ಒಂದೇ ತಿಂಗಳು, ಚಿತ್ರಮಂದಿರದಲ್ಲಿ 2 ಬಾರಿ ರಿಲೀಸ್ ; 2ಬಾರಿಯೂ ಮುಖಭಂಗ-ಸದ್ದಿಲ್ಲದೇ ಓಟಿಟಿಗೆ ಬಂತು ಕಾಮಿಡಿ ಸಿನಿಮಾ

ಸಿನಿಮಾ ಅನ್ನುವುದು ಗ್ಯಾಂಬ್ಲಿಂಗ್ ಇದ್ದಂತೆ ಎಂದು ಕಾಲ ಕಾಲಕ್ಕೆ ಬರುವ ಕಾರಣ ಚಕ್ರವರ್ತಿಗಳು ಹೇಳ್ತಾನೇ ಬಂದಿದ್ದಾರೆ. ಆದರೂ.. ಇಲ್ಲಿ ಹೂಡಿಕೆ ಮಾಡಿದರೆ ಒಳ್ಳೇ ಲಾಭ ಮಾಡಬಹುದು ಎಂಬ ಲೆಕ್ಕಾಚಾರದಲ್ಲಿ ಅನೇಕರು ಬರುತ್ತಾರೆ. ಕೆಲವರು ಗೆಲ್ತಾರೆ. ಇನ್ನೂ ಕೆಲವರು ಸೋಲುತ್ತಾರೆ. ಆದರೆ, ಹೀಗೆ ಸೋತವರಲ್ಲಿ ಕೆಲವರು ತಮ್ಮ ಸೋಲನ್ನು ಸುಲಭವಾಗಿ ಒಪ್ಪಿಕೊಳ್ಳಲ್ಲ.

ಬದಲಿಗೆ ಬಿಡುಗಡೆಯ ಲೆಕ್ಕಾಚಾರ ತಲೆಕೆಳಗಾಯ್ತು ಎಂದು ಹೇಳುತ್ತಾರೆ. ಬೇರೆ ದಿನ ಬಿಡುಗಡೆ ಮಾಡಿದ್ದರೆ ಕಥೆ ಬೇರೆ ಆಗಿರುತ್ತಿತ್ತು ಎಂದು ವಾದ ಮಾಡುತ್ತಾರೆ. ಪ್ರೇಕ್ಷಕರು ಚಿತ್ರಮಂದಿರದಲ್ಲಿ ತಮ್ಮ ಚಿತ್ರವನ್ನು ನೋಡಲು ಬಯಸಲಿಲ್ಲ ಎನ್ನುವ ಸತ್ಯವನ್ನು ಒಪ್ಪದೇ ಹುಂಬ ಧೈರ್ಯ ಮಾಡಿ ಮತ್ತೊಮ್ಮೆ ತಮ್ಮ ಚಿತ್ರವನ್ನು ಕೆಲವೇ ದಿನದಲ್ಲಿ ಮರು ಬಿಡುಗಡೆಯನ್ನು ಮಾಡುತ್ತಾರೆ.

Rejected by Theaters Kapil Sharma s Kis Kisko Pyaar Karoon 2 Slips Onto OTT

ಆದರೆ ಆಗಲೂ ಕೂಡ ಇವರಿಗೆ ದಕ್ಕುವುದು ಮತ್ತು ಸೋಲು ಮತ್ತು ನಿರಾಸೆ ಮಾತ್ರ. ಉದಾಹರಣೆಗೆ ಕಾಮಿಡಿ ಕಿಲಾಡಿ ಕಪಿಲ್ ಶರ್ಮಾ ಅಭಿನಯದ ''ಕಿಸ್ ಕಿಸ್ ಕೋ ಪ್ಯಾರ್ ಕರೂ 2''.

ಹೌದು.. ''ಕಿಸ್ ಕಿಸ್ ಕೋ ಪ್ಯಾರ್ ಕರೂ 2.. ಕಪಿಲ್ ಶರ್ಮಾ ಅಭಿನಯದ ಚಿತ್ರ. ಸರಿ ಸುಮಾರು ಒಂದು ದಶಕದ ಹಿಂದೆ ತೆರೆಗೆ ಬಂದಿದ್ದ ''ಕಿಸ್ ಕಿಸ್ ಕೋ ಪ್ಯಾರ್ ಕರೂ'' ಚಿತ್ರದ ಎರಡನೇ ಭಾಗ ಇದು.

ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಆ ಕಾಲದಲ್ಲಿಯೇ ಅಂದರೆ 2015ರಲ್ಲಿ ಈ ಚಿತ್ರದ ಮೊದಲ ಭಾಗ ₹ 10.20 ಕೋಟಿಯನ್ನು ದೋಚಿತ್ತು. ಕೇವಲ ಭಾರತದಲ್ಲಿ ಹತ್ ಹತ್ರ ₹50 ಕೋಟಿ ಕೊಳ್ಳೆ ಹೊಡೆದಿತ್ತು.

