₹70.352 Crore ; ರಿಲಯನ್ಸ್ ಜೊತೆ ಕೈ ಜೋಡಿಸಿದ ಡಿಸ್ನಿ - ವಯಾಕಾಮ್ 18..!
ಸ್ಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಜೊತೆ ಜೀಯೋ ಸಿನಿಮಾ ಮತ್ತು ವಯಾಕಾಮ್ 18 ಮಾಧ್ಯಮ ಸಂಸ್ಥೆ ಅಧಿಕೃತವಾಗಿ ವಿಲೀನಗೊಂಡಿವೆ ಎಂದು ರಿಲಯನ್ಸ್, ವಯಾಕಾಮ್ ಮತ್ತು ಡಿಸ್ನಿ ಸ್ಟಾರ್ ಸಂಸ್ಥೆಗಳು ನಿನ್ನೆ ಘೋಷಿಸಿವೆ.
ಈ ವಿಲೀನದಿಂದ ವ್ಯವಹಾಟಿನ ಮೊತ್ತ ₹70.352 ಕೋಟಿ ಅಂದ್ರೆ 8.5 ಶತಕೋಟಿ ಡಾಲರ್ ಬೃಹತ್ ಜಂಟಿ ಆಗಿದ್ದು, ಇದರ ನೇತೃತ್ವವನ್ನು ಮಖೇಶ್ ಅಂಬಾನಿ ಒಡೆತನದ ರಿಲಯನ್ಸ್ ನಿರ್ವಹಿಸಲಿದೆ. ಇದರಲ್ಲಿ ರಿಲಯನ್ಸ್ ಶೇ. 16.34 ರಷ್ಟು, ವಯಾಕಾಮ್ 18 ಶೇ. 46.82 ಮತ್ತು ಡಿಸ್ನಿ ಶೇ. 36.84 ರಷ್ಟು ಪಾಲನ್ನು ಹೊಂದಿರುತ್ತದೆ. ನೀತಾ ಅಂಬಾನಿ ಜಂಟಿ ಉದ್ಯಮದ ಅಧ್ಯಕ್ಷರಾಗಿದ್ದರೆ, ಉದಯ್ ಶಂಕರ್ ಅವರನ್ನು ಕಾರ್ಯತಂತ್ರದ ಮಾರ್ಗದರ್ಶನಕ್ಕಾಗಿ ಜಂಟಿ ಉದ್ಯಮದ ಉಪಾಧ್ಯಕ್ಷರನ್ನಾಗಿ ಮಾಡಲಾಗಿದೆ.

ಇನ್ನೂ ಈ ವಿಲೀನದಿಂದಾಗಿ ಭಾರತದ ಪ್ರಮುಖ ಮನರಂಜನಾ ಬ್ರ್ಯಾಂಡ್‌ಗಳಾದ ಸ್ಟಾರ್, ಕಲರ್ಸ್ ಟೀವಿ ಹಾಗೂ ಡಿಜಿಟಲ್ ವೇದಿಕೆಗಳಾದ ಜಿಯೋ ಸಿನಿಮಾ ಮತ್ತು ಹಾಟ್‌ಸ್ಟಾರ್ ಒಂದುಗೂಡಲಿವೆ. ಈ ಮೂಲಕ ಭಾರತ ಮತ್ತು ಅಂತಾರಾಷ್ಟ್ರೀಯವಾಗಿ ಮನರಂಜನೆ ಹಾಗೂ ಕ್ರೀಡಾ ವಿಭಾಗದಲ್ಲಿ ವೈವಿಧ್ಯಮಯ ಕಂಟೆಂಟ್ ಒದಗಿಸುವ ಯೋಜನೆಯನ್ನು ಮೂರು ಸಂಸ್ಥೆಗಳು ಸಿದ್ದಪಡಿಸಿಕೊಂಡಿವೆ.
