ಬಾಲಯ್ಯನ ಮುಂದೆ ವಿಶೇಷ ಬೇಡಿಕೆ ಇಟ್ಟ ನಿರ್ದೇಶಕ RGV!

ನಟ ನಂದಮೂರಿ ಬಾಲಕೃಷ್ಣ ಸದ್ಯ ಸಿಕ್ಕಾಪಟ್ಟೆ ಖುಷಿಯಲ್ಲಿ ಇದ್ದಾರೆ. ಇದಕ್ಕೆ ಕಾರಣ ಒಂದು ಕಡೆ ಬಾಲಯ್ಯ ಅಭಿನಯದ ಅಖಂಡ ಸಿನಿಮಾ ಸೂಪರ್‌ ಡೂಪರ್‌ ಹಿಟ್‌ ಆಗಿದೆ. ಮತ್ತೊಂದು ಕಡೆ ಬಾಲಯ್ಯ ನಿರೂಪಣೆಯ 'ಬಾಲಯ್ಯ ಅನ್ ಸ್ಟಾಪಬಲ್' ಕಾರ್ಯಕ್ರಮಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

Recommended Video

ನಂದಮೂರಿ ಅಡ್ಡಾಗೆ ಮಾಣಿಕ್ಯ ಬೆಡಗಿ ಸೇರ್ಪಡೆ!

ಈಗ ವಿಚಾರ ಇರುವುದು 'ಬಾಲಯ್ಯ ಅನ್‌ ಸ್ಟಾಪಬಲ್' ಕಾರ್ಯಕ್ರಮದ ಬಗ್ಗೆ. ಹೌದು ಈ ಕಾರ್ಯಕ್ರಮ ಒಟಿಟಿ ವೇದಿಕೆಯಾದ ಆಹಾದಲ್ಲಿ ಪ್ರಸಾರ ಆಗುತ್ತಿದೆ. ಈ ಕಾರ್ಯಕ್ರಮದಲ್ಲಿ ಹಲವು ಸ್ಟಾರ್‌ಗಳು ಭಾಗಿ ಆಗುತ್ತಿದ್ದಾರೆ. ಸಾಕಷ್ಟು ಸ್ವಾರಸ್ಯಕರ ಸಂಗತಿಗಳನ್ನು ಈ ಕಾರ್ಯಕ್ರಮದ ಮೂಲಕ ಹಂಚಿಕೊಳ್ಳುತ್ತಿದ್ದಾರೆ.

ಇನ್ನು ಈ ಕಾರ್ಯಕ್ರಮದಲ್ಲಿ ಭಾಗಿ ಆಗಲೇಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ. ರಾಮ್‌ ಗೋಪಾಲ್‌ ವರ್ಮಾ ಅವರಿಗೆ ಇಲ್ಲಿ ತನಕ ಆಹ್ವಾನ ಬಂದಿಲ್ಲವಂತೆ. ಹಾಗಾಗಿ ಅವರೇ ಬೇಡಿಕೆ ಇಟ್ಟಿದ್ದಾರೆ. ಆರ್‌ ಜಿ ವಿ ಏನು ಹೇಳಿದ್ದಾರೆ ಎನ್ನುವುದನ್ನು ಮುಂದೆ ಓದಿ.....

ಕಾರ್ಯಕ್ರಮಕ್ಕೆ ಆಹ್ವಾನಿಸುವಂತೆ ಬಾಲಯ್ಯನಿಗೆ ಬೇಡಿಕೆ!

ಕಾರ್ಯಕ್ರಮಕ್ಕೆ ಆಹ್ವಾನಿಸುವಂತೆ ಬಾಲಯ್ಯನಿಗೆ ಬೇಡಿಕೆ!

ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಅವರು ಬಾಲಯ್ಯು ಅವರು ನಡೆಸಿಕೊಡುವ ಈ ಕಾರ್ಯಕ್ರಮವನ್ನು ನೋಡುತ್ತಾರೆ ಅಂತೆ. ಹಾಗಾಗಿ ತಮಗೂ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿ ಆಗಿ ಒಂದಷ್ಟು ವಿಚಾರಗಳನ್ನು ಹಂಚಿಕೊಳ್ಳುವ ಇಂಗಿತ ಇದೆಯಂತೆ. ಇದನ್ನು ಟ್ವೀಟ್ ಮಾಡುವ ಮೂಲಕ ಸ್ವತಃ ಆರ್‌ ಜಿ ವಿ ಹೊರ ಹಾಕಿದ್ದಾರೆ. "ನಾನು 'ಆಹಾ'ದ 'ಅನ್‌ಸ್ಟಾಪಬಲ್' ಕಾರ್ಯಕ್ರಮವನ್ನು ಇಷ್ಟ ಪಡುತ್ತೇನೆ. ಮತ್ತು ನಾನು ಶೋನಲ್ಲಿರಲು ಬಯಸುತ್ತೇನೆ , ಬಾಲಯ್ಯ ಅವರು ನನಗೆ ಈ ಅವಕಾಶವನ್ನು ನೀಡುತ್ತಾರೆ ಎಂದು ನಾನು ಭಾವಿಸುತ್ತೇನೆ " ಎಂದು ರಾಮ್‌ ಗೋಪಾಲ್‌ ವರ್ಮಾ ಟ್ವಿಟ್‌ನಲ್ಲಿ ಬರೆದುಕೊಂಡಿದ್ದಾರೆ.

