Republic Day 2024: ಈ ಗಣರಾಜ್ಯೋತ್ಸವಕ್ಕೆ ಒಟಿಟಿಗೆ ಬರ್ತಿವೆ ಅನಿಮಲ್, ಶ್ಯಾಮ್ ಬಹದ್ದೂರ್..ಮತ್ತಷ್ಟು

ದೇಶವು ತನ್ನ 75 ನೇ ಗಣರಾಜ್ಯೋತ್ಸವ (ಜನವರಿ 26) ಆಚರಣೆಯ ಸಂಭ್ರಮದಲ್ಲಿದೆ. ಈ ವೇಳೆ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ಹಲವು ಸಿನಿಮಾ, ವೆಬ್ ಸೀರಿಸ್‌ಗಳು ಬಿಡುಗಡೆಯಾಗುತ್ತಿದ್ದು, ಸಿನಿಪ್ರಿಯರಿಗೆ ಗಣರಾಜ್ಯೋತ್ಸವದ ಗಿಫ್ಟ್ ನೀಡುತ್ತಿವೆ. ಈ ದಿನ ಸೂಪರ್ ಹಿಟ್ ಆಸ ಅನಿಮಲ್ ಸಿನಿಮಾದಿಂದ ಹಿಡಿದು ದೇಶಭಕ್ತಿ ಹೆಚ್ಚಿಸುವ ಶ್ಯಾಮ್ ಬಹದ್ದೂರ್ ವರೆಗೆ ಕೆಲ ಚಿತ್ರಗಳು ಒಟಿಟಿಗೆ ಕಾಲಿಡುತ್ತಿವೆ.

ಗಣರಾಜ್ಯೋತ್ಸವದಂದು ಮನೆಯಲ್ಲಿಯೇ ಇರಲು ಪ್ಲ್ಯಾನ್ ಮಾಡುತ್ತಿದ್ದರೆ, ಎಲ್ಲರ ಜೊತೆಗೆ ಮನೆಯಲ್ಲಿಯೇ ಕುಳಿತು ಒಟಿಟಿಯಲ್ಲಿ ಈ ಸಿನಿಮಾ, ಹೊಸ ವೆಬ್ ಸೀರಿಸ್‌ಗಳನ್ನು ನೋಡಬಹುದು. ಜನವರಿ 26 ರಂದು ನೀವು ವೀಕ್ಷಿಸಬಹುದಾದ ಚಲನಚಿತ್ರಗಳು ಮತ್ತು ವೆಬ್ ಸರಣಿಗಳ ಪಟ್ಟಿ ಹೀಗಿದೆ.

Republic Day 2024: Sam Bahadur To Animal OTT Releases On January 26

ಅನಿಮಲ್

2023 ರ ಅತಿದೊಡ್ಡ ಬ್ಲಾಕ್‌ಬಸ್ಟರ್, ಅನಿಮಲ್, ಜನವರಿ 26 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ ಈ ಚಿತ್ರದಲ್ಲಿ ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅನಿಮಲ್ ಸಿನಿಮಾ ಹಿಂದಿಯ ಜೊತೆಗೆ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿಯೂ ಸಿನಿಮಾ ಲಭ್ಯವಿರುತ್ತದೆ.

ಅನಿಮಲ್ ಸಿನಿಮಾ ಆಧುನಿಕ ಕಾಲದ ಸಂಬಂಧಗಳ ಸಂಕೀರ್ಣ ಮತ್ತು ಜಟಿಲತೆಗಳನ್ನು ನಮ್ಮ ಮುಂದಿಡುತ್ತದೆ. ತಂದೆ ಮತ್ತು ಮಗನ ನಡುವಿನ ಜಟಿಲ ಸಂಬಂಧವನ್ನು ನಮ್ಮ ಮುಂದಿಡುತ್ತದೆ. ಆದರೆ, ಹೆಣ್ಣು ಮಕ್ಕಳ ಮೇಲಿನ ದ್ವೇಷದ ಮಾತುಗಳು, ಅತಿಯಾದ ಪುರುಷತ್ವದ ವೈಭವೀಕರಣ, ಹಿಂಸೆ, ರಕ್ತಪಾತದಿಂದಾಗಿ ಭಾರೀ ಟೀಕೆಗೂ ಸಿನಿಮಾ ಗುರಿಯಾಗಿದೆ. ಆದರೂ ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಗಿದೆ.

