For Quick Alerts
  ALLOW NOTIFICATIONS  
  For Daily Alerts

  ಏಪ್ರಿಲ್ 25ಕ್ಕೆ ಅಮೇಜಾನ್ ಪ್ರೈಮ್‌ನಲ್ಲಿ ರಾಬರ್ಟ್ ಪ್ರಸಾರ

  |

  ಕನ್ನಡ ಸೂಪರ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಪ್ರಥಮ ಬಾರಿಗೆ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರವಾಗುತ್ತಿದೆ. ಏಪ್ರಿಲ್ 25ಕ್ಕೆ ದರ್ಶನ್ ಸಿನಿಮಾ ಒಟಿಟಿ ಮೂಲಕ ಮನೆ ಮನೆಗೂ ತಲುಪುತ್ತಿದೆ.

  Recommended Video

  ಅಮೆಜಾನ್ ಪ್ರೈಮ್ ಗೆ ಬರ್ತಿದೆ ರಾಬರ್ಟ್ ಸಿನಿಮಾ | Filmibeat Kannada

  ಏಪ್ರಿಲ್ 25 ರಿಂದ, ಭಾರತದಲ್ಲಿನ ಮತ್ತು ಇತರ 240 ದೇಶಗಳು ಮತ್ತು ಪ್ರಾಂತ್ಯಗಳಲ್ಲಿನ ಪ್ರೈಮ್ ಸದಸ್ಯರು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ರಾಬರ್ಟ್ ವೀಕ್ಷಿಸಬಹುದು.

  'ರಾಬರ್ಟ್'ಗೆ ಮೊದಲು ಆಯ್ಕೆಯಾಗಿದ್ದು ರಾಶಿ ಖನ್ನಾ; ಆದರೆ ಆಶಾ ಸೆಲೆಕ್ಟ್ ಆಗಿದ್ದು ಹೇಗೆ?'ರಾಬರ್ಟ್'ಗೆ ಮೊದಲು ಆಯ್ಕೆಯಾಗಿದ್ದು ರಾಶಿ ಖನ್ನಾ; ಆದರೆ ಆಶಾ ಸೆಲೆಕ್ಟ್ ಆಗಿದ್ದು ಹೇಗೆ?

  ರಾಬರ್ಟ್ ಕಥಾಹಂದರ

  ಈ ಚಿತ್ರವು ಲಖನೌದಲ್ಲಿ ತನ್ನ ಮಗ ಅರ್ಜುನ್ ಜೊತೆ ವಾಸಿಸುವ ಮತ್ತು ದಕ್ಷಿಣ ಭಾರತದ ಅಡುಗೆ ಸೇವೆಯಲ್ಲಿ ಅಡುಗೆಯವನಾಗಿ ಕೆಲಸ ಮಾಡುವ ರಾಘವ (ದರ್ಶನ್ ನಿರ್ವಹಿಸಿದ)ನ ಜೀವನದ ಸುತ್ತ ಕೇಂದ್ರೀಕರಿಸಿದೆ. ರಾಘವನು ಆಜ್ಞಾಧಾರಕ, ದೇವರಿಗೆ ಹೆದರುವ ಮತ್ತು ಶಾಂತಿ ಪ್ರಿಯ ವ್ಯಕ್ತಿಯಾಗಿದ್ದರೆ, ಅವನ ಮಗನು ತಂದೆಗೆ ಸಂಪೂರ್ಣ ವಿರುದ್ಧ - ಸೇಡಿನ ಮನೋಭಾವದವನು ಮತ್ತು ಹಠಮಾರಿ. ಅವರ ವಿರುದ್ಧ ಧ್ರುವಗಳಂತಹ ವ್ಯತಿರಿಕ್ತ ವ್ಯಕ್ತಿತ್ವಗಳು ಚಿತ್ರದಲ್ಲಿನ ಎಲ್ಲಾ ಕಾರ್ಯಗಳ ಕೇಂದ್ರವಾಗಿ, ಕಥೆಯನ್ನು ಮುಂದಕ್ಕೆ ನಡೆಸಿಕೊಂಡು ಹೋಗುತ್ತದೆ.

  ಅರ್ಜುನ್ ನ ಪ್ರತೀಕಾರಿ ಮನೋಭಾವದಿಂದ ಅವನು ಒಬ್ಬ ಪ್ರಬಲ ದರೋಡೆಕೋರನೊಂದಿಗೆ ತೊಂದರೆಗೆ ಸಿಲುಕುವವರೆಗೂ ತಂದೆ-ಮಗ ಜೋಡಿಯು ನೆಮ್ಮದಿಯಾಗಿ ಜೀವಿಸುತ್ತಿರುತ್ತಾರೆ. ರಾಘವನು ತನ್ನ ಮಗನನ್ನು ರಕ್ಷಿಸಲು ತನ್ನ ಬಲವಂತವಾಗಿ ನಿಜರೂಪವನ್ನು ಧರಿಸಬೇಕಾಗುತ್ತದೆ. ಆ ಗಲಭೆಯ ಫಲವೇ ಈ ಆಕ್ಷನ್ ಮತ್ತು ಸಾಹಸಮಯ ಕಥೆ.

