ಭರ್ಜರಿ ಮೊತ್ತಕ್ಕೆ 'ಕಾಂತಾರ ಚಾಪ್ಟರ್ 1' ಓಟಿಟಿ ಹಕ್ಕುಗಳು ಸೇಲ್; ಸಿನಿಮಾದಲ್ಲಿ ಅಂತಹದ್ದೇನಿರುತ್ತೆ?
ದೇಶಾದ್ಯಂತ ಪ್ರೇಕ್ಷಕರು 'ಕಾಂತಾರ' ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದರು. ಈ ಸಿನಿಮಾದ ನೆನಪು ಇನ್ನೂ ಮಾಸಿಲ್ಲ. ಆದರೆ, ರಿಷಬ್ ಶೆಟ್ಟಿಯ ಪ್ರೀಕ್ಷೆಲ್ ಕೂಡ ಅಷ್ಟೇ ಸದ್ದು ಮಾಡುತ್ತಾ? ಗೊತ್ತಿಲ್ಲ. 'ಕಾಂತಾರ ಚಾಪ್ಟರ್ 1' ಪ್ರೇಕ್ಷಕರ ಮುಂದೆ ಒಂದಿಷ್ಟು ಅದ್ಭುತ ಸಂಗತಿಗಳನ್ನು ಇಟ್ಟುಕೊಂಡು ತೆರೆಮೇಲೆ ಬರೋದಂತೂ ಗ್ಯಾರಂಟಿ. ರಿಷಬ್ ಶೆಟ್ಟಿಯನ್ನು ಮಾಸ್ ಅವತಾರದಲ್ಲಿ ನೋಡಬಹುದು.
ರಿಷಬ್ ಶೆಟ್ಟಿಯ 'ಕಾಂತಾರ' ಕೇವಲ ಬಾಕ್ಸಾಫೀಸ್‌ನಲ್ಲಷ್ಟೇ ಸದ್ದು ಮಾಡಲಿಲ್ಲ. ಕಂಟೆಂಟ್ ವಿಷಯದಲ್ಲೂ ಭಾರೀ ಸದ್ದು ಮಾಡಿತ್ತು. ರಿಷಬ್ ಶೆಟ್ಟಿ ಅನ್ನೋ ಸಾಮಾನ್ಯ ಕನ್ನಡದ ನಟ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದರು. 'ಕಾಂತಾರ' ತೆರೆಕಂಡ ದಿನದಿಂದಲೂ ಮತ್ತೊಂದು 'ಕಾಂತಾರ'ಕ್ಕಾಗಿ ಪ್ರೇಕ್ಷಕರು ಎದುರು ನೋಡುತ್ತಿದ್ದಾರೆ. ಈ ಇತ್ತ ರಿಷಬ್ ಶೆಟ್ಟಿ ಮತ್ತು ತಂಡ ಬಿಡುವಿಲ್ಲದೆ ಕೆಲಸ ಮಾಡುತ್ತಿದೆ.

ಈ ಗ್ಯಾಪ್‌ನಲ್ಲಿ 'ಕಾಂತಾರ ಚಾಪ್ಟರ್ 1' ಹೊಸ ಇತಿಹಾಸ ಸೃಷ್ಟಿಸುತ್ತೆ ಅನ್ನೋ ಅಭಿಪ್ರಾಯಗಳು ಓಡಾಡುತ್ತಿವೆ. ಅದಕ್ಕೆ ಈ ಸಿನಿಮಾವನ್ನು ಅಮೆಜಾನ್ ಪ್ರೈಂ ವಿಡಿಯೋ ದುಬಾರಿ ಮೊತ್ತಕ್ಕೆ ಡಿಜಿಟಲ್ ಹಕ್ಕುಗಳನ್ನು ಮಾರಾಟ ಮಾಡಿದೆ ಅನ್ನೋದು ಸುದ್ದಿ. ಹಾಗಿದ್ದರೆ, 'ಕಾಂತಾರ' ಪ್ರಿಕ್ಚೆಲ್ ಪ್ರೈಮ್ ವಿಡಿಯೋಗೆ ಸೇಲ್ ಆಗಿದ್ದು ಎಷ್ಟು ಮೊತ್ತಕ್ಕೆ? ಅಷ್ಟು ದೊಡ್ಡ ಮೊತ್ತ ಕೊಟ್ಟು ಸಿನಿಮಾ ಖರೀದಿಸುವಂತಹದ್ದು ಏನಿತ್ತು? ಅನ್ನೋದನ್ನು ನೋಡುವುದಾದರೇ..
ರಿಷಬ್ ಶೆಟ್ಟಿ 20 ಕೋಟಿ ರೂ. ಬಜೆಟ್‌ನಲ್ಲಿ 'ಕಾಂತಾರ' ಸಿನಿಮಾ ನಿರ್ಮಾಣ ಮಾಡಿದ್ದರು. ಅದು ಪ್ಯಾನ್ ಇಂಡಿಯಾ ಮಟ್ಟಕ್ಕೆ ಸದ್ದು ಮಾಡುತ್ತೆ ಅನ್ನೋ ಚಿಕ್ಕದೊಂದು ಸುಳಿವು ಕೂಡ ಇರಲಿಲ್ಲ. ಸಿನಿಮಾ ಬಿಡುಗಡೆಯಾದ ಕೆಲವೇ ದಿನಗಳಲ್ಲಿ 'ಕಾಂತಾರ' ದೇಶ್ಯಾದ್ಯಂತ ಸದ್ದು ಮಾಡುವುದಕ್ಕೆ ಶುರು ಮಾಡಿತ್ತು. ಎಲ್ಲಾ ಭಾಷೆಯ ಜನರು ಮುಗಿಬಿದ್ದು ಸಿನಿಮಾ ನೋಡಿದ್ದರು. ಚಿಕ್ಕ ಬಜೆಟ್‌ನಲ್ಲಿ ನಿರ್ಮಾಣಗೊಂಡಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ 400 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ರಿಷಬ್ ಶೆಟ್ಟಿಯನ್ನು ರಾತ್ರೋ ರಾತ್ರಿ ಸ್ಟಾರ್ ಮಟ್ಟಕ್ಕೆ ಏರಿಸಿತ್ತು.

