Laughing Buddha OTT: ರಿಷಬ್ ಶೆಟ್ಟಿ ನಿರ್ಮಾಣದ 'ಲಾಫಿಂಗ್‌ ಬುದ್ಧ' ಚಿತ್ರ ಓಟಿಟಿಗೆ ಬಂತು

ಓಟಿಟಿಯಲ್ಲಿ ವಿನಯ್ ರಾಜ್‌ಕುಮಾರ್ 'ಪೆಪೆ' ಸಿನಿಮಾ ಸ್ಟ್ರೀಮಿಂಗ್ ಆರಂಭಿಸಿದೆ. ಬಹಳ ದಿನಗಳಿಂದ ಈ ಚಿತ್ರಕ್ಕಾಗಿ ಓಟಿಟಿ ಚಂದಾದಾರರು ಕಾಯುತ್ತಿದ್ದರು. ಬಾಕ್ಸಾಫೀಸ್‌ನಲ್ಲಿ ಸಿನಿಮಾ ಸೋತರೂ ಟೀಸರ್, ಟ್ರೈಲರ್ ನೋಡಿದವರು ಸಿನಿಮಾ ನೋಡಲು ಬಯಸಿದ್ದರು. ಆದರೆ ನೆಗೆಟಿವ್ ರೆಸ್ಪಾನ್ಸ್ ಸಿಕ್ಕ ಕಾರಣ ಸುಮ್ಮನಾಗಿದ್ದರು.

ಸದ್ಯ 'ಪೆಪೆ' ಸಿನಿಮಾ ನೋಡಿ ಸೋಶಿಯಲ್ ಮೀಡಿಯಾದಲ್ಲಿ ಸಿನಿರಸಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದೆಲ್ಲದರ ನಡುವೆ ಮತ್ತೊಂದು ಕನ್ನಡ ಸಿನಿಮಾ ಓಟಿಟಿ ರಿಲೀಸ್‌ಗೆ ಸಜ್ಜಾಗಿದೆ. ರಿಷಬ್ ಶೆಟ್ಟಿ ನಿರ್ದೇಶನದ 'ಲಾಫಿಂಗ್ ಬುದ್ಧ' ಸಿನಿಮಾ ತಕ್ಕಮಟ್ಟಿಗೆ ನಿರೀಕ್ಷೆ ಮೂಡಿಸಿತ್ತು. ಆದರೆ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯಲು ವಿಫಲವಾಗಿತ್ತು. ಇದೀಗ ಸಿನಿಮಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಟ್ಟಿದೆ.

Rishab Shetty and Pramod Shetty s Laughing Buddha ready to Ott streaming this week

ಎಂ. ಭರತ್ ರಾಜ್‌ ನಿರ್ದೇಶನದ ಕಾಮೆಡಿ ಎಂಟರ್‌ಟೈನರ್ 'ಲಾಫಿಂಗ್ ಬುದ್ಧ'. ಆಗಸ್ಟ್ 30ಕ್ಕೆ ಸಿನಿಮಾ ತೆರೆಗೆ ಬಂದಿತ್ತು. ಪ್ರಮೋದ್ ಶೆಟ್ಟಿ ಪೊಲೀಸ್ ಕಾನ್ಸ್‌ಸ್ಟೇಬಲ್ ಗೋವರ್ಧನ್ ಆಗಿ ಚಿತ್ರದ ಲೀಡ್ ರೋಲ್‌ನಲ್ಲಿ ನಟಿಸಿದ್ದರು. ಸುಂದರ್ ರಾಜ್, ದಿಗಂತ್ ಮಂಚಾಲೆ, ತೇಜು ಬೆಳವಾಡಿ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಚಂದ್ರಶೇಖರ್ ಛಾಯಾಗ್ರಹಣ, ವಿಷ್ಣು ವಿಜಯ್ ಸಂಗೀತ ಚಿತ್ರಕ್ಕಿದೆ. ಕೆಆರ್‌ಜಿ ಸ್ಟುಡಿಯೋ ಸಂಸ್ಥೆ ಚಿತ್ರವನ್ನು ವಿತರಣೆ ಮಾಡಿತ್ತು.

ರಿಷಬ್ ಶೆಟ್ಟಿ ತಮ್ಮ ಹುಟ್ಟೂರಲ್ಲಿ ದೊಡ್ಡ ಸೆಟ್ ಹಾಕಿ 'ಕಾಂತಾರ' ಚಾಪ್ಟರ್-1 ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಅದರ ನಡುವೆಯೂ ಬ್ರೇಕ್ ಪಡೆದು ತಮ್ಮ 'ಲಾಫಿಂಗ್ ಬುದ್ಧ' ಚಿತ್ರದ ಪ್ರಮೋಷನ್ ಹಾಗೂ ರಿಲೀಸ್ ಕೆಲಸಗಳಲ್ಲಿ ಭಾಗಿ ಆಗಿದ್ದರು. ಒಂದ್ಕಡೆ ದೊಡ್ಡ ದೊಡ್ಡ ಸಿನಿಮಾಗಳನ್ನು ಮಾಡುತ್ತಲೇ ರಿಷಬ್ ಶೆಟ್ಟಿ ತಮ್ಮ ಬ್ಯಾನರ್‌ನಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುತ್ತಿದ್ದಾರೆ. ತಮ್ಮ ಬ್ಯಾನರ್‌ನಲ್ಲಿ ಈ ವಿಭಿನ್ನ ಸಿನಿಮಾ ನಿರ್ಮಿಸಿದ್ದರು.

