ಎರಡು ಒಟಿಟಿ ಬಳಿಕ ಇದೀಗ ಮೂರನೇ ಒಟಿಟಿಗೆ ಲಗ್ಗೆ ಇಟ್ಟ 'RRR'

ರಾಜಮೌಳಿ ನಿರ್ದೇಶನದ 'RRR' ಸಿನಿಮಾ ಈ ವರ್ಷ ಈ ವರೆಗೆ ಬಿಡುಗಡೆ ಆಗಿರುವ ಅತ್ಯುತ್ತಮ ಸಿನಿಮಾಗಳಲ್ಲಿ ಟಾಪ್ ಐದರಲ್ಲಿ ಸ್ಥಾನ ಪಡೆದುಕೊಂಡಿದೆ.

'RRR' ಸಿನಿಮಾ ಮಾರ್ಚ್ 24ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಅಬ್ಬರದ ಪ್ರದರ್ಶನ ಕಂಡಿತ್ತು. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆ ಆದ ಈ ಸಿನಿಮಾ ಬಿಡುಗಡೆ ಆದ ಬಹುತೇಕ ಎಲ್ಲ ಭಾಷೆಗಳಲ್ಲಿಯೂ ತುಂಬಿದ ಗೃಹಗಳ ಪ್ರದರ್ಶನ ಕಂಡಿತ್ತು. ಬಾಲಿವುಡ್ ಪ್ರದೇಶದಲ್ಲಂತೂ ಅತ್ಯುತ್ತಮ ಗಳಿಕೆಯನ್ನು ಈ ಸಿನಿಮಾ ಮಾಡಿತ್ತು.

ಚಿತ್ರಮಂದಿರಗಳಲ್ಲಿ ಜಯಭೇರಿ ಭಾರಿಸಿದ ಬಳಿಕ ಒಟಿಟಿಯಲ್ಲಿ ಬಿಡುಗಡೆ ಆಗಿತ್ತು ಈ ಸಿನಿಮಾ. ನೆಟ್‌ಫ್ಲಿಕ್ಸ್‌ ಹಾಗೂ ಜೀ5 ಎರಡರಲ್ಲೂ ಬಿಡುಗಡೆ ಆಗಿತ್ತು. ನೆಟ್‌ಫ್ಲಿಕ್ಸ್‌ನಲ್ಲಿ ಹಿಂದಿಯಲ್ಲಿ ಬಿಡುಗಡೆ ಆಗಿದ್ದ ಸಿನಿಮಾ ಜೀ5 ನಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಿತ್ತು. ನೆಟ್‌ಫ್ಲಿಕ್ಸ್‌ನಲ್ಲಿಯಂತೂ ದಾಖಲೆಗಳನ್ನು ಬರೆದಿತ್ತು 'RRR'. ಇದೀಗ ಮತ್ತೊಂದು ಜನಪ್ರಿಯ ಒಟಿಟಿಯಲ್ಲಿಯೂ ಈ ಸಿನಿಮಾ ಬಿಡುಗಡೆ ಆಗಲಿದೆ!

ನೆಟ್‌ಫ್ಲಿಕ್ಸ್ ಹಾಗೂ ಜೀ 5 ನಲ್ಲಿ ಲಭ್ಯವಿದೆ

ನೆಟ್‌ಫ್ಲಿಕ್ಸ್ ಹಾಗೂ ಜೀ 5 ನಲ್ಲಿ ಲಭ್ಯವಿದೆ

ನೆಟ್‌ಫ್ಲಿಕ್ಸ್, ಜೀ5ಗಳ ನಂತರ ಇದೀಗ ಡಿಸ್ನಿ ಹಾಟ್‌ಸ್ಟಾರ್ ನಲ್ಲಿ 'RRR' ಬಿಡುಗಡೆ ಆಗಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಹಿಂದಿಯಲ್ಲಿ ಮಾತ್ರವೇ ಲಭ್ಯವಿರುವ 'RRR' ಸಿನಿಮಾ ಭಾರಿ ಸಂಖ್ಯೆಯ ವೀಕ್ಷಕರನ್ನು ವಿಶ್ವದಾದ್ಯಂತದಿಂದ ಸೆಳೆದಿತ್ತು. ಆದರೆ ಜೀ5 ನಲ್ಲಿ ಲಭ್ಯವಿದ್ದ ಇದೇ ಸಿನಿಮಾದ ವಿವಿಧ ಭಾಷೆಯ ಅವತರಣಿಕೆಗಳು ಹೆಚ್ಚಾಗಿ ಗಮನ ಸೆಳೆಯಲು ವಿಫಲವಾಗಿದ್ದವು.