ಈ ಮಟ್ಟಕ್ಕೆ ಸದ್ದು ಮಾಡಿದ ಸಿನಿಮಾದ ಪ್ರೀಕ್ವೆಲ್ ನಿರ್ಮಾಣ ಆಗುತ್ತಿದೆ. ರಿಷಬ್ ಶೆಟ್ಟಿ ನಿರ್ದೇಶನದ ಜೊತೆಗೆ ನಟನೆಯನ್ನೂ ಮಾಡುತ್ತಿದ್ದಾರೆ. ಈಗಾಗಲೇ ಸಿನಿಮಾದ ಫಸ್ಟ್ ಲುಕ್ ಮತ್ತೊಂದು ಬ್ಲಾಕ್ ಬಸ್ಟರ್ ಆಗುತ್ತೆ ಅಂತ ಸಾರಿ ಹೇಳುತ್ತಿದೆ. ರಿಷಬ್ ಶೆಟ್ಟಿ ಮಾಸ್ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಅಕ್ಟೋಬರ್ 2ನೇ ತಾರೀಕಿನಂದು ಪ್ರತ್ಯಕ್ಷ ಆಗಲಿದ್ದಾರೆ. ಈ ಬಾರಿ ಇನ್ನೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡುವುದಕ್ಕೆ ಸಕಲ ಸಿದ್ಧತೆಗಳು ಕೂಡ ನಡೆದಿದೆ. ಅಷ್ಟಕ್ಕೂ ಯುದ್ಧ ಸನ್ನಿವೇಶವೊಂದಕ್ಕೆ ರಿಷಬ್ ಶೆಟ್ಟಿ ನಾಲ್ಕೈದು ವಿದ್ಯೆಗಳನ್ನು ಕಲಿತಿದ್ದಾರೆ ಎಂದು ವರದಿಯಾಗಿದೆ.
ರಿಷಬ್ ಶೆಟ್ಟಿ 'ಕಾಂತಾರ ಚಾಪ್ಟರ್ 1'ಗಾಗಿ ದುಬಾರಿ ಯುದ್ಧ ಸನ್ನಿವೇಶವನ್ನು ಶೂಟಿಂಗ್ ಮಾಡುತ್ತಿದ್ದಾರೆ. ಈ ದೃಶ್ಯಕ್ಕಾಗಿ ರಿಷಬ್ ಶೆಟ್ಟಿ, ಕುದುರೆ ಸವಾರಿ, ಕಳರಿಯಪಟ್ಟು, ಕತ್ತಿವರೆಸೆಯನ್ನು ಕಲಿತಿದ್ದಾರೆ. ಹಲವು ತಿಂಗಳುಗಳಿಂದ ಈ ವಿದ್ಯೆಯನ್ನು ಕಲಿತು ಯುದ್ಧದ ಸನ್ನಿವೇಶದಲ್ಲಿ ಭಾಗವಹಿಸಿದ್ದಾರೆಂದು ವರದಿಯಾಗಿತ್ತು. ಹಾಗೇ ಕೇರಳದ ಈ ಸಮರ ಕಲೆಗಳಿಗೂ 'ಕಾಂತಾರ' ಸಿನಿಮಾ ಏನು ಸಂಬಂಧ ಅನ್ನೋ ಕುತೂಹಲ ಈಗಾಗಲೇ ಹುಟ್ಟಿಕೊಂಡಿದೆ.
ಇನ್ನು ಇಷ್ಟೆಲ್ಲ ವಿಶೇಷತೆಗಳನ್ನು ಹೊಂದಿರುವ 'ಕಾಂತಾರ ಚಾಪ್ಟರ್ 1' ಓಟಿಟಿ ಹಕ್ಕುಗಳು ಕೂಡ ಮಾರಾಟ ಆಗಿದೆ. ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳ ಓಟಿಟಿ ಹಕ್ಕುಗಳನ್ನು ಸುಮಾರು 125 ಕೋಟಿ ರೂಪಾಯಿಗೆ ಅಮೆಜಾನ್ ಪ್ರೈಮ್ ವಿಡಿಯೋ ಖರೀದಿ ಮಾಡಿದೆ ಎಂದು ವರದಿಯಾಗಿದೆ. ಹೊಂಬಾಳೆ ಫಿಲ್ಮ್ಸ್ ಬಿಡುಗಡೆ ಮುನ್ನವೇ ದೊಡ್ಡ ಮಟ್ಟದಲ್ಲಿ ಜಾಕ್‌ಪಾಟ್ ಹೊಡೆದಿದ್ದು, ಇದೇ ಅಕ್ಟೋಬರ್ 2ರ ಬಳಿಕ ಬಾಕ್ಸಾಫೀಸ್‌ನಲ್ಲಿ ಯಾವ ಮಟ್ಟಕ್ಕೆ ಸದ್ದು ಮಾಡುತ್ತೆ ಅನ್ನೋ ಕುತೂಹಲವಿದೆ.


Click it and Unblock the Notifications