ರಾಜಮೌಳಿ, ಮಹೇಶ್ ಬಾಬು, ರವಿತೇಜ, ಅಲ್ಲು ಅರ್ಜುನ್ ಭಾಗಿ!

ರಾಜಮೌಳಿ, ಮಹೇಶ್ ಬಾಬು, ರವಿತೇಜ, ಅಲ್ಲು ಅರ್ಜುನ್ ಭಾಗಿ!

ಈಗಾಗಲೇ ಈ ಕಾರ್ಯಕ್ರಮದಲ್ಲಿ ಹಲವಾರು ಸಿನಿಮಾ ತಾರೆಯರು ಭಾಗಿ ಆಗಿದ್ದಾರೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ರಾಜಮೌಳಿ, ರವಿತೇಜ, ಮಹೇಶ್‌ ಬಾಬು, ನಾನಿ ಸೇರಿದಂತೆ ಹಲವು ಸ್ಟಾರ್‌ಗಳು ಈ ಕಾರ್ಯಕ್ರಮದಲ್ಲಿ ಈಗಾಗಲೇ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮವನ್ನು ಬಾಲಯ್ಯ ಅವರು ತಮಾಷೆಯಾಗಿ ನಡೆಸಿಕೊಡುತ್ತಾರೆ. ಬಾಲಯ್ಯ ಅವರ ಮಾತುಗಳನ್ನು ಕೇಳಲೆಂದೆ ಹಲವರು ಈ ಕಾರ್ಯಕ್ರಮವನ್ನು ನೋಡುತ್ತಾರೆ. ಅಲ್ಲದೆ ಇದಕ್ಕೆ ಹೆಚ್ಚಿನ ಅಭಿಮಾನಿಗಳು ಕೂಡ ಇದ್ದಾರೆ.

ಬಾಲಯ್ಯ, ರವಿತೇಜ ಕೋಲ್ಡ್ ವಾರ್ ಗಾಪಿಸ್‌ಗೆ ಬ್ರೇಕ್!

ಬಾಲಯ್ಯ, ರವಿತೇಜ ಕೋಲ್ಡ್ ವಾರ್ ಗಾಪಿಸ್‌ಗೆ ಬ್ರೇಕ್!

ಇನ್ನು ಕಾರ್ಯಕ್ರಮದಲ್ಲಿ ನಟ ಮಾಸ್‌ ಮಹಾರಾಜ ರವಿತೇಜ ಅವರು ಕೂಡ ಭಾಗಿ ಆಗಿದ್ದರು. ರವಿತೇಜ ಅವರು ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು ಅಚ್ಚರಿಗೆ ಕಾರಣ ಆಗಿತ್ತು. ಯಾಕೆಂದರೆ ಬಾಲಯ್ಯ ಮತ್ತು ರವಿತೇಜ ನಡುವೆ ಕೋಲ್ಡ್ ವಾರ್ ಇದೆ ಎನ್ನುವ ಸುದ್ದಿ ಹಲವು ದಿನಗಳಿಂದ ಜೀವಂತವಾಗಿ ಇತ್ತು. ಅದಕ್ಕೆಲ್ಲಾ ಈ ಕಾರ್ಯಕ್ರಮ ಬ್ರೇಕ್‌ ಹಾಕಿತು. ಕಾರ್ಯಕ್ರಮದಲ್ಲಿ ಇಬ್ಬರು ನಟರು ಆಪ್ತವಾಗಿಯೇ ಇದ್ದದ್ದು ಅವರ ಅಭಿಮಾನಿಗಳ ಸಂತಸಕ್ಕೆ ಕಾರಣ ಆಗಿತ್ತು.

RGV ಸಿಗುತ್ತಾ ಬಾಲಯ್ಯನ ಆಹ್ವಾನ?

RGV ಸಿಗುತ್ತಾ ಬಾಲಯ್ಯನ ಆಹ್ವಾನ?

ಇನ್ನು ಈಗ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಅವರು ತಾವೇ ಸ್ವತಃ ಈ ಕಾರ್ಯಕ್ರಮದಲ್ಲಿ ಭಾಗಿ ಆಗಲು ಕೇಳಿಕೊಂಡಿದ್ದಾರೆ. ಆದರೆ ಬಾಲಯ್ಯ ಕಡೆಯಿಂದ, ಕಾರ್ಯಕ್ರಮ ಆಯೋಜಕರ ಕಡೆಯಿಂದ ರಾಮ್‌ ಗೋಪಾಲ್‌ ವರ್ಮಾ ಅವರಿಗೆ ಆಹ್ವಾನ ಹೋಗುತ್ತಾ?. ಹಾಗೆ ಒಂದು ವೇಳೆ ಈ ಕಾರ್ಯಕ್ರಮದಲ್ಲಿ ಆರ್‌ಜಿವಿ ಭಾಗಿ ಆಗಿದ್ದೇ ಆದರೆ ಏನೆಲ್ಲಾ ಮಾತನಾಡಬಹುದು ಎನ್ನುವ ಕುತೂಹಲ ಸೃಷ್ಟಿ ಆಗಿದೆ.

More from Filmibeat

English summary
RGV Wants To Be A Part Of Unstoppable With NBK: He Ask By Tweet,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X