RRR ಖರೀದಿಸಿರುವ ಡಿಸ್ನಿ ಹಾಟ್‌ಸ್ಟಾರ್

RRR ಖರೀದಿಸಿರುವ ಡಿಸ್ನಿ ಹಾಟ್‌ಸ್ಟಾರ್

ಆದರೆ ಇದೀಗ ಡಿಸ್ನಿ ಹಾಟ್‌ಸ್ಟಾರ್ ಸಹ 'RRR' ಅನ್ನು ಖರೀದಿಸಿದ್ದು, ನೆಟ್‌ಫ್ಲಿಕ್ಸ್‌ ಮಾದರಿಯಲ್ಲಿಯೇ ವಿಶ್ವದಾದ್ಯಂತ ಚಂದಾದಾರಿರುವ ಹಾಟ್‌ಸ್ಟಾರ್ ಈ ಸಿನಿಮಾವನ್ನು ವಿಶ್ವಮಟ್ಟದ ಪ್ರೇಕ್ಷಕರಿಗೆ ತಲುಪಿಸಲಿದೆ. ಆದರೆ ಹಾಟ್‌ಸ್ಟಾರ್‌ನಲ್ಲಿ ಈ ಸಿನಿಮಾ ಜೀ5 ನಂತೆಯೇ ಭಾರತೀಯ ಸ್ಥಳೀಯ ಭಾಷೆಗಳಲ್ಲಿ ಲಭ್ಯವಿದೆ. ನೆಟ್‌ಫ್ಲಿಕ್ಸ್‌ಗಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿರುವ ಹಾಟ್‌ಸ್ಟಾರ್ RRR ಸಿನಿಮಾವನ್ನು ನೆಟ್‌ಫ್ಲಿಕ್ಸ್‌ಗಿಂತಲೂ ಉತ್ತಮವಾಗಿ ಹೆಚ್ಚು ಮಂದಿಗೆ ತಲುಪಿಸಲಿದೆ ಎನ್ನುವ ಅಂದಾಜು ಸಿನಿಮಾ ಪ್ರೇಮಿಗಳದ್ದು.

ವಿಶ್ವಮಟ್ಟದ ಪ್ರೇಕ್ಷಕರನ್ನು ಸೆಳೆಯುತ್ತಿದೆ ಸಿನಿಮಾ

ವಿಶ್ವಮಟ್ಟದ ಪ್ರೇಕ್ಷಕರನ್ನು ಸೆಳೆಯುತ್ತಿದೆ ಸಿನಿಮಾ

ಹಾಲಿವುಡ್‌ನ ಕೆಲವು ಆಲ್‌ಟೈಮ್ ಹಿಟ್ ಸಿನಿಮಾಗಳಷ್ಟೆ ಹೀಗೆ ಎರಡಕ್ಕಿಂತಲೂ ಹೆಚ್ಚು ಒಟಿಟಿಗಳಲ್ಲಿ ಲಭ್ಯವಿವೆ ಇದೀಗ ಆ ಸ್ಥಾನಕ್ಕೆ 'RRR' ಸಿನಿಮಾ ಸಹ ಸೇರಿದೆ. ಒಂದಕ್ಕಿಂತಲೂ ಹೆಚ್ಚು ಒಟಿಟಿಗಳಲ್ಲಿ ಅದರಲ್ಲೂ ಜನಪ್ರಿಯ ಒಟಿಟಿಗಳಲ್ಲಿ ಲಭ್ಯವಿರುವ ಏಕೈಕ ಸಿನಿಮಾ 'RRR' ಆಗಿದೆ. ಅಲ್ಲೂರಿ ಸೀತಾರಾಮ ರಾಜು, ಕೋಮರಂ ಭೀಮ್ ಪಾತ್ರಗಳನ್ನಿಟ್ಟುಕೊಂಡು ರಾಜಮೌಳಿ ಹೆಣೆದ ಕಾಲ್ಪನಿಕ ಕತೆ ಚಿತ್ರಮಂದಿರಗಳ ಮೂಲಕ ದೇಶದ ಸಿನಿಪ್ರೇಮಿಗಳ ಮನಸ್ಸು ಗೆದ್ದರೆ, ಒಟಿಟಿ ಮೂಲಕ ವಿಶ್ವದ ಪ್ರೇಕ್ಷಕರ ಮನಸ್ಸು ಗೆದ್ದಿದೆ.

ಬಹುತಾರಾಗಣದ ಸಿನಿಮಾ

ಬಹುತಾರಾಗಣದ ಸಿನಿಮಾ

ಕೋಮರಂ ಭೀಮ್ ಪಾತ್ರದಲ್ಲಿ ಜೂ ಎನ್‌ಟಿಆರ್, ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ರಾಮ್ ಚರಣ್ ತೇಜ ನಟಿಸಿದ್ದ ಈ ಸಿನಿಮಾದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್, ಬಾಲಿವುಡ್‌ನ ನಟ ಅಜಯ್ ದೇವಗನ್ ಅವರುಗಳು ಸಹ ನಟಿಸಿದ್ದಾರೆ. ಅದ್ಧೂರಿಯಾಗಿ ನಿರ್ಮಾಣವಾಗಿದ್ದ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಸುಮಾರು 1200 ಕೋಟಿ ರುಪಾಯಿ ಹಣ ಗಳಿಸಿತು. ಒಟಿಟಿಯಲ್ಲಿ ಈಗಲೂ ಪ್ರೇಕ್ಷಕರನ್ನು ಸೆಳೆಯುತ್ತಲೇ ಇದೆ 'RRR'.

More from Filmibeat

English summary
RRR movie now released in third OTT Disney plus hotstar. RRR movie is already available on Zee5 and Netflix.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X