Rishab Shetty and Pramod Shetty s Laughing Buddha Ott streaming now

ಶಿವಮೊಗ್ಗ ಜಿಲ್ಲೆಯ ನೀರೂರು ಪೊಲೀಸ್ ಠಾಣೆಯ ಕಾನ್ಸ್‌ಸ್ಟೇಬಲ್ ಗೋವರ್ಧನ್ ಕಥೆಯಿದು. ಮಹಾನ್ ತಿಂಡಿಪೋತ ಈತ. ಇದೇ ಕಾರಣಕ್ಕೆ ಹೊಟ್ಟೆ ಡುಮ್ಮಣ್ಣ ಆಗಿರುತ್ತಾನೆ. ಫಿಟ್ನೆಸ್ ಕಾರಣಕ್ಕೆ ಆತ ಕೆಲಸ ಕಳೆದುಕೊಳ್ಳುವ ಪ್ರಮೇಯ ಎದುರಾಗುತ್ತದೆ. ಬಳಿಕ ಒಂದು ಕೇಸ್ ಕಥೆಗೆ ಟ್ವಿಸ್ಟ್ ಕೊಡುತ್ತದೆ. ಮುಂದೆ ಏನೆಲ್ಲಾ ಆಗುತ್ತದೆ ಎನ್ನುವುದು 'ಲಾಫಿಂಗ್ ಬುದ್ಧ' ಸಿನಿಮಾ ಕಥೆ.

ತಮಗೆ ಹೇಳಿ ಮಾಡಿಸಿದಂತೆ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ನಟಿಸಿದ್ದರು. ಪಾತ್ರಕ್ಕಾಗಿ ದೇಹದ ತೂಕ ಹೆಚ್ಚಿಸಿಕೊಳ್ಳುವ ರಿಸ್ಕ್ ಸಹ ತೆಗೆದುಕೊಂಡಿದ್ದರು. ಸಾಮಾನ್ಯವಾಗಿ ಪೊಲೀಸ್ ಡ್ರಾಮಾ ಅಂದ್ರೆ ಕೊಲೆ, ಕೇಸ್, ಇನ್‌ವೆಸ್ಟಿಗೇಷನ್ ಇರುತ್ತದೆ. ಆದರೆ ಇಲ್ಲಿ ಒಬ್ಬ ಪೊಲೀಸ್ ಕಾನ್ಸ್‌ಸ್ಟೇಬಲ್ ನೋವು ನಲಿವಿನ ಕಥೆಯನ್ನು ಹೇಳಲಾಗಿದೆ. ಅದನ್ನು ಗಂಭೀರವಾಗಿ ಹೇಳಲು ತಮಾಷೆಯಾಗಿಯೇ ಪ್ರೇಕ್ಷಕರ ಮುಂದಿಡುವ ಪ್ರಯತ್ನ ಮಾಡಿದ್ದಾರೆ.

4 ವರ್ಷಗಳ ಹಿಂದೆಯೇ 'ಲಾಫಿಂಗ್ ಬುದ್ಧ' ಸಿನಿಮಾ ಆರಂಭವಾಗಿತ್ತು. ಆದರೆ ಕೊರೊನಾ ಹಾವಳಿಯಿಂದ ಚಿತ್ರೀಕರಣ ತಡವಾಗಿತ್ತು. ಬಳಿಕ ಕಳೆದ ವರ್ಷ ಮಾರ್ಚ್‌ನಲ್ಲಿ ಸಿನಿಮಾ ಚಿತ್ರೀಕರಣ ಆರಂಭಿಸಲಾಗಿತ್ತು. ಈ ವರ್ಷ ಪ್ರಚಾರ ಮಾಡಿ ಸಿನಿಮಾ ತೆರೆಗೆ ತರಲಾಗಿತ್ತು. ಭದ್ರವತಿ, ಕಾರ್ಗಲ್ ಹಾಗೂ ಬೆಂಗಳೂರಿನಲ್ಲಿ ಈ ಕಾಮಿಡಿ ಎಂಟರ್‌ಟೈನರ್ ಚಿತ್ರವನ್ನು ಸೆರೆ ಹಿಡಿದಿತ್ತು ಚಿತ್ರತಂಡ.

'ಲಾಫಿಂಗ್ ಬುದ್ಧ' ಚಿತ್ರಕ್ಕೆ ತೆರೆಮೇಲೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಆದರೆ ದೊಡ್ಡ ಗೆಲುವು ಸಿಗಲಿಲ್ಲ. ಇದೀಗ ಸಿನಿಮಾ ಓಟಿಟಿಗೆ ಬಂದಿದೆ. ಈಗಾಗಲೇ ಅಮೇಜಾನ್ ಪ್ರೈಂ ವಿಡಿಯೋದಲ್ಲಿ ಸ್ಟ್ರೀಮಿಂಗ್‌ ಆರಂಭವಾಗಿದ್ದು ವೀಕೆಂಡ್ ಮನೆಯಲ್ಲೇ ಕೂತು ಫ್ಯಾಮಿಲಿ ಜೊತೆ ಸಿನಿಮಾ ನೋಡಿ ಎಂಜಾಯ್ ಮಾಡಿ.

More from Filmibeat

English summary
Latest released Kannada film going to ott release this week;
Read more about: rishab shetty ott
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X