  "ಪುನೀತ್ ರಾಜ್‍ಕುಮಾರ್ ಅವರ ಯುವರತ್ನದ ಯಶಸ್ವಿ ಡಿಜಿಟಲ್ ಪ್ರದರ್ಶನದ ನಂತರ, ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಮತ್ತೊಂದು ಬ್ಲಾಕ್-ಬಸ್ಟರ್ ಕನ್ನಡ ಚಲನಚಿತ್ರ ರಾಬರ್ಟ್ ಅವರ ಡಿಜಿಟಲ್ ಪ್ರದರ್ಶನವನ್ನು ಘೋಷಿಸಲು ನಾವು ಅತ್ಯಂತ ರೋಮಾಂಚನಗೊಂಡಿದ್ದೇವೆ" ಎಂದು ಅಮೆಜಾನ್ ಪ್ರೈಮ್ ವಿಡಿಯೋ, ವಿಷಯದ ನಿರ್ದೇಶಕ ಮತ್ತು ಮುಖ್ಯಸ್ಥ ವಿಜಯ್ ಸುಬ್ರಮಣ್ಯಂ ಹೇಳಿದ್ದಾರೆ.

  'ರಾಬರ್ಟ್' ಸಿನಿಮಾ ನೋಡಿ ಮಂಗಳಮುಖಿ 'ಪದ್ಮಶ್ರೀ' ಮಂಜಮ್ಮ ಜೋಗತಿ ಹೇಳಿದ್ದೇನು?'ರಾಬರ್ಟ್' ಸಿನಿಮಾ ನೋಡಿ ಮಂಗಳಮುಖಿ 'ಪದ್ಮಶ್ರೀ' ಮಂಜಮ್ಮ ಜೋಗತಿ ಹೇಳಿದ್ದೇನು?

  "ರಾಬರ್ಟ್ ವರ್ಷದ ಅತ್ಯಂತ ನಿರೀಕ್ಷಿತ ಕನ್ನಡ ಚಲನಚಿತ್ರಗಳಲ್ಲಿ ಒಂದಾಗಿದೆ ಮತ್ತು ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡ ನಂತರ ಚಲನಚಿತ್ರವನ್ನು ಭಾರತದ ಮತ್ತು 240 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಪ್ರೈಮ್ ಸದಸ್ಯರಿಗೆ ತರಲು ನಮಗೆ ಸಂತೋಷವಾಗಿದೆ. ಈಗ ಪ್ರೇಕ್ಷಕರು ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಈ ಅದ್ಭುತ ಸಿನಿಮೀಯ ಅನುಭವವನ್ನು ಮನೆಯಲ್ಲಿಯೇ ಆನಂದಿಸಬಹುದು'' ಎಂದಿದ್ದಾರೆ ವಿಜಯ್ ಸುಬ್ರಮಣ್ಯಂ.

  Roberrt premiering on Amazon Prime Video on 25th April

  ''ರಾಬರ್ಟ್ ಪ್ರೇಕ್ಷಕರ ಅಚ್ಚುಮೆಚ್ಚಿನ ನಾಯಕ ದರ್ಶನ್ ನಟನೆಯ ಸಂಪೂರ್ಣ ಆಕ್ಷನ್ ಚಿತ್ರವಾಗಿದೆ. ಅವರ ಅದ್ಭುತ ಅಭಿನಯವು ಚಿತ್ರಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ ''ಎಂದು ಬರಹಗಾರ ಮತ್ತು ನಿರ್ದೇಶಕ ತರುಣ್ ಸುಧೀರ್ ಹೇಳಿದ್ದಾರೆ.

  ತನ್ನ ಡಿಜಿಟಲ್ ಪ್ರಥಮ ಪ್ರದರ್ಶನಕ್ಕಿಂತ ಮುಂಚಿತವಾಗಿ ತಮ್ಮ ಉತ್ಸಾಹವನ್ನು ಹಂಚಿಕೊಂಡಿರುವ ಪ್ರಮುಖ ಪಾತ್ರದಲ್ಲಿರುವ ನಟ ದರ್ಶನ್ "ಚಿತ್ರದ ಕಥಾವಸ್ತುವು ಪ್ರೇಕ್ಷಕರನ್ನು ತಲ್ಲೀನಗೊಳ್ಳುವಂತೆ ಮಾಡುತ್ತದೆ, ಮತ್ತು ಚಿತ್ರದಲ್ಲಿನ ನನ್ನ ಪಾತ್ರವು ವೀಕ್ಷಿಸಲು ಆಸಕ್ತಿದಾಯಕವಾಗಿದೆ. ದರೋಡೆಕೋರ, ನಿಷ್ಠಾವಂತ ಸ್ನೇಹಿತ ಮತ್ತು ಉತ್ತಮ ತಂದೆಯಂತಹ ವಿಭಿನ್ನ ಅವತಾರಗಳಲ್ಲಿ ನನ್ನನ್ನು ನೋಡಲು ಇದು ವೀಕ್ಷಕರಿಗೆ ಅವಕಾಶ ನೀಡುತ್ತದೆ'' ಎಂದಿದ್ದಾರೆ.

  ತರುಣ್ ಸುಧೀರ್ ಬರೆದು ನಿರ್ದೇಶಿಸಿದ ಮತ್ತು ಉಮಾಪತಿ ಶ್ರೀನಿವಾಸ ಗೌಡ ಅವರು ಉಮಾಪತಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ ಈ ಚಿತ್ರದಲ್ಲಿ ದರ್ಶನ್, ಜಗಪತಿ ಬಾಬು, ರವಿ ಕಿಶನ್, ವಿನೋದ್ ಪ್ರಭಾಕರ್ ಮತ್ತು ಚೊಚ್ಚಲ ನಟಿ ಆಶಾ ಭಟ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

  English summary
  Darshan Starrer Roberrt premiering on Amazon Prime Video on 25th April.
  Wednesday, April 21, 2021, 16:01
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X