twitter
    For Quick Alerts
    ALLOW NOTIFICATIONS  
    For Daily Alerts

    100 ದಿನ ಪೂರೈಸಿದ ರಾಜಮೌಳಿಯ RRR: ನೆಟ್‌ಫ್ಲಿಕ್ಸ್ ಸಿಇಓ ಮನಗೆದ್ದ ಭಾರತದ ಸಿನಿಮಾ!

    |

    ಜೂ.ಎನ್‌ಟಿಆರ್, ರಾಮ್‌ಚರಣ್ ಮೆಗಾ ಕಾಂಬಿನೇಷನ್ ಸಿನಿಮಾ RRR ವಿಶ್ವದ ಮನಗೆದ್ದಿದೆ. ಮಾರ್ಚ್ ತಿಂಗಳಲ್ಲಿ ಥಿಯೇಟರ್‌ಗೆ ಲಗ್ಗೆ ಇಟ್ಟಿದ್ದ ರಾಜಮೌಳಿ ಸಿನಿಮಾ ಬಾಕ್ಸಾಫೀಸ್‌ನಲ್ಲೂ ಚಿಂದಿ ಉಡಾಯಿಸಿತ್ತು. ಇದೇ ಸಿನಿಮಾವೀಗ 100 ದಿನಗಳನ್ನು ಪೂರೈಸಿದೆ.

    ಟಾಲಿವುಡ್‌ನಲ್ಲಿ ಇದೇ ಮೊದಲ ಬಾರಿಗೆ ಜೂ.ಎನ್‌ಟಿಆರ್ ಹಾಗೂ ರಾಮ್‌ ಚರಣ್ ಇಬ್ಬರೂ ಒಂದೇ ಸಿನಿಮಾದಲ್ಲಿ ನಟಿಸಿದ್ದರು. ಈ ಡೆಡ್ಲಿ ಕಾಂಬಿನೇಷನ್‌ ಅನ್ನು ತೆರೆಮೇಲೆ ತರುವುದಕ್ಕೆ ರಾಜಮೌಳಿ ಮೂರು ವರ್ಷ ತೆಗೆದುಕೊಂಡಿದ್ದರು.

    ಮಹೇಶ್ ಬಾಬು ಸಿನಿಮಾ ಮುಗಿಸಲು ರಾಜಮೌಳಿಗೆ ಬೇಕು 3 ವರ್ಷ: ಫ್ರಾನ್ಸ್‌ನಲ್ಲಿ VFX!ಮಹೇಶ್ ಬಾಬು ಸಿನಿಮಾ ಮುಗಿಸಲು ರಾಜಮೌಳಿಗೆ ಬೇಕು 3 ವರ್ಷ: ಫ್ರಾನ್ಸ್‌ನಲ್ಲಿ VFX!

    ಭಾರತ ಅಷ್ಟೇ ಅಲ್ಲ, ಹಾಲಿವುಡ್ ಸೆಲೆಬ್ರೆಟಿಗಳೂ RRR ಸಿನಿಮಾ ನೋಡಿ ಭೇಷ್ ಎಂದಿದ್ದರು. ಈಗ ಇದೇ ಸಿನಿಮಾ ಶತ ದಿನಗಳನ್ನು ಪೂರೈಸಿದ್ದು ಮತ್ತೊಂದು ಮೈಲಿಗಲ್ಲು ಸೃಷ್ಟಿಸಿದೆ. ಸದ್ಯ ಒಟಿಟಿಯಲ್ಲೂ ಸದ್ದು ಮಾಡುತ್ತಿರುವ ಈ ಸಿನಿಮಾ ದೇಶದ ವಿದೇಶದಲ್ಲೂ ಮೆಚ್ಚುಗೆ ಗಳಿಸುತ್ತಿದೆ. ಅಷ್ಟೇ ಅಲ್ಲದೆ, ಒಟಿಟಿ ದಿಗ್ಗಜ ನೆಟ್‌ಫ್ಲಿಕ್ಸ್ ಸಿಇಓ ಮನಗೆದ್ದಿದೆ.

    'RRR' ಅತ್ಯದ್ಭುತ ಎಂದ ಹಾಲಿವುಡ್ ಸಿನಿಮಾಕರ್ಮಿ, 'ಕೆಜಿಎಫ್ 2' ನೋಡಿ ಎಂದ ನೆಟ್ಟಿಗರು'RRR' ಅತ್ಯದ್ಭುತ ಎಂದ ಹಾಲಿವುಡ್ ಸಿನಿಮಾಕರ್ಮಿ, 'ಕೆಜಿಎಫ್ 2' ನೋಡಿ ಎಂದ ನೆಟ್ಟಿಗರು

    RRR 100 ಡೇಸ್

    RRR 100 ಡೇಸ್

    ರಾಜಮೌಳಿ ನಿರ್ದೇಶನ ಜೂ.ಎನ್‌ಟಿಆರ್ ಹಾಗೂ ರಾಮ್‌ಚರಣ್ ಪವರ್‌ಫುಲ್ ಆಕ್ಟಿಂಗ್, ಆಕ್ಷನ್ ಇರುವ ಸಿನಿಮಾ RRR. ಈ ಸಿನಿಮಾ 100 ದಿನಗಳ ಸಂಭ್ರಮದಲ್ಲಿದೆ. ಒಟಿಟಿಯಲ್ಲಿ ಬಿಡುಗಡೆಗೊಂಡ ಬಳಿಕವೂ ಹಲವೆಡೆ ಸಿನಿಮಾ ಇನ್ನೂ ಪ್ರದರ್ಶನ ಕಾಣುತ್ತಿದೆ. ಜೊತೆಗೆ ಒಟಿಟಿಯಲ್ಲೂ ಗೆದ್ದು ಬೀಗಿದೆ. ಈ ಖುಷಿಯನ್ನು RRR ತಂಡ ಕೂಡ ಶೇರ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಂಭ್ರಮಿಸಿದೆ.

