣೆ ಸಾಧಿಸಿ ಗಮನ ಸೆಳೆದಿದೆ. ಇನ್ನುಳಿದಂತೆ ಉಪೇಂದ್ರ ನಿರ್ದೇಶಿಸಿ, ನಟಿಸಿದ 'ಯುಐ' ಹಾಗೂ ಶರಣ್ ನಟನೆಯ 'ಛೂ ಮಂತರ್' ಚಿತ್ರಗಳನ್ನು ಓಟಿಟಿಯಲ್ಲಿ ನೋಡಲು ವೀಕ್ಷಕರು ಕಾಯುವಂತಾಗಿದೆ.

Recently released Kannada crime thriller movie is now streaming on OTT

ಸದ್ದಿಲ್ಲದೇ ಈ ವಾರ ಒಂದು ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಕನ್ನಡ ಸಿನಿಮಾ ಓಟಿಟಿಗೆ ಬಂದಿದೆ. ನವೆಂಬರ್ 22ರಂದು ಸಿನಿಮಾ ತೆರೆಗೆ ಬಂದಿತ್ತು. 3 ತಿಂಗಳ ಬಳಿಕ ಡಿಜಿಟಲ್ ಸ್ಟ್ರೀಮಿಂಗ್ ಆರಂಭಿಸಿದೆ. ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮೂಡಿ ಬಂದಿರುವ ಸಿನಿಮಾ ಇದು. ನಾಗರಾಜ್ ಟಿ ಹಾಗೂ ಪೃಥ್ವಿರಾಜ್ ಸಾಗರ್ ನಿರ್ಮಾಣದ ಈ ಚಿತ್ರಕ್ಕೆ ಶ್ರೀಧರ್ ಶಾಸ್ತ್ರಿ ಆಕ್ಷನ್ ಕಟ್ ಹೇಳಿದ್ದಾರೆ.

ಅಂದಹಾಗೆ ಈ ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಹೆಸರು 'ಟೆನೆಂಟ್'. ಧರ್ಮ ಕೀರ್ತಿರಾಜ್, ಸೋನು ಗೌಡ, ತಿಲಕ್, ರಾಕೇಶ್ ಮಯ್ಯ, ಉಗ್ರಂ ಮಂಜು ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಧರ್ಮ ಹಾಗೂ ಉಗ್ರಂ ಮಂಜು ಬಿಗ್‌ಬಾಸ್ ಮನೆಯೊಳಗೆ ಇದ್ದಾಗಲೇ ಈ ಸಿನಿಮಾ ತೆರೆಗೆ ಬಂದಿತ್ತು. ಚಿತ್ರ ಬಿಡುಗಡೆ ಆಗಿದ್ದು ಅವರಿಬ್ಬರ ಗಮನಕ್ಕೂ ಬಂದಿರಲಿಲ್ಲ.

'ನವಗ್ರಹ' ಚಿತ್ರದಲ್ಲಿ ರೊಮ್ಯಾಂಟಿಕ್ ಹೀರೊ ಆಗಿ ಮಿಂಚಿದ್ದ ಧರ್ಮ್ ಕೀರ್ತಿರಾಜ್‌ಗೆ ಬಳಿಕ ದೊಡ್ಡ ಸಕ್ಸಸ್ ಸಿಕ್ಕಿಲ್ಲ. 'ಟೆನೆಂಟ್' ಚಿತ್ರದಲ್ಲಿ ನೆಗೆಟಿವ್ ರೋಲ್‌ನಲ್ಲಿ ಧರ್ಮ ಕಾಣಿಸಿಕೊಂಡಿದ್ದಾರೆ. ಒಂದಷ್ಟು ಟ್ವಿಸ್ಟ್‌ಗಳ ಮೂಲಕ ಕೂತೂಹಲಭರಿತವಾಗಿ ಚಿತ್ರದ ಕಥೆ ಸಾಗುತ್ತದೆ. ಲಾಕ್‌ಡೌನ್ ಅವಧಿಯ ಕಥೆ ಆಗಿರುವುದರಿಂದ ಒಂದೇ ಮನೆಯಲ್ಲಿ ಇಡೀ ಸಿನಿಮಾ ಸಾಗುತ್ತದೆ.

Recently released Kannada crime thriller movie is now streaming on OTT

'ಟೆನೆಂಟ್' ಚಿತ್ರದ ಕಥೆ ಏನು ಎನ್ನುವುದನ್ನು ನೋಡುವುದಾದರೆ ಹೊಸದಾಗಿ ಮದುವೆ ಆಗಿರುವ ದಂಪತಿ(ರಾಕೇಶ್‌ಮಯ್ಯ-ಸೋನು ಗೌಡ) ಮನೆಯ ಓನರ್. ಆ ಮನೆಯ ಮೇಲಿನ ಮಹಡಿಗೆ ಒಬ್ಬ ಯುವಕ(ಧರ್ಮ) ಬಾಡಿಗೆಗೆ ಬರುತ್ತಾನೆ. ಆ ಬಾಡಿಗೆದಾರ ದಂಪತಿ ನಡುವೆ ಪ್ರವೇಶಿಸಿದಾಗ ಏನೆಲ್ಲಾ ಆಗುತ್ತದೆ ಎನ್ನುವುದು ಇನ್ನುಳಿದ ಕಥೆ. ಮುಂದೆ ಒಂದು ಕೊ* ಸಹ ನಡೆದು ಅದರ ತನಿಖೆಗೆ ಪೊಲೀಸ್ ಆಫೀಸರ್ ಎಂಟ್ರಿ ಆಗುತ್ತದೆ. ಹೀಗೆ ಕಥೆ ಸಾಗುತ್ತದೆ.

ಗಿರೀಶ್ ಹೊತ್ತೂರ್ ಸಂಗೀತ, ಮನೋಹರ್ ಜೋಶಿ ಛಾಯಾಗ್ರಹಣ 'ಟೆನೆಂಟ್' ಚಿತ್ರಕ್ಕಿದೆ. ಕಳೆದ ವರ್ಷ ನವೆಂಬರ್ 22ರಂದು ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಇದೀಗ ಸನ್‌ನೆಕ್ಸ್ಟ್(Sun NXT) ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಓಟಿಟಿಗೆ ಕನ್ನಡ ಸಿನಿಮಾಗಳು ಬರೋದು ಕಡಿಮೆ. ಅದರಲ್ಲೂ ಆಗೊಂದು ಈಗೊಂದು ಕ್ರೈಂ ಸಸ್ಪೆನ್ಸ್ ಚಿತ್ರಗಳು ಬರ್ತಾವೆ. ಈ ವಾರ ಮನೆಯಲ್ಲೇ ಕೂತು 'ಟೆನೆಂಟ್' ಸಿನಿಮಾ ನೋಡಿ.

More from Filmibeat

English summary
Kannada crime thriller movie has recently released in theaters now available on OTT;
Read more about: sonu gowda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X