ನೆಟ್‌ಫ್ಲಿಕ್ಸ್‌ನಲ್ಲಿ 'ಕಾಂತಾರ' ಇಂಗ್ಲೀಷ್ ವರ್ಷನ್: ತುಳು ವರ್ಷನ್ ಎಲ್ಲಿ? ಯಾವಾಗ?

'ಕಾಂತಾರ' ದಂಡಯಾತ್ರೆ ಮುಂದುವರೆದಿದೆ. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲಿ ಹೊರ ದೇಶಗಳಲ್ಲಿ ಸಿನಿಮಾ ಭರ್ಜರಿ ಪ್ರದರ್ಶನ ಕಂಡಿತ್ತು. ಇದೀಗ ಓಟಿಟಿ, ಟಿವಿಯಲ್ಲಿ ಸಿನಿಮಾ ಸದ್ದು ಮಾಡ್ತಿದೆ.

ಕನ್ನಡ ಮಣ್ಣಿನ ಸಿನಿಮಾ ಬರೀ ಕನ್ನಡದಲ್ಲಿ ಮಾತ್ರವಲ್ಲದೇ ಬಾಲಿವುಡ್‌ನಲ್ಲೂ ಶತದಿನ ಪ್ರದರ್ಶನ ಕಂಡಿದೆ. ರಿಷಬ್ ಶೆಟ್ಟಿ ಕಾಡುಬೆಟ್ಟು ಶಿವ ಆಗಿ ನ್ಯಾಷನಲ್ ಸ್ಟಾರ್ ಆಗಿಬಿಟ್ಟಿದ್ದಾರೆ. ಇತ್ತೀಚೆಗೆ ಭರ್ಜರಿಯಾಗಿ ಶತದಿನೋತ್ಸವ ಸಮಾರಂಭ ಕೂಡ ನಡೀತು. ಇನ್ನು 'ಕಾಂತಾರ' ಪ್ರೀಕ್ವೆಲ್‌ಗೂ ಭರ್ಜರಿ ಸಿದ್ಧತೆ ನಡೀತಿದೆ. ಬಹಳ ದೊಡ್ಡಮಟ್ಟದಲ್ಲಿ ಈ ಬಾರಿ ಚಿತ್ರವನ್ನು ಪ್ರೇಕ್ಷಕರ ಮುಂದೆ ಪ್ರಯತ್ನ ನಡೀತಿದೆ. ಈಗಾಗಲೇ ಕಥೆ ಬರೆಯುವ ಕೆಲಸ ಶುರುವಾಗಿದ್ದು, ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆ. ಮುಂದಿನ ವರ್ಷ ಮಧ್ಯ ಭಾಗದಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ.

'ಕಾಂತಾರ' ಕನ್ನಡ, ತೆಲುಗು, ತಮಿಳು, ಮಲಯಾಳಂ ವರ್ಷನ್ ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದ್ದರೆ ಹಿಂದಿ ವರ್ಷನ್ ಮಾತ್ರ ನೆಟ್‌ಫ್ಲಿಕ್ಸ್‌ನಲ್ಲಿ ಸಿಗುತ್ತಿದೆ. ಇದೀಗ ಇಂಗ್ಲೀಷ್ ಹಾಗೂ ತುಳು ವರ್ಷನ್ ಓಟಿಟಿ ರಿಲೀಸ್ ಬಗ್ಗೆ ಚರ್ಚೆ ಶುರುವಾಗಿದೆ.

ಮಾ. 1ಕ್ಕೆ ಓಟಿಟಿಗೆ ಇಂಗ್ಲೀಷ್‌ ವರ್ಷನ್

ಮಾ. 1ಕ್ಕೆ ಓಟಿಟಿಗೆ ಇಂಗ್ಲೀಷ್‌ ವರ್ಷನ್

ಹೌದು 'ಕಾಂತಾರ' ಸಿನಿಮಾ 5 ಭಾಷೆಗಳಲ್ಲಿ ಮಾತ್ರವಲ್ಲ 7 ಭಾಷೆಗಳಿಗೆ ಡಬ್ ಆಗಿದೆ. 6 ಭಾಷೆಗಳಲ್ಲಿ ಪ್ರೇಕ್ಷಕರ ಮುಂದೆ ಬಂದಿದೆ. ಇನ್ನು ಇಂಗ್ಲೀಷ್‌ ಭಾಷೆಗೆ ಡಬ್ ಮಾಡುವ ಕೆಲಸಗಳು ಭರದಿಂದ ಸಾಗುತ್ತಿದ್ದು ಮಾರ್ಚ್ 1ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಕನ್ನಡದ ಸಿನಿಮಾವೊಂದು ಇಂಗ್ಲೀಷ್‌ ಭಾಷೆಗೆ ಡಬ್ ಆಗುವುದು ಬಹಳ ವಿರಳ. ಆದರೆ 'ಕಾಂತಾರ' ಆ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸುತ್ತಿದೆ. ಇಂಗ್ಲೀಷ್‌ಗೆ ಡಬ್‌ ಆಗಿ ವಿದೇಶಗಳಲ್ಲಿ ಸದ್ದು ಮಾಡಲು ಹೊರಟಿದೆ.