    4ನೇ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ

    4ನೇ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ

    RRR ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಿದೆ. ಹೀಗಾಗಿ ವಿದೇಶಗಳಲ್ಲಿಯೂ ಈ ಸಿನಿಮಾ ಜನಮನ್ನಣೆ ಗಳಿಸುತ್ತಿದೆ. ಥೈಲ್ಯಾಂಡ್ ಸೌತ್ ಕೊರಿಯಾದಂತಹ ದೇಶಗಳಲ್ಲಿಯೂ ಸಿನಿಮಾಗೆ ಸಖತ್ ರೆಸ್ಪಾನ್ಸ್ ಸಿಗುತ್ತಿದೆ. ಸದ್ಯ ಬಾಕ್ಸಾಫೀಸ್‌ನಲ್ಲಿ 1150 ಕೋಟಿ ಗಳಿಸಿ, ವಿಶ್ವದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಭಾರತದ 4ನೇ ಅತೀ ದೊಡ್ಡ ಸಿನಿಮಾ ಎಂಬ ಪಟ್ಟಿ ಸೇರಿದೆ. ರಾಜಮೌಳಿ ಸಿನಿಮಾ ವಿಶ್ವದ ದಿಗ್ಗಜರೆಲ್ಲರೂ ಭೇಷ್ ಎನ್ನುತ್ತಿದ್ದಾರೆ.

    ನೆಟ್‌ಫ್ಲಿಕ್ಸ್ ಸಿಇಓಗೆ RRR ಅಚ್ಚಿಮೆಚ್ಚು

    ನೆಟ್‌ಫ್ಲಿಕ್ಸ್ ಸಿಇಓಗೆ RRR ಅಚ್ಚಿಮೆಚ್ಚು

    ಹಾಲಿವುಡ್‌ ದಿಗ್ಗಜರಿಗೂ RRR ಸಿನಿಮಾ ಇಷ್ಟಪಟ್ಟಿದ್ದಾರೆ. ಇವರೊಂದಿಗೆ ನೆಟ್‌ಫ್ಲಿಕ್ಸ್ ಸಿಇಓ ಟೆಡ್ ಸರಡೊಸ್ ಕೂಡ RRR ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಫೇಸ್‌ಬುಕ್‌ನಲ್ಲಿ RRR ಸಿನಿಮಾ ಬಗ್ಗೆ ಮೆಚ್ಚು ಮಾತುಗಳನ್ನು ಆಡಿದ್ದಾರೆ. "ನೀವಿನ್ನೂ RRR ಸಿನಿಮಾ ನೋಡಿಲ್ಲ ಅಂದರೆ ನೆಟ್‌ಫ್ಲಿಕ್ಸ್ ನಲ್ಲಿ ಚೆಕ್ ಮಾಡಿ. ನೀವು ಈ ಸಿನಿಮಾವನ್ನು ನೋಡಲೇ ಬೇಕು. ಈ ವರ್ಷದ ಕ್ರೇಜಿಯಸ್ಟ್ ಥ್ರಿಲ್ ರೈಡ್." ಎಂದು ಹೇಳಿದ್ದಾರೆ.

    RRR ಸಿನಿಮಾಗೆ ಪ್ರಶಸ್ತಿ

    RRR ಸಿನಿಮಾಗೆ ಪ್ರಶಸ್ತಿ

    ಹಾಲಿವುಡ್‌ನ ಪ್ರತಿಷ್ಟಿತ ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ಮಿಡ್ ಸೀಸ್ 2022 ಪ್ರಶಸ್ತಿ RRR ಸಿನಿಮಾಗೆ ಸಿಕ್ಕಿದೆ. ಎರಡನೇ ಅತ್ಯುತ್ತಮ ಚಿತ್ರ ಎಂಬ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದೆ. ರಾಜಮೌಳಿ ಸಿನಿಮಾ ಹಾಲಿವುಡ್‌ನ 'ಟಾಪ್‌ ಗನ್: ಮೆವರಿಕ್', 'ದಿ ಬ್ಯಾಟ್‌ಮ್ಯಾನ್', 'ಎಲ್ವಿಸ್, ಅಂತಹ ಬಿಗ್ ಬಜೆಟ್ ಸಿನಿಮಾಗಳಿಗೆ ಪೈಪೋಟಿ ಒಡ್ಡಿತ್ತು.

    English summary
    RRR 100 Days: Netflix CEO Ted Sarandos Praises Rajamouli Movie, Know More.
    Monday, July 4, 2022, 9:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X