ಈ ವಾರಂತ್ಯಕ್ಕೆ OTT ಯಲ್ಲಿ ನೋಡ ಬಹುದಾದ ಸಿನಿಮಾಗಳ ಪಟ್ಟಿ!
ಈಗ ವೀಕೆಂಡ್ ಬಂತು ಅಂದರೆ ಸಾಕು ಯಾವ ಹೊಸ ಸಿನಿಮಾ ರಿಲೀಸ್ ಆಗುತ್ತಿದೆ. ಯಾವ ಸಿನಿಮಾ ನೋಡುವುದು ಎನ್ನುವ ಲೆಕ್ಕಾಚಾರ ಶುರುವಾಗಿ ಬಿಡುತ್ತೆ. ಆದರೆ ಈಗ ಥಿಯೇಟರ್‌ನಲ್ಲಿ ಮಾತ್ರ ಸಿನಿಮಾ ರಿಲೀಸ್ ಆಗಲ್ಲ, ಪ್ರತೀ ವಾರವೂ ಒಟಿಟಿ ಪ್ಲ್ಯಾಟ್ ಫಾರ್ಮ್‌ಗಳಲ್ಲಿ ಸಿನಿಮಾ ತೆರೆಕಾಣುತ್ತವೆ. ಆದರೆ ಯಾವ ಸಿನಿಮಾ ರಿಲೀಸ್ ಆಗುತ್ತಿದೆ, ಯಾವ ಚಿತ್ರಗಳ ಲಭ್ಯ ಇದೆ ಎನ್ನುವ ಬಗ್ಗೆ ಕುತೂಹಲ ಇರುತ್ತೆ.
ಒಟಿಟಿಯಲ್ಲಿ ರಿಲೀಸ್ ಆಗುವ ಚಿತ್ರಗಳ ಸಂಖ್ಯೆ ಹೆಚ್ಚಾಗಿದೆ. ವಾರಾಂತ್ಯ ಬಂತೂ ಅಂದರೆ ಒಂದಲ್ಲ ಒಂದು ಚಿತ್ರಗಳು ಒಟಿಟಿಯಲ್ಲಿ ರಿಲೀಸ್ ಆಗುತ್ತವೆ. ಇನ್ನು ಒಟಿಟಿಯಲ್ಲಿ ಬಂದ ಸಿನಿಮಾಗಳು ದೊಡ್ಡ ಮಟ್ಟದ ಯಶಸ್ಸು ಕೂಡ ಕಾಣುತ್ತಿವೆ. ಸಿನಿಮಾವನ್ನು ಥಿಯೇಟರ್‌ನಲ್ಲಿ ಹೋಗಿಯೆ ನೋಡಬೇಕು ಎನ್ನುವ ಕಾನ್ಸೆಪ್ಟ್ ಈಗ ಉಳಿದಿಲ್ಲ. ಒಟಿಟಿಯಲ್ಲಿ ಸಿನಿಮಾಗಳನ್ನು ನೋಡಲು ಜನ ಅಭ್ಯಾಸ ಮಾಡಿಕೊಂಡಿದ್ದಾರೆ. ಹಾಗಾಗಿ ಸಿನಿಮಾ ತಯಾರಕರು ಕೂಡ ಒಟಿಟಿಗಾಗಿಯೇ ಸಿನಿಮಾಗಳನ್ನು ಮಾಡುತ್ತಿದ್ದಾರೆ.
Recommended Video

ಸದ್ಯ ಒಟಿಟಿಯತ್ತ ಮುಖ ಮಾಡುವ ಸಿನಿಮಾಗಳ ಸಂಖ್ಯೆ ಹೆಚ್ಚಾಗಿದೆ. ಈ ವಾರಾಂತ್ಯದಲ್ಲಿ ಅಂದರೆ ಏಪ್ರಿಲ್ ಎರಡನೇ ವಾರಾಂತ್ಯಕ್ಕೆ ಯಾವೆಲ್ಲಾ ಸಿನಿಮಾಗಳು ಒಟಿಟಿಯಲ್ಲಿ ತೆರೆಗೆ ಬರುತ್ತಿದೆ ಎನ್ನುವ ವಿವರ ಇಲ್ಲಿದೆ ಮುಂದೆ ಓದಿ...

OTT ಯಲ್ಲಿ ಓಲ್ಡ್ ಮಾಂಕ್, ಏಕ್ ಲವ್ ಯಾ!
ಈ ವಾರಂತ್ಯದಲ್ಲಿ ಕನ್ನಡ ಎರಡು ಚಿತ್ರಗಳನ್ನು ಒಟಿಟಿಯಲ್ಲಿ ನೋಡ ಬಹುದಾಗಿದೆ. ನಟ ಶ್ರೀನಿ ಮತ್ತು ಅದಿತಿ ಪ್ರಭುದೇವ ಅಭಿನಯದ 'ಓಲ್ಡ್ ಮಾಂಕ್' ಚಿತ್ರ ಒಟಿಟಿಯಲ್ಲಿ ರಿಲೀಸ್ ಆಗಿದೆ. ಚಿತ್ರಮಂದಿರದಲ್ಲಿ ಸದ್ದು ಮಾಡಿದ್ದ ಈ ಚಿತ್ರ ಒಟಿಟಿಯಲ್ಲಿ ಏಪ್ರಿಲ್ 5ಕ್ಕೆ ರಿಲೀಸ್ ಆಗಿದೆ. ಇನ್ನು ಕನ್ನಡದ ಮತ್ತೊಂದು ಸಿನಿಮಾ ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಚಿತ್ರ ಕೂಡ ott ವೇದಿಕೆಯಾದ ಜೀ5ನಲ್ಲಿ ರಿಲೀಸ್ ಆಗಿದೆ. ಏಪ್ರಿಲ್ 8ಕ್ಕೆ 'ಏಕ್ ಲವ್ ಯಾ' ಅಮೇಜನ್ ಪ್ರೈಮ್ ವಿಡಿಯೋದಲ್ಲಿ ಲಭ್ಯವಿದೆ.