ಇಷ್ಟೇ ಅಲ್ಲದೇ ಈ ಮೂರು ಸಂಸ್ಥೆಗಳ ಮುಂಬರುವ ಹೆಜ್ಜೆ ಭಾರತದ ಅತೀ ದೊಡ್ಡ ಮಾಧ್ಯಮ ಘಟಕವಾಗಿದ್ದು ಈ ಮೂರು ಸಂಸ್ಥೆಯ ಅಡಿಯಲ್ಲಿ ನೂರಕ್ಕೂ ಹೆಚ್ಚು ಚಾನೆಲ್‌ಗಳು ಕಾರ್ಯ ನಿರ್ವಹಿಸಲಿವೆ. ಈ ಮೂಲಕ ಒಂದೇ ವೇದಿಕೆಯಲ್ಲಿ ನೂರಕ್ಕೂ ಅಧಿಕ ಚಾನೆಲ್‌ಗಳು ವೀಕ್ಷಣೆಗೆ ಲಭ್ಯವಾಗಲಿವೆ. ವರ್ಷಕ್ಕೆ ಕಡಿಮೆ ಅಂದರೂ 30,000 ಗಂಟೆಗಳಿಗಿಂತ ಹೆಚ್ಚಿನ ಕಂಟೆಂಟ್‌ನ ಹೊರತರಲಿವೆ.
ಇದಲ್ಲದೇ ಜೀಯೋ ಸಿನಿಮಾ ಮತ್ತು ಡಿಸ್ನಿ ಹಾಟ್ ಸ್ಟಾರ್ ಎರಡರ ಚಂದಾದಾರರ ಸಂಖ್ಯೆಯನ್ನು ಸೇರಿಸಿದರೆ ಚಂದಾದಾರರ ಸಂಖ್ಯೆ 5 ಕೋಟಿಗೂ ಅಧಿಕವಾಗಲಿದೆ. ಇನ್ನೂ ಜೀಯೋ ಮತ್ತು ಡಿಸ್ನಿ ಹಾಟ್‌ಸ್ಟಾರ್ ಸಿನಿಮಾ ಕ್ಷೇತ್ರದ ಜೊತೆ ಕ್ರಿಕೆಟ್ ಮತ್ತು ಫುಟ್ಭಾಲ್ ಸೇರಿದಂತೆ ಅನೇಕ ಕ್ರೀಡೆಗಳ ಹಕ್ಕುಗಳನ್ನು ಹಿಂದೆಯಿಂದ ಖರೀದಿ ಮಾಡುತ್ತಲೇ ಬಂದಿವೆ. ಈ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಕ್ರೀಡಾ ಜಗತ್ತಿನಲ್ಲಿ ಕೂಡ ಈ ವಿಲೀನದಿಂದ ಗಮನಾರ್ಹ ಬೆಳವಣಿಗೆ ಆಗುವ ಸಾಧ್ಯತೆ ಇದೆ.
ಇನ್ನೂ ವಯಾಕಾಮ್ 18 ಮತ್ತು ಡಿಸ್ನಿ ಹಾಟ್ ಸ್ಟಾರ್ ಜೊತೆ ಜೀಯೋ ವಿಲೀನವಾದ ಹಿನ್ನೆಲೆ ಈ ಬೆಳವಣಿಗೆಯನ್ನು ಬೆಂಬಲಿಸಲು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ₹11,500 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಿದೆ. ಇನ್ನೂ ಸೋನಿ, ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಗೆ ತೀವೃವಾದ ಸ್ಫರ್ಧೆಯನ್ನೊಡ್ಡುವ ಗುರಿಯನ್ನು ಕೂಡ ಈ ಮೂರು ಸಂಸ್ಥೆಗಳು ಹೊಂದಿವೆ. ಇನ್ನುಳಿದಂತೆ ಎನ್‌ಸಿಎಲ್‌ಟಿ ಮುಂಬೈ, ಭಾರತದ ಸ್ಪರ್ಧಾತ್ಮಕ ಆಯೋಗ, ಇತರ ನಿಯಂತ್ರಣ ಪ್ರಾಧಿಕಾರಗಳ ಅನುಮೋದನೆಯ ನಂತರ ಈ ಘೋಷಣೆ ಹೊರಬಿದ್ದಿದೆ. ಜಂಟಿ ಉದ್ಯಮವು ವಯಾಕಾಮ್ 18 ಮತ್ತು ರಿಲಯನ್ಸ್‌ಗೆ ಷೇರುಗಳನ್ನು ಹಂಚಿಕೆ ಮಾಡಿದೆ. ಈ ವಿಲೀನ ಪ್ರಕ್ರಿಯೆ ಜಾಗತಿಕ ಮಟ್ಟದಲ್ಲಿ ದೊಡ್ಡ ಸದ್ದು ಮಾಡುತ್ತಿದೆ.


Click it and Unblock the Notifications