ಶ್ಯಾಮ್ ಬಹದ್ದೂರ್

ಮೇಘನಾ ಗುಲ್ಜಾರ್ ಅವರು ಶ್ಯಾಮ್ ಬಹದ್ದೂರ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಇದು ಭಾರತದ ಮೊದಲ ಫೀಲ್ಡ್ ಮಾರ್ಷಲ್ ಶ್ಯಾಮ್ ಮಾನೆಕ್ಷಾ ಅವರ ಜೀವನವನ್ನು ಆಧರಿಸಿದ ಜೀವನಚರಿತ್ರೆ. ನಟ ವಿಕ್ಕಿ ಕೌಶಲ್ ಶ್ಯಾಮ್ ಬಹದ್ದೂರ್ ಪಾತ್ರದಲ್ಲಿ ನಟಿಸಿದ್ದಾರೆ.

ಚಲನಚಿತ್ರವು 1971 ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಶ್ಯಾಮ್ ಬಹದ್ದೂರ್ ಅವರ ಪ್ರಾಮುಖ್ಯತೆಯನ್ನು ಹೇಳುತ್ತದೆ. ಜನವರಿ 26 ರಂದು Zee5 ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

Republic Day 2024: Sam Bahadur To Animal OTT Releases On January 26

ಕರ್ಮ ಕಾಲಿಂಗ್

ರವೀನಾ ಟಂಡನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕರ್ಮ ಕಾಲಿಂಗ್ ಜನವರಿ 26, 2024 ರಂದು ಬಿಡುಗಡೆಯಾಗುತ್ತಿದೆ. ಡಿಸ್ನಿ+ ಹಾಟ್‌ಸ್ಟಾರ್ ನಿರ್ಮಾಣದ ಈ ಸಿನಿಮಾ ABC ಸರಣಿಯ ರಿವೆಂಜ್‌ನ ಅಧಿಕೃತ ರೂಪಾಂತರವಾಗಿದೆ. ಕರ್ಮ ಕಾಲಿಂಗ್ ತನ್ನ ದಿವಂಗತ ತಂದೆಯ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಹೊರಟ ಯುವತಿಯ ಪ್ರತೀಕಾರದ ಕಥೆಯಾಗಿದೆ. ರವೀನಾ ಟಂಡನ್ ಜೊತೆಗೆ ನಮ್ರತಾ ಶೇತ್, ರೋಹಿತ್ ರಾಯ್ ಮತ್ತು ವರುಣ್ ಸೂದ್ ನಟಿಸಿದ್ದಾರೆ.

ಮಾಸ್ಟರ್ಸ್ ಆಫ್ ಏರ್

ಆಸ್ಟಿನ್ ಬಟ್ಲರ್, ಕ್ಯಾಲಮ್ ಟರ್ನರ್, ಆಂಥೋನಿ ಬೋಯ್ಲ್ ಮತ್ತು ಬ್ಯಾರಿ ಕಿಯೋಘನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸರಣಿಯು ಜನವರಿ 26 ರಂದು ಬಿಡುಗಡೆಯಾಗಲಿದೆ. ಈ ಸರಣಿಯು Apple TV+ ನಲ್ಲಿ ಸ್ಕ್ರೀನಿಂಗ್ ಆಗಲಿದೆ. ಸ್ಟೀವನ್ ಸ್ಪೀಲ್‌ಬರ್ಗ್ ಮತ್ತು ಟಾಮ್ ಹ್ಯಾಂಕ್ಸ್ ನಿರ್ಮಿಸಿದ ಈ ಸೀರಿಸ್ ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ಅಮೆರಿಕಾ ವಾಯುಪಡೆಯ ಪೈಲಟ್‌ಗಳ ಸುತ್ತ ಸುತ್ತುತ್ತದೆ.

More from Filmibeat

English summary
Sam Bahadur To Animal: OTT Releases on Republic Day 2024.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X