ಒಟಿಟಿಯಲ್ಲಿ ಅಭಿಶೇಕ್ ಬಚ್ಚನ್ ಚಿತ್ರ!
ನಟ ಅಭಿಶೇಕ್ ಬಚ್ಚನ್ ಅಭಿನಯದ 'ದಸ್ವಿ' ಚಿತ್ರ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಗಿದೆ. ಈ ಚಿತ್ರ ಏಪ್ರಿಲ್ 7ರಂದು ನೆಟ್‌ಫ್ಲಿಕ್ಸ್ ಮತ್ತು ಜಿಯೋ ಸಿನಿಮಾಸ್‌ನಲ್ಲಿ ತೆರೆಕಂಡಿದೆ. ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ಅಮಿತಾಬ್ ಬಚ್ಚನ್ ಚಿತ್ರವನ್ನು ಮೆಚ್ಚಿದ್ದಾರೆ. ಇನ್ನುಳಿದಂತೆ ತಮಿಳು ನಟ ಸೂರ್ಯ ಅಭಿನಯದ 'ಈಟಿ' ಚಿತ್ರ ಕೂಡ ಏಪ್ರಿಲ್ 7ರಂದು ನೆಟ್‌ಫ್ಲಿಕ್ಸ್ ಮತ್ತು ಸನ್‌ನೆಟ್‌ನಲ್ಲಿ ತೆರೆಕಂಡಿದೆ. ಈ ಚಿತ್ರ ಫೆಬ್ರವರಿಯಲ್ಲಿ ಚಿತ್ರಮಂದಿರದಲ್ಲಿ ರಿಲೀಸ್ ಆಗಿತ್ತು.

ಇಂಗ್ಲೀಷ್‌ನ 'ರಿಟರ್ನ್ ಟು ಸ್ಪೇಸ್' ಚಿತ್ರ ರಿಲೀಸ್!
ಇನ್ನು ಒಟಿಟಿಯಲ್ಲಿ ಇಂಗ್ಲೀಷ್ ಚಿತ್ರಗಳ ಕೂಡ ರಿಲೀಸ್ ಆಗಿವೆ. ಏಪ್ರಿಲ್ 7ರಂದು 'ರಿಟರ್ನ್ ಟು ಸ್ಪೇಸ್' ನೆಟ್‌ಫ್ಲಿಕ್ಸ್‌ನಲ್ಲಿ ತೆರೆಕಂಡಿದೆ. ಜೊತೆಗೆ ಏಪ್ರಿಲ್ 8ರಂದು ಅಮೇಜಾನ್‌ನಲ್ಲಿ 'ದಿ ಕಿಂಗ್ಸ್ ಮ್ಯಾನ್', ನೆಕ್‌ಫ್ಲಿಕ್ಸ್‌ನಲ್ಲಿ 'ಮೆಟಲ್ ಲಾರ್ಡ್' ಮತ್ತು 'ಯಕ್ಷ ರುತ್‌ಲೆಸ್ ಆಪರೇಷನ್' ರಿಲೀಸ್ ಆಗಿವೆ.

ಒಟಿಟಿಯಲ್ಲಿ ಬಂದ ತೆಲುಗು, ತಮಿಳು ಚಿತ್ರಗಳು!
'ಆಹಾ'ದಲ್ಲಿ ತೆಲುಗಿನ 'ಸ್ಟ್ಯಾಂಡಪ್ ರಾಹುಲ್' ಚಿತ್ರ ರಿಲೀಸ್ ಆಗಿದೆ. ಹಾಟ್ ಸ್ಟಾರ್‌ನಲ್ಲಿ ತಮಿಳಿನ 'ತನಕ್ಕರನ್' ಚಿತ್ರ ರಿಲೀಸ್ ಆಗಿದೆ. ಈ ಚಿತ್ರಗಳ ಜೊತೆಗೆ ಮಲಯಾಳಂನ 'ನಾರದನ್' ಚಿತ್ರ ಅಮೇಜಾನ್‌ನಲ್ಲಿ ತೆರೆಗೆ ಬಂದಿದೆ. ಈ ವಾರಂತ್ಯಕ್ಕೆ ಯಾವೆಲ್ಲಾ ಚಿತ್ರಗಳು ಒಟಿಟಿಯಲ್ಲಿ ರಿಲೀಸ್ ಆಗಿವೆ ಎನ್ನುವ ಲಿಸ್ಟ್ ಇದು. ಸಿನಿಮಾ ನೋಡುವ ಆಯ್ಕೆ ನಿಮಗೆ ಬಿಟ್ಟಿದ್ದು.


Click it and Unblock the Notifications