ಸಿಂಪ್ಲಿ ಸೌತ್‌ನಲ್ಲಿ ತುಳು ವರ್ಷನ್

ಸಿಂಪ್ಲಿ ಸೌತ್‌ನಲ್ಲಿ ತುಳು ವರ್ಷನ್

ಹೇಳಿ ಕೇಳಿ 'ಕಾಂತಾರ' ತುಳುನಾಡಿನ ಕಥೆ. ಚಿತ್ರದಲ್ಲಿ ಒಂದಷ್ಟು ತುಳು ಪದಗಳನ್ನು ಕೂಡ ಬಳಸಿಕೊಳ್ಳಲಾಗಿದೆ. ಈ ಸಿನಿಮಾ ರಿಲೀಸ್ ಆಗಿ ಥಿಯೇಟರ್‌ಗಳಲ್ಲಿ ಸದ್ದು ಮಾಡಲು ಆರಂಭಿಸುತ್ತಿದ್ದಂತೆ ತುಳು ಭಾಷೆಗೂ ಡಬ್ ಮಾಡಿ ರಿಲೀಸ್ ಮಾಡುವಂತೆ ಕೆಲವರು ಕೇಳಿದ್ದರು. ನಿರ್ಮಾಪಕರಾದ ವಿಜಯ್ ಕಿರಗಂದೂರ್ ಕೂಡ ಬಹಳ ಮುತುವರ್ಜಿ ವಹಿಸಿ ಚಿತ್ರವನ್ನು ತುಳು ಡಬ್ ಮಾಡಿಸಿ ಥಿಯೇಟರ್‌ಗಳಲ್ಲಿ ರಿಲೀಸ್ ಮಾಡಿಸಿದ್ದರು. ಅಂದಹಾಗೆ 'ಸಿಂಪ್ಲಿ ಸೌತ್‌' ಡಿಜಿಟಲ್ ಫ್ಲಾಟ್‌ಫಾರ್ಮ್‌ನಲ್ಲಿ ಭಾರತ ಬಿಟ್ಟು ಹೊರ ದೇಶಗಳಲ್ಲಿ ತುಳು ವರ್ಷನ್ ಸ್ಟ್ರೀಮಿಂಗ್ ಆಗಲಿದೆ.

'ಕಾಂತಾರ' ಪ್ರೀಕ್ವೆಲ್‌ಗಾಗಿ ಕಸರತ್ತು

'ಕಾಂತಾರ' ಪ್ರೀಕ್ವೆಲ್‌ಗಾಗಿ ಕಸರತ್ತು

ಸಾಮಾನ್ಯವಾಗಿ ಸರಣಿ ಸಿನಿಮಾ ಅಂದಾಗ ಕಥೆಯನ್ನು ಮುಂದುವರೆಸುತ್ತಾರೆ. ಆದರೆ ಮುಂದಿನ ಸಿನಿಮಾದಲ್ಲಿ 'ಕಾಂತಾರ' ಕಥೆ ಹಿಂದಕ್ಕೆ ಹೋಗಲಿದೆ. ಹೌದು ಇತ್ತೀಚೆಗೆ 'ಕಾಂತಾರ' ಶತದಿನೋತ್ಸವ ವೇದಿಕೆಯಲ್ಲಿ ಮಾತನಾಡಿದ ರಿಷಬ್ ಶೆಟ್ಟಿ ನೀವು ನೋಡಿರುವುದು ಕಾಂತಾರ ಭಾಗ-2, ಮುಂದೆ ಬರೋದು 'ಕಾಂತಾರ' ಭಾಗ- 1 ಎಂದಿದ್ದಾರೆ. ಇದನ್ನು ಕೇಳಿ ಕೆಲವರು ಥ್ರಿಲ್ಲಾಗಿದ್ದಾರೆ. ಕಾಡುಬೆಟ್ಟು ಶಿವನ ತಂದೆ ಕಥೆಯನ್ನು ನೋಡಲು ಕಾಯುತ್ತಿದ್ದಾರೆ.

400 ಕೋಟಿ ಬಾಚಿದ್ದ ಸಿನಿಮಾ

400 ಕೋಟಿ ಬಾಚಿದ್ದ ಸಿನಿಮಾ

ಸೆಪ್ಟೆಂಬರ್ 30ಕ್ಕೆ ಕನ್ನಡದಲ್ಲಿ ತೆರೆಗಪ್ಪಳಿಸಿದ 'ಕಾಂತಾರ' ಮುಂದೆ ನೋಡ ನೋಡುತ್ತಲೇ ಪ್ಯಾನ್ ಇಂಡಿಯಾ ಸಿನಿಮಾ ಆಗಿತ್ತು. ಬರೋಬ್ಬರಿ 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ ದಾಖಲೆ ಬರೀತು. ಒಂದರ್ಥದಲ್ಲಿ 'KGF - 2' ಚಿತ್ರವನ್ನು ಮೀರಿಸಿ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಪರಭಾಷಿಕರು ಕೂಡ ಸಿನಿಮಾ ನೋಡಿ ಕೊಂಡಾಡಿದರು. ವಿದೇಶದಲ್ಲಿ ಜನ ಟಿಕೆಟ್‌ಗಾಗಿ ಕ್ಯೂ ನಿಂತ ಪ್ರಸಂಗವೂ ನಡೆಯಿತು.

More from Filmibeat

English summary
Rishab shetty Starrer Kantara Tulu Version Coming Soon on Simply South Platform worldwide, excluding India. English version of Kantara to release in Netflex on March 1st. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X