ಈ ಹಿನ್ನೆಲೆ ಅಂದು ಸಿಕ್ಕ ಗೆಲುವಿನ ರುಚಿ ಇಂದು ಇನ್ನೊಮ್ಮೆ ಸಿಗುತ್ತೆ ಎನ್ನುವ ಭರವಸೆಯಲ್ಲಿ ಈ ಚಿತ್ರವನ್ನು ಕಳೆದ ವರ್ಷ ಡಿಸೆಂಬರ್ 12 ರಂದು ಬಿಡುಗಡೆ ಮಾಡಲಾಗಿತ್ತು. ಆದರೆ ಬಾಲಿವುಡ್‌ನಲ್ಲಿ ಮಾತ್ರವಲ್ಲದೇ ಭಾರತದಲ್ಲಿ ಆಗ ''ಧುರಂಧರ್'' ಅಲೆ ಎದ್ದಿತ್ತು. ಈ ಅಲೆಯ ಎದುರು ''ಕಿಸ್ ಕಿಸ್ ಕೋ ಪ್ಯಾರ್ ಕರೂ 2'' ಕೊಚ್ಚಿಕೊಂಡು ಹೋಗಿತ್ತು.

Rejected by Theaters Kapil Sharma s Kis Kisko Pyaar Karoon 2 Slips Onto OTT

ಆದರೂ ಕೂಡ ಸುಮ್ಮನಾಗದ ಚಿತ್ರತಂಡ ಆ ನಂತರ ಜನವರಿ ಮೊದಲ ವಾರದಲ್ಲಿ ಮತ್ತೊಮ್ಮೆ ತಮ್ಮ ಚಿತ್ರವನ್ನು ಬಿಡುಗಡೆ ಮಾಡಿತ್ತು. ಆದರೆ, ಪ್ರೇಕ್ಷಕರು ಮಾತ್ರ ಕ್ಯಾರೇ ಎನ್ನಲಿಲ್ಲ. ಹಲವು ಕಡೆ ಬೆಳಗಿನ ಪ್ರದರ್ಶನಗಳು ರದ್ದಾದವು.

ಹೀಗೆ ಎರಡು ಬಾರಿ ಬಿಡುಗಡೆಯ ಭಾಗ್ಯ ಕಂಡರೂ ಕೂಡ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ₹12 ಕೋಟಿಯನ್ನು ಕೂಡ ಗಳಿಸಲಿಲ್ಲ. ಇಂತಹ ''ಕಿಸ್ ಕಿಸ್ ಕೋ ಪ್ಯಾರ್ ಕರೂ 2'' ಚಿತ್ರ ಸದ್ಯ ಸದ್ದಿಲ್ಲದೇ ಓಟಿಟಿಗೆ ಬಂದಿದೆ. ಮೊನ್ನೆಯಿಂದ (ಫೆಬ್ರವರಿ 6) ''ಜೀಯೋ ಹಾಟ್‌ ಸ್ಟಾರ್''ನಲ್ಲಿ ಪ್ರಸಾರವಾಗಲಿದೆ. ಕೇವಲ ಹಿಂದಿಯಲ್ಲಿ ಈ ಚಿತ್ರ ನೋಡುವ ಅವಕಾಶ ಇದ್ದು ಆಸಕ್ತ ಸಿನಿಮಾ ಪ್ರೇಮಿಗಳು, ಕಪಿಲ್ ಶರ್ಮಾ ಅವರ ಅಭಿಮಾನಿಗಳು ಸಬ್ ಟೈಟಲ್‌ ಜೊತೆ ಸಿನಿಮಾವನ್ನು ನೋಡಬಹುದು.

ಚಿತ್ರದ ತಾರಾಬಳಗ

ಕಪಿಲ್ ಶರ್ಮಾ
ಮಂಜೋತ್ ಸಿಂಗ್
ಹೀರಾ ವಾರಿನಾ
ಪರುಲ್ ಗುಲಾಟಿ
ತ್ರಿಧಾ ಚೌಧರಿ
ಆಯೇಷಾ ಖಾನ್ (ಧುರಂಧರ್ ಖ್ಯಾತಿಯ)
ಆಸ್ರಾನಿ
ಅಖಿಲೇಂದ್ರ ಮಿಶ್ರಾ

ತಾಂತ್ರಿಕ ವರ್ಗ

ನಿರ್ದೇಶನ: ಅನುಕಲ್ಪ್ ಗೋಸ್ವಾಮಿ

ನಿರ್ಮಾಣ: ಅಬ್ಬಾಸ್-ಮಸ್ತಾನ್, ಗಣೇಶ್ ಜೈನ್ ಮತ್ತು ರತನ್ ಜೈನ್

ಸಂಗೀತ ನಿರ್ದೇಶಕರು-ಯೋ ಯೋ ಹನಿ ಸಿಂಗ್

ದಿಗ್‌ವಿ

ಯುಗ್ ಭೂಷಲ್

ಪರೀಕ್ಷಿತ್ ಶರ್ಮಾ ಮತ್ತು ನಿಶಾದ್ ಚಂದ್ರ

More from Filmibeat

English summary
Looking for Kis Kisko Pyaar Karoon 2 on OTT? After a struggling theatrical run and a failed re-release, Kapil Sharma’s latest film is now streaming. Get the OTT platform details, release date, and the real reason behind its box office flop here.
Read more about: bollywood kapil sharma
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X